ಸುಧಾ ಮತ್ತು ತರಂಗ ಯುಗಾದಿ ವಿಶೇಷಾಂಕ- ೨೦೧೩ -ಮತ್ತು ಸಂಪದ ಬರಹಗಾರರಲಿ ಒಂದು ಭಿನ್ನಹ ..!!
ಹೋದ ವರ್ಷ ನಾನು ಯುಗಾದಿ ವಿಶೇಷಾಂಕದ ಬಗ್ಗೆ ಬರೆದಿದ್ದೆ -
http://sampada.net/blog/%E0%B2%B8%E0%B3%81%E0%B2%A7%E0%B2%BE-%E0%B2%B5%E0%B2%BE%E0%B2%B0-%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%AF-%E0%B2%AF%E0%B3%81%E0%B2%97%E0%B2%BE%E0%B2%A6%E0%B2%BF-%E0%B2%B5%E0%B2%BF%E0%B2%B6%E0%B3%87%E0%B2%B7%E0%B2%BE%E0%B2%82%E0%B2%95-%E0%B3%A8%E0%B3%A6%E0%B3%A7%E0%B3%A8-%E0%B2%93%E0%B2%A6%E0%B2%BF%E0%B2%A6%E0%B2%BF%E0%B2%B0%E0%B2%BE/18/03/2012/36039
ಅದನ್ನು ನೀವೆಲ್ಲ ಓದಿರುವಿರಿ ಪ್ರತಿಕ್ರಿಯಿಸಿರುವಿರಿ -
ಈ ಸಾರಿಯೂ ತರಂಗ ಮತ್ತು ಸುಧಾ ವಿಶೇಷಾಂಕ (ಯುಗಾದಿ) ತೆಗೆದುಕೊಂಡು ಬಂದೆ ಏನೇನೋ ಇದೆ ಎಂದು ಓದಲು ಕುಳಿತರೆ , ೧,೨ ,೩, ೪ ,೬,೮ ಪೇಜ್ವರ್ಗೆ ಬರೀ ಜಾಹೀರಾತು ...! ಆಮೇಲೆ ಕಥೆಗಳು ಹನಿಗವನಗಳು ಕವನಗಳು ಸಿನೆಮ ಸಂಬಂಧಿ ವಿಷ್ಯ ಹಾಸ್ಯ ಉಹೂ ಯಾವುದೂ ಇಷ್ಟವಾಗಲಿಲ್ಲ .. ಎಲ್ಲವೂ ಸಪ್ಪೆ ಸಪ್ಪೆ ;((
ಇದ್ದುದರಲ್ಲಿ ಓದುಗರ ಅನುಭವಗಳು -ಮದುವೆಯಲ್ಲಿ ಆದ ಪಜೀತಿ ,ಇತ್ಯಾದಿ ಬರಹಗಳು ಮುದ ನೀಡಿದವು ಆಷ್ಟೇ ...
ಇದ್ದುದರಲ್ಲಿ ಹೇಳಿಕೊಳ್ಳುವಂತ ಒಂದಾದರೂ ಬರಹ ಇಲ್ಲವೇ? ಎಂದರೆ
ಇಲ್ಲ ಎಂದೇ ಹೇಳುವೆ .... !
ಹೀಗಾಗಿ ಆ ಬಗ್ಗೆ ಬರೆವುದಕ್ಕಿಂತ ವಿಶೇಷಾಂಕಗಳು ನಿಜವಾಗಿ ವಿಶೇಷಾಂಕ ಆಗುವುದಕ್ಕೆ ನಮ್ ಸಂಪದಿಗರು ಪ್ರಯತ್ನಿಸಲಿ ಆ ವಿಶೇಷಾಂಕಗಳಿಗೆ ಅವರ ಬರಹಗಳು ಸೇರಿ ನಿಜವಾದ ಅರ್ಥದಲ್ಲಿ ವಿಶೇಷಾಂಕ ಆಗಲಿ ಎಂದು ಈ ಬರಹ ...
