ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ!
ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ - ಪಲ್ಲವಿಯಾದರೂ ಬಂದೇ ತೀರುವುದು ಎಂದು ನನಗೆ ಗೊತ್ತು. ಆದಿಯಲ್ಲಿ ಗಣೇಶನ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಘ್ನ ವಿನಾಯಕನನ್ನು ಸ್ತುತಿಸೋಣ....
"ಮೂಷಿಕ ವಾಹನ ಮೋದಕ ಹಸ್ತಾ, ಚಾಮರ ಕರ್ಣ ವಿಳಂಭಿತ ಸೂತ್ರಾ! ಶರಣು ಶರಣಯ್ಯಾ ಶರಣು ಬೆನಕಾ, ನೀಡಯ್ಯ ಬಾಳು ಬೆಳಗುವಾ ತನಕ....!
ಎಂದು ಭಕ್ತಿಯಿಂದ ಪಿ.ಬಿ.ಎಸ್ ಹಾಡಲು.....ಎಲ್ಲ ಬೇರೆ ಬೇರೆ ಅವತಾರದ ದೇವರುಗಳ ಪ್ರತ್ಯಕ್ಷ ಸಿರಿಯೇ ಅಲ್ಲಿ ಅವತರಿಸಿತು. ಸಾಕ್ಷಾತ್ ನಾರಾಯಣನನ್ನು ಕಂಡಂತಾಗಿ...
"ಕಾಪಾಡು ಶ್ರೀ ಸತ್ಯ ನಾರಾಯಣ, ಪನ್ನಗ ಶಯನಾ..." ಹೇಳಿದಂತೆ ಏನೋ ಮರೆಯಾಗಿ ಗರ್ಭಗುಡಿಯ ಬಾಗಿಲು ಹಾಕಿದಂತಾಯ್ತು. ಪಿ. ಬಿ. ಎಸ್ ಅಲ್ಲಿಗೇ ನಿಲ್ಲಿಸಲಿಲ್ಲ ಹಾಡುವುದನ್ನು...
"ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ನರಹರಿಯೇ"....ಎಂದು ಹಾಡಲಾರಂಬಿಸಿದರು. ಇನ್ನೂ ದರುಶನ ಕಾಣದೆ, " ಭಗವಂತ ಕೈ ಕೊಟ್ಟ.." ಎನ್ನುವಾಗಲೇ ರಂಗ ಒಂದು ಕ್ಷಣಕ್ಕೆ ಬಂದು ಮರೆಯಾದಂತೆನಿಸಿತು. ಇನ್ನಷ್ಟು ಭಕ್ತಿಯಿಂದ ಹಾಡಲಾರಂಭಿಸಿದರು "ರಂಗಾ, ವಿಠಲಾ, ಎಲ್ಲಿ ಮರೆಯಾದೆ? ಏಕೇ ದೂರಾದೆ?...." ಎಂದು ಭಕ್ತಿ ಆವೇಶದಿಂದ ಪಾಂಡುರಂಗ ವಿಠಲನನ್ನು ಕರೆದು ಕಡೆಗೆ ಅವನೊಂದಿಗೆ ರಂಗಛಾಯೆಗೆ ಹೊರಟರು.
ಪಿ.ಬಿ. ಎಸ್ ಹಾಡದ ಹಾಡಿನ ವಸ್ತುಗಳೇ ಇಲ್ಲವೆನ್ನುವಂತಾಗಿದೆ. ಅಷ್ಟು ಹಾಡುಗಳನ್ನು ಕನ್ನಡ ಕುಲಬಾಂಧವರಿಗೆ ನೀಡಿದ್ದಾರೆ. ಕನ್ನಡಾಂಭೆಯೇ ಧನ್ಯಳಾಗಿದ್ದಾಳೆ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ.
