ಹಮ್ ಕೊ ಮನ್ ಕಿ ಶಕ್ತಿ ದೇನಾ - ಪ್ರಾರ್ಥನಾ ಗೀತೆ

ಹಮ್ ಕೊ ಮನ್ ಕಿ ಶಕ್ತಿ ದೇನಾ - ಪ್ರಾರ್ಥನಾ ಗೀತೆ

ನಮಗೆ ಮನದ ಶಕ್ತಿ ನೀಡು
(ಹಮ್ ಕೊ ಮನ್ ಕಿ ಶಕ್ತಿ ದೇನಾ)

ಮೂಲ ಲೇಖಕರು (ಹಿಂದಿ) : ಗುಲ್ಜಾರ ಸಾಹೇಬ      ಅನುವಾದ : ಲಕ್ಷ್ಮೀಕಾಂತ ಇಟ್ನಾಳ
ಸ್ಕೂಲ್ ಮಾಸ್ಟರ್ ಚಿತ್ರದ ‘ಸ್ವಾಮಿದೇವನೇ ಲೋಕಪಾಲನೆ ತೇನಮೋಸ್ತು ನಮೋಸ್ತುತೆ’ ಹಾಡು ನಾವು ಶಾಲೆಯಲ್ಲಿ ಪ್ರಾರ್ಥನೆ ಗೀತೆಯಾಗಿ ಹಾಡುತ್ತಿದ್ದೆವು. ಇದೇ ತರಹ ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳ ಶಾಲೆಗಳಲ್ಲಿ ಹಿಂದಿ ಚಿತ್ರಗೀತೆಯೊಂದು ಪ್ರಾರ್ಥನಾ ಗೀತೆಯಾಗಿ  ಪ್ರಚಲಿತದಲ್ಲಿತ್ತು. ಪಂಜಾಬ, ಹರಿಯಾನಾಗಳ ಶಾಲೆಯ ಗೋಡೆಗಳಿಗೆ ಕಿವಿ ಒಡ್ಡಿ ಕೇಳಿದರೆ, ಈಗಲೂ ನಮಗೆ ಕೇಳಿಸುವ ಗೀತೆ,  ಅದೇ 1971 ರ ಗುಡ್ಡಿ ಚಿತ್ರದ ವಸಂತ ದೇಸಾಯಿ ಸಂಗೀತ ಸಂಯೋಜನೆಯ, ಗುಲ್ಜಾರರಿಂದ ವಿರಚಿತ, ವಾಣಿ ಜಯರಾಂ ಧ್ವನಿಯಲ್ಲಿ ‘ಹಮ್ ಕೊ ಮನ್ ಕಿ ಶಕ್ತಿ ದೇನಾ’ ಪ್ರಾರ್ಥನಾ ಗೀತೆ. ಅದನ್ನು ಹಿಂದಿ ಜೊತೆಗೆ ಕನ್ನಡದಲ್ಲಿಯೂ ಒಮ್ಮೆ ಹಾಡಿ ನೋಡೋಣ.


ಹಮ್ ಕೊ ಮನ್ ಕಿ ಶಕ್ತಿ ದೇನಾ, ಮನ್ ವಿಜಯ ಕರೆ
ದೂಸರೋಂ ಕಿ ಜಯ್ ಸೆ ಪೆಹಲೇ, ಖುದ್ ಕೋ ಜಯ್ ಕರೆ

ಭೇದಭಾವ ಅಪನೇ ದಿಲ್ ಸೆ ಸಾಫ್ ಕರ ಸಕೇ
ದೋಸ್ತೋಂ ಸೆ ಭೂಲ ಹೋ ತೋ ಮಾಫ ಕರ ಸಕೇ
ಝೂಠ್ ಸೆ ಬಚೇ ರಹೇ, ಸಚ್ ಕಾ ದಮ್ ಭರೇ
ದೂಸರೋಂ ಕಿ ಜಯ್ ಸೆ ಪೆಹಲೇ, ಖುದ್ ಕೊ ಜಯ್ ಕರೆ

ಮುಶ್ಕಿಲೇಂ ಪಡೇ ತೊ ಹಮ್ ಪೆ ಇತನಾ ಕರಮ್ ಕರ್
ಸಾಥ ದೇ ತೋ ದರಮ್ ಕಾ, ಚಲೇ ತೋ  ಧರಮ್ ಪರ್
ಖುದ್ ಪೆ ಹೌಸಲಾ ರಹೇ, ಬಡೀ ಸೆ ನಾ ಡರೇ
ದೂಸರೋಂ ಕೀ ಜಯ್ ಸೆ ಪೆಹಲೇ, ಖುದ್ ಕೋ ಜಯ್ ಕರೇ

ಹಮ್ ಕೊ ಮನ್ ಕಿ ಶಕ್ತಿ ದೇನಾ, ಮನ್ ವಿಜಯ ಕರೆ
ದೂಸರೋಂ ಕಿ ಜಯ್ ಸೆ ಪೆಹಲೇ, ಖುದ್ ಕೋ ಜಯ್ ಕರೆ


  •  

ನಮಗೆ ಮನದ ಶಕ್ತಿ ನೀಡು
(ಹಮ್ ಕೊ ಮನ್ ಕಿ ಶಕ್ತಿ ದೇನಾ)