ಪ್ರತಿ ವರ್ಷ ಯುಗಾದಿ ಮತ್ತು ದೀಪಾವಳಿ ಸಂದರ್ಭದಲ್ಲಿ ಹೊಸ ಕಥೆ ಕಾದಂಬರಿ ಕವನ ಹಾಸ್ಯ ಬರೆಯುವವರಿಗಾಗಿ ಸ್ಪರ್ಧೆ ಏರ್ಪಡಿಸಿ ಬಹುಮಾನ ಘೋಷಿಸಿ (೧೦ ಸಾವಿರ - ೫ ಸಾವಿರ ಹೀಗೆ) ಆಗ ಬರುವ ೧ ೦ ೦ ೦ ೬ ಕಥೆ - ಕವನ ಬರಹಗಳನ್ನು ಸೋಸಿ ಅವುಗಲ್ಲಿ ಚೆನಾಗಿವೆ ಎಂಬುವ ಬರಹಗಳನ್ನು ನಾಡ್ನ ಖ್ಯಾತ ವಿಮರ್ಶಕರು ಕಥೆಗಾರರಿಗೆ ಕೊಟ್ಟು ಪ್ರಥಮ ದ್ವಿತೀಯ, ತ್ರುತೀಯ ಎಂದು ಪ್ರಕಟಿಸುವ ಬರಹಗಳ ಗುಣಮಟ್ಟ ಕಥಾ ವಸ್ತು ವಿಷ್ಯ ವಿಶೇಷತೆ ಬರು ಬರುತ್ತಾ ಕುಗ್ಗುತಿದೆ ಎಂದು ಹೇಳಲು ಖೇದವಾಗುತ್ತಿದೆ ;(೯
ಕರುನಾಡಲ್ಲಿ ಎಂಥೆಂತ ಬರಹಗಾರರು ಇದ್ದರು(ಇರುವರು) -ಕುವೆಂಪು-ತೇಜಸ್ವಿ-ಕಾರಂತರು ,ಮಾಸ್ತಿ ,ಬೈರಪ್ಪ ಅನಂತ ಮೂರ್ತಿ,ಕುಂ ವೀ , ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅಚ್ಚರಿ ಆಗುವಸ್ಟು ಶ್ರೇಷ್ಠ ಬರಹಗಾರರು ಅವರಲ್ಲಿ ಕೆಲವರಂತೂ ಬರಹದ ಎಲ್ಲ ಪ್ರಕಾರಗಳಲ್ಲಿ ಹಿಡಿತ ಇದ್ದವರು (ಕಥೆ ಕವನ- ಹಾಸ್ಯ-ನಾಟಕ ವ್ಯಕ್ತಿ ಚತ್ರಾಣ ಇತ್ಯಾದಿ ), ನಾ ಚಿಕ್ಕವನಾಗಿದ್ದಾಗ ಕಾಲೇಜಿಗೆ ಹೋಗುವಾಗಲೆಲ್ಲ ಬರುತಿದ್ದ ಯುಗಾದಿ ದೀಪಾವಳಿ ವಿಶೇಷಾಂಕಗಳು ಮತ್ತು ಪ್ರತಿ ತಿಂಗಳು- ವಾರ ಬರುವ ತುಷಾರ -ಕರ್ಮವೀರ- ಕಸ್ತೂರಿ- ತರಂಗ -ಸುಧಾ -ಮಯೂರ ತಪ್ಪದೆ ಕೊಂಡು ಓದುತ್ತಿದ್ದೆ ಅಲ್ಲಿ ಬರೆವ ಬರಹಗಾರರು ಅವರ ಬರಹಗಳು ಸೂಜಿಗಲ್ಲಂತೆ ಸೆಳೆಯುತ್ತಿದ್ದವು,ಹಲ ವರ್ಷಗಳವೆರೆಗೆ ಆ ಕಥೆ ಕವನ ನೆನಪಿರುತ್ತಿದ್ದವು ,ಆದರೆ ಈಗ ಬರುವ ಅದೇ ಪುಸ್ತಕ - ವಿಶೇಷಾಂಕಗಳಲ್ಲಿ ಆ ಮಟ್ಟದ ಆಕರ್ಷಣೆ ಇಲ್ಲ ಎಂದು ಹೇಳಲು ಖೇದವಾಗುತ್ತಿದೆ /
