ನಮಸ್ಕಾರದ ಚಮತ್ಕಾರ
ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಧನಗರ್ವಿತಂ
ಕ್ರೋಧವಂತಂ ಮದೋನ್ಮತ್ತಂ ನಮಸ್ಕಾರೇಪಿ ವರ್ಜಯೇತ್
ಅರ್ಥ_
ದೂರದಲ್ಲಿ ಕಾಣುತ್ತಿರುವಾಗಲೇ ನಮಸ್ಕರಿಸಬಾರದು
ನೀರಿನ ಮಧ್ಯದಲ್ಲಿರುವವನಿಗೆ ನಮಸ್ಕರಿಸಬಾರದು
ಓಡುತ್ತಿರುವವನಿಗೆ ನಮಸ್ಕರಿಸಬಾರದು
ಹಣದ ಮದದಿಂದ ಗರ್ವಭರಿತನಾದವನಿಗೆ ನಮಸ್ಕರಿಸಬಾರದು (ಆದರೆ ಇವರಿಗೆ ನಮಸ್ಕರಿಸುವವರೇ ಹೆಚ್ಚು)
ಸಿಟ್ಟಿನಲ್ಲಿರುವವನಿಗೆ ನಮಸ್ಕರಿಸಬಾರದು
ಮದಭರಿತನಾದವನನ್ನು ನಮಸ್ಕಾರದಿಂದ ದೂರವಿಡಬೇಕು
-ಚಾಣಕ್ಯನ ಈ ಮಾತು ನಮಸ್ಕಾರದ ಚಮತ್ಕಾರಕ್ಕಾಗಿ...
Rating
Comments
ಭಾಗ್ವತ ರೇ, ಕೆಲವೊಮ್ಮೆ ಹಳೆಯ
ಭಾಗ್ವತ ರೇ, ಕೆಲವೊಮ್ಮೆ ಹಳೆಯ ಮಾತುಗಳು,ಅಂದಂದಿನ ಕಾಲಕ್ಕೆ ಯೋಗ್ಯವಿದ್ದು, ಇಂದು ಅವುಗಳು ಸವೆದ ನಾಣ್ಯದಂತೆ ನಮಗೆ ಅನಿಸಿದರೂ ಅದು ಸಹಜವೇನೋ..
ಭಾಗ್ವತ ರೇ, ಕೆಲವೊಮ್ಮೆ ಹಳೆಯ
ಭಾಗ್ವತ ರೇ, ಕೆಲವೊಮ್ಮೆ ಹಳೆಯ ಮಾತುಗಳು,ಅಂದಂದಿನ ಕಾಲಕ್ಕೆ ಯೋಗ್ಯವಿದ್ದು, ಇಂದು ಅವುಗಳು ಸವೆದ ನಾಣ್ಯದಂತೆ ನಮಗೆ ಅನಿಸಿದರೂ ಅದು ಸಹಜವೇನೋ..
In reply to ಭಾಗ್ವತ ರೇ, ಕೆಲವೊಮ್ಮೆ ಹಳೆಯ by lpitnal@gmail.com
ನಾಣ್ಯ ಸವೆದಿದ್ದರೂ ಅದಕ್ಕೊಂದು
ನಾಣ್ಯ ಸವೆದಿದ್ದರೂ ಅದಕ್ಕೊಂದು ಆಕಾರವಿದೆ ಎಂಬುದೂ ಸಹ ನಮಗೆ ಅನಿಸದಿರದು ಅಲ್ಲವೇ..
ಹೌದು ಹಾಗೆ ಸೈಕಲ್ ಅಥವ
ಹೌದು ಹಾಗೆ ಸೈಕಲ್ ಅಥವ ದ್ವಿಚಕ್ರಿ ಓಡಿಸುತ್ತಿರುವರಿಗೆ ನಮಸ್ಕರಿಸಬಾರದು, ಹಿ0ದೊಮ್ಮೆ ನಾವು ಪಿಯು ಓದುವಾಗ, ಕಾಲೇಜ್ ಗೇಟ್ ಬಳಿ ತಮ್ಮ ಸುವೇಗ ದಲ್ಲಿ ಬರುತ್ತಿದ್ದ ಜೂವಾಲಜಿ ಲೆಕ್ಚರರ್ ಗೆ ಹುಡುಗಿಯರೆಲ್ಲ ನಮಸ್ಕಾರ ಅ0ದು , ಅವರು ಪಾಪ ವಾಪಸ್ ಕೈ ಎತ್ತಿ ವಿಶ್ ಮಾಡಿ ನಮಸ್ಕರಿಸಲು ಹೋಗಿ ಗೇಟ್ ಬಳಿ ಬಿದ್ದು ಅವಮಾನ ಪಟ್ಟಿದ್ದರು. ಹಾಗಾಗಿ ನನ್ನ ಹೊಸ ಸಲಹೆ, ನಾವು ಗಾಡಿ ಓಡಿಸುವಾಗ ಯಾರಾದರು ನಮಸ್ಕರಿಸಿದರು ಸ್ವೀಕರಿಸಬಾರದು (ಅಯ್ಯ ದುರ0ಕಾರಿ ಎ0ದರು ಚಿ0ತೆ ಇಲ್ಲ !! )
:)
In reply to ಹೌದು ಹಾಗೆ ಸೈಕಲ್ ಅಥವ by partha1059
+1. ದ್ವಿಚಕ್ರಿ
+1. ದ್ವಿಚಕ್ರಿ ಓಡಿಸುತ್ತಿರುವರಿಗೆ ನಮಸ್ಕರಿಸಬಾರದು, - ಇದನ್ನೇ ನಾನೂ ಹೇಳಬಯಸಿದ್ದೆ. :)
