ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು!
- ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.
ನಾವೆಲ್ಲ ಕನ್ನಡ ಕಲಿತಿದ್ದೇ ಅಣ್ಣನಿಂದ (ನಮ್ಮ ತಂದೆ). ಕನ್ನಡವನ್ನು ಭಾಷೆಯಾಗಿ ತಗೊಂಡೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಎಂಟನೇ ತರಗತಿವರೆಗೂ ಓದಿದ್ದರಿಂದ ಕನ್ನಡ ಸ್ವಲ್ಪ ಗೊತ್ತಿತ್ತು. ಮನೆಯಲ್ಲಿ ಕನ್ನಡವೇ ಮಾತೃ ಭಾಷೆ ಕೂಡ ಆಗಿದ್ದರಿಂದ (ಏಕೆಂದರೆ, ಬಹಳ ಕನ್ನಡದವರಿಗೆ ಆಡುವ ಭಾಷೆ ಬೇರೇ ಇರುತ್ತೆ ಮನೆಯಲ್ಲಿ. ಉದಾ, ಐಯಂಗಾರರಿಗೆ, ಐಯರಿಗೆ - ತಮಿಳು, ಮುಲುಕುನಾಡರಿಗೆ - ತೆಲುಗು,..ಹೀಗೆ) ಕನ್ನಡ ಕಲಿಯಲು ಯಾವ ಅಡಚಣೆಯೂ ಇರಲಿಲ್ಲ. ಅಣ್ಣ ಹೇಳಿ ಕೇಳಿ ಶಾನುಭೋಗರು, ಹಳೆಕನ್ನಡ, ಹೊಸಕನ್ನಡ, ಆಡು ಕನ್ನಡ, ಬರೆಯುವ ಕನ್ನಡ ಎಲ್ಲವೂ ಚೆನ್ನಾಗಿ ತಿಳಿದಿತ್ತು. ಅದೂ ಅಲ್ಲದೇ ಅಣ್ಣನಿಗೆ ಸುಮಾರು ಭಾಷೆಗಳು ಚೆನ್ನಾಗಿ ಬರುತ್ತಿತ್ತು, ಹಿಂದಿ, ತೆಲುಗು, ತಮಿಳು, ಮಲಯಾಳಮ್, ಮರಾಠಿ, ಸಂಸ್ಕೃತ, ಬೆಂಗಾಲಿ ಎಲ್ಲದರಲ್ಲೂ ಸರಾಗವಾಗಿ ಮಾತನಾಡುವರು. ಅವರ ಭಾಷಾ ಪ್ರೇಮ ಅದಕ್ಕೆ ಅನುವು ಮಾಡಿಕೊಟ್ಟಿತ್ತು. ನಮಗೂ ದಿನದಿಂದ ದಿನಕ್ಕೆ ಹೊಸ ಪದಗಳನ್ನು ಉಪಯೋಗಿಸುವುದರ ಮೂಲಕ ಕನ್ನಡ ಕಲಿಸಿದ್ದರು. ಕಲಿಕೆ ತಮಾಶೆಯಿಂದಲೇ ನಡೆಯುತ್ತಿದ್ದರಿಂದ ನಾವೆಲ್ಲ ಕಲಿಯುವುದರಲ್ಲಿ ಆಸಕ್ತಿ ಇಟ್ಟು ಕಲಿತೆವು. ಈಗ ನೆನಪಿಸಿಕೊಂಡರೂ ಅಷ್ಟೇ ನಗು ಅಥವಾ ಅದಕ್ಕಿಂತಲೂ ಹೆಚ್ಚಾಗಿ ನಗು ಬರುವುದರಲ್ಲಿ ಸಂಶಯವೇ ಇಲ್ಲ.
