ಹೊಸ ರುಚಿ-"ಉರ್ಣಿ ಬಾತ್"

ಹೊಸ ರುಚಿ-"ಉರ್ಣಿ ಬಾತ್"

ಬೇಕಿರುವ ಸಾಮಾಗ್ರಿ : ರವೆ, ಸಕ್ಕರೆ, ತುಪ್ಪ, ಏಲಕ್ಕಿ, ಸ್ವಲ್ಪ ಕೇಸರಿ ಕಲರ್.


ತಯಾರಿಸುವ ವಿಧಾನ : ಮೊದಲಿಗೆ ರವೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ನೀರು ಹಾಕಿ, ಕುದಿಸಿ.


ಕುದಿಯುವಾಗ ಹುರಿದಿಟ್ಟ ರವೆ, ಸಕ್ಕರೆ, ತುಪ್ಪ, ಏಲಕ್ಕಿ, ಕೇಸರಿ ಕಲರ್ ಸೇರಿಸಿ ಸೌಟಿನಲ್ಲಿ ತಿರುಗಿಸುತ್ತಾ ಇರಬೇಕು. ಸರಿಯಾಗಿ ತಿರುಗಿಸುತ್ತಾ ಇದ್ದರೆ "ಕೇಸರಿ ಬಾತ್" ಆಗುವುದು. ಗಮನವೆಲ್ಲಾ ಟಿ.ವಿ ಸೀರಿಯಲ್ ಕಡೆ ಇದ್ದಾಗ,ತಿರುಗಿಸಲು ಮರೆತು ಹೋಗಿ, ರವೆಯೆಲ್ಲಾ ಗಂಟುಗಂಟುಗಳಾಗಿ "ಉರ್ಣಿ ಬಾತ್" ತಯಾರಾಗುವುದು. ಬಿಗ್ ಬಾಸ್‌ ಅಂಡಾಂಡಭಂಡರಿಗೆ ಶಪಿಸುತ್ತಾ, ಮಾಡಿದವರೇ ಕುಳಿತು ತಿನ್ನಲು ಚೆನ್ನಾಗಿರುತ್ತದೆ. ಮೂರು ದಿನದಿಂದ ತಿನ್ನುತ್ತಾ ಇದ್ದೇನೆ.:( ನೀವೂ ಮಾಡಿ ನೋಡಿ.


ನಿಮಗೆ ಈ ತಿನಿಸು ಇಷ್ಟವಾಯಿತೆ? ತಿಳಿಸಿ : * * * * *


 


 

Rating
No votes yet

Comments

Submitted by neela devi kn Thu, 04/04/2013 - 15:16

ಸ0ಪದದ‌ ಎಲ್ಲರಿಗೂ ನಮಸ್ಕಾರಗಳು
ಗಣೇಶಣ್ಣ ನವರಿಗೆ ನಮಸ್ಕಾರಗಳು ಈ ಊರ್ಣಿ ಬಾತ್ ನಾನು ಮದುವೆಯಾದ‌ ಮೊದಲದಿನ‌ ಮಾಡಿದ್ದೆ. ನಿಮ್ಮ ಹೊಸ‌ ರುಚಿ ಓದಿ ನೆನಪಾಇತು. ಧನ್ಯವಾದಗಳು ‍ ನೀಳಾ

Submitted by ಗಣೇಶ Thu, 04/04/2013 - 23:58

In reply to by neela devi kn

ನೀಳಾದೇವಿಯವರೆ, ನಮಸ್ಕಾರ. >>>ಈ ಊರ್ಣಿ ಬಾತ್ ನಾನು ಮದುವೆಯಾದ‌ ಮೊದಲದಿನ‌ ಮಾಡಿದ್ದೆ.:)-- ಈಗ ನೀವು ಅಡುಗೆಯಲ್ಲಿ ಸುಧಾರಿಸಿರಬಹುದು...:) --ಈ ಹೊಸರುಚಿ ಎಪ್ರಿಲ್ ಒಂದಕ್ಕೆಎಂದೇ ಸ್ಪೆಶಲ್ ಆಗಿ ಮಾಡಿದ್ದೆ. ಸಂಪದಕ್ಕೆ ಹಾಕಲಾಗಲಿಲ್ಲ. :(