In reply to +1. ದ್ವಿಚಕ್ರಿ by kavinagaraj
ಕವಿನಾಗರಾಜರವರೆ
ಕವಿನಾಗರಾಜರವರೆ
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
In reply to ಹೌದು ಹಾಗೆ ಸೈಕಲ್ ಅಥವ by partha1059
ಪಾರ್ಥರವರೆ,
ಪಾರ್ಥರವರೆ,
ನಿಮ್ಮ ಈ ಹೊಸ ವಿಚಾರದ ಸೇರ್ಪಡೆ ನಿಜಕ್ಕೂ ಖುಷಿಕೊಟ್ಟಿತು. ಪ್ರತಿಕ್ರಯೆಗೆ ಧನ್ಯವಾದಗಳು
In reply to ಹೌದು ಹಾಗೆ ಸೈಕಲ್ ಅಥವ by partha1059
ಕವಿನಾಗರಾಜರೆ, ಪಾರ್ಥರೆ, ನೀವು
ಕವಿನಾಗರಾಜರೆ, ಪಾರ್ಥರೆ, ನೀವು ಹೇಳುತ್ತಿರುವುದು "ಸುವೇಗ"ದ ಕಾಲ. ಈಗ ಅದಕ್ಕಿಂತಲೂ ಜೆಟ್ ವೇಗದ ಕಾಲ. ಕೈಯಲ್ಲಿ ಹೆಲ್ಮೆಟ್ ಧರಿಸಿ, ಹಿಂದೆ ಪ್ರೇಯಸಿನ ಕುಳ್ಳಿರಿಸಿ, ದ್ವಿಚಕ್ರ ವಾಹನ ಬಿಟ್ಟುಕೊಂಡೇ,ಮೊಬೈಲಲ್ಲಿ ಮಾತನಾಡಿ,sms ಮಾಡಿ,ಟ್ರಾಫಿಕ್ ಪೋಲೀಸ್ಗೇ ವಿಶ್ ಮಾಡಿಕೊಂಡು ಹೋಗೋವರನ್ನು ನೋಡಿಲ್ವಾ ನೀವು? ಭಾಗ್ವತರೆ,ಶ್ಲೋಕಕ್ಕೆ ದ್ವಿಚಕ್ರವಾಹನ ಹೇಗೆ ಸೇರಿಸಲಿ ಅಂತ ತಲೆಬಿಸಿಮಾಡಬೇಡಿ. :)
In reply to ಕವಿನಾಗರಾಜರೆ, ಪಾರ್ಥರೆ, ನೀವು by ಗಣೇಶ
ಗಣೇಶರವರೆ,
ಗಣೇಶರವರೆ,
<<,ಶ್ಲೋಕಕ್ಕೆ ದ್ವಿಚಕ್ರವಾಹನ ಹೇಗೆ ಸೇರಿಸಲಿ ಅಂತ ತಲೆಬಿಸಿಮಾಡಬೇಡಿ>>
: )))) ನಿಮ್ಮ ಪ್ರತಿಕ್ರಿಯೆಗೆ ನಮನ
"ಹಣದ ಮದದಿಂದ ಗರ್ವಭರಿತನಾದವನಿಗೆ
"ಹಣದ ಮದದಿಂದ ಗರ್ವಭರಿತನಾದವನಿಗೆ ನಮಸ್ಕರಿಸಬಾರದು (ಆದರೆ ಇವರಿಗೆ ನಮಸ್ಕರಿಸುವವರೇ ಹೆಚ್ಚು)"
;()000
ಅ0ತೂ ಭಾಗ್ವತರು ಮತ್ತೆ ಸಕ್ರಿಯರಾದರು...!! ಒಳ್ಳೇ ಸುಭಾಷಿತ ರತ್ನ.. ಅರ್ಥಪೂರ್ಣ ಮತ್ತು ನಿಜ ಕೂಡ...
ಪ್ರತಿಕ್ರಿಯೆಗಳು ಮುದ ನೀಡಿದವು...
ಶ್ಹುಭವಾಗಲಿ..
\|
In reply to "ಹಣದ ಮದದಿಂದ ಗರ್ವಭರಿತನಾದವನಿಗೆ by venkatb83
"ದೂರದಲ್ಲಿ ಕಾಣುತ್ತಿರುವಾಗಲೇ
"ದೂರದಲ್ಲಿ ಕಾಣುತ್ತಿರುವಾಗಲೇ ನಮಸ್ಕರಿಸಬಾರದು..."
ಇದು ಗೊತ್ತಿರಲಿಲ್ಲ.
ಧನ್ಯವಾದಗಳು.
In reply to "ದೂರದಲ್ಲಿ ಕಾಣುತ್ತಿರುವಾಗಲೇ by Shreekar
ಶ್ರೀಕರವರೆ
ಶ್ರೀಕರವರೆ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
In reply to "ಹಣದ ಮದದಿಂದ ಗರ್ವಭರಿತನಾದವನಿಗೆ by venkatb83
ವೆಂಕಟೇಶರವರೆ,
ವೆಂಕಟೇಶರವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.