ಬಿಗ್ ಬಾಸ್ ಮತ್ತು ಫಿಂಗರ್ ಚಿಪ್ಸ್
" ಆಲೂಗಡ್ಡೆ ಇದೆಯೇನೇ..?"
" ಇದೆಯಲ್ವಾ ನಿನ್ನೆ ತಾನೆ ನೀವೇ ತಂದದ್ದು "
" ಹೌದಲ್ವಾ , ದೊಡ್ಡ ದೊಡ್ಡ 5 ಆಲೂಗಡ್ಡೆಯನ್ನು ತೊಳೆದಿಡು ಫಿಂಗರ್ ಚಿಪ್ಸ್ ಮಾಡುತ್ತೇನೆ "
" ಬೇಡಾ "
" !!!"
ಏನೋ ಕಳೆದ ಬಾರಿ ಕೇಸರಿ ಬಾತ್ ಮಾಡಲು ಹೋಗಿ ಊರ್ಣಿ ಬಾತ್ ಆಯಿತು. ಒಂದೇ ಒಂದು ತಪ್ಪು ಮಾಡಿದ್ದಕ್ಕೆ ನಳಪಾಕ ತಜ್ಞನಿಗೆ ಅವಮಾನ ಮಾಡುವುದೇ!?
" ತೆಂಡೂಲ್ಕರ್ ರನ್ ಹೊಡೆಯುವುದನ್ನು ಮರೆತರೂ ತಂಡದಲ್ಲಿಟ್ಟುಕೊಳ್ಳುತ್ತಾರೆ ..... ನಾನು ಮಾಡಿದ ಒಂದೇ ಒಂದು ತಪ್ಪಿಗೆ ಔಟಾ ? "
" ಹಾಗಲ್ರೀ ಒಂದೋ ನೀವು ಬಿಗ್ ಬಾಸ್ ನೋಡಿ - ಅಥವಾ ಅಡುಗೆ ಮಾಡಿ. ಎರಡೂ ಒಟ್ಟಿಗೆ ಮಾಡುವುದು ಬೇಡ " ಅಂದಳು ನನ್ನಾಕೆ .
ನಾನು ಮರು ಉತ್ತರ ಕೊಡುವ ಮೊದಲೇ, ನಡುವೆ ಪ್ರವೇಶಿಸಿದ ನನ್ನ ಮಗಳು, " ಅಪ್ಪಾ ನೀವು ಟೀವಿ ನೋಡಿ ನಾನು ಫಿಂಗರ್ ಚಿಪ್ಸ್ ಮಾಡುತ್ತೇನೆ " ಎಂದು ಹೊತ್ತಿಕೊಳ್ಳಬಹುದಾಗಿದ್ದ ಜಗಳದ ಕಿಡಿಯನ್ನು ತಣ್ಣಗಾಗಿಸಿದಳು .
ಈ ಪವರ್ ಕಟ್ ನಿಂದಾಗಿ ನನಗೆ ದಿನವೂ ' ಬಿಗ್ ಬಾಸ್ ' ನೋಡಲಾಗುತ್ತಿಲ್ಲ. ಅದಕ್ಕೆ ಆದಿತ್ಯವಾರ ಹಗಲಿನಲ್ಲಿ ಬಿಗ್ ಬಾಸ್ ನೋಡುತ್ತೇನೆ . ಅದೇ ನಮ್ಮ ಮನೆಯ "ಬಿಗ್ ಬಾಸ್"ಗೆ ಹೊಟ್ಟೆಕಿಚ್ಚು .
ಅಲ್ರೀ, ಅದರಲ್ಲಿ ಹೆಣ್ಣು ಮಕ್ಕಳು ಚಿಕ್ಕ ಪುಟ್ಟ ಬಟ್ಟೆ ಹಾಕೊಂಡು ವೈಯ್ಯಾರ ಮಾಡುತ್ತಾರೆ ಎಂದೆಲ್ಲಾ ದೂರುತ್ತಾರೆ .
ಅವರು ಶ್ರೀಮಂತರು , ದೊಡ್ಡವರು ..... ಅವರು ಮನೆಯಲ್ಲಿರೋದೇ ಹಾಗೆ. ಅದೇ ಹಿಂದಿ ಧಾರವಾಹಿಗಳಲ್ಲಿ -ಒಂಬತ್ತು ಮೊಳ ಸೀರೆ, ಕೈತುಂಬಾ ಬಳೆ ಇತ್ಯಾದಿ ಹಾಕಿಕೊಂಡೇ ಮಲಗುವರು. ಬೆಳಗ್ಗೆ ಎದ್ದಾಗ ಆಗ ತಾನೇ ಬ್ಯೂಟಿ ಪಾರ್ಲರ್ನಿಂದ ಬಂದಂತೆ ಇರುತ್ತಾರೆ..ಒಂದು ಕೂದಲೂ ಆಚೀಚೆ ಆಗಿರುವುದಿಲ್ಲ- ಇಂತಹ ಸೀರಿಯಲ್ಗಳನ್ನು ಎಲ್ಲಾ ಮನೆಯಲ್ಲಿ ನಡೆಯುವಂತಹದ್ದು ಅನ್ನುತ್ತಾರೆ! ನೈಜ ಅದಲ್ಲ, ಬಿಗ್ ಬಾಸ್ನಲ್ಲಿ ನಡೆಯುವುದು ನೈಜ..ಎಲ್ಲೋ ಸ್ವಲ್ಪ ರುಚಿಗೆ ಉಪ್ಪು-ಖಾರ ಸೇರಿಸಿರಬಹುದು.