Submitted by ಗಣೇಶ Sat, 04/06/2013 - 23:59

In reply to by Shreekar

ಧನ್ಯವಾದಗಳು ಶ್ರೀಕರ್‌ಜಿ, ಉರ್ಣಿಯಾದರೂ ಹೊಗಳಿದ... ನಿಮ್ಮ ಬಿರುದಿನಿಂದ ನನ್ನ ಉತ್ಸಾಹ ಇನ್ನೂ ಹೆಚ್ಚಿದೆ. ನಾಳೆ ಸಮಯ ಸಿಕ್ಕರೆ... ನಿಮಗೆ ಮುಂದಿನ ವಾರ ಇನ್ನೊಂದು ರುಚಿಯಾದ ಅಡುಗೆ..:)

Submitted by venkatb83 Mon, 04/08/2013 - 13:25

In reply to by kpbolumbu

"ಗಣೇಶ್, ನಿಮ್ಮ ಮೊಬೈಲ್ ನಂಬರ್ ಕೊಡಿ."

;(000

ಗಣೇಶ್ ಅಣ್ಣ -ಕೈಗೆ -ಕಿವಿಗೆ ಸಿಗೋಲ್ಲ...! ಎಂದು ಹೇಳಲು ..............................ವೆ ..!!
ಅವರೇನಿದ್ದರೂ ಅವರು ಬರೆವ ಬರಹಗಳು ಅಕ್ಷರಗಳ ರೂಪದಲ್ಲಿ ಮಾತ್ರ ಸಿಗುವರು...!!
ಅವ್ರನ್ನನೋಡಿ ಅವ್ರಜೋತೆ ಮಾತಾಡಬೇಕು ಎಂಬ ಜನರ ಮೈಲುದ್ದದ ಪಟ್ಟಿಯಲ್ಲಿ ಈಗ ನಿಮ್ಮ ಹೆಸರೂ ಸೇರಿತು...!
ಶುಭವಾಗಲಿ.

\।

Submitted by Shreekar Mon, 04/08/2013 - 13:53

In reply to by venkatb83

ಗಣೇಶನ್ ಅವರ ಪತ್ತೆ ಹಚ್ಚುವುದು ಅಷ್ಟೇನೂ ಕಷ್ಟವಲ್ಲ. ಈಗಾಗಲೇ ಸಾಕಷ್ಟು ಕುರುಹುಗಳನ್ನು ಅವರು ಕೊಟ್ಟಿದ್ದಾರೆ, ಸಪ್ತಗಿರಿವಾಸಿ ವೆಂಕಟೇಶ್ ಅವರೇ !

Submitted by ಗಣೇಶ Mon, 04/08/2013 - 23:27

In reply to by kpbolumbu

ಓ..........ಹ್, ಕೃಷ್ಣಪ್ರಕಾಶರೆ, ನೀವೂ "ಊರ್ಣಿ ಬಾತ್" ಮಾಡಿದಿರಾ!?...ಬೈಬೇಕು ಅಂತ ಇದೀರಾ? ನೆಕ್ಸ್ಟ್ ಟೈಂ ಚೆನ್ನಾಗಿರುವ ಅಡುಗೆ ಮಾಡಿ ಬರೆಯುವೆ. ಈ ಬಾರಿ ಕ್ಷಮಿಸಿ ಗುರುಗಳೆ..

Submitted by venkatb83 Mon, 04/08/2013 - 15:11

;())) ಕುರುಹು ಬೇಜಾನ್ ಇವೆ... ಹಾಗೆಯೇ ಅವರು ನಮ್ಮ‌ ಎರಿಯಾ ಹತ್ತಿರವೇ ಇರೋದು..ಎಲ್ಲಾ ಸರಿ, ಆದ್ರೆ ಅವರು ಹೇಗಿರುವರು ಎನ್ದು ಗೊತ್ತಿಲದೆ ಹೇಗೆ ಹುಡುಕೋದು...? ಆದರೋ ಅವ್ರನ್ನ‌ ನಾ ಬಿಡೆ... ಹಿಡಿಯದೆ ಬಿಡೆ... ಅದೂ ನಮ್ ಹತ್ತಿರವಿದ್ದಾಗ‌ ಬಿಟ್ರೆ...!!
ನೋಡುವ‌ ಅದು ಹೇಗೆ ಸಾಧ್ಯ‌ ಅನ್ತ‌...