ಭಕ್ತಿ ಗೀತೆಗಳಲ್ಲಿ ಭಗವತ್ಲೀಲೆಯೇ ಅಡಗಿರುತಿತ್ತು. ಮೇಲೆ ಬರೆದಂತೆ ಅವರ "ಶರಣು ಶರಣಯ್ಯ ಶರಣು ಬೆನಕ" ಅಂತೂ ಎಲ್ಲರ ಅಚ್ಚು ಮೆಚ್ಚು. ಎಲ್ಲಾರು ಒಂದಾಗಿ ನಿನ್ನ, ನಕ್ಕು ನಮಿಸೋದು ನೋಡೋಕೆ ಚೆನ್ನ ಅಂತ ಹಾಡುತ್ತಿದ್ದರೆ ಸಾಕು ಅಲ್ಲಿ ಪ್ರೀತಿ, ಭಕ್ತಿ, ಶ್ರದ್ಧೆ ವಿನಾಯಕನ ಮೇಲೆ ಒಟ್ಟಿಗೇ ಉಂಟುಮಾಡುತ್ತೆ. ಪಿ.ಬಿ.ಎಸ್ ಅವರು ಭಕ್ತಿ ಭಾವವನ್ನು ಹೇಗೆ ತರಿಸೋದು ಹಾಡಿನಲ್ಲಿ, ಅದನ್ನು ಹೇಗೆ ಹಾಡೊದು ಅಂತ ತೋರಿಸಿಕೊಟ್ಟಿದ್ದಾರೆ. ಗಣೇಶ ಎಲ್ಲೇ ಹೊರಟಿರಲಿ, ಅಲ್ಲಿಗೆ ಧಾವಿಸಬೇಕು, ಹಾಗೆ ಕರೆದಿದ್ದಾರೆ. ಪ್ರತೀ ಹಬ್ಬ - ಹುಣ್ಣಿಮೆ, ಶಾಲಾ ದಿನಗಳ ಆಚರಣೆ, ಮತ್ತಿತರ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಹಾಡಾಗಿ ಹೇಳಿದ್ದು ಲೆಕ್ಕ ವಿಲ್ಲದಷ್ಟು. ಮೊನ್ನೆತಾನೆ ರಾಗ ಸಂಗೀತ ಸಂಧ್ಯಾದಲ್ಲೂ ಇದನ್ನು ಕೇಳಿ ಎಲ್ಲರೂ ಅವರೊಡನೆ ಹಾಡಿ ಆನಂದಿಸಿದ್ದಾರೆ. ರಂಗಾ ವಿಠಲಾ ..ಏಲ್ಲಿ ಮರಯಾದೆ ಅಂತೂ ಕಥೆಯನ್ನೇ ಹೇಳಿ, ಕಂಬನಿ ಬರಿಸುತ್ತೆ. ಅಷ್ಟು ಭಕ್ತಿ ಭಾವದಿಂದ ತುಂಬಿದ ಭಾವುಕತೆ ಅದರಲ್ಲಿದೆ. ಇದಲ್ಲದೇ "ಕಾಪಾಡು ಶ್ರೀ ಸತ್ಯನಾರಾಯಣ, ಪನ್ನಗ ಶಯನಾ..., ಹರಿನಾಮವೇ ಚಂದಾ, ತೂಗುವೇ ರಂಗನಾ ತೂಗುವೇ ಕೃಷ್ಣನಾ, ಇನ್ನೂ ಹಲವಾರು ಭಕ್ತಿಗೀತೆಗಳನ್ನು ನಮಗೆ ನೀಡಿದ್ದಾರೆ. ಭಕ್ತಿ ಸೂಸುವ ಇತರ ಗೀತೆಗಳಾದ ."ಈ ಲೋಕವೆಲ್ಲಾ ನೀನೇ ಇರುವ ಪೂಜಾ ಮಂದಿರ..", ಭಗವಂತ ಕೈಕೊಟ್ಟ..., ಗೊಂಬೆಯಾಟವಯ್ಯ, ಆ ದೇವನಾಡಿದ ...ಇವೂ ಕೂಡ ಭಕ್ತಿ ಭಾವವನ್ನು ಬಿತ್ತರಿಸುವಲ್ಲಿ ಯಶಸ್ವಿಯಾಗಿವೆ.
ಭಕ್ತಿಯಿಂದ ದೇಶಭಕ್ತಿಗೆ, ಕನ್ನಡನಾಡಿನ ಒಲುಮೆ, ಸಿರಿ, ಸಂಪತ್ತು ಮತ್ತು ನಾಡಹಬ್ಬದ ದಾರಿಯಲ್ಲಿ ಪಯಣಿಸಿದರೆ...........
ದಾರಿಯುದ್ದಕ್ಕೂ ದೇಶಪ್ರೇಮ, ಕನ್ನಡನಾಡಿನ ಪ್ರೀತಿ, ಸೌರಭ, ಪ್ರೇಮದ ಉಸಿರಿನಲಿ ಉಲಿದ ಉಲಿಗಳು ಕಾಣಬರುತ್ತೆ. ಹೊಸ ಮನೋಲ್ಲಾಸ ಅನುಭವ ಉಂಟಾಗುತ್ತದೆ.