ನಮಗೆ ಮನದ ಶಕ್ತಿ ನೀಡು, ಮನ ವಿಜಯಹೊಂದಲು
ಅನ್ಯರ ಗೆಲುವ ಮೊದಲು, ತನ್ನ ತಾ ಗೆಲ್ಲಲು

ಭೇದಭಾವ ಮನವ ತನ್ನ ಶುದ್ಧಗೊಳಿಸಲು
ಗೆಳೆಯರಿಂದ ಭೇದವಾಗೆ, ಕ್ಷಮೆಯ ನೀಡಲು
ಮಿಥ್ಯೆಯಿಂದ ದೂರ ಸರಿದು, ಸತ್ಯ ಬೆಂಬಲು
ಅನ್ಯರ ಗೆಲುವ ಮೊದಲು, ತನ್ನ ತಾ ಗೆಲ್ಲಲು

ಸಂಕಟ ಎದುರಾದರೆ ನಮಗಿದೊ ಕರುಣಿಸು
ಜೊತೆ ನೀಡಲು ಧರಮಕೆ, ನಡೆಯು ಧರಮದಿ
ತನ್ನಮೇಲೆ ನಂಬಿಗಿರಲು, ಅಂಜದಿರಲು ಕಠಿಣಕೆ
ಅನ್ಯರ ಗೆಲುವ ಮೊದಲು, ತನ್ನ ತಾ ಗೆಲ್ಲಲು

ನಮಗೆ ಮನದ ಶಕ್ತಿ ನೀಡು, ಮನ ವಿಜಯಹೊಂದಲು
ಅನ್ಯರ ಗೆಲುವ ಮೊದಲು, ತನ್ನ ತಾ ಗೆಲ್ಲಲು

Rating
No votes yet

Comments

Submitted by venkatb83 Mon, 04/08/2013 - 13:15

ಹೆಚ್ಹು ಕಡಿಮೆ ಇದನ್ನು ಹೋಲುವ- ಅದೇ ಧಾಟಿಯ ಹಾಡು 'ಹಮಕೋ ಇತನ ಶಕ್ತಿ ದೇನಾ ದಾತ' ಎಂದು ಹಿಂದಿ ಚಿತ್ರ 'ಅಂಕುಶ್(೧೯೮೬) ನಲ್ಲಿದೆ..http://www.youtube.com/watch?v=-w_P5Pr6eEQ
ಇದಲ್ಲದೆ ಇತ್ನಿ ಶಕ್ತಿ ಹಮೆ ದೇನಾ ದಾತ ಹಾಡನ್ನು ಹಲವು ಬಾರಿ ಪ್ರಾರ್ಥನಾ ಹಾಡಾಗಿ ನಾವ್ ಹಾಡಿದ ನೆನಪು..ಹಾಗೆ ಸ್ವಾಮಿ ದೇವನೇ ಲೋಕಪಾಲನೆ ಸಹ ...

ನನ್ನ ಶಾಲಾ ದಿನಗಳ-ಹಾಸ್ಟೆಲ್ ದಿನಗಳ ನೆನಪು ಮರು ಕಳಿಸಿತು.....!!

ಗುಲ್ಜಾರ್ ಸಾಬ್ ಬರೆದ ಬರೆವ ಹಾಡುಗಳು ಅರ್ಥಪೂರ್ಣ-ಅಂದು ಇಂದು ಮುಂದೂ...

ಶುಭವಾಗಲಿ..

\।/

Submitted by lpitnal@gmail.com Tue, 04/09/2013 - 08:51

ಗೆಳೆಯ ವೆಂಕಟರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ನೀವಂದಂತೆ ಗುಲ್ಜಾರ್ ಸಾಬ್ ಬರೆದ ಬರೆವ ಹಾಡುಗಳು ಅರ್ಥಪೂರ್ಣ-ಅಂದು ಇಂದು ಮುಂದೂ. ಗುಲ್ಜಾರರ ಲಿರಿಕ್ಷಗಳ ಕುರಿತು ಮೆಚ್ಚುಗೆಯ ಮಾತು ಹಿಡಿಸಿತು. ಅವರೊಳಗೊಬ್ಬ ಅನನ್ಯ ಕವಿ ಅಡಗಿದ್ದು ವಿನೂತನ ಶೈಲಿ, ಸಮಕಾಲೀನ ಪ್ರಾಜ್ಞತೆಯಿಂದ ಬಹು ಆಪ್ಯಾಯವೆನಿಸುತ್ತವೆ. ತಮ್ಮ ಮೆಚ್ಚುಗೆಯ ಸ್ಪಂದನೆಗೆ ವಂದನೆ.