\|

Submitted by partha1059 Mon, 04/08/2013 - 19:11

In reply to by venkatb83

ಕುರುಹು ಬೇಜಾನ್ ಇದೆ ಬಿಡಿ... ಹುಡುಕಿ ಹೋಗಿ.. ಹಾಗೆ ಎದುರಿಗೆ ಸಿಕ್ಕಾಗ‌ ಬಿಡಬೇಡಿ... ಅವರು ಪ್ಲಾಟ್ ನಲ್ಲಿದ್ದು, ಅಲ್ಲಿಗೆ ಬ0ದು ಎರಡು ವರ್ಷದೋಳಗೆ ಇದ್ದು, ಹೆಸರು ಬಹುಷ: ಗಣೇಶ್ ಮೋಹನ ಕಾಮತ್ ಎ0ದೋ ಮತ್ತೇನೊ ಹೆಸರುಗಳಿದ್ದಲ್ಲಿ, 270+/‍‍ ನ0ತ‌ ಬಸ್ ದಾರಿಯಲ್ಲಿದ್ದಲ್ಲಿ. ಅ0ದ‌ ಹಾಗೆ ನಿನ್ನೆ ಬಾನುವಾರ‌ ಯಾರದೊ ಮನೆಗೆ ಹೋಗುವಾಗ‌ ನ0ದಿನಿ ಎನ್ ಕ್ಲೇವ್ ಎನ್ನುವ‌ ಹೆಸರು ಗಮನಿಸಿದೆ ಅದು ಗಣೇಶರು ಕೊಟ್ಟ ವಿವರಗಳಿಗೆ ಹೋಲುತ್ತಿತ್ತು ಆದರೆ ಅವರನ್ನು ಹೇಗೆ ಹುಡುಕುವುದು ಇರಲಿ ಬಿಡಿ ಎ0ದಾದರು ಸಿಕ್ಕೆ ಸಿಗುತ್ತಾರೆ :‍)

Submitted by Shreekar Mon, 04/08/2013 - 19:42

In reply to by partha1059

"...ಇರಲಿ ಬಿಡಿ ಎಂದಾದರು ಸಿಕ್ಕೆ ಸಿಗುತ್ತಾರೆ ."

ಸಿಗದೆ ಎಲ್ಲಿ ಹೋಗುತ್ತಾರೆ? ಊರಿಗೆ ಬಂದವರು ಬಾರಿಗೆ ಬರದೇ ಇರುವರೇ !

ನಿಧಾನವಾಗಿಯೇ ಸಿಗಲಿ ಬಿಡಿ, ಸಸ್ ಪೆನ್ಸ್ ಇರುವಷ್ಟು ದಿನ ಒಳ್ಳೆಯದೇ !

:-))))

Submitted by ಗಣೇಶ Mon, 04/08/2013 - 23:49

In reply to by Shreekar

ಶ್ರೀಕರ್‌ಜಿ, ಮಲ್ಲೇಶ್ವರದಲ್ಲಿ ಚಿನ್ನದ ಅಂಗಡಿ ಕಳ್ಳತನವಾದರೆ, ಕೂಡಲೇ ಪೋಲೀಸರು ಕಾರ್ಯಪ್ರವೃತ್ತರಾಗಿ, ತನಿಖೆಗೆ ಮೂರು ತಂಡ ರಚನೆಮಾಡಿ, ಒಂದು ತಂಡ ಮಲೇಶ್ಯಾಕ್ಕೆ, ಇನ್ನೊಂದು ಹೈದರಾಬಾದ್‌ಗೆ, ಮತ್ತೊಂದು ನೇಪಾಳಕ್ಕೆ ಹೋಗಿ... ತನಿಖೆ ಪಾತಾಳ ತಲುಪುವುದು.:) ಆದರೆ ಇಲ್ಲಿ ಹಾಗಿಲ್ಲ.. ಬಸ್‌ನಲ್ಲಿ ಸಪ್ತಗಿರಿವಾಸಿ, ಫ್ಲಾಟ್ ಬಳಿಯಲ್ಲಿ ಪಾರ್ಥರು, ಬಾರಲ್ಲಿ ಶ್ರೀಕರ್‌ಜಿ .......ತಪ್ಪಿಸುವ ಹಾಗೇ ಇಲ್ಲ. :)

