ನನ್ನೊಳಗಿನ ಕಥೆಗಾರ

ನನ್ನೊಳಗಿನ ಕಥೆಗಾರ

ಚಿಕ್ಕ ವಯಸ್ಸಿನಿಂದಲೇ ಕಥೆಗಳನ್ನು ಓದುವುದೆಂದರೆ ನನಗೆ ಪಂಚಪ್ರಾಣ. ಬಾಲಮಂಗಳ, ತುಂತುರು ಮಾತ್ರವಲ್ಲದೆ ಕೈಗೆ ಸಿಕ್ಕ ಯಾವುದೇ ಪುಸ್ತಕವನ್ನು ನಾನು ಬಿಟ್ಟವನಲ್ಲ. ಈ ಗೀಳು ಹೀಗೆ ಮುಂದುವರಿದು ನಾನೇಕೆ ಬರೆಯಬಾರದು ಎಂದು ಕಥೆಗಾರನಾಗಲು ಹೊರಟಿದ್ದ ನನ್ನ ಮೊದಲ ಲೇಖನ ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾದಾಗಲಂತೂ ನಾನೊಬ್ಬ ದೊಡ್ಡ ಕಥೆಗಾರನಾದಂತೆ ಸಂತೋಷಪಟ್ಟಿದ್ದೆ. ನಂತರ ಕೆಲವೊಂದು ಕಥೆಗಳನ್ನು ಬರೆದೆನಾದರೂ, ತದನಂತರದ ದಿನಗಳಲ್ಲಿ ಬರವಣಿಗೆಯ ಕಡೆಗೆ ಹೆಚ್ಚು ಗಮನ ಹರಿಸಲಾಗಲಿಲ್ಲ. ಆದರೆ ಈಗ ಸಂಪದ ನನ್ನೊಳಗಿರುವ ಲೇಖಕನನ್ನು ಮತ್ತೆ ಜಾಗ್ರತಗೊಳಿಸಿದೆ.

Comments

Submitted by venkatb83 Fri, 04/12/2013 - 17:16

ಚಿಕ್ಕಂದಿನಲ್ಲಿ ನಾನು ಸಹಾ ಹಾಗೆ ಬಾಲ ಮಂಗಳ . ತುಂತುರು, ಚಂದ ಮಾಮ ಓದುತ್ತ ಬೆಳೆದವನು. ಎಸ್ಸೇಲ್ಲ್ಸಿಗೆ ಬರೋವ್ರ್ಹ್ಗೆ ಅದ್ನೆಲ್ಲ ಓದುತ್ತಿದ್ದೆ. ಅಲ್ಲಿ ಬರುತ್ತಿದ್ದ ನೀತಿ ಕಥೆಗಳು ಚಿತ್ರ ಸಮೇತ ಭಲೇ ಮಜಾ ಕೊಡುತ್ತಿದ್ದವು. ನೀವ್ ಹೇಳಿದ ಮಂಗಳ ಪತ್ರಿಕೆಯನ್ನು ನಾ ಆಗಾಗ್ ಲೈಬ್ರರಿಯಲ್ಲಿ ಓದುವೆ -ಅಲ್ಲಿ ಜಾಸ್ತಿ ಮಲಯಾಳಂ ಕಥೆಗಳ ಧಾರಾವಾಹಿಗಳ ಕನ್ನಡೀಕರಿಸಿದ ಬರಹಗಳು ಇರುತ್ತವೆ ... ! ನಿಮ್ಮ ಬರಹ ಅಲ್ಲಿ ಪ್ರಕಟ ಆಗಿದೆ -ಎಂದಿರುವಿರಿ -ಅದ್ಯಾವ ಬರಹ ಯಾವಾಗ ಎಂದು ತಿಳಿಸುವಿರ? ನಿಮ್ಮ ಕಥೆಗಳನ್ನು ಇಲ್ಲಿ ಓದಲು ಕಾತುರನಾಗಿರುವೆ .. ನಾ ಆಗಾಗ ಏನೇನೋ ಗೀಚುವೆನಾದರೂ ಅವುಗಳನ್ನು ಪ್ರಕಟಣೆಗೆ ಕಳುಹಿಸುವ ರಿಸ್ಕ್ ಇನ್ನೂ ತೆಗುದ್ಕೊಂಡಿಲ್ಲ ಮತ್ತು ತೆಕೊಳ್ಳೋದು ಇಲ್ಲ .... ವಿಜಯನಾಮ ಸಂವತ್ಸರದ ಹಾರ್ಧಿಕ ಶುಭಾಶಯಗಳು ಶುಭವಾಗಲಿ .. \\\॥।
Submitted by ಕೀರ್ತಿರಾಜ್ ಮಧ್ವ Fri, 04/12/2013 - 21:38