ಆಗ ನನಗೆ ಅನ್ನಿಸಿದ್ದು ಈ ಸಂಪದದಲ್ಲಿ ಬರುವ ಏಷ್ಟೋ ಬರಹಗಳು ಅದು ಕಥೆ ಕವನ ಹಾಸ್ಯ ಇತ್ಯಾದಿ ಆ ವಿಶೇಷಾಂಕಳಿಗಿಂತ ಬಹು ಪಾಲು ಶ್ರೇಷ್ಟ ಮತ್ತು ರಂಜನೀಯ ... ಒಂದು ವೇಳೆ ಆ ತರಹದ ಸ್ಪರ್ಧೆಗಳಿಗೆ ಅಥವಾ ಮಾಮೂಲಾಗಿ ವರ- ತಿಂಗಳಿಗೆ ಬರುವ ಪುಸ್ತಕಗಳಿಗೆ ಪ್ರಕಟಣೆಗೆ ಕಳುಹಿಸಿದರೂ ಪ್ರಕಟ ಆಗೋದ್ರಲ್ಲಿ ಸಂಶಯವೇ ಇಲ್ಲ ,ಈ ವಿಷಯವಾಗಿ ಹಿಂದೊಮೆಮ್ ಶ್ರೀಯುತ ಪಾರ್ಥ ಸಾರಥಿ ಮತ್ತು ಶ್ರೀಧರ್ ಜೀ ಅವರೊಡನೆ ಚರ್ಚಿಸಿದ್ದೆ ...
ಸಂಪದ ಲೇಖಕ - ಬರಹಗಾರರಲ್ಲಿ
ಅದರಲ್ಲು ಕಥನ ಕಾವ್ಯ ವಿಷಯಕ್ಕೆ ಬಂದರೆ ಶ್ರೀಯುತ ಪಾರ್ಥ ಸಾರಥಿ ಅವರು ಹಿರಿಯರಾದ ಹನುಮಂತ ಪಾಟೀಲರು (ಇಬ್ಬರೂ ಕಥೆ ಕವನ ವ್ಯಕ್ತಿ ಚಿತ್ರಣ ಕಟ್ಟಿ ಕೊಡುವಲ್ಲಿ ವಿಶೇಷ ಪರಿಣಿತಿ - ಹಿಡಿತ ಇರುವವರು ) ಹಾಸ್ಯ /ವಿಡಂಭನೆಯಲ್ಲೂ ಚಾಟಿ ಬೀಸುವ ಎಚ್ಹ್ಹೆರಿಸುವ ಬರಹಗಾರರಲ್ಲಿ ಗಣೇಶ್ ಅಣ್ಣ ಶ್ರೀಯುತ ಶ್ರೀನಾಥ್ ಭಲ್ಲೆ , ಕೋಮಲ್ಲು (ಈಗೀಗ ಕಾಣೆಯಾಗಿದ್ದಾರೆ) ಗ್ರೇಟು ..
ಕಥೆಗಳನ್ನು ರಚಿಸುವ ಸ್ಪರ್ಧೆ ಎಂದು ಇದ್ದರೆ ಅದ್ರಲ್ಲಿ ನಿಸ್ಸಂಶಯವಾಗಿ ಪ್ರಥಮ ಸ್ಥಾನ ಗಳಿಸುವವರು ಶ್ರೀಯುತ ಜಯಂತ್ ರಾಮಾಚಾರ್ ಅವರು ,ಅವರು ಎಷ್ಟು ಬರಹ ಬರೆದಿರುವರು ಎಂದು ನೀವೇನಾರ ಅವರ ಇತ್ತೀಚಿನ ಬರಹಗಳು ಲಿಂಕ್ ಕ್ಲಿಕ್ಕಿಸಿದರೆ ಅಚ್ಚರಿ ಆಗದೆ ಇರದು ...!!
ಅಸ್ಟು ಕಥೆಗಳು ಅವ್ರು ಬರೆದಿರುವರು.. !!
