ಸಂಪದದಲ್ಲಿ ಐದು ವರ್ಷಗಳು!

Submitted by prasannasp on Tue, 04/09/2013 - 21:21

ನಾನು ಸಂಪದವನ್ನು ಸೇರಿ ಇಂದಿಗೆ ಐದು ವರ್ಷ ಪೂರ್ತಿಯಾಯಿತು! ನನಗೆ ಗೊತ್ತಿದ್ದಂತೆ ನಾನು ಸಂಪದದ ಸದಸ್ಯನಾಗಿದ್ದು 09/04/2008ರಂದು. ನಾನು ಅದಕ್ಕಿಂತ ಮುಂಚೆಯಿಂದಲೂ ಸಂಪದಕ್ಕೆ ಭೇಟಿ ನೀಡುತ್ತಿದ್ದರೂ ಸದಸ್ಯನಾಗಿದ್ದು ಮಾತ್ರ ಆ ದಿನ.

ಇಷ್ಟು ವರ್ಷ ಸಂಪದದಿಂದ ಸಾಕಷ್ಟು ಕಲಿತಿದ್ದೇನೆ, ಬಹಳಷ್ಟು ಗೆಳೆಯರನ್ನು ಸಂಪಾದಿಸಿದ್ದೇನೆ. ನಾನು ಅಷ್ಟೋ ಇಷ್ಟೋ ಬರೆಯಲು ಕಲಿತಿದ್ದೂ ಕೂಡಾ ಸಂಪದದಿಂದಲೇ. ಇದಕ್ಕೆಲ್ಲಾ ಅವಕಾಶ ಮಾಡಿಕೊಟ್ಟ ಸಂಪದ ತಂಡಕ್ಕೆ ನನ್ನ ವಂದನೆಗಳು.

ಇತ್ತೀಚೆಗೆ ಯಾಕೋ ನಾನು ಕನ್ನಡದಲ್ಲಿ ಬರೆಯುವುದು ಬಹಳ ಕಡಿಮೆಯಾಗಿಬಿಟ್ಟಿದೆ. ಸಂಪದದಲ್ಲಿ ನಾನು ಆರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಕನ್ನಡ ಬ್ಲಾಗ್ ಬರೆಯಬೇಕು ಎಂದು ನಿರ್ಧಾರ ಮಾಡಿದ್ದೇನೆ. ನೋಡೋಣ, ಏನಾಗುತ್ತೆ ಅಂತ!! :-)

Comments

venkatb83

Fri, 04/12/2013 - 12:47

ಪ್ರಸನ್ನ ಅವ್ರೆ ನಾನು ಸಂಪದ ಸೇರಿ ೪ ವರ್ಷ ೪ ತಿಂಗಳುಗಳು ಆಗಿದೆ...
ನಾನೇನೂ ಮೊದಲಿಗೆ ಸಂಪದ ನೋಡಿರಲಿಲ್ಲ, ಅಂದು ನೋಡಿದೆ ಅಂದೇ ಸದಸ್ಯನಾದೆ ,ಮೊದಲಿಗೆ ಪ್ರತಿಕ್ರಿಯೆಗಳು ನಂತರ ಜೊಲ್ಲು ಪೊಳ್ಳು ಬರಹ ಬರೆಯ ಶುರು ಮಾಡಿದೆ, ಮೊದಲಿಗೆ ಹರಿ ಅವರು ನಂತರ ಉಮೇಶ ಅಣ್ಣ ಗಣೇಶ್ ಅಣ್ಣ ಅತ್ರಾಡಿ ಸುರೇಶ ಅಣ್ಣ ಹೀಗೆ ಹಲವರು ತಪ್ಪು ತಿದ್ದಿ ತೀಡಿ ಮೆಚ್ಚಿ ಆ ಕಾರಣವಾಗಿ ಮತ್ತಸ್ತು ಬರಹಗಳು ಇಲ್ಲಿ ಸೇರಿದವು..
ಈಗೀಗ ಸಂಪದ ಹೆಚ್ಚು ಸಂಪದ್ಭರಿತವಾಗಿದ್ದು ಓದುಗರು ಬರಹಗಾರರಿಂದ ತುಂಬಿ ತುಳುಕುತ್ತಿದೆ.
>> ನಿಜ ಈಗೀಗ ನಿಮ್ಮ ಬರಹಗಳು ಅತಿ ಕಡಿಮೆ ಆಗಿವೆ.. ಅಥವಾ ಇಲ್ಲವೇ ಇಲ್ಲ.. !! ಆದರೆ ನೀವು ಫೆಸ್ಬುಕ್ಕಲಿ ಮಾತ್ರ ೧ - ೨ ಲೈನ್ ಹಾಕ್ತಿರ್ತೀರ .. !!

ಸರ್ವರಿಗೂ

ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು

ಶುಭವಾಗಲಿ..

\।/