ಅ: ಅನಾಹುತ, ಅಟಾಟೋಪು, ಅಚ್ಚೌಟ್ಲ ಕಾಯಿ,
ಅಣ್ಣ ಹೊರಗಡೆ ವರಾಂಡದಲ್ಲಿ ಜನರ ಮಧ್ಯದಲ್ಲಿ ಕುಳಿತು ತಮ್ಮ ಶಾನುಭೋಗಿಕೆ ಕೆಲಸಮಾಡುತ್ತಿದ್ದಾಗ, ಲೆಕ್ಕ, ಪತ್ರ, ಮತ್ತು ಛಾಪಾ ಕಾಗದದ ಮೇಲೆ ಬರೆಯುತ್ತಿದ್ದಾಗ, ಯಾವ ತರಹ ಗಲಾಟೆಯಾದರೂ ಇಷ್ಟ ಆಗುತ್ತಿರಲಿಲ್ಲ. ನಾವು ಒಳಗಡೆ ಅಡಿಗೆ ಮನೆಯಿಂದ ಊಟ, ತಿಂಡಿ ಮಾಡುವ ಗಲಾಟೆಯಲ್ಲಿ ತಟ್ಟೆಯನ್ನು ನೆಲದ ಮೇಲೆ ಬೀಳಿಸಿದಾಗ, ಅದು ಜೋರಾಗೇ ಶಬ್ಧ ಮಾಡಿ ಅವರ ಏಕಾಗ್ರತೆಗೆ ತೊಂದರೆಯಾಗುತ್ತಿತ್ತು. ಆಗ ಅಲ್ಲಿಂದಲೇ ನಮ್ಮನ್ನೆಲ್ಲ "ಏನ್ರೇ ಅದು ’ಅನಾಹುತ’ ಅಂತ ಬೈತಾ ಇದ್ರು. ನಮ್ಮ ಅಣ್ಣ (ಸಹೋದರ) ತಟ್ಟೆ ಬೀಳಿಸೋದಕ್ಕೆ ಅನಾಹುತ ಅಂತ ಅರ್ಥ ಮಾಡಿಕೊಂಡಿದ್ದ. ನಾವೆಲ್ಲ ಅವನಿಗಿಂತ ೩-೪ ವರುಷ ಸಣ್ಣವರಾಗಿದ್ವಿ. ಹೀಗೇ ಒಂದು ಸಲ ಇನ್ನೇನೋ ಗಲಾಟೆ ಮಾಡುತ್ತ ಶಬ್ಧ ಮಾಡಿದಾಗ, ಅಣ್ಣ ’ಅನಾಹುತ’ ಅಂತ ಬೈತಾರೆ ಅಂತ ನಾವೆಲ್ಲ ಅಂದುಕೊಂಡಾಗ, ಅವನು ಸೀರಿಯಸ್ ಆಗಿ "ತಟ್ಟೇ ಬೀಳಿಸೋದಕ್ಕೆ ಅನಾಹುತ ಅಂತ ಹೆಸರು" ಅಂದ. ನಮ್ಮಕ್ಕ ಅಲ್ಲೇ ಇದ್ದವಳು ನಕ್ಕು "ಅಯ್ಯೋ, ಪೆಕರ್ ಮುಂಡೇವಾ, ಏನಾದ್ರೂ ಗಡಿಬಿಡಿ, ಗಲಾಟೆಯಿಂದ ಮಾಡೊ ಅಘಾತಗಳೆಲ್ಲವೂ ಅನಾಹುತ ಅಂತ ತಿದ್ದಿದ್ದಳು. ಒಂದೆರಡು ಘಟನೆಗಳ ನಂತರ ಪದಗಳ ಅರ್ಥ ಸರಿಯಾಗಿ ತಿಳಿಯುತ್ತಿತ್ತು.
