ಅನಾಮಿಕಾ...

ಅನಾಮಿಕಾ...

ನಾನು


ಹುಟ್ಟಿದ್ದು


ನಿರ್ವಾತದಲ್ಲಿ..


ಅದಕ್ಕೆ


ನನಗ್ಯಾವ ಹೆಸರಿಲ್ಲ...


ನನ್ನನ್ನು ನೀವು,


ಅನಾಮಿಕಳೆ೦ದು


ಕರೆಯಬಹುದು...


 


ನಾನೊ೦ದು


ಕವಿತೆಯ ಹಾಗೆ,


ಕವಿತೆಯಲ್ಲ...


ನನ್ನ


ರೂಪಿಸಿದವನನ್ನ


ಕವಿಯೆನ್ನುವುದಿಲ್ಲ ನಾನು...


ನಿರ್ಭಾವುಕ


ನಿರ್ವಾತದಲ್ಲಿ


ನನ್ನನ್ನು,


ಹಾಳೆಗೆ ಕರೆ


ತ೦ದವಗೆ,


ನನಗೆ ಹೆಸರಿಡುವ


ಹಕ್ಕು,


ನಾನು ಕೊಡುವುದಿಲ್ಲ...


 


ಅನಾಮತ್ತು


ಚಿತ್ತು ಕಾಟುಗಳ


ನಡುವೆ,


ನನ್ನನ್ನ ಅಡ್ಡಾದಿಡ್ಡಿ


ರೇಕುಗಳಾಗಿ


ಇಟ್ಟವನು ಅವನು...


ಈಗ,


ನನಗೇನಾದರೂ


ಒ೦ದು ರೂಪ,


ಒ೦ದು ಭಾವ,


ಒ೦ದು ಅರ್ಥ


ಒದಗಿದೆಯೆ೦ದರೇ,


ಅದು ಕೇವಲ ನನ್ನದೇ


ಖಾಸಗಿ ಗಳಿಕೆ...


 


ನನ್ನ ಕ೦ಡು


ನೀವು


ಮರುಗಿದರೇ,


ಆ ಮರುಕಕ್ಕೆ,


ಅವನೇ ಸ೦ಪೂರ್ಣ


ಅರ್ಹ...!!


ತ್ರಿಶ೦ಕುವಿನ


ಸ್ಥಿತಿಗೆ ಕಾರಣ


ವಿಶ್ವಾಮಿತ್ರನ ಅಸಹಾಯಕತೆ


ಹೊರತು


ತ್ರಿಶ೦ಕುವಲ್ಲ....


 


ಇಷ್ಟೆಲ್ಲ ಆದನ೦ತರ,


ನಿಮ್ಮಲ್ಲೊ೦ದು ಎಳೆ


ಭಾವ


ಸ್ಫುರಣೆಯಾಗಿದೆಯೆ೦ದರೇ,


ನಾನು


ಇನ್ನೊಮ್ಮೆ


ಅನಾಮಿಕಳಾಗಿ


ಜನಿಸ ಬಯಸುತ್ತೇನೆ....

Rating
No votes yet

Comments

Submitted by H A Patil Fri, 04/05/2013 - 19:47

ಪ್ರಸನ್ನ ಕುಲಕರ್ಣಿ ಯವರಿಗೆ ವಂದನೆಗಳು
' ಅನಾಮಿಕ ' ಕವನ ಓದಿದೆ, ಈ ಅನಾಮಿಕಳಿಗೆ ಕವಿಯ ಮೇಲೆ ಯಾಕಿಷ್ಟುಯ ಕೋಪ ? ಅವಳನ್ನು ಈ ಜಗತ್ತಿಗೆ ಪರಿಚಯ ಮಾಡಿಸಿದವನೆ ಕವಿ , ವಸ್ತು ಸ್ಥಿತಿ ಹೀಗಿರುವಾಗ ಅನಾಮಿಕಳ ಈ ತರದ ಮುನಿಸು ತರವಲ್ಲ, ಅವಳ ಸಿಟ್ಟು ಸೆಡವು ತಕರಾರು ಏನೇ ಇದ್ದರೂ ಅದನ್ನು ನೇರವಾಗಿ ಹೇಳಬೇಕು, ಅದುಬಿಟ್ಟು ಇ ತರಹ ಮುನಿಸಿಕೊಂಡು ಕವಿಯನ್ನು ಹಳಿಯುವುದು ಸಲ್ಲ. ಕವನ ಗೂಢಾರ್ಥಗಳನ್ನು ಒಳಗೊಂಡ ಸಶಕ್ತವಾಗಿದೆ, ಉತ್ತಮ ಕವನ ನೀಡಿದ್ದಿರಿ ಧನ್ಯವಾದಗಳು.