ಬೆಂಗಳೂರಲ್ಲಿ -ಮಲೆಗಳಲ್ಲಿ ಮದುಮಗಳು -ನೋಡೋಣ ಬನ್ನಿ ...!!
ರಾಷ್ಟ್ರ ಕವಿ ಕುವೆಂಪು ಅವರ ಪ್ರಸಿದ್ಧ ಕಾದಂಬರಿ -ಮಲೆನಾಡ ದರ್ಶಿನಿ , 'ಮಲೆಗಳಲ್ಲಿ ಮದುಮಗಳು'-ಬಹುತೇಕ ಕನ್ನಡಿಗರಿಗೆ ಚಿರ ಪರಿಚಿತ ಕಾದಂಬರಿ, ಒಮ್ಮೆಯಾದರೂ ಇದನ್ನು ಓದದ ಯಾರಾದರೂ ಇರಬಹುದೇ? ಎನ್ನುವ ಕೆಟ್ಟ ಕುತೂಹಲ ಎನಗೆ.. !!
ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಗಳನ್ನು ಸಪ್ನಾ ಬುಕ್ ಸ್ಟ್ತಾಲ್ ನಲ್ಲಿ ಖರೀದಿಸಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ .. ಮತ್ತು ಈ ಹಿಂದೆ ೨-೩ ಬಾರಿ ಈ ಬಗ್ಗೆ ಆ ವಿಷಯಕ್ಕೆ ಸಂಬಂಧಿಸಿದ ಸಂಪದ ಬರಹಗಳಿಗೆ ಪ್ರತಿಕ್ರಿಯಿಸಿ ಈ ನನ್ನ ಅನುಭವ ಹಂಚಿಕೊಂಡಿದ್ದೆ ..
ಈ ಮಲೆಗಳಲ್ಲಿ ಮದುಮಗಳು ನನಗನ್ನಿಸಿದ ಹಾಗೆ ವಿಶೇಷ ವಿಶಿಸ್ತ ಅನ್ನಿಸಿದ್ದು ಅದನ್ನು ಓದುತ್ತ ಅಲ್ಲಿನ ಪಾತ್ರಗಳನ್ನೂ ಮನದಲ್ಲಿ ಕಲ್ಪ್ಸಿಕೊಳ್ಳುತ್ತ ಸಾಗಿದ ನನಗೆ ಅದು ಓದುತ್ತ ಓದುತ್ತ ಅಲ್ಲಿನ ಪ್ರತಿ ಪಾತ್ರಗಳೂ ಕಣ್ಣ ಮುಂದೆ ಅಭಿನಯಿಸುತ್ತಿವೆಯೇನೋ ಎನ್ನುವ ಹಾಗ್ ಆಗಿತ್ತು.
ಈ ಕಾದಂಬರಿಯನ್ನು ನಾಟಕವನ್ನಾಗಿ ರೂಪಿಸಿ ಅದನ್ನು ರಂಗಮಂಚಕ್ಕೆ ಯಶಸ್ವಿಯಾಗಿ ತಂದ ಖ್ಯಾತ ರಂಗ ನಿರ್ದೇಶಕ 'ಬಸವಲಿಂಗಯ್ಯ ' ಅವರು ಈಗ ಅದನ್ನು ಬೆಂಗಳೂರಲ್ಲಿ ಪ್ರದರ್ಶಿಸುತ್ತಿರುವರು.
ತನ್ನ ಮೈಸೂರು ಯಶಸ್ವಿ ರಂಗ ಪ್ರದರ್ಶನದ ನಂತರ ಈಗ ನಮಗಾಗಿ ಬೆಂಗಳೂರಲ್ಲೇ ನಾಟಕವಾಗಿ ಪ್ರದರ್ಶಿತವಾಗಲಿದೆ ... ಮೈಸೂರಿಗೆ ಹೋಗಿ ಮಳೆಯಲ್ಲಿ (ಆ ನಾಟಕ ಪ್ರದರ್ಶನ ಸಮಯದಲ್ಲಿ ವ್ಯಾಪಕ ಮಳೆಯಾದರೂ ಪ್ರದರ್ಶನ ನಿಲ್ಲಲಿಲ್ಲ ಮತ್ತು ಪ್ರೇಕ್ಚಕರೂ ಕದಲಲಿಲ್ಲ....!)ನೋಡಲು ಆಗದವರು ಈ ಸುವರ್ಣಾವಕಾಶ ಕಳೆದುಕೊಳ್ಳಬಾರದು..!! ಅಲ್ಲದೆ ಮೈಸೂರಲ್ಲಿ ಈ ನಾಟಕ ಪ್ರದರ್ಶನವಾದಾಗ ಹಲವರಿಗೆ ಟಿಕೇಟು ಸಿಗದೇ ಈ ಹಿಂದೆ ದಿವಂಗತ ಸೀ ಅಶ್ವಥ್ ಅವರ 'ಕನ್ನಡವೇ ಸತ್ಯ' ಕಾರ್ಯಕ್ರಮದ ಟಿಕೇಟು ಸಿಗದ ನೆನಪು ಮರುಕಳಿಸಿತ್ತು ..