ಮೊದಲನೆಯದಾಗಿ "ಬಾ ತಾಯೆ ಭಾರತಿಯೆ ಭಾವ ಭಾಗೀರತಿಯೆ..." ಯಾರಿಗೆ ಗೊತ್ತಿಲ್ಲ, ಯಾರು ಕೇಳಿಲ್ಲ?, ಅದನ್ನು ನಾನು ಕೇಳೇ ಇಲ್ಲ. ಅರ್ಥಾತ್ ಎಲ್ಲರೂ ಕೇಳಿ, ಆನಂದಿಸಿರುವ ಭವ್ಯ ಭಾರತವನ್ನು ಕಹಳೆ ಊದಿ ಕರೆದಂತಿದೆ. ಈ ಬರಹ ಇಲ್ಲೇ ಬಿಟ್ಟು ಒಂದು ಸಲ ಕೇಳೋಣವೆನ್ನಿಸುತಿದೆ. ಮಧುರವಾದ ಈ ಹಾಡನ್ನು ಪಿ.ಬಿ.ಎಸ್ ಕಂಠಸಿರಿಯಲ್ಲಿ ಆಲಿಸುತ್ತಿದ್ದರೆ, ಯಾರಿಗಾದರೂ ದೇಶ ಪ್ರೇಮದ ಭಕ್ತಿ, ಭಾವುಕತೆ ಬಂಧಿಸಿ ಹಿಡಿದಿಡಿಸುವುದರಲ್ಲಿ ಸಂಶಯವೇ ಇಲ್ಲ. "ಇಳಿದು ಬಾ ತಾಯೇ ಇಳಿದು ಬಾ, ಹರನ ಜಡೆಯಿಂದ ಹರಿಯ ಅಡಿಯಿಂದ..." ದೇಶಭಕ್ತಿಯ ಜೊತೆ, ದಿವ್ಯ ಭಕ್ತಿಯನ್ನೂ ಸೂಸುವ, ಪಂಚತತ್ವಗಳನ್ನೂ ಪರಿಚಯಿಸುವ ಈ ಕೃತಿ ದೇವಿಯ ಆದಿಶಕ್ತಿಯ ಪ್ರತೀಕವಾಗಿದೆ. ಭಾವೋಲ್ಲಾಸದೊಂದಿಗೆ ಮನೋಲ್ಲಾಸವನ್ನೂ ಪರಿಣಮಿಸುವುದು. ’ಕನ್ನಡನಾಡಿನ ವೀರರ ಮಣಿಯ ಗಂಡು ಭೂಮಿಯ ವೀರ ನಾಡಿನ ಚರಿತೆಯ’ನ್ನು ಪಿ.ಬಿ. ಎಸ್ ಎಷ್ಟು ಚೆನ್ನಾಗಿ ಹಾಡಿದರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ನಾಡಹಬ್ಬವನ್ನು ರಸವತ್ತಾಗಿ ಹಾಡಿ ತೋರಿಸಿದ ಗೀತೆ " ಮೈಸೂರು ದಸರಾ ಎಷ್ಟೊಂದು ಸುಂದರಾ...". "ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ...."ಕಷ್ಟಗಳ ಮಳೆಯಿಂದ ನಮ್ಮನ್ನೆಲ್ಲಾ ಕಾಪಾಡು ಎಂದು ಕೇಳಿಕೊಂಡ ಗೀತೆ ಇದಾಗಿದೆ. ಇನ್ನೂ ಹಲವಾರು ದೇಶಭಕ್ತಿ, ನಾಡಭಕ್ತಿ ಗೀತೆಗಳ ರಸದೌತಣವನ್ನೇ ಪಿ. ಬಿ. ಎಸ್ ಅವರು ನಮಗೆ ನೀಡಿದ್ದಾರೆ, ಅವು ಸರ್ವಕಾಲಕ್ಕೂ ಸಕಾಲಿಕವಾಗಿವೆ: ಹಾಗೂ ಅಮರವಾಗಿರುವಲ್ಲಿ ನಿಸ್ಸಂಶಯವಾಗಿದೆ.
ಪ್ರಣಯಣದ ದಾರಿಯಲ್ಲಿ ಪಯಣಿಸುವ ಮೊದಲು ಕಷ್ಟಗಳನ್ನು ಪರಿಹರಿಸೋಣ. ಏನಂತೀರ?