Submitted by H A Patil Thu, 04/11/2013 - 20:06

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಕವಿ ಗುಲ್ಜಾರರ ಗುಡ್ಡಿ ಚಿತ್ರಕ್ಕೆಅಳವಿಡಿಸಿದ ಈ ಗಿತೆ ಹಲವು ಪ್ರಥಮಗಳನ್ನು ಹೊಂದಿದಂತಹುದು, ಇದು ಜಯ ಬಾಧುರಿ ನಾಯಕಿಯಾಗಿ ನಟಿಸಿದ ಹಾಗೂ ವಾಣಿ ಜಯರಾಮ ಹಾಡಿದ ಮೊದಲ ಚಿತ್ರ ಗೀತೆ. ಇದು ಹುಬ್ಬಳ್ಳಿಯ ಮೋಹನ ಟಾಕೀಸ್ ನಲ್ಲಿ ಬಿಡುಗಡೆ ಯಾದಂತೆ ನೆನಪು. ತನ್ನ ಮೊದಲ ಚಿತ್ರದಲ್ಲಿಯೆ ಜಯಾ ಬಾಧುರಿ ತನ್ನ ಅಭಿನಯದ ಛಾಪನ್ನು ಮೂಡಿಸಿದ್ದಳು. ಒಂದು ದಶಕದ ಕಾಲ ಉತ್ತಮ ಪಾತ್ರಗಳಲ್ಲಿ ನಟಿಸಿದಳು ಕೂಡ. ಆಕೆ ಭೌನತ್ಯಕ್ಕೇರಿದಾಗ ಅಮಿತಾಬ ಇನ್ನೂ ನಾಯಕ ನಟನಾಗಿ ಸ್ಥಾಪಿತಗೊಂಡಿರಲಿಲ್ಲ,ಆಕೆಯ ಜೊತೆಗಿನ ಅಭಿಮಾನ ಮತ್ತು ಜಂಜೀರ ಚಿತ್ರಗಳ ನಂತರ ಆತನಿಗೆ ನಾಯಕ ನಟನ ಪಾತ್ರಗಳು ದೊರೆಯ ತೊಡಗಿದವು. ದೀವಾರ ಮತ್ತು ಶೋಲೆ ಚಿತ್ರಗಳು ಆತನನ್ನು ಸೂಪರ್ ನಾಯಕನ ಪಟ್ಟಕ್ಕೆ ಕೂರಿಸಿದವು. ನಿಮ್ಮ ಈ ಗೀತೆ ಅದರ ಪ್ರಾರಂಭದಲ್ಲಿ ನೀಡಿಎದ ಮಾಹಿತಿ ಇದನ್ನೆಲ್ಲ ನೆನಪಿಸಿದವು. ಧನ್ಯವಾದಗಳು..

Submitted by ಗಣೇಶ Thu, 04/11/2013 - 23:46

In reply to by H A Patil

ಪಾಟೀಲರೆ, ಇದೇ ಐಡಿಯಾ ಮಾಡಿ, ಸೂಪರ್ ನಾಯಕ ಪಟ್ಟ ಏರಲು, ಐಶ್ವರ್ಯಳನ್ನು ಅಮಿತಾಬ್ ಮಗ ಮದುವೆಯಾಗಿರಬಹುದೇ?:)
ಇಟ್ನಾಳರೆ, ಅರ್ಥಪೂರ್ಣ ಕವಿತೆಯ ಸುಂದರ ಅನುವಾದ.

Submitted by lpitnal@gmail.com Fri, 04/12/2013 - 08:08

In reply to by ಗಣೇಶ

ಗಣೇಶರವರೇ, ತಾವು ಪಾಟೀಲರ ಪ್ರತಿಕ್ರಿಯೆಗೆ ಸ್ಪಂದಿಸುತ್ತ, ಅಮಿತಾಭ ಮಗನೂ, ಇದೇ ಉದ್ದೇಶದಿಂದ ಐಶ್ವರ್ಯಳನ್ನು ವರಿಸಿರಬಹುದೇ ಎಂದಿದ್ದು, ಒಪ್ಪಬಹುದಾದ ಮಾತು. ಅಭಿಷೇಕ ಅಂದು ಅಮಿತಾಭ ಮಗನೇ,, ಈಗ ಅಭಿಷೇಕ , ನಾಯಕ ನಟನಾಗಿ ಛಾಪು ಮೂಡಿಸಿದ್ದು, ಐಶ್ವರ್ಯಳ ಬಲದಿಂದಲೂ ಇರಬಹುದೇ? ಇರಬಹುದು 'ಸೊ, ಸೊ'ಎನಿಸುತ್ತದೆ, ಆದರೂ , ಅಂದು, ಅಮಿತಾಭ ಮಗ, ಇಂದು ಐಶ್ವರ್ಯಳ ಗಂಡ. ಆದರೂ 'ಅಮಿತಾಭ ಮಗ, ಇಂದು 'ಅಭಿಷೇಕ'ನೂ (ನಟನಾಗಿ) ಆಗಿದ್ದಾನೆ ಅನಿಸುತ್ತದೆ.