>>>>ನನಗಂತೂ ಮೈಸೂರಿಗೆ ಹೋಗಿ ಈ ನಾಟಕ ನೋಡಲು ಆಗಲಿಲ್ಲ . ಈ ಸಾರಿ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳದೆ ಅದನ್ನು ನೋಡಲೇ ಬೇಕೆಂದು ತೀರ್ಮಾನಿಸಿರುವೆ. ಒಂದೊಮ್ಮೆ ನೀವ್ ಎಲ್ಲ ಸಂಪದ ಸದಸ್ಯರು ಒಟ್ಟಿಗೆ ಹೋಗಿ ಆ ನಾಟಕವನ್ನು ನೋಡುವ ಎಂದರೆ ಆ ಬಗ್ಗೆ ಎಲ್ಲರೂ ಚರ್ಚಿಸಿ ಒಂದು ದಿನ ಗೊತ್ತು ಮಾಡೀ ಅಲ್ಲಿಗೆ ಹೋಗಿ ನೋಡುವ . ಹಾಗೆ ಸ್ಮಪದ ಸಮ್ಮಿಲನವೋ ಆದ ಹಾಗ್ ಆದೀತು ..
ಏನಂತೀರ?
ಈ ನಾಟಕ ಎಪ್ರಿಲ್ ೧೮ ರಿಂದ ಮೇ ೩೦ ರವರೆಗೆ ಮಂಗಳವಾರ ಗುರುವಾರ ಶನಿವಾರ ಮತ್ತು ಭಾನುವಾರ
೮ : ೩ ೦ - ರಾತ್ರಿಯಿಂದ ,ಬೆಳಗ್ಗೆ ೫:೩೦ ವರೆಗೆ ನಡೆಯಲಿದೆ. ಒಟ್ಟು ೨೫ ಪ್ರಯ್ಯೋಗಗಳು ..
ಸೊ ಯಾವತ್ತಾದರೂ ಸೈ. ..!!
ಈ ನಾಟಕದ ಬಗ್ಗೆ ಇಂದಿನ ವಿಜಯ ಕರ್ನಾಟಕದಲ್ಲಿ ವಿವರ ಬರಹ .
http://www.vijaykarnatakaepaper.com/Details.aspx?id=5047&boxid=14441656
ಚಿತ್ರ ಮೂಲ: ವಿಜಯ ಕರ್ನಾಟಕ
Comments
ವೆಂಕಟೇಶರವರೆ ನಿಮ್ಮ ಇಂದಿನ ಲೇಖನ
ವೆಂಕಟೇಶರವರೆ ನಿಮ್ಮ ಇಂದಿನ ಲೇಖನ ಉತ್ತಮವಾಗಿದೆ.ರಾಷ್ಟ್ರಕವಿ ಕುವೆಂಪುರವರ ಪ್ರಸಿದ್ದ ಕಾದಂಬರಿ "ಮಲೆಗಳಲ್ಲಿ ಮದುಮಗಳು" ನ್ನು ಈಗಾಗಲೆ ಸುಮಾರು 16 ವರ್ಷಗಳ ಹಿಂದೆ ದೂರದರ್ಶನದಲ್ಲಿ ನಾವುಗಳು ಪ್ರತಿ ಕಂತನ್ನು ತಪ್ಪದೆ ವಿಕ್ಷಿಸಿದ್ದೆವೆ. ಈಗ ರಂಗ ನಿರ್ದೇಶಕರಾದ ಬಸಲಿಂಗಯ್ಯನವರಿಗೆ ಧನ್ಯವಾದಗಳು ಹಾಗೂ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದ ಲೇಖನವನ್ನು ಓದಿದಾಗ ನಿರ್ದೇಶಕರು ಬಹಳ ಶ್ರಮಪಟ್ಟಿದ್ದಾರೆ ಎಂದು ಗೊತ್ತಾಯಿತು.ನಾವು ನಾಟಕ ನೋಡದೆ ಹೋದರು ನಿಮ್ಮಿಂದ ವಿಷಯ ತಿಳಿದು ತುಂಬಾ ಸಂತೋಷವಾಯಿತು.ನಾಟಕವನ್ನು ಮನದಲ್ಲಿ ಕಲ್ಪಿಸಿಕೊಂಡರೆ ಮಲೆನಾಡ ಸೋಬಗು ಕಣ್ಣ ಮುಂದೆ ಬಂದು ನಿಲ್ಲುತ್ತದೆ....