Submitted by Shreekar Fri, 04/12/2013 - 17:25

In reply to by ಗಣೇಶ

"....ಬಾರಲ್ಲಿ ಶ್ರೀಕರ್‌ಜಿ .......ತಪ್ಪಿಸುವ ಹಾಗೇ ಇಲ್ಲ"

ಅಂದ ಕಾಲತ್ತಿಲ್ ಒಂದು ನಡುರಾತ್ರಿ ತೂರಾಡಿ ಮನೆಗೆ ಬಂದಾಗ ಶ್ರೀಮತಿ ಶ್ರೀಕರ್ ಕೊಟ್ಟ ಅಲ್ಟಿಮೇಟಂ : "ಘರ್ ಯಾ ಬಾರ್, ಆಯ್ಕೆ ಮಾಡಿಕೋ. ಬಾರೇ ಆಯ್ಕೆ ಎಂದಾದರೆ ಘರ್ ಸೇ ಬಾಹರ್ ! " ಕೋಳೀಕುಕ್ಕನಿಗೆ ಬಾರಿಗೆ ಗುಡ್ ಬೈ ಹೇಳುವುದಲ್ಲದೆ ಬೇರೆ ದಾರಿಯೇ ಇಲ್ಲವಾಯಿತು.

ಆದರೆ ಶ್ರೀಕರ್ ನ ಭಾವ ಗಣೇಶ ಬಹಳ ಬುದ್ಧಿವಂತ. ಬಾರುಗಳೇ ಇಲ್ಲದ ಒಣ ಗುಜರಾತಿನಲ್ಲಿ ಮನೆಯಲ್ಲೇ ಬಾರ್ ಮಾಡಿಕೊಂಡು ದಿನವೂ ಸಿಂಗಲ್ ಮಾಲ್ಟ್‌ ಸೇವನೆ.

Submitted by ಗಣೇಶ Mon, 04/08/2013 - 23:39

In reply to by venkatb83

>>>ಕುರುಹು ಬೇಜಾನ್ ಇವೆ... ..ಎಲ್ಲಾ ಸರಿ, ಆದ್ರೆ ಅವರು ಹೇಗಿರುವರು ಎನ್ದು ಗೊತ್ತಿಲದೆ ಹೇಗೆ ಹುಡುಕೋದು...?---ಈಗ ಗೆಟ ಅಪ್ ಚೇಂಜ್ ಮಾಡಿರುವೆ. ಕನ್ನಡದ ಬಿಗ್ ಬಾಸ್‌ನಲ್ಲಿ ಈಗಾಗಲೇ ಎರಡು ಸ್ವಾಮಿಗಳು ವಕ್ಕರಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಏನಾದರೂ ಸಿಗಬಹುದೇ ಎಂದು "ಅಂಡಾಂಡಭಂಡಸ್ವಾಮಿ"ಯ ವೇಷದಲ್ಲಿ ಕಾಯುತ್ತಿರುವೆ. -೨೭೧ ಬಸ್..ಸ್ವಾಮಿ ವೇಷ ಬಿಡಬೇಡಿ. :)

Submitted by venkatb83 Fri, 04/12/2013 - 13:17

In reply to by ಗಣೇಶ

ಗಣೇಶ್ ಅಣ್ಣ- ಲೇಟ್ ಆದರೂ ಲೇಟೆಸ್ಟ್ ಆಗಿ ಪ್ರತಿಕ್ರ್ಯಿಸುವವರು ನೀವು-ಕ್ಷಮೆ ಮಾತೇಕೆ? ವೈಲ್ಡ್ ಕಾರ್ಡ್ ಎಂಟ್ರಿ ನಿಮಗಲ್ಲ -ನಿಮ್ಮದು ರಾಜ ಮಾರ್ಗ ....!!
ಅದ್ಕೆ ಬದಲಾಗಿ ನೀವ್ ನಮ್ಮ ಕನ್ನಡದ ಕೋಟ್ಯಾಧಿಪತಿ ಟ್ರೈ ಮಾಡಿ ಹಾ.... ಸೀಟಲಿ ಕೂರಿ ..!!

ಎಂದೋ ಬಸ್ಸಲಿ ಬರುವ ನೀವು- ದಿನ ನಿತ್ಯ ಅದರಲ್ಲೇ ಓಡಾಡುವ ನಾನು -ಎದುರು ಬದುರಾದೇವ? ಆ ದೇವನಿಗೆ ಗೊತ್ತು ...!!