. ಆದ್ಯಾತ್ಮ -ವ್ಯಕ್ತಿತ್ವ ವಿಕಸನ ಇತ್ಯಾದಿ ಬಂದಾಗ ನೆನಪಾಗುವ ಹೆಸರುಗಳು ಹಿರಿಯರಾದ ಶ್ರೀಯುತ ಕವಿ ನಾಗರಾಜ ಅವರು ಮತ್ತು ಶ್ರೀಯುತ ಶ್ರೀಧರ್ ಜೀ ಅವರದು .
ಇವರಲ್ಲಿ ಶ್ರೀಯುತ ಪಾರ್ಥ ಸಾರಥಿ ಅವರು -ಹಿರಿಯರಾದ ಕವಿ ನಾಗರಾಜ ಅವರು ಜಯಂತ್ , ತಮ್ಮದೇ ಬ್ಲಾಗ್ ರಚಿಸಿ ಅದರಲ್ಲೂ ತಮ್ಮ ಬರಹಗಳನ್ನು ಪ್ರಕಟಿಸುವರು .
ಇನ್ನು ಬರೀ ಕವನ- ಹನಿಗವನ - ಘಜಲ್ ಬರೆವ ಯುವ ಬರಹಗಾರರು ಅಸಂಖ್ಯಾತ ಜನ ಸಂಪದದಲ್ಲಿ ಇರುವರು ,ಅವರಲ್ಲ್ಲಿ ಕೆಲವರ ಬರಹಗಳು ಮಾತ್ರ ನಾಡಿನ ಮುಖ್ಯ ಪತ್ರಿಕೆ -ಪುಸ್ತಕಗಳಲ್ಲಿ ಅಚ್ಚಾಗಿ ಇನ್ನುಳಿದವರ ಬರಹಗಳು ಕೇವಲ ಸಂಪದದಲ್ಲಿ ಓದುಗರ ಮೆಚ್ಚುಗೆ ಪ್ರತಿಕ್ರಿಯೆ ಪಡೆದು ಮರೆಯಾಗುವವು. ಹೀಗೆ ಎಲೆ ಮರೆ ಕಾಯಿಯಂತೆ ಒಳ್ಳೊಳ್ಳೆ ಬರಹಗಳನ್ನು ಬರೆವ ಈ ಎಲ್ಲ ಬರಹಗಾರರ ಬರಹಗಳು ಕೇವಲ ಸಂಪದ ಮಾತ್ರ ಅಲ್ಲದೆ ಕರುನಾಡಿನ ಸಮಸ್ತರನ್ನು ತಲುಪಬೇಕು ಎನ್ನುವುದು ನನ್ನ ಬಯಕೆ ,ಅದಕಾಗಿ ಅವರೆಲ್ಲರಿಗೆ ಒಂದು ಕೋರಿಕೆ ..
>>>>ನೀವುಗಳು ಎಲ್ಲ ನಿಮ್ಮ ಬರಹಗಳನ್ನು ಈ ತರಹದ ವಿಶೇಷಾಂಕಳಿಗೆ -ಸ್ಪರ್ಧೆಗಳಿಗೆ ಕಳುಹಿಸಿ ,
ನಿಮ್ಮ ಬರಹಗಳನ್ನು ಸಂಪದಕ್ಕೆ ಮಾತ್ರ ಸೀಮಿತಗೊಳಿಸದೆ ಇನ್ನಿತರ ಮಾಧ್ಯಮಗಳಿಗೂ ವಿಸ್ತರಿಸಿ ..
ಶುಭವಾಗಲಿ ..
================================================================================================
Comments
ವೆಂಕಟೇಶರವರಿಗೆ,
ವೆಂಕಟೇಶರವರಿಗೆ,
ನಮ್ಮ ಹಿತ್ತಲಿನ ಕುಸುಮಗಳಾದ ಸುಧಾ, ತರಂಗಗಳ ವಿಶೇಷಾಂಕದ ಗುಣಮಟ್ಟ ಕುಸಿಯುವುದು ನಿಜಕ್ಕೂ ಖೇದಕರ. ಸಂಪದದ ಅಥವಾ ಇದೆ ರೀತಿಯ ಬರಹಗಾರರು ಗಮನಿಸಬೇಕಾದ ವಿಷಯ.