ಒಂದು ನಿಮಿಷ... ನನ್ನ ಮಗಳು ಫಿಂಗರ್ ಚಿಪ್ಸ್ ಮಾಡಲು ಹೊರಟಿದ್ದಾಳೆ ... ಎಲ್ಲಿಯವರೆಗೆ ಮುಟ್ಟಿತು ಎಂದು ನೋಡಿ ಬರುತ್ತೇನೆ . ಅಲ್ಲಿಯವರೆಗು ಒಂದು ಸಣ್ಣ ವಿರಾಮ. ಎಲ್ಲೂ ಹೋಗಬೇಡಿ. ಸಂಪದ ಓದುತ್ತಾ ಇರಿ.... ಬಿಗ್ ಬಾಸ್...... ಬಿಗ್ ಬಾಸ್.......
(ಇನ್ನೂ ಇದೆ)
Comments
ಗಣೇಶರೆ, ಇದು ಅನ್ಯಾಯ. ಅಕ್ರಮ.
ಗಣೇಶರೆ, ಇದು ಅನ್ಯಾಯ. ಅಕ್ರಮ. ಬರಹವನ್ನು "ಇನ್ನೂ ಇದೆ" ಎ0ಬ ಟಿಪ್ಪಣಿಯೊ0ದಿಗೆ ಅರ್ಧಕ್ಕೇ ನಿಲ್ಲಿಸಿದಿರಲ್ಲಾ? ಮು0ದಿನ ಭಾಗ ಓದಲು ನಾನು ಇನ್ನೆಶ್ಹ್ಟು ದಿನ ಕಾಯಬೇಕು?
In reply to ಗಣೇಶರೆ, ಇದು ಅನ್ಯಾಯ. ಅಕ್ರಮ. by sasi.hebbar
ಹೌದು ಗಣೇಶಣ್ಣ, ಮುಂದೇನಾಯ್ತು? ..
ಹೌದು ಗಣೇಶಣ್ಣ, ಮುಂದೇನಾಯ್ತು? ........ ಪಾಕಶಾಲೆಯಿಂದ ಚಿಪ್ಸ್ ready ಆಯ್ತ?
ನಮಸ್ಕಾಗಳು, ಗಣೇಶಣ್ಣ ರವರ ಮಗಳು
ನಮಸ್ಕಾಗಳು, ಗಣೇಶಣ್ಣ ರವರ ಮಗಳು ಫಿಂಗರ್ ಚಿಪ್ಸ್ ಮಾಡಲು ಇನ್ನ ಒ0ದು ದಿನ ಬೇಕಾಗ ಬಹುದು ನಮಗೆಲ್ಲಾ ಕಳಿಸಬೇಕಲ್ಲ..... ನೀಳಾ
ಸರಿಯಾಗಿ ಹೇಳಿದ್ದಾರೆ ಬಿಗ್ ಬಾಸ್
ಸರಿಯಾಗಿ ಹೇಳಿದ್ದಾರೆ ಬಿಗ್ ಬಾಸ್ ನೋಡಿ ಇಲ್ಲ ಚಿಪ್ಸ್ ಮಾಡಿ ಎರಡು ಒಟ್ಟಿಗೆ ಮಾಡಬೇಡಿ ಮತ್ತೆ ಊರ್ಣಿ ಬಾತ್ ಆಗುತ್ತೆ ಅಂತ , ನೀವು ಕೇಳಲ್ಲ, ಅಂದ ಹಾಗೆ ಬಿಗ್ ಬಾಸ್ ಆಕ್ಟಿಂಗ್ ಬಿಟ್ಟು ಮದ್ಯೆ ಮದ್ಯೆ ಮನೆಗೆ ಹೇಗೆ ಬರುವಿರಿ ? ನಾನು ನಿಮ್ಮನ್ನೆ ಭ್ರಹ್ಮಾಂಡ ಗುರು ಇರಬಹುದು ಅಂತ ಭಾವಿಸಿದ್ದೆ, ನಿಮ್ಮ ಹಾಗು ನರ್ಸ್ ವಿಷಯ ಮನೆಯವರಿಗೆ ಗೊತ್ತಿಲ್ಲ ತಾನೆ ? ಮನೆಯವರಿಗೆ ಗೊತ್ತಾದರು ಪರವಾಗಿಲ್ಲ, ಆ ಇನ್ನೊಬ್ಬಾಕೆ ಇದ್ದಾಳಲ್ಲ ,.......... ಅವಳಿಗೆ ತಿಳಿಯದಿದ್ದಲ್ಲಿ ಸಾಕು ಬಿಡಿ
