ಲೈಟ್ ಕಂಬ ಹಾಗು ಹಸು

ಲೈಟ್ ಕಂಬ ಹಾಗು ಹಸು

 

ಲೈಟ್ ಕಂಬ ಹಾಗು ಹಸು
 
 
ಚಿಕ್ಕವಯಸಿನಲ್ಲಿ ಒಂದು ಕತೆ ಕೇಳಿದ್ದೆ  ಕತೆಯೊ ಅಥವ ಜೋಕ್ ಎಂದು ಬೇಕಾದಲ್ಲಿ ಕರೆಯಬಹುದು 
 
ಒಬ್ಬ ಹುಡುಗ ಪರೀಕ್ಷೆಗಾಗಿ ಓದುತ್ತಿದ್ದ, ಅಲ್ಲಿ ಪ್ರಭಂದವನ್ನು ಬರೆಯಬೇಕಾಗಿತ್ತು. ಅವನಿಗೆ ಹೇಗೊ ಪ್ರಶ್ನೆ ಪತ್ರಿಕೆಯ ವಿವರ 
ಪರೀಕ್ಷೆಗೆ ಮುಂಚೆಯೆ ತಿಳಿದುಹೋಯಿತು, ಅದರಲ್ಲಿ ಪ್ರಭಂದವನ್ನು 'ಹಸುವಿನ' ಬಗ್ಗೆ ಕೇಳುತ್ತಾರೆ ಎಂದು ಹೇಳಿದರು. ಹುಡುಗ ಹಿಂದೆ ಮುಂದೆ ಯೋಚಿಸದೆ ಹಸುವಿನ ಬಗ್ಗೆ ಪ್ರಭಂದ ಬರೆದು ಬಾಯಿಪಾಠ ಮಾಡಿದ.  ಪರೀಕ್ಷೆಗೆ ಉತ್ಸಾಹದಿಂದ ಹೊರಟ.
 
ಅವನ ದುರಾದೃಷ್ಟ. ಕಡೆಯ ಗಳಿಗೆಯಲ್ಲಿ ಪ್ರಶ್ನೆಪತ್ರಿಕೆಯನ್ನು ಬದಲಾಯಿಸಿದ್ದರು. ಅವನು ಓದಿಕೊಂಡು ಹೋದ ಪ್ರಭಂದ ಬಂದಿರಲೆ ಇಲ್ಲ. ಅವನಿಗೆ 'ಹಸುವಿನ' ಮೇಲೆ ಹೊರತು ಪ್ರಭಂದ ತಿಳಿಯದು ಆದರೆ ಪರೀಕ್ಷೆಯಲ್ಲಿ 'ಬೀದಿ ದೀಪದ ಕಂಬದ' ಬಗ್ಗೆ ಪ್ರಭಂದ ಬರೆಯಲು ಹೇಳಿದ್ದರು. ಆದರೆ ಅವನೇನು ಚಿಂತಿಸಲಿಲ್ಲ ಬರೆದೆ ಬಿಟ್ಟ
 
ನಮ್ಮ ಮನೆಯ ಮುಂದೆ ಒಂದು ಬೀದಿ ದೀಪವಿದೆ, ಅದನ್ನು ಕಾರ್ಪೋರೇಷನ್ ನವರು ಹಾಕಿದ್ದಾರೆ. ಎಂದು ಬರೆದ ಮುಂದೆ ಹೊಳೆಯಲಿಲ್ಲ, ಸರಿ ಮುಂದುವರೆಸಿದ...
ಆ ಬೀದಿ ದೀಪಕ್ಕೆ ನಮ್ಮ ಎದುರು ಮನೆಯವರು ತಾವು ಸಾಕಿರುವ ಹಸುವನ್ನು ಕಟ್ಟುತ್ತಾರೆ. ಹಸು ನಮಗೆ ಉಪಯುಕ್ತ ಪ್ರಾಣಿ. ಅದನ್ನು ಕಾಮಧೇನು ಎಂದು ಸಹ ಕರೆಯುವರು. ಹಸು ನಾವು ಹಾಕಿದ ಹುಲ್ಲು ತಿಂದು ನಮಗೆ ಹಾಲು ಕೊಡುವುದು. ಹಸುವಿನ ಸಗಣಿಯಿಂದ ಬೆರಣಿ ತಟ್ಟುವರು...........
ಹೀಗೆ ಹಸುವಿನ ಬಗ್ಗೆ ತಾನು ಓದಿದ್ದ ಪ್ರಭಂದವನ್ನು ಬರೆದು ಎರಡು ಪುಟ ತುಂಬಿಸಿ ಸಮಾದಾನದ ಉಸಿರು ಬಿಟ್ಟ
.
ನಮ್ಮ ಮನಸುಗಳು ಸಹ ಹೀಗೆ ಅನ್ನಿಸುವದಿಲ್ಲವೆ.  ನಮ್ಮ ಮನಸನ್ನು ಸದಾ ಯಾವುದೊ ಒಂದು ಚಿಂತನೆ ತುಂಬಿರುತ್ತದೆ, ಆದರೆ ನಾವು ಅದನ್ನು ಬಿಟ್ಟು ಬೇರೆ ಏನು ಚಿಂತಿಸಲಾರೆವು. ಒಂದು ವೇಳೆ ಬಲವಂತವಾಗಿ ಯಾವುದೆ ವಿಷಯ ಸಂದರ್ಬ ಬಂದರು ನಮ್ಮ ಮನ ಸುತ್ತಿ ಸುತ್ತಿ  ಪುನಃ ಅಲ್ಲಿಗೆ ಬಂದು ಸೇರುವುದು. ಅದೆ ಮನಸಿನ ಮಾಯೆ. ಆ ಪರಿಧಿಯನ್ನು ಯಾರು ಮೀರಲಾರರು
------------------------
Rating
No votes yet