"ದೀನ ನಾ ಬಂದಿರುವೆ...." ಇದು ಭಾವ ಬಿಂದುಗಳನ್ನು (ಕಂಬನಿ) ಕಣ್ಣಲ್ಲಿ ಹರಿಸುವಲ್ಲಿ ಬಿಲ್ಕುಲ್ ಸತ್ಯ. ಎಷ್ಟು ಭಾವನೆ ಭರಿತವಾಗಿದೆ ಎಂದರೆ ಕಣ್ಣೀರೇ ಇದಕ್ಕೆ ಸಾಕ್ಷಿಯಾಗಿದೆ. ಕಣ್ಣೀರು ಬರಲಿಲ್ಲವಾದರೆ ಇದಕ್ಕನುಗುಣವಾದ ಭಾವ ಹಾಡುವುದರಲ್ಲಿರಲಿಲ್ಲ ಎಂದಲ್ಲವೇ?
ಮುಂದುವರೆಯುವುದು........
Comments
ಪಿ.ಬಿ.ಎಸ್ ಅವರ ಬಗ್ಗೆ ಲೇಖನ
ಡಾ ಮೀನಾ ಸುಬ್ಬರಾವ ರೇ, ಪಿ ಬಿ
In reply to ಡಾ ಮೀನಾ ಸುಬ್ಬರಾವ ರೇ, ಪಿ ಬಿ by lpitnal@gmail.com
ನಮಸ್ಕಾರ, ನಿಮ್ಮ ಹೆಸರು
In reply to ನಮಸ್ಕಾರ, ನಿಮ್ಮ ಹೆಸರು by rasikathe
ಕ್ಷಮೆಇರಲಿ, ಡಾ ಮೀನಾ ರವರೇ,
ನಮಸ್ಕಾರ ಮೀನಾ,
In reply to ನಮಸ್ಕಾರ ಮೀನಾ, by ramvani
ನಮಸ್ಕಾರ ವಾಣಿಯವರೆ,
In reply to ನಮಸ್ಕಾರ ಮೀನಾ, by ramvani
ನಮಸ್ಕಾರ ವಾಣಿಯವರೆ,
In reply to ನಮಸ್ಕಾರ ಮೀನಾ, by ramvani
ಪರಿಛಯಕ್ಕೆ ನನ್ನಿ,
ಮೂಷಿಕ ವಾಹನ ಮೋದಕ ಹಸ್ತಾ, ಚಾಮರ
In reply to ಮೂಷಿಕ ವಾಹನ ಮೋದಕ ಹಸ್ತಾ, ಚಾಮರ by mannu
ಮನ್ನು ಅವರಿಗೆ ಧನ್ಯವಾದಗಳು!
Olle lekhana
In reply to Olle lekhana by dvg_shiva
ತಪ್ಪು ತಿದ್ದಿದ್ದಕ್ಕೆ ಧನ್ಯವಾದ
In reply to Olle lekhana by dvg_shiva
ತಪ್ಪು ತಿದ್ದಿದ್ದಕ್ಕೆ ಧನ್ಯವಾದ
In reply to ತಪ್ಪು ತಿದ್ದಿದ್ದಕ್ಕೆ ಧನ್ಯವಾದ by rasikathe
ದೀನ ನಾ ಬಂದಿರುವೆ ಹಾಡಿರುವುದು ಪಿ
In reply to ದೀನ ನಾ ಬಂದಿರುವೆ ಹಾಡಿರುವುದು ಪಿ by bhalle
ಲಕ್ಷ್ಮಣ ಸಂಗೀತಗಾರನಾಗುವವರೆಗೂ ಪಿ
In reply to ದೀನ ನಾ ಬಂದಿರುವೆ ಹಾಡಿರುವುದು ಪಿ by bhalle
ಭಲ್ಲೆ ಯವರೇ , ಭಲೇ !...ಚುರುಕಾಗಿ
ಒಬ್ಬ ಗಾನಗಾರುಡಿಗನಿಗೆ
In reply to ಒಬ್ಬ ಗಾನಗಾರುಡಿಗನಿಗೆ by makara
ಮಕರ ಅವರೆ, ಧನ್ಯವಾದಗಳು! ಮೀನಾ
In reply to ಒಬ್ಬ ಗಾನಗಾರುಡಿಗನಿಗೆ by makara
ಮಕರ ಅವರೆ, ಧನ್ಯವಾದಗಳು! ಮೀನಾ
In reply to ಒಬ್ಬ ಗಾನಗಾರುಡಿಗನಿಗೆ by makara
ಮಕರ ಅವರೆ, ಧನ್ಯವಾದಗಳು! ಮೀನಾ