ಈ ವಿಜಯನಾಮ ಸಂವತ್ಸರದಲ್ಲಿ 'ಆಪರೇಶನ್ ಗಣೇಶ್ ಹಂಟ್' ಯಶಸ್ವಿಯಾಗಲಿ .... .

ಸರ್ವರಿಗೂ
ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯ
ಗಳು

ಶುಭವಾಗಲಿ..

\।/

Submitted by venkatb83 Tue, 04/09/2013 - 12:59

ಗಣೇಶ್ ಅಣ್ಣ - ಮತ್ತು ಶ್ರೀಕರ್ ಜೀ ಹೆಸರುಗಳ ಮಹನೀಯರು ಒಬ್ಬರೆನಾ? ಎನ್ನುವುದು ನನ್ನ ಸಮ್ಶಯ...! ಅದ್ಕೆ ಕಾರಣ ಗಣೇಶ್ ಅಣ್ಣ ಬಗ್ಗೆ ಅಥವಾ ಶ್ರೀಕರ್ ಜೀ ಬಗ್ಗೆ ಬರೆದಾಗ ಇಬ್ಬರಲ್ಲೊಬ್ಬರು ಮರು ಪ್ರತ್ಕ್ರಿಯಿಸುವುದು -ಹಗಲಲಿ ಶ್ರೀಕರ್ ಜೀ ರಾತ್ರಿಯಲ್ಲಿ(ಮಧ್ಯ)ಗಣೇಶ್ ಜೀ ...ಏ ಬಗ್ಗೆ ಹೆಚ್ಚಿನ ಸಂಶೋಧನೆ ಅವಶ್ಯಕತೆ ಇದೆ..... !!

ಗಣೇಶ್ ಅಣ್ಣ -ನಿಮ್ಮದೇ ಕಾರಿದೆ ಪರ್ಕುಟ್ ಸ್ಕೂಟರ್ ಇದೆ -ಅಸ್ತೆಲ್ಲ ಇರುವಾಗ ಈ ಬೀ ಎಂ ಟಿ ಸಿ ಬಸ್ಸಲಿ ನೀವು ನೆತಾಡಾಸನ ಮಾಡಿಕೊಂಡು ಬರುವ ಸಂಭವ ಇಲ್ಲ ಬಿಡಿ ...!!
ಆದರೂ ಅತಿ ಹತ್ತಿರದಲ್ಲಿ ಇರುವ ನಾವ್ ಇಬ್ಬರು ಸಂಧಿಸುವ ಕಾಲ ಹತ್ತಿರವಾಗಿದೆ ಎಂದು ಮಾತ್ರ ಹೇಳ ಬಲ್ಲೆ..... !!
ಎಲ್ಲಿ ಹೇಗೆ? ವೇಟ್ ಏನ್ ಸೀ ಗಣೇಶ್ ಅಣ್ಣ ..!!

ಶುಭವಾಗಲಿ....