In reply to ವೆಂಕಟೇಶರವರೆ ನಿಮ್ಮ ಇಂದಿನ ಲೇಖನ by Amaresh patil
ಮಲೆಗಳಲ್ಲಿ ಮದುಮಗಳು ಓದಿ ಹಲವು
ಮಲೆಗಳಲ್ಲಿ ಮದುಮಗಳು ಓದಿ ಹಲವು ದಿನ ಅದರ ಗುಂಗಲ್ಲೇ ಇದ್ದೆ. ಅದ್ಕೆ ಮೊದಲು ಹಲವು ಕನ್ನಡ ಹಿಂದಿ ತೆಲುಗು ಆಂಗ್ಲ ಕಾದಂಬರಿಗಳನ್ನು ಓದಿದ್ದರೂ ಯಾವುದೋ ಇಸ್ಟೊಂದು ಮನ ಸೆಳೆದಿರಲಿಲ್ಲ.
ಆಮೇಲೆ ಇದೇನಾದರೂ ಸಿನೆಮ ಆಗಿದೆಯ ಎಂದು ನೆಟ್ನಲ್ಲಿ ಹುಡುಕಿದಾಗ ಇದು ಸಿಗದೇ ಕಾನೂರು ಹೆಗ್ಗಡತಿ ಸಿಎನ್ಮ ಸಿಕ್ಕಿತು ಅದನ್ನು ಡೌನ್ಲೋಡ್ ಮಾಡಿ ನೋಡಿದೆ , ಕಾದಂಬರಿ ಒಂದನ್ನು ಸಿನೆಮಾಗೆ ಅಳವಡಿಸುವುದು ಎಷ್ಟು ಕಷ್ಟದ ಕೆಲಸ ಅಂತ ನೋಡಿದ ಮೇಲೆ ಅನ್ನಿಸಿತು . ಹೆಗ್ಗಡೆ ಆಗಿ ಗಿರೀಶ್ ಕಾರ್ನಾಡ್ , ಹೆಗ್ಗಡತಿ ಆಗಿ ತಾರ ಅವರ ಅಭಿನಯ ಮಾತು ಆರುಂಧತಿ ನಾಗ್ ಇನ್ನಿತರರ ಅಭಿನಯಕ್ಕೆ ಎರಡು ಮಾತಿಲ್ಲ ಽಅದರೆ ಅದು ಕಾದಂಬರಿ ಸೆಳೆದ ಹಾಗೆ ನನ್ನನು ಸೆಳೆಯಲು ಮನ ಗೆಲ್ಲಲು ವಿಫಲವಾಯ್ತು , ಆದರೂ ಆ ಪ್ರಯತ್ನ ಮೆಚ್ಚಿದೆ. ಒಂದು ವರ್ಷದ ಹಿಂದೆ ಈ ಕಾದಂಬರಿಯನ್ನು ನಾಟಕವನ್ನಾಗಿಸಿ ಅಹೋರಾತ್ರಿ ಮೈಸೂರಲ್ಲಿ ಪ್ರದರ್ಶಿಸಿದಾಗ ಜೋರು ಮಳೆಯಲ್ಲೂ ಜನ ಕದಲದೆ ಮಿಸುಕಾಡದೆ ಪೇಚಾಡದೆ ನೋಡಿದ್ದು ಮತ್ತು ಹಲವರಿಗೆ ಹಲವು ದಿನ ಟಿಕೆಟ್ ಸಿಗದೇ ಹೋದದ್ದು ಕೇಳಿ ನೋಡಿ ಅಚ್ಚರಿ ಆದೆ /... ಹೀಗೂ ಉಂಟೆ ಅಂತ ..!!