ಅಟಾಟೋಪು: ಅಂದರೆ, ಕೆಲಸಮಾಡದೇ ಕೆಲಸಮಾಡುವವರ ತರ ಆಟ ಆಡ್ತಾ ಇರ್ತಾರಲ್ಲ ಅದಕ್ಕೆ "ಅಟಾಟೋಪು" ಅಂತ ಹೇಳಬಹುದು. ಉದಾ: ಅವನೇನ್ ಕೆಲಸ ಕೇಳಬೇಡ, ಅವನದೆಲ್ಲಾ ಬರೀ "ಅಟಾಟೋಪು"!
ಅಚ್ಚೌಟ್ಲ ಕಾಯಿ: ಅಂದರೆ "ಪರಂಗಿ ಕಾಯಿ" ಗೆ ಇನ್ನೊಂದು ಹೆಸರು. ಉದಾ: ಜೋರು ಗಾಳಿಗೆ ಅಚ್ಚೌಟ್ಲ ಕಾಯಿ ಮರದಿಂದ ಬಿತ್ತು.
ಆ: ಆವಾರಿ, ಆನಾಡಿ
ಆವಾರಿ: ಅಂದರೆ, ಸಾದುವಲ್ಲದ್ದು. ನಮ್ಮನೆಯಲ್ಲಿ ಒಂದು ಹಸು ಇತ್ತು ಅದಕ್ಕೆ "ಜಯಸಿಂಹ" ಅಂತ ಹೆಸರಿಟ್ಟಿದ್ವಿ. ಅದು ಸಿಂಹ ರೂಪದ ಹಸು. ತುಂಬಾ ಕೋಪ, ಎಲ್ಲರಿಗೂ ಹಾಯುತ್ತಿತ್ತು, ತಿವಿಯುತ್ತಿತ್ತು. ಮನೆಗೆ ಬರುತ್ತಾನೇ ಇರಲಿಲ್ಲ. ರಾತ್ರಿ ಹನ್ನೆರಡು ಘಂಟೆಗೆ ಮನೆಗೆ ಬರುತ್ತಿತ್ತು ಸಂತೇ ದಿನ ನಾವೆಲ್ಲ ಮಲಗಿದಾಗ "ಅಂಬಾ" ಅಂದು ಕೂಗುತ್ತಾ. ನಮ್ಮಣ್ಣ ಅದಕ್ಕೆ "ಬಲು ಆವಾರಿ" ಅಂತ ಕರೀತಿದ್ರು.
ಆನಾಡಿ: ಅಂದರೆ, ತುಂಬಾ, ಜಾಸ್ತಿ, ಬಹಳ ಅನ್ನೋ ಅರ್ಥ ಕೊಡುತ್ತೆ.
ಇ: ಇಬ್ಬಟ್, ಇಜ್ಜೋಡಿ,
ಇಬ್ಬಟ್: ಅಂದರೆ, ಇನ್ನುಮೇಲೆ ಅಂತ ಅರ್ಥ ಮಾಡಬಹುದು. ನಮ್ಮಜ್ಜಿ ತುಂಬಾ ಚೆನ್ನಾಗಿ ಒಬ್ಬಟ್ಟು ಮಾಡುತ್ತಿದ್ದರು. ನಾವೆಲ್ಲ ಒಬ್ಬಟ್ ಮಾಡುವಾಗ ಅಲ್ಲೇ ಅಡಿಗೆಮನೆಯಲ್ಲಿ ಸುತ್ತುಕೊಂಡು ಇರುತ್ತಿದ್ದೆವು. ಸ್ವಲ್ಪ ಒಬ್ಬಟ್ ಆದಮೇಲೆ ಅಜ್ಜಿ ಎಲ್ಲರಿಗೂ ಒಂದೊಂದು ಕೊಟ್ಟು : " ಇದನ್ನ ತಿಂದು, ಇಬ್ಬಟ್ ಆಡಿಕೊಳ್ಳಿ" ಅಂತ ಹೇಳುತ್ತಿದ್ದರು.