\।

Submitted by ಗಣೇಶ Thu, 04/11/2013 - 00:49

In reply to by venkatb83

>>>ಗಣೇಶ್ ಅಣ್ಣ - ಮತ್ತು ಶ್ರೀಕರ್ ಜೀ ಹೆಸರುಗಳ ಮಹನೀಯರು ಒಬ್ಬರೆನಾ?- ನನ್ನದೇ ಹೆಸರಲ್ಲಿ ಬರೆಯಲು ನನಗೆ ಟೈಮ್ ಸಾಕಾಗುತ್ತಿಲ್ಲ..ಅನೇಕ ಲೇಖನಗಳನ್ನು ಓದಲು ಪ್ರತಿಕ್ರಿಯೆ ನೀಡಲು ಬಾಕಿ ಇದೆ. ಜಯಂತ್ ಬರೆದ ಕತೆಗಳು, ಶ್ರೀಧರ್‌ಜಿಯ ಅಯ್ಯಪ್ಪ ಸರಣಿ ಲೇಖನ, ಕವಿನಾಗರಾಜರ ಇತ್ತೀಚೆಗಿನ ಲೇಖನ (ದೇಹದಾನದ ಬಗೆಗಿನ), ಇಟ್ನಾಳರ ಕವನಗಳು, ಹರಿಹರಪುರ ಶ್ರೀಧರ್ ಅವರ ಒಂದೆರಡು ಬರಹಗಳು, ಪಾರ್ಥರ ಕೆಲ ಲೇಖನಗಳು....ಹೀಗೇ..ಅವರೆಲ್ಲರ ಉತ್ತಮ ಲೇಖನಗಳಿಗೆ ನನ್ನ ಪ್ರತಿಕ್ರಿಯೆಯಿಂದ ಏನೂ ಆಗಬೇಕಿಲ್ಲ. ಓದಿ ಪ್ರತಿಕ್ರಿಯೆ ನೀಡದಿದ್ದರೆ ನನಗೆ ಸಮಾಧಾನವಾಗುವುದಿಲ್ಲ. ಅದಕ್ಕೇ ನಾನು ......ಆಗೊಮ್ಮೆ...ಈಗೊಮ್ಮೆ...ಮಾತ್ರ....ಶ್ರೀಕರ್.......; >>>ನಿಮ್ಮದೇ ಕಾರಿದೆ ಪರ್ಕುಟ್ ಸ್ಕೂಟರ್ ಇದೆ -ಅಸ್ತೆಲ್ಲ ಇರುವಾಗ ಈ ಬೀ ಎಂ ಟಿ ಸಿ ಬಸ್ಸಲಿ ನೀವು ನೆತಾಡಾಸನ ಮಾಡಿಕೊಂಡು ಬರುವ ಸಂಭವ ಇಲ್ಲ ಬಿಡಿ ...!!--ನನ್ನ ತಂದೆ-ತಾಯಿಯವರು ಬದುಕಿರುವಾಗ ಅವರನ್ನು ಸುತ್ತಾಡಿಸಲು ಅಥವಾ ದೂರ ಪ್ರಯಾಣದ ಸಮಯದಲ್ಲಿ, ಅಥವಾ ೪-೫ ಜನರಿದ್ದಾಗ ಮಾತ್ರ ಕಾರು ತೆಗೆಯುತ್ತಿದ್ದೆ. ಇಲ್ಲದಿದ್ದರೆ ದ್ವಿಚಕ್ರ-ತ್ರಿಚಕ್ರ ವಾಹನಗಳೇ ನನಗಿಷ್ಟ. ರಜಾದಿನಗಳಲ್ಲಿ ಬಸ್ಸಲ್ಲಿ ರಶ್ ಜಾಸ್ತಿ ಇಲ್ಲದಿದ್ದರೆ ಬಸ್ ಪ್ರಯಾಣ, ರಶ್ ಇದ್ದರೆ ರಿಕ್ಷಾ. ಕಾರು ತೆಗೆದುಕೊಂಡು ಹೋದರೆ ರಜಾದ ಮಜಾ ಎಲ್ಲಿ? ಬರೀ ಪಾರ್ಕಿಂಗ್ ಸ್ಥಳ ಹುಡುಕುವುದರಲ್ಲೇ ಟೈಂ ಮುಗಿದಿರುತ್ತದೆ. :( ನನ್ನ ಬಸ್ ಪ್ರಯಾಣಕ್ಕೆ ಸಾಕ್ಷಿ - http://sampada.net/blog/%E0%B2%AE%E0%B3%8A%E0%B2%AC%E0%B3%88%E0%B2%B2%E0%B3%8D-%E0%B2%B0%E0%B2%BF%E0%B2%82%E0%B2%97%E0%B3%8D%E2%80%8C%E0%B2%9F%E0%B3%8B%E0%B2%A8%E0%B3%8D/25/06/2011/32212 -ಈ ಲೇಖನವನ್ನೂ ತಾವು ಓದಿ ಮೆಚ್ಚಿದ್ದೀರಿ. ನಾನು ನೋಡಿರಲಿಲ್ಲ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು-ತಡವಾದುದಕ್ಕೆ ಕ್ಷಮಿಸಿ.