Submitted by H A Patil Fri, 04/12/2013 - 20:16

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ. ಸೂಪರ್ ನಾಯಕ ಪಟ್ಟ ಏರಲು ...........ಮದುವೆಯಾಗಿರಬಹುದೆ ? ನನಗೆ ಗೊತ್ತಿಲ್ಲ. ಅಮಿತಾಬ ಮತ್ತು ಜಯಾ ಬಾಧುರಿಯವರ ಚಲನಚಿತ್ರ ಬದುಕಿನ ಆ ಕಾಲದ ಸತ್ಯವೊಂದನ್ನು ನಾನು ಹೇಳಿದೆ ಅಷ್ಟೆ, ಆಗಿನ ಸಿನೆಮಾ ವಿಮರ್ಶಾ ಲೇಖನಗಳು ಮತ್ತು ಅವರ ಚಿತ್ರಗಳ ವೀಕ್ಷಣೆಯಿಂದ ನನ್ನಲ್ಲಿ ಮೂಡಿದ ಪ್ರತಿಕ್ರಿಯೆ ಅಷ್ಟೆ. ಇಂದಿಗೂ ಬಚ್ಚನ್ ಕುಟುಂಬದಲ್ಲಿ ಅಭಿನಯದ ರೇಟಿಂಗ್ ಮಾಡುವುದಾದರೆ ಜಯಾ, ಅಮಿತಾಬ್, ಐಶ್ವರ್ಯ ಮತ್ತು ಅಭಿಷೇಕ ಎಂದು ಹೇಳಬಹುದು. ಜಯಾ ಜನಪ್ರಿಯತೆಯ ಉತ್ತುಂಗದಲ್ಲಿರುವಾಗ ಅಮಿತಾಬ್ ಚಿತ್ರರಂಗದಲ್ಲಿ ತನ್ನ ಸ್ಥಾನಕ್ಕಾಗಿ ಪರದಾಡುತ್ತಿದ್ದ ಏಂದು ಹೇಳುವುದಷ್ಟೆ ಆ ನನ್ನ ಅಭಿಪ್ರಾಯದ ಉದ್ದೇಶವಾಗಿತ್ತು. ಆಭಿನಯದ ವಿಷಯದಲ್ಲಿ ಗ್ರೇಡ್ ಕೊಡುವುದಾದರೆ ಜಯಾಗೆ ಎ+ ಆದರೆ ಐಶ್ವರ್ಯ ಬಿ+ ಎನ್ನ ಬಹುದು, ಜಯಾಳ ಅಭಿನಯವೆ ಚಿತ್ರದ ಜೀವಾಳ ವಾಗಿರುತ್ತಿದ್ದರೆ ಐಶ್ವರ್ಯ ಚಿತ್ರಗಳ ಜೀವಾಳ ಕೇವಲ ಕೇವಲ ಗ್ಲ್ಯಾಮರ್ ಮಾತ್ರ. ಜಯಾ ಜೊತೆ ಅಮಿತಾಬ್ ಅಭಿನಯಿಸಿದ ಅಭಿಮಾನ್ ಮತ್ತು ಜಂಜೀರ್ ಚಿತ್ರಗಳು ಅಮಿತಾಬ್ ನನ್ನು ನಾಯಕ ನಟನಾಗಿ ಗುರುತಿಸುವಂತೆ ಮಾಡಿದರೆ, ಐಶ್ವರ್ಯ ಜೊತೆ ಗುರು ಚಿತ್ರದಲ್ಲಿ ಅಭಷೇಕ ನಟಿಸಿದರೂ ಆತ ನಾಯಕನಾಗಿ ಗಟ್ಟಿಯಾಗಿ ನೆಲೆಗೊಳ್ಳಲು ಆಗಿಲ್ಲ. ವರ್ತಮಾನದ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಆತನ ನಾಯಕ ಪಾತ್ರಗಳ ಜಮಾನಾ ಮುಗಿದಂತೆ. ಇನ್ನು ಅಮಿತಾಬ್ ಪೂರ್ವಾರ್ಧದ ಚಿತ್ರ ಬದುಕನ್ನು ಅವಲೋಕಿಸಿದರೆ ಬಹುತೇಕ ಅನೇಕ ಚಿತ್ರಗಳು ಜಂಜೀರ್ ಮತ್ತು ದೀವಾರ್ ಚಿತ್ಚಗಳ ಪಡಿಯಚ್ಚುಗಳೆ, ನಿಜಕ್ಕೂ ಅಮಿತಾಬ್ ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದರೆ ಅದು ಆತನ ಚಿತ್ರ ಬದುಕಿನ ಉತ್ತರಾಠರ್ಧದಲ್ಲಿ ಉದಾ - ಬಾಗಬಾನ್, ಬ್ಲ್ಯಾಕ್, ಭೂತನಾಥ್ ಮತ್ತು ಪಾ ಮುಂತಾದ ಚಿತ್ರಗಳು ಎನ್ನ ಬಹುದು. ಹೀಗಾಗಿ ಅಮಿತಾಬ್ ಚಿತ್ರ ಬದುಕಿನ ಯಶಸ್ದಿಗೆ ಜಯಾ ಕಾರಣ ಯಾರೆ ಒಪ್ಪಲಿ ಬಿಡಲಿ ಇದು ನನ್ನ ಅನಿಸಿಕೆ, ಧನ್ಯವಾದಗಳು.

Submitted by lpitnal@gmail.com Thu, 04/11/2013 - 23:30

ಹಿರಿಯರಾದ ಪಾಟೀಲ ರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಸರ್ ತಾವು ಅಂದಿನ ದಿನಗಳ, ಹಿಂದಿ ಚಲನ ಚಿತ್ರದ ಅಂದಿನ ಸ್ಥಿತಿಗತಿಯೊಂದಿಗೆ ಅಮಿತಾಭ ಇನ್ನೂ ನಾಯಕನಾಗಿ ಸ್ಥಾಪಿತಗೊಂಡಿಲ್ಲದಿರುವುದನ್ನು ತಿಳಿಸಿದ್ದೀರಿ. ಗುಡ್ಡಿ, ಜಯಾ ಗೆ ಮೊದಲ ಚಿತ್ರ. ಹೌದು ಅದು ಸತ್ಯ. ಅಭಿಮಾನದ ಸಮಯದಲ್ಲಿ ಅಂಕುರಿಸಿದ ಪ್ರೀತಿ, ಪ್ರೇಮವಾಗಿ ಮಾರ್ಪಟ್ಟು, ಜೋಡಿ ದಾಂಪತ್ಯಕ್ಕೆ ಕಾಲಿಡುತ್ತಾರೆ. ಗುಡ್ಡಿ ಚಿತ್ರದ ಪ್ರಾರ್ಥನಾ ಗೀತೆಯೊಂದು ತಮಗೆ ಇದನ್ನೆಲ್ಲ ನೆನಪಿಸಿದ್ದಕ್ಕೆ ನಾನು ಕೃತಜ್ಞ.. ತಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by venkatesh Fri, 04/12/2013 - 06:40