ನೀವು ಹೇಳಿದಂತೆ ಅಷ್ಟೊಂದು ಜನರ ಕೃಷಿ ಸಂಪದ / ಬ್ಲಾಗ್ ಗಳಲ್ಲಿ ಈಗಾಗಲೆ ಇದ್ದರೆ, ಅವುಗಳನ್ನು ಪುಸ್ತಕ ರೂಪದಲ್ಲೂ ಹೊರತರುವ ಯತ್ನ ಮಾಡಬಹುದಲ್ಲವೆ (ಆನ್ ಲೈನ್ ತಲುಪದ ಓದುಗರಿಗಾಗಿ)? ಈ ತರಹದ ವಿಚಾರಗಳೇನಾದರೂ ಈ ಮೊದಲು ಚರ್ಚಿಸಲ್ಪಟ್ಟಿತ್ತೊ ಗೊತ್ತಿಲ್ಲ. ನಾನು ಸಂಪದಕ್ಕೆ ಹೊಸಬನಾದ್ದರಿಂದ ಆ ಕುರಿತು ಹೆಚ್ಚು ಮಾಹಿತಿಯಿಲ್ಲ. ಬಹುಷಃ ಹೀಗಾದಲ್ಲಿ ಇ-ಸಾಹಿತ್ಯಿಕ ಚಕ್ರ ಒಂದು ಸುತ್ತು ಸುತ್ತಿ ವಾಪಸ್ಸು ಮೂಲಕ್ಕೆ ಬಂದು ಸಂಧಿಸಿದಂತಾಗುತ್ತದೆಂದು ನನ್ನನಿಸಿಕೆ. ತಮ್ಮ ಕಳಕಳಿಯ ಮನವಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲೆಂದು ಹಾರೈಸುತ್ತೇನೆ.
- ನಾಗೇಶ ಮೈಸೂರು
In reply to ವೆಂಕಟೇಶರವರಿಗೆ, by nageshamysore
ಹೋದ ವರ್ಷ ನಾ ಖರೀದಿಸಿದ್ದ ತರಂಗ
ಹೋದ ವರ್ಷ ನಾ ಖರೀದಿಸಿದ್ದ ತರಂಗ ಸುಧಾ ವಿಶೇಷಾಂಕಗಳು ಅವುಗಳ ವಿಭಿನ್ನ ಕಥಾ ಕವನ ಬರಹಗಳ ಮೂಲಕ ಚೆನ್ನಾಗಿದ್ದವು. ಆದರೆ ಈ ಸಾರಿ ಮಾತ್ರ ಯಾಕೋ ಸಪ್ಪೆ ಅನ್ನಿಸಿತು. ಇಲ್ಲಿ ಸೇರಿದ ಕತೆಗಳು ಕವನಗಳು ಬರಹಗಳು ಹೀಗೆ ಇವೆ ಎಂದ ಮೇಲೆ -ಅಲ್ಲಿ ಸೇರದೆ ಕಸದ ಬುಟ್ಟಿ ಸೇರಿದ್ದ ಬರಹಗಳು ಹೇಗಿದ್ದಿರಬಹುದೋ ಎಂದು ಊಹಿಸುತ್ತಿರುವೆ..!!
ಇದಂತೂ ಸ್ಪುಸ್ತ ಸತ್ಯ - ಸಂಪದದಲ್ಲಿ ಬರುವ ಹಲವು ಬರಹಗಳು ಯಾವೊಂದು ವಿಶೇಷಾಂಕಕ್ಕೂ ಕಮ್ಮಿ ಇಲ್ಲ. ತಿಂಗಳಿಗೊಮ್ಮೆ ಅಥವಾ ವರ್ಷದಲ್ಲಿ ಎರಡು ಸಾರಿ ಒಂದು ಸಾರಿ ಸಂಪದ ವಿಶೇಷಾಂಕ ಬರಹಗಳು ಎಂದು ಒಂದು ವಿಶೇಷ ಸಂಚಿಕೆ ತರುವ ಬಗ್ಗೆ ಸಂಪದ ನಿರ್ವಾಹಕರು ಯೋಚಿಸುವರು ಎಂಬ ನಂಬುಗೆಯಲ್ಲಿ.