Submitted by sasi.hebbar Wed, 04/10/2013 - 10:46

"ಉರ್ಣಿ" ಬಾತ್ ತಿನ್ನಲು ಸುಲಭ ವಿಧಾನ : ಟಿ.ವಿ.ಯಲ್ಲಿ ಕುತೂಹಲಕಾರಿಯಾದ ಸನ್ನಿವೇಶ ಬಂದಾಗ, ಉರ್ಣಿ ಬಾತನ್ನು ಪ್ಲೇಟಿಗೆ ಹಾಕಿಕೊಳ್ಳಬೇಕು. ಟಿ.ವಿ. ಮುಂದೆ ಕುಳಿತು, ಟಿ.ವಿ.ಯಲ್ಲಿ ಕಣ್ಣನ್ನು ಕೀಲಿಸಿ (ಪ್ಲೇಟನ್ನು ಯಾವ ಕಾರಣಕ್ಕೂ ನೋಡಬಾರದು) ಒಂದೊಂದೇ ತುತ್ತನ್ನು ತಿನ್ನಬೇಕು. ಟಿ.ವಿ. ಕಾರ್ಯಕ್ರಮ ಅರ್ಧಗಂಟೆ ಕುತೂಹಲಕಾರಿಯಾಗಿ ಮುಂದುವರಿದಲ್ಲಿ, ಕೈಯಲ್ಲಿದ್ದ ಪ್ಲೇಟ್ ಖಾಲಿಯಾದೀತು. ಪ್ಲೇಟಿನಲ್ಲಿ ಉರ್ಣಿ ಬಾತ್ ಇನ್ನೂ ಬಾಕಿ ಉಳಿದಿದ್ದರೆ, ತಕ್ಷಣ ಬೇರೊಂದು ಧಾರಾವಾಹಿಯಲ್ಲಿ ಕಣ್ಣು ಕೀಲಿಸಿ, ಇತ್ತ ಪ್ಲೇಟನ್ನು ಖಾಲಿ ಮಾಡಬಹುದು . :) :)

Submitted by ಗಣೇಶ Thu, 04/11/2013 - 00:27

In reply to by sasi.hebbar

:) :) ಹೆಬ್ಬಾರರೆ ನಿಮ್ಮ ಐಡಿಯಾ ಮೊದಲೇ ಕೊಟ್ಟಿದ್ದರೆ ಉರ್ಣಿ ಬಾತ್ ಸ್ವಲ್ಪ ಬೇಗನೆ ಖಾಲಿ ಮಾಡಬಹುದಿತ್ತು. ಫ್ರಿಡ್ಜಲ್ಲಿಟ್ಟು ಸ್ವಲ್ಪ ಸ್ವಲ್ಪವೇ ತಿನ್ನುತ್ತಾ ಇದ್ದೆ. :) ಮೊದಲು ನನಗೆ ಕಂಪನಿ ಕೊಡುತ್ತಿದ್ದ ನನ್ನ "ಗಿಣಿ" ಸಹ ಉರ್ಣಿ ಬಾತ್ ಹತ್ತಿರ ತೆಗೆದುಕೊಂಡು ಹೋದರೆ ಮುಖ ತಿರುಗಿಸಿ ಓಡುತ್ತಿದೆ.:( ಈ ಸಲ ಹಬ್ಬಕ್ಕೆ ಏನಾದರೂ ಹೊಸರುಚಿ ಮಾಡುವೆ ಎಂದಾಗ ಅಡುಗೆ ಕೋಣೆ ಒಳಗೆ ಕಾಲಿಡಬಾರದೆಂದು ಹೈಕಮಾಂಡ್ ಆರ್ಡರ್ ಆಗಿದೆ. :(

Submitted by venkatb83 Fri, 04/12/2013 - 18:08

In reply to by ಗಣೇಶ

"ನನ್ನ "ಗಿಣಿ" ಸಹ ಉರ್ಣಿ ಬಾತ್ ಹತ್ತಿರ ತೆಗೆದುಕೊಂಡು ಹೋದರೆ ಮುಖ ತಿರುಗಿಸಿ ಓಡುತ್ತಿದೆ.:("

ಗಣೇಶ್ ಅಣ್ಣ ನಿಮ್ಮ ಗಿಳಿ ಉರ್ಣಿ ಬಾತ್ ತಿನ್ನದೇ ಓಡುತ್ತಿದೆ ಎಂದಾಗ ನನಗೆ ತೆನಾಲಿ ರಾಮ ಬೆಕ್ಕಿಗೆ ಬಿಸಿ ಹಾಲು ಇಟ್ಟದ್ದು ನೆನಪಾಯ್ತು ನಗೆ ಬಂತು ... ಇಲ್ಲೂ ಹಾಗೆ ಏನೂ ಆಗಿಲ್ಲವಸ್ಟೇ ?

\ಶುಭವಾಗಲಿ

\।