ಸಿನೆಮ ಬಿಟ್ಟರೆ ಬೇರೆ ಮಾಧ್ಯಮಕ್ಕೆ ಇಂದು ಉಳಿಗಾಲವಿಲ್ಲ ಎಂದು ಯೋಚಿಸಿದ್ದೆ ಆದರೆ ಬಸವಲಿಂಗಯ್ಯ ತರಹದ ಜನ ಕಷ್ಟ ಪಟ್ಟು ಶ್ರಮ ವಹಿಸಿ ಮತ್ತೆ ನಾಟಕಗಳತ್ತ ಜನ ದಾಪುಗಾಲಿಡುವ ಹಾಗೆ ಮಾಡಿರುವರು. ಅವರಿಗೆ ನಮ್ಮ ನನ್ನಿ
ಈ ಮಲ್ಲತ್ತಹಳ್ಳಿ ಎಲಿ ಬರುತ್ತೋ? ಹೆಸರು ಕೇಳಿದ ಹಾಗಿದೆ ಆದ್ರೆ ಎಲ್ಲಿ ಅಂತ ಗೊತ್ತಿಲ್ಲ ಎಂದು ನೆಟ್ನಲ್ಲಿ ಹುಡುಕಾಡಿದೆ . ಸಿಕ್ಕಿತು ಆದರೂ ಪಕ್ಕಾ ಗೊತ್ತಿರಲಿಲ್ಲ. ಆದರೆ ಮೊನ್ನೆ ಪರೀಕ್ಷೆ ಬರೆಯಲು ಹೋಗುವಾಗ ನನಗೆ ಸಿಕ್ಕಿತು. ಅಲ್ಲಿಗೆ ಹೋಗಲು ಮತ್ತಿಕೆರೆ - ವಿದ್ಯಾರಣ್ಯಪುರ- ಯಲಹಂಕ -ಯಶವಂತಪುರ ಕಡೆಯಿಂದ ೪ ೦ ೧ ಕೆ ಎಂ ಮತ್ತು ಕೆಂಗೇರಿಗೆ ಹೋಗುವ ಎಲ್ಲ ಅಬಸ್ಸುಗಳು ಹೋಗುವವು. ಬೆಂಗಳೂರು ವಿಶ್ವ ವಿದ್ಯಾಲಯ ಸ್ಟಾಪ್ನಲ್ಲಿ ಅಥವಾ ಅದ್ಕೆ ಮುಂಚೆ ಬರುವ ಮಲ್ಲತ್ತಹಳ್ಳಿ ಸ್ತಪ್ನಲಿ ಇಳಿದರೆ ಎಡಗಡೆ ಬಸ್ ಸ್ಟಾಪ್ ಹಿಂದೂ ಗಾದೆ ಈ ಕಲಾ ಗ್ರಾಮ - ವಿಶಾಲ ಪ್ರದೇಶದಲ್ಲಿದೆ . .. ನಾನು ಈ ವಾರ ಆ ನಾಟಕ ನೋಡಲು ಹೋಗುವೆ . ಬಹುಶ ಶನಿವಾರ ಭಾನುವಾರ ಹೋಗುವೆ. ಅದನ್ನು ನೋಡಿದ ಮೇಲೆ ಆ ಬಗ್ಗೆ ಬರಹ ಬರೆವ ಇರಾದೆ ಇದೆ ನೋಡುವ .. ಸಸಿ ಹೆಬ್ಬಾರ್ ಅವರು ಬರೆದ ಆ ನಾಟಕದ ಬಗೆಗಿನ ಬರಹ ಓದಿದ ಮೇಲೆ ಆ ನಾಟಕವನ್ನು ಆದಸ್ತು ಶೀಘ್ರ ನೋಡುವ ಮನಸ್ಸಾಗಿದೆ ಆದರೆ ಈಗ ಪರೀಕ್ಷೆ ಇವೆ .. ;(
ಈ ಬರಹಕ್ಕೆ ಪ್ರತಿಕ್ರಿಯಿಸಿದ ಸರ್ವರಿಗೂ
ನನ್ನಿ
ಶುಭವಾಗಲಿ
\।
ಕುವೆಂಪುರವರ ಮಲೆಗಳಲ್ಲಿ ಮದುಮಗಳು
ಕುವೆಂಪುರವರ ಮಲೆಗಳಲ್ಲಿ ಮದುಮಗಳು ನಾಟಕದ ಮಾಹಿತಿ ಒದಗಿಸಿತ್ತಿರುವುದಕ್ಕೆ ಧನ್ಯವಾದಗಳು, ಸಪ್ತಗಿರಿಗಳೆ. ಮಳೆ ಬಂದರೂ ಕದಲದೇ ನಾಟಕವನ್ನು ನಿಂತು ನೋಡುವಂತೆ ಮಾಡಿದ ನಿರ್ದೇಶಕ ಬಸವಲಿಂಗಯ್ಯನವರು ಸಹ ಶ್ಲಾಘನೀಯರು.
ಹೌದು ವೆಂಕಟರವರೇ, ತಮ್ಮ ಕಳಕಳಿಗೆ
ಹೌದು ವೆಂಕಟರವರೇ, ತಮ್ಮ ಕಳಕಳಿಗೆ ಮೆಚ್ಚುಗೆ ಸೂಸುತ್ತ, ಚುನಾವಣೆ ನಿಮಿತ್ತ ಬರಲಾಗದೇ, ನನ್ನ ಅಸಹಾಯಕತೆಗೆ ಮರುಗುತ್ತ, ಸನಿಹದ ಗೆಳೆಯರಾದರೂ ಕೂಡಿ ನೋಡಿ, ದೂರದಲ್ಲಿರುವ ನಮಗೆ ಅದರ ಸವಿ ಉಣಬಡಿಸಿ ಗೆಳೆಯರೆ, ಧನ್ಯವಾದಗಳು.