ಕಂಬೈಂಡ್ ಫ್ಯಾಮಿಲಿ - ಲಕ್ಷ್ಮೀಕಾಂತ ಇಟ್ನಾಳ
ಕಂಬೈನ್ಡ್ ಫ್ಯಾಮಿಲಿ!
- ಲಕ್ಷೀಕಾಂತ ಇಟ್ನಾಳ
ವಧು ವರರ ಸಮಾವೇಷವೊಂದರÀಲ್ಲಿ ಗಂಡೊಂದು ಹೆಣ್ಣೊಬ್ಬಳನ್ನು ಸೆಲೆಕ್ಟ್ ಮಾಡಿಕೊಂಡು ಗಂಡಿನ ಕಡೆಯವರು ಹುಡುಗನೊಂದಿಗೆ ಅವಳನ್ನು ಸಂಪರ್ಕಿಸಿದರು.
ತನ್ನನ್ನು ಸೆಲೆಕ್ಟ್ ಮಾಡುವಳೋ ಇಲ್ಲವೋ ಎಂದು ಅಳುಕುತ್ತಲೇ ಇತ್ತು ಗಂಡು.
ಅವಳಿಂದ ಗಂಡಿನ ಪರೀಕ್ಷೆ ಶುರು.
ಅವಳು: ಮನೆಯಲ್ಲಿ ಯಾರಾರಿದ್ದೀರಿ?
ಅವನು : ನಾನು, ನನ್ನ ಅಪ್ಪ ಅಮ್ಮ, ಮತ್ತೆ ನನ್ನ ಪುಟ್ಟ ತಂಗಿ.
ಅವಳು : ಓ! ನಿಮ್ಮದು ಕಂಬೈಂಡ್ ಫ್ಯಾಮಿಲೀನಾ?
ರಿಸಲ್ಟ್ : ಹುಡುಗ ನಾಪಾಸು!
Rating
Comments
ನಮಸ್ಕಾರ ಲಕ್ಷ್ಮಿಕಾಂತ
ನಮಸ್ಕಾರ ಲಕ್ಷ್ಮಿಕಾಂತ ಇಟ್ನಾಳರಿಗೆ,
ಚೆನ್ನಾಗಿದೆ. ಸದ್ಯ ಗಂಡ ಹೆಂಡ್ತಿ ಜೊತೆಲಿದ್ರೆ ಕಂಬೈಂಡ್ ಫ್ಯಾಮಿಲಿನಾ ಅನ್ನೊ ಕಾಲ ಬರದೆ ಇದ್ರೆ ಸಾಕು :-)
ನಾಗೇಶ ಮೈಸೂರು, ಸಿಂಗಾಪುರದಿಂದ
ನಾಗೇಶ ರವರೇ, ಲಕ್ಷ್ಮೀಕಾಂತ ರ
ನಾಗೇಶ ರವರೇ, ಲಕ್ಷ್ಮೀಕಾಂತ ರ ವಂದನೆಗಳು. ತಾವಂದಂತೆ ದಿನಗಳು ಬರಲೂ ಬಹುದೇನೋ! ಹ ಹ್ಹ ಹ್ಹ, ಧನ್ಯವಾದ ಸರ್, ಪ್ರತಿಕ್ರಿಯೆಗೆ.
:))
:))
ಪಾರ್ಥರೇ, ಧನ್ಯವಾದ.
ಪಾರ್ಥರೇ, ಧನ್ಯವಾದ.