ಸುಮ್ನೆ ಹೀಗೆ-೯

ಸುಮ್ನೆ ಹೀಗೆ-೯

ಮರದಿಂದ ಮರಕ್ಕೆ ಜಿಗಿಯುತ್ತವೆ
ಆಹಾರಕ್ಕಾಗಿ ಕೋತಿಗಳು

ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾರೆ
ಅಧಿಕಾರಕ್ಕಾಗಿ   ______
.
.
.
.
.
.
ಸೂಕ್ತ ಪದ ಸಿಗುತ್ತಿಲ್ಲ.
ನೀವೇ ತಿಳಿಸಿಬಿಡಿ.

Rating
No votes yet

Comments

Submitted by H A Patil Fri, 04/05/2013 - 19:52

ಮೇಡಂ ವಂದನೆಗಳು
' ಸುಮ್ನೆ ಹೀಗೆ ' ವರ್ತಮಾನದ ಸ್ಥಿತಿಗೆ ಹಿಡಿದ ಕನ್ನಡಿ, ' ಪಕ್ಷದಿಂದ ಪಕ್ಷಕ್ಕಾಗಿ ಜಿಗಿಯುತ್ತಾರೆ ಅಧಿಕಾರಕ್ಕಾಗಿ .........ಆತ ರಾಜಕಾರಣಿ ಇರಬಹುದೆ ? ಸುಮ್ಮನೆ ಹೀಗೆಯೆ ಊಹೆ, ಧನ್ಯವಾದಗಳು.

Submitted by venkatb83 Sat, 04/06/2013 - 18:32

ಜ-ಪ್ರ-ಗಳು,...ಇದು ಸರಿ ಇಲ್ಲ..

ರಾ.ಕ.ಗಳು
ಉಹೂ ಇದೂ ಸರಿ ಇಲ್ಲ...
ಕುಲಾಂತರಿ ತಳಿಗಳ ಹಾಗೆ - ಪಕ್ಚಾನ್ತರಿ ತೋಳಗಳು ...!!

ಸೊ ತೋಳಗಳು ಸರಿ...ಆದರೆ ತೋಳಗಳಿಗೆ ಅವಮಾನ ಮಾಡಿದ ಹಾಗೆ...!

ಹೀಗೆ ಜಿಗಿಯುವವರಿಗೆ ಅವರವರ ಕ್ಷೇತ್ರಗಳಲ್ಲಿ ಮತದಾರರು ಸೋಲುಣಿಸಿ ಮನೆಗೆ ಕಳಿಸಲಿ ...!!
\।/

Submitted by Premashri Mon, 04/08/2013 - 15:09

In reply to by venkatb83

ಹೌದು ಸಪ್ತಗಿರಿ ಅವರೆ,ಮತದಾರರು ಯಾವುದೇ ಪ್ರಲೋಭನೆಗೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸಿದರೆ, ಅಂತವರು ಸೋಲಬಹುದು.ಧನ್ಯವಾದಗಳು

Submitted by nageshamysore Mon, 04/08/2013 - 18:04

ಪ್ರೇಮಾ ಮೇಡಂ, ಸ್ವಲ್ಪ ಬದಲಿಸಿ ಈ ಕೆಳಗಿನ ರೀತಿ ಮಾಡಬಹುದಾ ?

ಮರದಿಂದ ಮರಕ್ಕೆ ಜಿಗಿತ
ಆಹಾರಕ್ಕಾಗಿ ರೀತಿಗಳು;
ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತ
ಅಧಿಕಾರಕ್ಕಾಗಿ ಕೋತಿಗಳು!

ನಾಗೇಶ ಮೈಸೂರು, ಸಿಂಗಾಪುರ

Submitted by Premashri Tue, 04/09/2013 - 14:53

In reply to by nageshamysore

ಅಧಿಕಾರಕ್ಕಾಗಿ ಕೋತಿಗಳು ಎಂದರೆ ಸಪ್ತಗಿರಿಯವರು ಅಂದಂತೆ ಕೋತಿಗಳಿಗೆ ಅವಮಾನ ಮಾಡಿದಂತೆ :)
ವಂದನೆಗಳು ನಾಗೇಶ್ ಅವರೆ.