ಬರಹ ಬರೆವದು -ಅದನ್ನು ಪತ್ರಿಕೆಗಳಿಗೆ ಕಳಿಸುವುದು ನಿಜಕ್ಕೂ ತ್ರಾಸದ ಕೆಲಸ ಅನ್ಸುತ್ತೆ , ಆದರೆ ನನ್ನ ಬರಹಗಳ ಗುಣಮಟ್ಟ ಗೊತ್ತಿರುವ ನಾ ಯಾವತ್ತು ಯಾವ ಪತ್ರಿಕೆಗೂ ಕಳಿಸುವ ಪ್ರಯತ್ನ ಮಾಡಿಲ್ಲ..!!
ಸಂಪದದಲ್ಲಿ ಸೇರಿ ಓದುಗರ ಅನಿಸಿಕೆ ಪ್ರತಿಕ್ರಿಯೆ ಸಾಕಸ್ಟೇ ..
ಪ್ರತಿಕ್ರಿಯಿಸಿದ ಸರ್ವರಿಗೂ ನನ್ನಿ
ಶುಭವಾಗಲಿ
\।
ನಿಮ್ಮ ಮಾತಂತು ಸತ್ಯ ಈಗಿನ ಹಲವು
ನಿಮ್ಮ ಮಾತಂತು ಸತ್ಯ ಈಗಿನ ಹಲವು ವಾರಪತ್ರಿಕೆ, ಮಾಸಿಕಗಳು ತಮ್ಮ ತನವನ್ನು ಕಳೆದುಕೊಂಡಿವೆ, ಸುದಾ ತರಂಗದಂತ ಪತ್ರಿಕೆ ಹೋಗಲಿ ಕಸ್ತೂರಿಯಂತದು ಎಕೊ ಸಪ್ಪೆ ಎನಿಸುವುದು, ಅಲ್ಲಿಯ ಪುಸ್ತಕವಿಭಾಗ ಎಂದರೆ ನನಗೆಷ್ಟೋ ಆಸಕ್ತಿ ಇತ್ತು, ಈಗ ಇಲ್ಲ. ದಿನ ಪತ್ರಿಕೆಗಳಂತು ತಮ್ಮ ಅಸ್ತಿತ್ವವನ್ನೆ ಬಿಟ್ಟುಕೊಟ್ಟು ಬರಿ ವಾಣಿಜ್ಯ ಪ್ರಕಟಣೆಗಾಗಿಯೆ ಪತ್ರಿಕೆ ನಡೆಸುತ್ತಿರುವರೆನೊ ಅನ್ನಿಸುತ್ತದೆ, ಅಲ್ಲಿ ಬರುವ ಪ್ರಕಟಣೆಗಳನ್ನು ಗಮನಿಸಿದರೆ ಹೆಚ್ಚು ಕಡಿಮೆ ಅವರು ಪತ್ರಿಕೆಯನ್ನು ಬಿಟ್ಟಿಯಾಗಿಯೆ ಕೊಡಬಹುದು, ಪ್ರಜಾವಾಣಿಯ ಮೊದಲ ಪುಟ ಪೂರ್ಣವಾಗಿ ಪ್ರಕಟಣೆಯೆ ಇರುತ್ತದೆ, ಹಾಗೆ ತರಂಗದಂತ ಪತ್ರಿಕೆಗಳನ್ನು ಶೇ. 