Comments

Submitted by H A Patil Fri, 04/05/2013 - 20:16

ಪಾರ್ಥ ಸಾರಥಿ ಯವರಿಗೆ ವಂದನೆಗಳು
' ಲೈಟ್ ಕಂಭ ಹಾಗೂ ಹಸು ' ಕಥೆ ಚೆನ್ನಾಗಿದೆ, ವಿಷಯ ಅತನಿಗೆ ತಿಳಿಯದೆ ಹೋದರೂ ಸಮಯ ಪ್ರಜ್ಞೆಯಿಂದ ಬರೆದಿದ್ದಾನೆ, ಈ ಲೇಖನ ನನ್ನನ್ನು 1962 ಕ್ಕೆ ಎಳೆದೊಯ್ದಿತು. ಆಗ ನಾವು ಮುಲ್ಕಿ ಓದುತ್ತಿದ್ದೆವು ನಮ್ಮ ಗುರುಗಳು ನಮಗೆ ಅನೇಕ ನಿಬಂಧಗಳನ್ನು ಬರೆಸಿದ್ದರು.. ಆದರೆ ಮೂರನೆ ತ್ರೈಮಾಸಿಕ ಪರೀಕ್ಷೆಗೆ ' ನಿಮ್ಮೂರಿನ ದ್ಯಾಮವ್ವನ ಜಾತ್ರೆ ' ಕುರಿತು ನಿಬಂಧ ಬರೆಯಲು ಕೇಳಿದ್ದರು. ನಮಗೆ ಆ ಬಗ್ಗೆ ಗುರುಗಳು ನಿಬಂಧ ಬರೆಸಿರಲಿಲ್ಲ, ಆದರೆ ಬಣಿವೆಗೆ ಬೆಂಕಿ ಬಿದ್ದ ಕುರಿತು ಬರೆಸಿದ್ದರು, ನಮ್ಮ ಸಹಪಾಠಿಯೊಬ್ಬ ದಯಮವ್ಬವನ ಜಾತ್ರೆಗೆ ಹೋದ ಬಗ್ಗೆ ಒಂದು ಪ್ಯಾರಾ ಬರೆದು ಅಲ್ಲಿಯೆ ಗುಡಿಯ ಹತ್ತಿರವಿದ್ದ ತಿಪ್ಪಣ್ಣನ ಬಣಿವೆಗೆ ಬೆಂಕಿ ಬಿದ್ದು ಜಾತ್ರೆಗೆ ಬಂದ ಜನ ಅಲ್ಲಿಗೆ ತೆರಳಿ ಬೆಂಕಿ ನಂದಿಸಿದ ಬಗ್ಗೆ ಸವಿವರವಾಗಿ ಬರೆದಿದ್ದ, ಆತನ ಬುದ್ಧಿವಂತಿಕೆಯನ್ನು ಗುರುಗಳು ಶಾಲೆಯಲ್ಲಿ ಹೊಳಿದ್ದರು. ತಮ್ಮ ಕಥಾನಕ ಚೆನ್ನಾಗಿದೆ,ಧನ್ಯವಾದಗಳು..

Submitted by partha1059 Sun, 04/07/2013 - 21:02

In reply to by H A Patil

ಪಾಟೀಲರಿಗೆ ವಂದನೆ , ನಿಮ್ಮ ದ್ಯಾಮವ್ವನ ಜಾತ್ರೆಯಲ್ಲಿ ಬಣೀವೆಯ ಬೆಂಕಿ ಆರಿಸಿದ ಪ್ರಸಂಗ ಸೇರಿಸುವಲ್ಲಿ ಹುಡುಗನ ಸಮಯ ಸ್ಪೂರ್ತಿ ಉತ್ತಮವಾಗಿಯೆ ಕೆಲಸಮಾಡಿದೆ

Submitted by lpitnal@gmail.com Sat, 04/06/2013 - 09:29

ಹಿರಿಯರಾದ ಪಾಟೀಲರಿಗೂ, ಹಾಗೂ ಗೆಳೆಯ ಪಾರ್ಥರಿಗೂ ವಂದನೆಗಳು. ತಮ್ಮ ಲೇಖನದಲ್ಲಿ ಧ್ವನಿಸಿದಂತೆ, ಮನುಷ್ಯ ತನಗೆ ಹಿಡಿದ ಗುಂಗಿನ ಜಾಡಿನ ಸುತ್ತಮುತ್ತಲೇ ಯೋಚಿಸುವುದು, ಸ್ವಾಭಾವಿಕವಾದರೂ, ಆ ನಿಲುವನ್ನು ಜಾಗರೂಕತೆಯಿಂದ ಅಳವಡಿಸುವುದರಲ್ಲಿಯೂ ಜಾಣತನಬೇಕು ಎನ್ನುವ ಸಾಂದರ್ಭಿಕ ಕಥೆ ಸೊಗಸಾಗಿದೆ. ಪಾಟೀಲರಿಗೆ ಹಿಂದಿನ ನೆನಪುಗಳನ್ನು ನೆನಪಿಸಿ, ಕೃತಕೃತ್ಯತೆ ಪಡೆದಿದೆ ಲೇಖನ.ಧನ್ವವಾದಗಳು.