ಒಳ್ಳೆಯವರಿಗೇ ಕಷ್ಟಗಳು ಹೆಚ್ಚು ಏಕೆ ?
ಚಿತ್ರ
ಗುಣವಂತಃ ಕ್ಲಿಶ್ಯಂತೇ ಪ್ರಾಯೇಣ ಭವಂತಿ ನಿರ್ಗುಣಾಃ ಸುಖಿನಃ
ಬಂಧನಮಾಯಾಂತಿ ಶುಕಾಃ ಯಥೇಷ್ಟಸಂಚಾರಿಣಃ ಕಾಕಾಃ
ಅರ್ಥ-
ಯಾವಾಗಲೂ ಗುಣವಂತರೇ ಕಷ್ಟಕ್ಕೆ ಒಳಗಾಗುತ್ತಾರೆ.ಗುಣ ಹೀನರೇ ಹೇಗೆ ಬೇಕೋ ಹಾಗೆ ಸ್ವೇಚ್ಛೆಯಾಗಿ ಬದುಕುತ್ತ ಬದುಕಿನ ಸುಖ ಅನುಭವಿಸುತ್ತಾರೆ
ಗಿಳಿಗಳು ಪಂಜರದಲ್ಲಿ ಬಂಧಿಸಲ್ಪಡುತ್ತದೆ. ಆದರೆ ಕಾಗೆಗಳು ಮನಸ್ಸಿಗೆ ಬಂದಂತೆ ಹಾರಾಡಿಕೊಂಡಿರುತ್ತದೆ.
ಪಂಜರದಲ್ಲಿರುವ ಗಿಳಿ ಬಂಧನ ಅನುಭವಿಸಿದರೂ ಅದನ್ನು ಮೆಚ್ಚುವವರಿದ್ದಾರೆ. ಆದರೆ ಸ್ವೇಚ್ಛೆಯಾಗಿ ಹಾರಾಡುವ
ಕಾಗೆಯನ್ನು ಪ್ರೀತಿಸುವವರಾರು ?
ಚಿತ್ರಕೃಪೆ-ಗೂಗಲ್
Rating
Comments
ಬಾಗ್ವತರೆ ನಿಮ್ಮ ಈ ಪ್ರಸಂಗವನ್ನು
ಬಾಗ್ವತರೆ ನಿಮ್ಮ ಈ ಪ್ರಸಂಗವನ್ನು ಬೇರೆ ಒಂದು ದೃಷ್ಟಿಯಲ್ಲಿ ನೋಡಬಹುದ ಎಂದು ಅನಿಸುತ್ತಿದೆ.
ಒಳ್ಳೆಯ ಮನುಷ್ಯನಿಗೆ ಕಷ್ಟಗಳು ಜಾಸ್ತಿ ಅನ್ನುವಾಗ... ನನಗೆ ಅನಿಸುವಂತೆ ಮನುಷ್ಯ ಕಷ್ಟದಲ್ಲಿರುವಾಗ ಸಾಮಾನ್ಯವಾಗಿ ಒಳ್ಳೆಯವನಾಗಿಯೆ ಇರುತ್ತಾನೆ ಅನ್ನಿಸುತೆ. ಏಕೆಂದರೆ ಆಗ ಅವನಿಗೆ ಅನ್ಯರ ಸಹಾಯ ಅನುಕಂಪದ ಅಗತ್ಯವು ಇರುತ್ತಲ್ಲ. ಹಾಗಾಗಿ ಮನುಶ್ಯ ಕಷ್ಟದಲ್ಲಿರುವಾಗ ಸ್ವಲ್ಪ ತಗ್ಗಿ ಬಗ್ಗಿ ನಡೆಯುತ್ತಾನೆ , ಅನ್ಯರಿಗೆ ಅವನು ಒಳ್ಳೆಯವನು ಅನಿಸುತ್ತಾನೆ. ...................
ಅದೆ ಸುಖದಲ್ಲಿರುವನಿಗೆ ಯಾವ ಕೊರತೆಯು ಇರುವದಿಲ್ಲ, ಹಾಗೆ ಯಾರ ಸಹಾಯದ ನಿರೀಕ್ಷೆಯು ಇರುವದಿಲ್ಲ, ಸಹಜವಾಗಿಯೆ ಅವನಲ್ಲಿ ಠೇಂಕಾರ ಮನೆ ಮಾಡಿರುವತ್ತದೆ. ಬೇರೆಯವರನ್ನು ಸ್ವಲ್ಪ ಹಗುರವಾಗಿಯೆ ಕಾಣುತ್ತಾನೆ, ಅನ್ಯರನ್ನು ಗೌರವಿಸನು, ಹಾಗಾಗಿ ಅವನನ್ನು ಸಾಮಾನ್ಯವಾಗಿ ಎಲ್ಲರು ಕೆಟ್ಟವನು , ಹಣದ ಮದ ಎಂದೆ ನಿರ್ದರಿಸುತ್ತಾರೆ. ಹಾಗಾಗಿ ಸುಖದಲ್ಲಿರುವನು ಒಳ್ಳೆಯವನಲ್ಲ ಎನಿಸುತ್ತಾನೆ.
ಹಾಗೆ ನಿಮ್ಮ ಸಾಲಿನ ಕಡೆಗೆ ಬಂದಲ್ಲಿ, ಕಷ್ಟದಲ್ಲಿದ್ದರು, ತನ್ನ ಸೌಮ್ಯತನದಿಂದ (ಗಿಣಿಯಂತೆ) ಎಲ್ಲರಿಂದಲು ಗೌರವಿಸಲ್ಪಡುತ್ತಾನೆ, ಹಾಗೆ ಸುಖಪುರುಷನು ಅನ್ಯರಿಂದ (ಕಾಗೆಗಳಂತೆ) ಅಸೂಯೆ ತಿರಸ್ಕಾರಕ್ಕೆ ಒಳಗಾಗುತ್ತಾನೆ. ಸರಿಯೆ ನನ್ನ ವಿಲೋಮ ತರ್ಕ :))
In reply to ಬಾಗ್ವತರೆ ನಿಮ್ಮ ಈ ಪ್ರಸಂಗವನ್ನು by partha1059
ಪಾರ್ಥರವರೆ ನಿಮ್ಮ ವಿಲೋಮ ತರ್ಕ
ಪಾರ್ಥರವರೆ ನಿಮ್ಮ ವಿಲೋಮ ತರ್ಕ ಮಜವಾಗಿದೆ.))))
ಪ್ರತಿಕ್ರಿಯೆಗೆ ಧನ್ಯವಾದಗಳು