In reply to by venkatb83

ವೆಂಕಟೇಶ್ ರವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಿಮ್ಮ ನಿರೀಕ್ಷೆಯಂತೆ ನಾನೇನೂ ದೊಡ್ಡ ಬರಹಗಾರನಲ್ಲ. ಮಂಗಳದಲ್ಲಿ ಪ್ರಕಟವಾಗುತ್ತಿದ್ದ 'ಆ ಕ್ಷಣ' ಅಂಕಣದಲ್ಲಿ 'ಅಕಾರಣವಾಗಿ ಅನುಭವಿಸಿದ ಮಾನಸಿಕ ಹಿಂಸೆ' ಎಂಬ ಚಿಕ್ಕ ಬರವಣಿಗೆ. ನೀವು 9 ಏಪ್ರಿಲ್ 2008 ಮಂಗಳವನ್ನು ಗಮನಿಸಿ.
Submitted by venkatb83 Sat, 04/13/2013 - 12:08

In reply to by ಕೀರ್ತಿರಾಜ್ ಮಧ್ವ

" 'ಆ ಕ್ಷಣ' ಅಂಕಣದಲ್ಲಿ 'ಅಕಾರಣವಾಗಿ ಅನುಭವಿಸಿದ ಮಾನಸಿಕ ಹಿಂಸೆ' ಎಂಬ ಚಿಕ್ಕ ಬರವಣಿಗೆ" ನಿಮ್ಮ ಆ ಬರಹದ ಶೀರ್ಷಿಕೆಯೇ ನೀವು ಅಕಾರಣವಾಗಿ ಮಾನಸಿಕ ವೇದನೆ ಅನುಭವಿಸಿದ್ದು ಅದರ ಅಬಗ್ಗೆ ಬರೆದದ್ದು ಎಂದು ತೋರಿಸುತ್ತಿದೆ ,ಮತ್ತು ಅಕಾರಣವಾಗಿ ನೀವ್ ಏನು ಯಾಕೆ ನುಭಾವಿಸಿದ್ದು ಎಂದು ತಿಳಿವ ಕುತೂಹಲವಿದ್ದರೂ ಅದು ನಿಮ್ಮ ವಯುಕ್ತಿಕ ಘಟನೆ ಏನೋ ಎಂದು ಆ ಬಗ್ಗೆ ಬರೆಯಿರಿ ಎಂದು ಹೇಳಲು ಆಗುತ್ತಿಲ್ಲ.... !! ಚಿಕ್ಕ ಪುಟ್ಟ ಸಣ್ಣ ಮಧ್ಯಮ ಶ್ರೇಷ್ಟ ಬರಹಗಾರ ... ಹೀಗೆ ಮೊದಲ ಮೆಟ್ಟಿಲಿಂದಲೇ ಶುರು ಮಾಡಿದಾಗಲೇ ನಾವ್ ೧೦೦೧ ನೆ ಮೆಟ್ಟಿಲು ತುದಿ ತಲುಪೋದು ಅಲ್ಲವೇ? ನಿಮ್ಮ ವಿನಯವಂತಿಕೆ ಸೌಜನ್ಯ ಹಿಡಿಸಿತು ... ಮತ್ಯಾಕೆ ತಡ ಈ ವಿಜಯನಾಮ ಸಂವತ್ಸರದಲ್ಲಿ ನಿಮ್ಮ ಬರವಣಿಗೆ ಕೃಷಿ ಶುರು ಆಗಿ ಬರಹಗಳು ಪುಂಕಾನುಪುಂಕವಾಗಿ ಬರಲಿ.. ಶುಭವಾಗಲಿ ... \।
Submitted by H A Patil Fri, 04/12/2013 - 19:24