In reply to ಸರಿಯಾಗಿ ಹೇಳಿದ್ದಾರೆ ಬಿಗ್ ಬಾಸ್ by partha1059
>>>ಅಂದ ಹಾಗೆ ಬಿಗ್ ಬಾಸ್
>>>ಅಂದ ಹಾಗೆ ಬಿಗ್ ಬಾಸ್ ಆಕ್ಟಿಂಗ್ ಬಿಟ್ಟು ಮದ್ಯೆ ಮದ್ಯೆ ಮನೆಗೆ ಹೇಗೆ ಬರುವಿರಿ ?-ಗುಟ್ಟಿನ ವಿಷಯ ಪಾರ್ಥರೆ, ಜಗಜ್ಜಾಹೀರು ಮಾಡಬೇಡಿ. ಅಲ್ಲಿ ಕೊಡೋ ಆಹಾರ ನಮಗೆಲ್ಲಿ ಸಾಕಾಗ್ತದೆ..ಮುಂ%*%॒ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ. ಅಲ್ಲೊಂದು ನಮಗಾಗಿ ಸ್ಪೆಷಲ್ ಬಾಗಿಲಿದೆ. ಹಸಿವಾದಾಗಲೆಲ್ಲಾ ಮನೆಗೆ ಹೋಗಿ ಹೊಟ್ಟೆತುಂಬಾ ತಿಂದು ಬಂದು, ಅಲ್ಲಿ ತಿನ್ನುವ ಶಾಸ್ತ್ರ ಮಾಡುವೆ. ಮುಂಽ*%॑ಕ್ಕೆ ಉಪದೇಶ ನೀಡಲು, ನಿದ್ರೆ ಮಾಡಲು ಮಾತ್ರ ಅಲ್ಲಿರುವೆ.:) ಇನ್ನು ಉಳಿದ ವಿಷ್ಯ(ನೀವು ಮೇಲೆ ಹೇಳಿದ್ರಲ್ಲಿ)- ಎಲ್ಲಾ ಪಾರ್ಥಸಾರಥಿಯ ಲೀಲೆ-ಸೂತ್ರಧಾರಿ ಆತ,ಪಾತ್ರಧಾರಿ ನಾವು.:); ಮೆಚ್ಚಿ ಪ್ರತಿಕ್ರಿಯೆ ನೀಡಿದ ಹೆಬ್ಬಾರರು, ಸುಮ ನಾಡಿಗ್, ನೀಳಾದೇವಿ, ಇಟ್ನಾಳರು, ಪಾರ್ಥರಿಗೆ ನನ್ನಿ.
In reply to >>>ಅಂದ ಹಾಗೆ ಬಿಗ್ ಬಾಸ್ by ಗಣೇಶ
ನಾನು ಗುಟ್ಟಿನ ವಿಷಯ ಹೇಳುವೆ ಅದು
ನಾನು ಗುಟ್ಟಿನ ವಿಷಯ ಹೇಳುವೆ ಅದು ನಡೆಯುತ್ತಿರುವುದು ಮಂಬಯಿಯಲ್ಲಿ, ನೀವು ಹಾಗೆಲ್ಲ ಮನೆಗೆ ಬಂದು ಹೋಗಲಾಗದು. ಹಾಗೆ ನರೇಂದ್ರ ಶರ್ಮರ ಬಗ್ಗೆ ಬರೆದಿರುವ ನನ್ನ ಲೇಖನ ಓದಿ (ಬಿಗ್ ಬಾಸ್ ಹಾಗು ಬ್ರಹ್ಮಾಂಡ ಶರ್ಮರು) ನಿಮ್ಮ ಬಗ್ಗೆಮೆಚ್ಚುಗೆಯ ನುಡಿ ಇದೆ
ಗಣೇಶರೇ, ಲಕ್ಷ್ಮೀಕಾಂತ ರ ವಂದನೆ ,
ಗಣೇಶರೇ, ಲಕ್ಷ್ಮೀಕಾಂತ ರ ವಂದನೆ , ಬಿಗ್ ಬಾಸ್ ನೊಂದಿಗೆ ನೋಡುತ್ತ ಕೂರುವ ತಯಾರಿಯ ಹೊರಕಥೆಯೊಂದಿಗೆ ಸಾಗಲಿ ಸರ್ ಪಯಣ.