ಇಜ್ಜೋಡಿ: ಅಂದರೆ ಜೋಡಿ ಇಲ್ಲದೇ ಇರುವುದು, ಅಂದರೆ ಒಂದು ಕಾಲು ಚೀಲ ಕಳೆದು, ಒಂದೇ ಕಾಲು ಚೀಲ ಇದ್ದರೆ ಜೊತೆಯಲ್ಲಿ; ಅದಕ್ಕೆ "ಇಜ್ಜೋಡಿ" ಅನ್ನಬಹುದು.
ಮುಂದುವರೆಯುವುದು....
Comments
ನನಗೊಂದು ಸಂಶಯ, ಅಣ್ಣ ಎಂದರೆ
In reply to ನನಗೊಂದು ಸಂಶಯ, ಅಣ್ಣ ಎಂದರೆ by ಕೀರ್ತಿರಾಜ್ ಮಧ್ವ
ಇಜ್ಜೋಡು ಎನ್ನುವ ಕನ್ನಡದ
In reply to ಇಜ್ಜೋಡು ಎನ್ನುವ ಕನ್ನಡದ by venkatb83
ಧನ್ಯವಾದಗಳು ವೆಮ್ಕಟ್ ಅವರೆ,
In reply to ನನಗೊಂದು ಸಂಶಯ, ಅಣ್ಣ ಎಂದರೆ by ಕೀರ್ತಿರಾಜ್ ಮಧ್ವ
ನಿಮ್ಮ ಪ್ರತಿಕ್ರಿಯೆಗೆ
In reply to ನಿಮ್ಮ ಪ್ರತಿಕ್ರಿಯೆಗೆ by rasikathe
ನನಗೂ ಈ ರೀತಿ ಕರೆಯುವ ಮೂಲದ ಬಗ್ಗೆ
In reply to ನನಗೂ ಈ ರೀತಿ ಕರೆಯುವ ಮೂಲದ ಬಗ್ಗೆ by nageshamysore
ದೊಡ್ಡ ಕುಟುಂಬದಲ್ಲಿ ತಮ್ಮಂದಿರು
In reply to ದೊಡ್ಡ ಕುಟುಂಬದಲ್ಲಿ ತಮ್ಮಂದಿರು by ಗಣೇಶ
ಧನ್ಯವಾದಗಳು ಗಣೇಷವರೆ, ನಿಮ್ಮ
In reply to ನನಗೊಂದು ಸಂಶಯ, ಅಣ್ಣ ಎಂದರೆ by ಕೀರ್ತಿರಾಜ್ ಮಧ್ವ
'ಅಣ್ಣಾ' ಎಂದರೆ ಒಡಹುಟ್ಟಿದ ಅಣ್ಣ
ನಮ್ಮ ಮನೆಯಲ್ಲಿ ನಾವೂ ಕೂಡ
In reply to ನಮ್ಮ ಮನೆಯಲ್ಲಿ ನಾವೂ ಕೂಡ by tthimmappa
ಧನ್ಯವಾದಗಳು ತಿಮ್ಮಪ್ಪ ಅವರೆ,
In reply to ಧನ್ಯವಾದಗಳು ತಿಮ್ಮಪ್ಪ ಅವರೆ, by rasikathe
ನಮಸ್ಕಾರ, ಡಾ. ಮೀನಾ ಸುಬ್ಬರಾವ್
ನಮಸ್ಕಾರ , ನಿಮ್ಮ
ಮೀನಾ ರವರೆ ನಿಮ್ಮ ಲೇಖನ ತುಂಬಾ
ಮೀನಾ ರವರೆ ನಿಮ್ಮ ಲೇಖನ ತುಂಬಾ
In reply to ಮೀನಾ ರವರೆ ನಿಮ್ಮ ಲೇಖನ ತುಂಬಾ by Ranjana Madival
ಧನ್ಯವಾದಗಳು ರಮ್ಜನ ಅವರೆ, ನಿಮ್ಮ