ಕೀರ್ತಿರಾಜ ರವರಿಗೆ ವಂದನೆಗಳು ' ನನ್ನೊಳಗಿನ ಕಥೆಗಾರ ' ತಮ್ಮೊಳಗಿನ ಒಬ್ಬ ಕಥೆಗಾರನನ್ನು ಸಂಪದಿಗರಿಗೆ ಪರಿಚಯಿಸಿತು, ಮತ್ತೊಬ್ಬ ಬರಹಗಾರ ಸಿಕ್ಕಿದ್ದಕ್ಕೆ ನಮಗೆಲ್ಲ ಸಂತಸ. ನಾನೂ ಸಹ ಬಾಲ್ಯದಲ್ಲಿ 'ಚಂದಮಾಮ' ಮತ್ತು 'ಬಾಲಮಿತ್ರ' ಗಳನ್ನು ಓದಿ ಸಂತಸ ಪಟ್ಟವನೆ. ಅವುಗಳಲ್ಲಿನ ಕಥೆಗಳು ನೀತಿ ಬೋಧಕ ಜೊತೆಗೆ ರೋಚಕವಾಗಿ ಇರುತ್ತಿದ್ದವೂ ಕೂಡ, ನಿಮ್ಮ ಬಾಲ್ಯದ ಸಾಹಿತ್ಯಾಸಕ್ತಿ ಮೆಚ್ಚುವಂತಹುದು, ನಿಮ್ಮೊಳಗಿನ ಕಥೆಗಾರ ಮತ್ತು ಲೇಖಕ ಪ್ರಕಟಗೊಳ್ಳಲಿ ಜೊತೆಗೆ ಅರ್ಥಪೂರ್ಣ ಕೃತಿಗಳು ನಿಮ್ಮ ಲೇಖನಿಯಿಂದ ಹೊರ ಬರಲಿ. ಸಂಪದಕ್ಕೆ ನಿಮಗೆ ಸ್ವಾಗತ ಜೊತೆಗೆ ಧನ್ಯವಾದಗಳು..
Submitted by ಕೀರ್ತಿರಾಜ್ ಮಧ್ವ Fri, 04/12/2013 - 21:54

In reply to by H A Patil

ಪಾಟೀಲ್ ರವರೇ ನಿಮ್ಮ ಪ್ರೊತ್ಸಾಹ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನನ್ನ ಬರಹದಲ್ಲಿರುವ ಲೋಪದೋಷಗಳನ್ನು ಗುರುತಿಸಿ ನನ್ನನ್ನು ಇನ್ನೂ ಉತ್ತಮಗೊಳಿಸುವ ಜವಾಬ್ದಾರಿ ನಿಮ್ಮದು.
Submitted by nageshamysore Sat, 04/13/2013 - 04:50

ನಮ್ಮಲ್ಲಿ ಸಾಕಷ್ಟು ಜನ ಚಂದಮಾಮ, ಬಾಲಮಿತ್ರಗಳ ತರಹದ 'ಫ್ಯಾಂಟಸಿ' ಲೋಕದಿಂದ ರೂಪುಗೊಂಡ ವ್ಯಕ್ತಿತ್ವಗಳೆ ಏನೊ ಅನಿಸುತ್ತೆ. ಹೊರದೇಶದಲ್ಲಿ ನಮ್ಮ ಮಕ್ಕಳಿಗೆ ಅವು ಸಿಗುವುದು ಕಷ್ಟ, ಸಿಕ್ಕರು ಅವರ ಕನ್ನಡ ಭಾಷಾ ಜ್ಞಾನ ಸೀಮಿತ. ಈಗ, ಆನ್-ಲೈನ್ ನಲ್ಲೂ ಪ್ರಕಟವಾಗೋದ್ರಿಂದ ಆಂಗ್ಲದ ಸಂಚಿಕೆಗಳೆ ಓದಿಸಬೇಕಾಗಿದೆ...ಗುಡ್ ಲಕ್ ಕೀರ್ತಿ ರಾಜ್!