ಸ್ಫೂರ್ತಿ
ಮರೆತೊಂದು ನೆನಪನ್ನು ಮೀಂಟಿ ಮೀಂಟುತ ಮತ್ತೆ
ಕೇಳಲು ಇಂಪಾದ ನಾದವಾಗಿಸು
ಇರದಿದ್ದ ಕನಸುಗಳ ತೋರಿ ತೋರುತ ಮತ್ತೆ
ಇರುಳಿನ ನಶೆಯೊಳಗೆ ತೇಲಿತೇಲಿಸು
ಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳ
ಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸು
ಬಂಧದೊಳು ಸಿಲುಕಿದ ಶೂನ್ಯವಾದ ಮನಸ್ಸಿಗೆ
ದಿಕ್ಕುಗಳ ತೋರಿಸುತ್ತ ವಿಷಾದವ ನೀಗಿಸು || ೧||
ಕವಿದಿರುಳಲಿ ತುಂಬು ಬೆಳದಿಂಗಳ
ಮೊಗೆ ಮೊಗೆದೀಯುತ ಬೊಗಸೆಯಲಿ
ಇರದೊಂದು ಕನಸನ್ನು ಇರಗೊಡುತಲಿ ಮತ್ತೆ
ರಾಗಗಳಲೆಯೊಳು ತೇಲಿತೇಲಿಸು || ೨ ||
Rating
Comments
(No subject)
In reply to (No subject) by kpbolumbu
ಕೃಷ್ಣ ಪ್ರಕಾಶರೆ, ಮೊದಲಿಗೆ "no
ಕೃಷ್ಣ ಪ್ರಕಾಶರೆ, ಮೊದಲಿಗೆ "no subject" ಓದಿ ಏನೋ ತಪ್ಪಾಗಿ ಒತ್ತಿ ಹೀಗಾಗಿರಬಹುದೆಂದು ಆಲೋಚಿಸಿದೆ. ನೋಡಿದರೆ ಕವನ ವಾಚನ. ಚೆನ್ನಾಗಿದೆ. ನಿಮ್ಮ ಸ್ವರವೂ ಹಾಡೂ ಚೆನ್ನಾಗಿದೆ. ಕಳೆದ ಬಾರಿ ಕೊಂಡಿ ಕೊಟ್ಟದ್ದರಲ್ಲಿ ತುಂಬಾ ಹೊತ್ತಾದರೂ ಕವನ ಬಂದಿರಲಿಲ್ಲ. ಈ ಬಾರಿ ಕೂಡಲೇ ಬಂತು.
In reply to (No subject) by kpbolumbu
ಕೃಷ್ಣಪ್ರಕಾಶ್ ರವರೆ ಉತ್ತಮ ರಚನೆ
ಕೃಷ್ಣಪ್ರಕಾಶ್ ರವರೆ ಉತ್ತಮ ರಚನೆ ಹಾಗೆ ಹಾಡು ಕೂಡ, ದ್ವನಿಗ್ರಹಣ ಎಲ್ಲವು ಸ್ವಷ್ಟವಾಗಿದೆ, ಹಾಗೆ ಕೇಳಲು ಮಧುರವಾಗಿದೆ , ಅಭಿನಂದನೆಗಳು. ಹೇಗೆ ದ್ವನಿ ಮುದ್ರಣ ಮಾಡಿದಿರಿ, ಮೊಬೈಲ್ ನಲ್ಲೆ ಮಾಡಬಹುದು ಅನ್ನಿಸುತ್ತೆ. ತಿಳಿಸಿದರೆ ಬೇರೆಯವರು ಪ್ರಯತ್ನಪಡಬಹುದು
In reply to ಕೃಷ್ಣಪ್ರಕಾಶ್ ರವರೆ ಉತ್ತಮ ರಚನೆ by partha1059
ಕವನವಾಚನ, ದನಿ ಬಹಳ ಚೆನ್ನಾಗಿವೆ.
ಕವನವಾಚನ, ದನಿ ಬಹಳ ಚೆನ್ನಾಗಿವೆ.
ಕವನ ವಾಚನ ಎರಡೂ ಬಹಳ
ಕವನ ವಾಚನ ಎರಡೂ ಬಹಳ ಚೆನ್ನಾಗಿದೆ.
ಮೆಚ್ಚುಗೆಗಾಗಿ ಎಲ್ಲರಿಗೂ
ಮೆಚ್ಚುಗೆಗಾಗಿ ಎಲ್ಲರಿಗೂ ಧನ್ಯವಾದಗಳು.
ಯಾವ ವಿಧಾನ ಸೌಧದಲ್ಲಿಯೂ ಕುಳಿತು ನೋಡಬಹುದಾದ ಅಸಭ್ಯ ಚಿತ್ರಗಳನ್ನು ಅಪ್ಲೋಡ್ ಮಾಡಿಕೊಳ್ಳಲು ಯುಟ್ಯೂಬ್ ಅನುವು ಮಾಡಿಕೊಟ್ಟಿರುವಂತೆಯೇ ಯಾರೇ ಆದರೂ ತಮ್ಮ ತಮ್ಮ ಕರ್ಕಶ ಧ್ವನಿಗಳನ್ನು ಅಪ್ಲೋಡ್ ಮಾಡಿಕೊಳ್ಳಲು ಸೌಂಡ್ಕ್ಲೌಡ್ ಅನುವು ಮಾಡಿಕೊಟ್ಟಿದೆ. ಅಲ್ಲಿ ನೀವು ಹಾಡುತ್ತಲೇ ರೆಕಾರ್ಡ್ ಮಾಡಬಹುದು ಅಥವಾ ಮೊದಲೇ ರೆಕಾರ್ಡ್ ಮಾಡಿಟ್ಟ ಧ್ವನಿಯನ್ನು ಅಪ್ಲೋಡ್ ಮಾಡಬಹುದು.
'ಸ್ಪೂರ್ತಿ' ರೆಕಾರ್ಡ್ ಮಾಡಲು ನಾನು ಆಡೇಸಿಟಿ ಬಳಸಿದ್ದೆ. (http://audacity.sourceforge.net/)
ಮೊಬೈಲಿನಿಂದಲೂ ರೆಕಾರ್ಡ್ ಮಾಡಬಹುದು.
In reply to ಮೆಚ್ಚುಗೆಗಾಗಿ ಎಲ್ಲರಿಗೂ by kpbolumbu
ಚೆನ್ನಾಗಿದೆ.
ಚೆನ್ನಾಗಿದೆ.
In reply to ಚೆನ್ನಾಗಿದೆ. by Premashri
ಧನ್ಯವಾದಗಳು ಪ್ರೇಮಶ್ರೀ ಅವರೇ.
ಧನ್ಯವಾದಗಳು ಪ್ರೇಮಶ್ರೀ ಅವರೇ.