In reply to by lpitnal@gmail.com

ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ಬಿ.ಆರ್. ಪಂತುಲು ಈ ತರಹದ ಗೀತೆ ಹಾಡಿದ್ದನ್ನು ಕೇಳಿದ ಜ್ಞಾಪಕ. 'ಸ್ವಾಮಿದೇವನೆ ಲೋಕಪಾಲನೆ ತೇನ ಮೋಸ್ತುಮಮೋಸ್ತುತೇ' ಒಟ್ಟಿನಲ್ಲಿ 'ಹಮ್ ಕೊ ಮನ್ ಕಿ ಶಕ್ತಿದೆನಾ' ಹಾಡು ವಾಣಿ ಜಯರಾಮ್ ರವರ ಚಿತ್ರರಂಗ ಜೀವನಕ್ಕೆ ಒಂದು ಸುಂದರ ನಾಂದಿಯಾಗಿ ಪರಿಣಮಿಸಿದ್ದು ಇತಿಹಾಸವೇ ಸರಿ ! ಹಾಗೂ ಗುಡ್ಡಿಯ ಪಾತ್ರಧಾರಿಣಿ, ಜಯಾ ಬಚ್ಚನ್ ಗೂ ಸಹಿತ....

Submitted by lpitnal@gmail.com Fri, 04/12/2013 - 08:01

ಹೌದು, ವೆಂಕಟೇಶರವರೇ, ಸತ್ಯಶ್ಯ ಸತ್ಯ ತಮ್ಮ ಮಾತು.ವಾಣಿ ಜಯರಾಂ ರ ಕೆಲವೇ ಹಾಡುಗಳಿದ್ದರೂ ಅವರ ಹೆಸರು ಹಿಂದಿ ಚಿತ್ರ ಇತಿಹಾಸದಲ್ಲಿ ದಾಖಲೆಯಾಗಿ ಉಳಿಸಿರುವುದು ಅವರ ಆ ಸುಶ್ರಾವ್ಯ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕಂಠಸಿರಿ. ಆದರೂ ಅವರೇಕೆ ಅಲ್ಲಿ ಬೆಳೆಯಲಿಲ್ಲ, ಮುಂದೊಂದು ದಿನ ಇದರ ಬಗ್ಗೆಯೇ ಬರೆದಾಗ ಹೆಚ್ಚಾಗಿ ಪ್ರಸ್ತಾಪಿಸುವೆ, ,ಮತ್ತು ಹೌದು, ಇದು ಜಯಾ ಅವರ ಅರಂಗೇಟ್ರಂ ಚಿತ್ರ, ಅವರನ್ನು ಚಿತ್ರರಂಗದಲ್ಲಿ ನೆಲೆಯೂರಿಸಿಬಿಟ್ಟಿತು. ಆ ಚಿತ್ರದ ನಿರ್ಮಾಪಕ ನಿರ್ದೇಶಕ ಜಯಾ ಮನೆಗೆ ಅಲೆದು ಅಲೆದು, ಕಾಡಿ ಬೇಡಿ ಪಾಲಕರನ್ನು ಒಪ್ಪಿಸಿ, ಈ ಚಿತ್ರಕ್ಕೆ ಕರೆತಂದದ್ದು ಎಂದು ಓದಿದ್ದೆ, ಮುಂದೊಂದು ದಿನ ನಿಖರವಾಗಿ ಅರಿಯೋಣ. ಧನ್ಯವಾದಗಳು.