60 ಕ್ಕಿಂತ ಹೆಚ್ಚು ಬಾಗ ಪ್ರಕಟಣೆ. ಮತ್ತೆ ಕೆಲವು ವಿಶೇಷ ಗಮನಿಸಿ, ಒಂದು ಪತ್ರಿಕೆಯ ಸಂಪಾದಕರ ಲೇಖನ ಮತ್ತೊಂದರಲ್ಲಿ !!! . ಬ್ರಾಂಡೇಡ್, ಅಥವ ಗೊತ್ತಾದ ಲೇಖಕರ ಬರಹ ಹೊರತುಪಡಿಸಿ ಬೇರೆ ಪ್ರಕಟಾವಾಗುವುದು ಕಷ್ಟಕರವೆ. ಒಮ್ಮೊಮ್ಮೆ ಅನ್ನಿಸುತ್ತೆ, ಪ್ರಕಟಣೆ ಮುಕ್ತ ಅನ್ನುವ ಸಂದರ್ಬವಿರದಿದ್ದರೆ ಇಲ್ಲಿಯು ನಮ್ಮ ಬರಹಗಳ ಪ್ರಕಟಣೆ ಕಷ್ಟವೆ ಆಗುತ್ತಿತ್ತೇನೊ. ಹಾಗಾಗಿಯೆ ಕ.ಬು. ಇಲ್ಲದ್ದ ಸಂಪದ ಚೆನ್ನಾಗಿದೆ. ಮುಕ್ತ ಬರಹಗಳನ್ನು ಕಾಣಬಹುದು. ಮತ್ತೆ ಬ್ಲಾಗ್ ಬಗ್ಗೆ ಹೇಳುವದಾದಲ್ಲಿ ಯಾರು ಬೇಕಾದರು ಮಾಡಬಹುದು. ಇನ್ನು ಫೇಸ್ ಬುಕ್ ನಂತ ಸೌಲಬ್ಯ, ಸರಿ ಬರಲಿಲ್ಲ, ನಾನೀಗ ಫೇಸ್ ಬುಕ್ ಮುಕ್ತ. (ಆಕೌಂಟ್ ಹಾಗೆ ಇದೆ ಅಷ್ಟೆ ಅದರಲ್ಲಿ 'ಸೊನ್ನೆ' ಸ್ನೇಹಿತರು) . ಹೆಚ್ಚು ಯೋಚಿಸುವದರಲ್ಲಿ ಅರ್ಥವಿಲ್ಲ, ಬಂದಂತೆ ಹೋಗುವುದು. ಬರೆಯಬೇಕು ಅನಿಸಿದಾಗ ಬರೆಯುವುದು. ಇಷ್ಟಪಡುವರು ಓದುತ್ತಾರೆ. ಅಷ್ಟೆ
ಸಪ್ತಗಿರಿ ಅವರೆ ನಮಸ್ಕಾರಗಳು.
ಸಪ್ತಗಿರಿ ಅವರೆ ನಮಸ್ಕಾರಗಳು. ನಿಮ್ಮ ಹಾಗು ಪಾರ್ಥರ ಅನಿಸಿಕೆಯನ್ನು ನಾನು ಸಹ ಅನುಮೋದಿಸುತ್ತೇನೆ.ನನಗಂತೂ ಸಂಪದ ಲೇಖನ ಗಳು ತುಂಬಾ ಆಪ್ತ ವಾಗಿವೆ ಜೊತೆಗೆ ಸಂಪದಿಗ ಸ್ನೇಹಿತರನ್ನು ಸಹ ಗಳಿಸಿದ್ದೇನೆ.ನಿಮ್ಮ ಇನ್ನಷ್ಟು ಲೇಖನ ಗಳ ನೀರಿಕ್ಷೆಯಲ್ಲಿ.
ವಂದನೆಗಳು.
