ಯುಗಾದಿ...

ಯುಗಾದಿ...

ಕವನ

 

ಯುಗಾದಿ... 
ಮತ್ತೆ ಬಂದಿದೆ ಯುಗಾದಿ 
ತೆರೆಯಿತು ಹೊಸ ವರುಷದ ಹಾದಿ... 
 
ನೀಲಾಂಬರದಲಿ ಸೂರ್ಯನ ಉಗಮ 
ನವೋತ್ಸಾಹದ ಬೆಳಗು
ಮನೆಯಂಗಳದಲಿ  ರಂಗೋಲೆಯ ನಗು 
ಹರುಷ ತುಂಬಿದೆ ಒಳಗೂ... 
 
ಮಾಮರ ವನದಲಿ 
ಕೋಕಿಲ ಕುಕಿಲು 
ಚೈತ್ರವೆ ಜೀವದ ಉಸಿರು... 
ಮಾನವ ಮನದಲಿ 
ಕತ್ತಲ ಹರಣ 
ಹಚ್ಚಿದೆ ದೀಪದ ಸೊಡರು... 
 
ಹಗಲೂ ಇರುಳೂ  
ಕಾಲನ ಹೊರಳು 
ವರುಷಕೆ ಒಂದು ಹೆಸರು... 
ವಿಜಯ ನಾಮದ ಸಂವತ್ಸರವೆ 
ಬಾ 
ಉಳಿಸು ಬಾಳಲಿ ಹಸಿರು... 
-ಮಾಲು 
 

Comments

Submitted by shejwadkar Thu, 04/11/2013 - 00:32

hi
ಕವನ ಚೆನ್ನಾಗಿದೆ. ಯುಗಾದಿಯ ಶುಭಾಶಯಗಳು