Submitted by venkatesh Sat, 04/13/2013 - 06:43

In reply to by lpitnal@gmail.com

ಕ್ಷಮಿಸಿ ಪಾಟೀಲರೇ. ತಾವು ತಮ್ಮ ಅನಿಸಿಕೆಗಳನ್ನು ನೀಡುವ ಗಲಾಟೆಯಲ್ಲಿದ್ದೀರಿ. ನಾನು ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ಬಂದು ....ಇಲ್ಲಿ ಹಿಂದೀಚಿತ್ರದಲ್ಲಿ ಮುಂದುವರೆಯಲು ನಮ್ಮ ಲತಾ ದೀದಿ ಬಿಡಬೇಕಲ್ಲ. ಅವಳ ತಂಗಿ ಆಶಾ ಮುಂದೇಬರಲು ಓಪಿನಯ್ಯರ್ ಕಾರಣ. ಸುಮನ ಕಲ್ಯಾಣ್ ಪರ್ ಇದ್ದಳು. ಆಮೇಲೆ ಗೀತಾದತ್ ಬಂದಳು. ಹೀಗೆ ಅನೇಕರು ಲೈನ್ ನಲ್ಲಿಇದ್ಡಸಮಯದಲ್ಲೇ ನಮ್ಮ ವಾಣಿ ಜೈರಾಮ್ ಬಂದು ಹಿಂದಿ ಚಿತ್ರರಂಗದ ಪರದೆ ಮರೆಯಲ್ಲಿ ಹಾಡುವ ಪ್ರತಿಭೆಗಳಿಗೆ ಬರವೆಲ್ಲದಂತಾಯಿತು. ವಾಣೀಜರಾಮ್ ಬರದಂತೆ ಮೂರು ಸೋದರಿಯರು ನಿಗಾವಹಿಸಿದರು. ಇನ್ನು ಜಯಾಭಾದುರಿ ಬೆಂಗಾಲಿ ಪ್ರತಿಭೆ. ಬಹಳ ನಾಚಿಕೆ ಸ್ವಭಾವದ ಬೆಡಗಿ. ಗುಡ್ಡಿಯ ಕತೆ, ಅವಳ ನಿಜವಾದ ಕತೆ. ಆಕೆಗೆ ಧರ್ಮೇಂದ್ರ ಎಂದರೆ ಪ್ರಾಣ. ಬೆಂಗಾಲಿ ಅಂದಮೇಲೆ ಎಲ್ಲ ಚಿತ್ರರಂಗದ ತುಂಬಾ ತುಂಬಿದ್ದ ಬೆಂಗಾಳಿಗಳೆಲ್ಲ ಪರಿಚಯ. ಅವಳ ಕೆತೆ ಚೆನ್ನಾಗಿತ್ತು. ಹಾಗಾಗಿ ಅವಳ ಪಾತ್ರಕ್ಕೆ ಹೇಳಿಮಾಡಿಸಿದಂತಹ ಹಾವಭಾವ ಮತ್ತು ನಾಚಿಕೆಯ ಮುದ್ದೆಯಾಗಿದ್ದ ಜಯ ಸರಿಯಾದ ಹುಡುಕಾಟವೆನ್ನಿಸಿ ಆಕೆ ಪಾತ್ರಕ್ಕೆ ದೊರೆತಳು.

Submitted by partha1059 Fri, 04/12/2013 - 10:33

ಇಟ್ನಾಳರೆ ಈ ಹಾಡು ಕನ್ನಡದಿ0ದ‌ ಹಿ0ದಿಗೆ ಹೋಗಿದೆ ಎ0ದು ನೀವು ಅನ್ನುವಿರಿ ಆದರೆ ಹಿ0ದಿಯ‌ ಅ0ಕುಶ್ ಚಿತ್ರದ‌ ಅದೆ ಹಾಡು ಪುನಹ ಕನ್ನಡಕ್ಕೆ ರಾವಣರಾಜ್ಯದಲ್ಲಿ ಬ0ದಿದೆ , ಇಲ್ಲಿ ಪೇಸ್ಟ್ ಮಾಡುವೆ ಆದರೆ, ಪ್ರತಿಕ್ರಿಯೆಯಲ್ಲಿ ಸಾಲುಗಳು ಒಟ್ಟು ಸೇರಿ ಬರುವದರಿ0ದ‌ ನಿಮ್ಮಗೆ ಒಟ್ಟಿಗೆ ರಾಶಿ ಹಾಕಿದ0ತೆ ಕಾಣುವುದು , ಇರಲಿ ಒಮ್ಮೆ ನೋಡಿ
ಚಿತ್ರ: ರಾವಣ ರಾಜ್ಯ - "ತಂದೆ ನೀ ನೀಡು ಬಾ ಶಕ್ತೆ ಮನಸಿಗೆ"
Submitted by chitraprasanna on Thu, 2010-02-18 01:46. ಚಿತ್ರಗೀತೆ | ೧೯೮೭
ಚಿತ್ರ: ರಾವಣರಾಜ್ಯ
ಗಾಯಕರು: ಮಂಜುಳ ಗುರುರಾಜ್
ಸಾಹಿತ್ಯ:
ಸಂಗೀತ:
ವರ್ಷ: ೧೯೮೭

ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳ ಇರುಳಿಗೆ
ನಮ್ಮ ಅಜ್ಞಾನ ನೀ ನೀಗು ಬಾ
ಬಾಳ ಹಾದಿಗೆ ಗುರಿ ತೋರು ಬಾ

ನಮ್ಮ ಮನದಿಂದ ದೌರ್ಬಲ್ಯ ದೂಡು
ಸತ್ಯ ಪಥದಲ್ಲಿ ನಡೆವಂತೆ ಮಾಡು
ಕಷ್ಟ ನೂರಾರು ನೀ ಪಾರು ಮಾಡು
ನಿತ್ಯ ಸಂತೋಷ ನಮಗೆಂದು ನೀಡು
ಪ್ರೇಮ ಹೂವಾಗಲಿ, ದ್ವೇಷ ದೂರಾಗಲಿ
ಸೇಡ ವಿಷ ಜ್ವಾಲೆ ಮನದಲ್ಲಿ ಕೊನೆಯಾಗಲಿ
ಪ್ರೇಮ ಹೂವಾಗಲಿ, ದ್ವೇಷ ದೂರಾಗಲಿ
ಸೇಡ ವಿಷ ಜ್ವಾಲೆ ಮನದಲ್ಲಿ ಕೊನೆಯಾಗಲಿ

ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳ ಇರುಳಿಗೆ

ಎಂತ ಬಿರುಗಾಳಿ ಎದುರಾದರೇನು?
ನಿಂತು ತಡೆವಂತೆ ಛಲ ನೀಡು ಎಂದು
ನಮ್ಮ ಸಂತೋಷ ಪರರಲ್ಲಿ ಹಂಚಿ
ನಾವು ನಲಿವಂತೆ ಮನ ನೀಡು ಎಂದು
ದ್ರೋಹ ದೂರಾಗಲಿ, ಸ್ನೇಹ ಹೊಳೆಯಾಗಲಿ
ಸ್ವಾರ್ಥ ಮನದಿಂದ ಎಂದೆಂದೂ ಕೊನೆಯಾಗಲಿ
ದ್ರೋಹ ದೂರಾಗಲಿ, ಸ್ನೇಹ ಹೊಳೆಯಾಗಲಿ
ಸ್ವಾರ್ಥ ಮನದಿಂದ ಎಂದೆಂದೂ ಕೊನೆಯಾಗಲಿ

ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳ ಇರುಳಿಗೆ
ನಮ್ಮ ಅಜ್ಞಾನ ನೀ ನೀಗು ಬಾ
ಬಾಳ ಹಾದಿಗೆ ಗುರಿ ತೋರು ಬಾ
ನಮ್ಮ ಅಜ್ಞಾನ ನೀ ನೀಗು ಬಾ
ಬಾಳ ಹಾದಿಗೆ ಗುರಿ ತೋರು ಬಾ
ತಂದೆ ನೀ ನೀಡು ಬಾ ಶಕ್ತಿ ಮನಸಿಗೆ

» 876 reads

Submitted by partha1059 Sat, 04/13/2013 - 09:33

In reply to by partha1059

ತಂದೆ ನೀ ನೀಡು ಬಾ ಶಕ್ತಿ ಮನಸಿಗೆ

ಜ್ಯೋತಿ ನೀನಾಗು ಬಾ ಬಾಳ ಇರುಳಿಗೆ

ನಮ್ಮ ಅಜ್ಞಾನ ನೀ ನೀಗು ಬಾ

ಬಾಳ ಹಾದಿಗೆ ಗುರಿ ತೋರು ಬಾ

ನಮ್ಮ ಮನದಿಂದ ದೌರ್ಬಲ್ಯ ದೂಡು

ಸತ್ಯ ಪಥದಲ್ಲಿ ನಡೆವಂತೆ ಮಾಡು

ಕಷ್ಟ ನೂರಾರು ನೀ ಪಾರು ಮಾಡು

ನಿತ್ಯ ಸಂತೋಷ ನಮಗೆಂದು ನೀಡು

ಪ್ರೇಮ ಹೂವಾಗಲಿ, ದ್ವೇಷ ದೂರಾಗಲಿ ಸೇಡ ವಿಷ ಜ್ವಾಲೆ ಮನದಲ್ಲಿ ಕೊನೆಯಾಗಲಿ

ಪ್ರೇಮ ಹೂವಾಗಲಿ, ದ್ವೇಷ ದೂರಾಗಲಿ ಸೇಡ ವಿಷ ಜ್ವಾಲೆ ಮನದಲ್ಲಿ ಕೊನೆಯಾಗಲಿ

ತಂದೆ ನೀ ನೀಡು ಬಾ ಶಕ್ತಿ ಮನಸಿಗೆ

ಜ್ಯೋತಿ ನೀನಾಗು ಬಾ ಬಾಳ ಇರುಳಿಗೆ

ಎಂತ ಬಿರುಗಾಳಿ ಎದುರಾದರೇನು?

ನಿಂತು ತಡೆವಂತೆ ಛಲ ನೀಡು ಎಂದು

ನಮ್ಮ ಸಂತೋಷ ಪರರಲ್ಲಿ ಹಂಚಿ

ನಾವು ನಲಿವಂತೆ ಮನ ನೀಡು ಎಂದು

ದ್ರೋಹ ದೂರಾಗಲಿ, ಸ್ನೇಹ ಹೊಳೆಯಾಗಲಿ ಸ್ವಾರ್ಥ ಮನದಿಂದ ಎಂದೆಂದೂ ಕೊನೆಯಾಗಲಿ

ದ್ರೋಹ ದೂರಾಗಲಿ, ಸ್ನೇಹ ಹೊಳೆಯಾಗಲಿ ಸ್ವಾರ್ಥ ಮನದಿಂದ ಎಂದೆಂದೂ ಕೊನೆಯಾಗಲಿ

ತಂದೆ ನೀ ನೀಡು ಬಾ ಶಕ್ತಿ ಮನಸಿಗೆ

ಜ್ಯೋತಿ ನೀನಾಗು ಬಾ ಬಾಳ ಇರುಳಿಗೆ

ನಮ್ಮ ಅಜ್ಞಾನ ನೀ ನೀಗು ಬಾ ಬಾಳ ಹಾದಿಗೆ ಗುರಿ ತೋರು ಬಾ

ನಮ್ಮ ಅಜ್ಞಾನ ನೀ ನೀಗು ಬಾ ಬಾಳ ಹಾದಿಗೆ ಗುರಿ ತೋರು ಬಾ

ತಂದೆ ನೀ ನೀಡು ಬಾ ಶಕ್ತಿ ಮನಸಿಗೆ

Submitted by swara kamath Sat, 04/13/2013 - 11:45

In reply to by partha1059

ನಮಸ್ಕಾರ ಪಾರ್ಥರೆ, ನನಗೆ ಈ ಗೀತೆಯನ್ನು ಓದಿದ ಮೇಲೆ ಅಶ್ವತ್ ಅಭಿನಯಿಸಿರುವ ,"ನಮ್ಮ ಮಕ್ಕಳು" ಚಿತ್ರದ ಹಾಡು 'ನಿನ್ನೊಲುಮೆ ನಮಗಿರಲಿ ತಂದೇ , ಕೈ ಹಿಡಿದು ನೀ ನಡೆಸು ಮುಂದೆ ; ಎಂಬ ಹಾಡು ಬಹುವಾಗಿ ಕಾಡಿತು. ಮುಂದಿನ ನುಡಿಗಳು ನೆನಪಾಗುತ್ತಿಲ್ಲಾ.ಇಟ್ನಾಳ್ ಸರ್ ಅವರ ಹಿಂದೀ ಚಿತ್ರ ಗೀತೆ ಹಾಗೂ ಅದರ ಸುಂದರ ಅನುವಾದ ಸಹ ತುಂಬಾ ಮೆಚ್ಚುಗೆ ಆಯಿತು .....ವಂದನೆಗಳು.......ರಮೇಶ್ ಕಾಮತ್.