ಸಪ್ತಗಿರಿವಾಸಿಯವರೆ, ಫುಲ್
ಸಪ್ತಗಿರಿವಾಸಿಯವರೆ, ಫುಲ್ ಸ್ಕ್ಯಾಪ್ (?) ಹಾಳೆಯಲ್ಲಿ "ನೀಟಾಗಿ" ಒಂದೇ ಮಗ್ಗುಲಲ್ಲಿ, ಒಂದುಗೆರೆ ಅಂತರದಲ್ಲಿ, ಮಾರ್ಜಿನ್ ಬಿಟ್ಟು, ಬರೆಯಬೇಕು ಅಥವಾ ಟೈಪು ಮಾಡಬೇಕು. (ನಂತರ ಅವರು ಪ್ರಕಟಿಸದಿದ್ದರೆ ಎಂದು ಒಂದು ಪ್ರತಿ ನಾವೇ ಇಟ್ಟುಕೊಳ್ಳಬೇಕು ).ಪೋಸ್ಟ್ ಮಾಡಿ ಕಾಯಬೇಕು. ಪಾರ್ಥರು ಹೇಳಿದ ಹಾಗೇ... ನನ್ನ ಬರಹ ಯಾರೂ ಓದದೇ ನೇರ ಕಬುಗೇ ಹೋಗಬಹುದು. :) ದೀಪಾವಳಿ, ಯುಗಾದಿ ಬದಲು ಸಮಸ್ತ ಕನ್ನಡಿಗರು "ಸಂಪದ" ದಿನವೂ ಓದುವಂತೆ ಮಾಡೋಣ.. ಏನಂತೀರಿ?
In reply to ಸಪ್ತಗಿರಿವಾಸಿಯವರೆ, ಫುಲ್ by ಗಣೇಶ
+1 ಗಣೇಷ್ ಜಿ!..:) ಮೀನಾ.
+1 ಗಣೇಷ್ ಜಿ!..:)
ಮೀನಾ.
ಪಾರ್ಥರು ಗಣೇಶಜಿ ಇವರ ಮಾತುಗಳಿಗೆ
ಪಾರ್ಥರು ಗಣೇಶಜಿ ಇವರ ಮಾತುಗಳಿಗೆ ನನ್ನ ಸಹಮತಿ ಇದೆ
ನನ್ನ ಹಲವು ಲೇಖನಗಳು ಸುಧಾ ವಾರಪತ್ರಿಕೆಯಲ್ಲಿ ಮೂಡಿ ಬಂದಿದೆ ಆದರೆ ಅದರ ಅನುಭವ ಮಾತ್ರ ಕಹಿ :-(
ಸಪ್ತಗಿರಿಯವರೇ,
ಸಪ್ತಗಿರಿಯವರೇ,
ನಿಮ್ಮ ಈ ಲೇಖನ ಓದುತ್ತಿದ್ದಂತೆ ನನಗೆ ನೆನಪಾದದ್ದು ನೀವು ಹಿಂದಿನ ವರ್ಷ ಬರೆದ ವಿಶೇಷ ಲೇಖನ ಮತ್ತು ನಾವಿಬ್ಬರು ಬೆಂಗಳೂರಿನಲ್ಲಿ ಭೇಟಿಯಾದಾಗ ನೀವು ಕೊಟ್ಟ ಸುಧಾ ಯುಗಾದಿ ವಿಶೇಷಾಂಕ ಇನ್ನೂ ನನ್ನ ಬಳಿಯಿದೆ. ಗಣೇಶ್..ಜೀ ಎಂದಂತೆ ಇತರ ಪತ್ರಿಕೆಗಳನ್ನು ಓದುವಂತೆ ಮಾಡುವ ಬದಲು ಸಂಪದವನ್ನೇ ಎಲ್ಲರೂ ಓದುವಂತೆ ಮಾಡುವ ದಿಸೆಯಲ್ಲಿ ಸಂಪದಿಗರೆಲ್ಲರೂ ಮತ್ತಷ್ಟು ಕಾರ್ಯಶೀಲರಾಗೋಣ. ನೀವು ಪಟ್ಟಿ ಮಾಡಿದ ಅನೇಕ ಲೇಖಕರೊಂದಿಗೆ ನಿಮ್ಮದೇ ಆದ ಛಾಪನ್ನು ನೀವು ಸಂಪದದಲ್ಲಿ ಒತ್ತಿದ್ದೀರ ಮತ್ತು ಅದಕ್ಕೊಂದು ವಿಶೇಷತೆಯನ್ನು ಕೊಡುವಲ್ಲಿ ನಿಮ್ಮ ಪಾತ್ರವೂ ಮಹತ್ತರವಾಗಿದೆ.