Submitted by lpitnal@gmail.com Sat, 04/13/2013 - 10:01

ವಾಹ್ ! ಪಾರ್ಥ ಅವರೇ ವಾಹ್! ಅಂತೂ ಇಷ್ಟೊಂದು ಕಷ್ಟ ಪಟ್ಟು ಈ ಹಾಡನ್ನು ಸರಿಯಾಗಿ ಹುಡುಕಿ, ಸರಿಯಾದ ರೀತಿಯಲ್ಲಿ ನಮಗಾಗಿ ಉಣಬಡಿಸಿದ್ದೀರಿ. ತಮ್ಮ ಪ್ರೀತಿಗೆ, ಆಭಿಮಾನಕ್ಕೆ ಅನನ್ಯ ವಂದನೆ. ಹಮ್ ಕೊ ಮನ್ ಕಿ ಶಕ್ತಿ ದೇನಾ. 1963 ರ ಗುಲ್ಜಾರರ ಗೀತೆ ಹೀಗೆ ಪ್ರಭಾವ ಬೀರಿರಲಿಕ್ಕೆ ಸಾಕು. ತಾವಂದಂತೆ ಎಲ್ಲದಕ್ಕೂ ಮೂಲವೊಂದಿರುತ್ತದೆ, ಇದು ನಿಜ ಕೂಡ. ಹಾಡಿನಲ್ಲಿ ಒಳ್ಳೆಯ ಅಂಶಗಳ ಸಹಿತ, ತನ್ನತನ ವಿದೆ. ಕನ್ನಡತನವಿದೆ, ಈ ನೆಲದ, ಈ ಭಾಷೆಯ ಗುಣವಿದೆ. ತಮ್ಮ ಪ್ರತಿಕ್ರಿಯೆಗೆ ಮೂಕವಿಸ್ಮಿತನಾದೆ. ಅಂದಹಾಗೆ ಪಾರ್ಥವರೇ, ಈಗ ಸಧ್ಯ ಜಯಂತ ಕಾಯ್ಕಿಣಿಯರ, 'ಟೂರಿಂಗ್ ಟಾಕೀಸ್[ ರಿಲೀಸ್ ಇದೆ ಸೃಜನಾದಲ್ಲಿ, ಹೋಗುವ ಗಡಿಬಿಡಿಯಲ್ಲಿದ್ದೇನೆ.ಹಾಗೆಯೇ ರೋಹಿಣಿ ಹಾಗೂ ನಂದನ ನಿಲೇಕಣಿ ಇದ್ದಾರೆ. ರೋಹಿಣಿ ನಿಲೇಕಣಿ ಪುಸ್ತಕ ಕನ್ನಡದಲ್ಲಿ ಅನುವಾದ ಮಾಡಿದ್ದಾರೆ ಆರ್ಯ ಆಚಾರ್ಯ, ಹೀಗಾಗಿ ದಿಗ್ಗಜಗಳ ಸಮ್ಮಿಳನ. ಅದೇ ಫಂಕ್ಷನ್ಗಾಗಿ ನನ್ನ ಗೆಳೆಯ, ಜಯಂತ ಮುಂಬಯಿ ರೂಮ್ ಮೇಟ್ ವಿಠಲ್ ಬಂದು ನನ್ನ ಗೆಸ್ಟ ಆಗಿದ್ದಾರೆ. ಅವರನ್ನು ಕರೆತರಲು ಮುಂದೆ ಹೋಗಿದ್ದಾರೆ. ಅದಕ್ಕೆ ಹೋಗುತ್ತಿದ್ದೇನೆ. ಕ್ಷಮೆಯಿರಲಿ,

Submitted by lpitnal@gmail.com Sun, 04/14/2013 - 15:52

ನಮಗೆ ಮನದ ಶಕ್ತಿ ನೀಡು, ಮನ ವಿಜಯಹೊಂದಲು
ಅನ್ಯರ ಗೆಲುವ ಮೊದಲು, ತನ್ನ ತಾ ಗೆಲ್ಲಲು
ಈ ಸಾಲುಗಳನ್ನು ಪರಿಷ್ಕರಿಸಿ,
'ನಮಗೆ ಮನದ ಶಕ್ತಿ ನೀಡು, ಮನ ವಿಜಯಹೊಂದಲು
ಅನ್ಯರ ಗೆಲುವ ಮೊದಲು, ಗೆಲ್ಲೆ ತನ್ನೊಳು' ಮಾಡಬಯಸುತ್ತೇನೆ. ಸಲಹೆ ಇದ್ದಲ್ಲಿ ಗೆಳೆಯರೆ ಸ್ವಾಗತ.