ಬಿಗ್ ಬಾಸ್ ಮತ್ತು ಭ್ರಹ್ಮಾಂಡ ಶರ್ಮರು
ಬಿಗ್ ಬಾಸ್ ಮತ್ತು ಭ್ರಹ್ಮಾಂಡ ಶರ್ಮರು
=======================
ಬಿಗ್ ಬಾಸ್ ಈಚೆಗೆ ಎಲ್ಲರ ಬಾಯಲ್ಲಿ ಇರುವ ಪದ . ಇವರಿಗೆ ಇಂತ ಸೀರಿಯಲ್ ಗೆ ಒಂದು ಕನ್ನಡ ಶೀರ್ಷಿಕೆಯು ಸಿಗಲ್ವೆ ಎಂದು ಬಾಯಲ್ಲಿ ಅನ್ನುತ್ತಲೆ ಎಲ್ಲರು ಅದೆ ಸೀರಿಯಲ್ ನಲ್ಲಿ ತಲ್ಲೀನ. ಸಂಪದದಲ್ಲಿ ಒಂದೆರಡು ಲೇಖನಗಳು ಬಂದಾಯ್ತು.
ಕನ್ನಡದಲ್ಲಿ ಕ್ರೆಯಿಟಿವಿಟಿನೆ ಇಲ್ಲ ಎಲ್ಲವನ್ನು ಹೊರಗಿನಿಂದ ತಂದು ಎರಕ ಹೂಯ್ತಾರೆ ಅಂತ ರೆಮೇಕ್ ಸಿನಿಮಾಗಳನ್ನು ನಿಂದಿಸುತ್ತೇವೆ, ಆದರೆ ಸೀರಿಯಲ್ ಗಳಾದರು ಏನು, ಎಲ್ಲೊ ವಿದೇಶದಲ್ಲಿ ತೆಗೆದ 'ಹೊಸ ಯೋಚನೆ' ಗಳನ್ನು ಹಿಂದಿಯವರು ಕದ್ದು ಹಿಂದಿಗೆ ತರುತ್ತಾರೆ, ಅದನ್ನು 'ಜೀ ಪ್ರಸಾದ' ಎನ್ನುತ್ತ ಕನ್ನಡದಲ್ಲಿ ತೆಗೆಯುತ್ತಾರೆ, ನೂರಾರು ಕೋಟಿ ಖರ್ಚು ಮಾಡಿ ಹೊಸ ಚಾನೆಲ್ ಸ್ಥಾಪನೆಯಾಗುತ್ತೆ, ಹಾಗೆ ಹತ್ತಾರು ಕೋಟಿ ಖರ್ಚು ಮಾಡಿ ಕಾರ್ಯಕ್ರಮ ರೂಪಿಸುವ ಮಂದಿಗೆ ಸ್ಥಳಿಯ ಸೊಗಡಿನ ಕಾರ್ಯಕ್ರಮ ರೂಪಿಸಲು ಮಾತ್ರ ಆಗಲ್ಲ ಅನ್ನುವುದು ಅರ್ಥವಾಗದ ವಿಷಯ.
ಇಷ್ಟೆಲ್ಲ ವಿಷಯವಿದ್ದರು ಬಿಗ್ ಬಾಸ್ ಅನ್ನುವ ಈ ಕಾರ್ಯಕ್ರಮದ 'ಕಾನ್ಸೆಪ್ಟ್' (ಅಲೋಚನೆ) ನನಗೆ ತುಂಬಾನೆ ಇಷ್ಟವಾಯಿತು. ಹತ್ತಾರು ವಿವಿದ ಮನಸಿನ ಮನುಷ್ಯರನ್ನು ಒಟ್ಟಿಗೆ ಕೂಡಿಹಾಕಿ, ಅವರ ನಡುವೆ ನಡೆಯುವ ಮಂಥನಗಳನ್ನು ಸೆರೆಹಿಡಿಯುವ ವಿಚಾರ ಉತ್ತಮವಾದದ್ದೆ, ಅಂದರೆ ನನಗೆ ಬಿಗ್ ಬಾಸ್ ಇಷ್ಟ ಆಯಿತು ಅಂತೇನು ಅಲ್ಲ, ಅದರ ಹಿಂದಿರುವ 'ಕಾನ್ಸೆಪ್ಟ್ ' ಇಷ್ಟವಾಯಿತು.
ಅಲ್ಲಿ ಒಬ್ಬರಿಗೊಬ್ಬರು ಕಿತ್ತಾಡುತ್ತ, ಅವರ ನಡುವೆ ನಡೆಯುವ ಘರ್ಷಣೆಗಳನ್ನು ನೋಡುವಾಗ, ಮದ್ಯೆ ಮದ್ಯೆ ಅವರ ಘೋಷಣೆ ಗಮನಿಸಿ 'ಬಿಗ್ ಬಾಸ್ ಈಗ ಬೆಂಕಿ ಹಚ್ಚಿದ್ದಾರೆ, ಒಳಗೆ ಬಿಸಿ ಜಾಸ್ತಿಯಾಗಿದೆ, ಮುಂದೆ ನೋಡೋಣ' ಎನ್ನುವ ರೀತಿಯ ಮಾತುಗಳು,ಗಮನಿಸುವಾಗ , ಹಿಂದೆಲ್ಲ ರಾಜರುಗಳು ಮರದ ಕಟ ಕಟೆಯ ನಡುವೆ ಮನುಷ್ಯರನ್ನು ಹೋರಾಡಲು ಬಿಟ್ಟು, ಬದುಕಿದವನು ಹೊರಬರುವ ಎನ್ನುವ ರೀತಿಯ ಅಂಗ್ಲ ಸಿನಿಮಾಗಳ ನೆನಪು.
ಇದೆ ಕಾರ್ಯಕ್ರಮವನ್ನೆ, ಋಣಾತ್ಮಕವಾಗಿ ಮಾಡಬಹುದಿತ್ತೇನೊ, ಒಬ್ಬರಿಗೊಬ್ಬರು ಕಿತ್ತಾಡುವ ಬದಲು, ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವ ಬಗೆ ಹೇಗೆಂದು ತೋರಿಸಬಹುದಿತ್ತು, ಹೊರಗೆ ಹೋಗವರನ್ನು ನಾಮಿನೇಟ್ ಮಾಡುವ ಬದಲು, ಒಳಗೆ ಯಾರಿರಬೇಕೆಂದು ಅವರೆ ನಾಮಿನೇಟ್ ಮಾಡುವಂತೆ ಮಾಡಿದ್ದರೆ, ಚೆನ್ನಾಗಿತ್ತೇನೊ. ಹಾಗೆ ಮತ್ತೊಂದು ಯೋಚನೆ, ಈಗ ಇರುವ ಹದಿಮೂರು ವಿವಾದಿತ ವ್ಯಕ್ತಿಗಳಿಗಿಂತ, ಜೀವನದಲ್ಲಿ ಅಪೂರ್ವವಾದುದ್ದನು ಸಾದಿಸಿ ಸಮಾಜಕ್ಕೆ ಉಪಕಾರಿಯಾದ ಹದಿಮೂರು ಜನರನ್ನು, ವಿವಿದ ಕ್ಷೇತ್ರಗಳಿಂದ ಕರೆತಂದು, ಒಟ್ಟಿಗೆ ಇಟ್ಟು ಅವರ ನಡುವೆ ವಿಚಾರ ಮಂಥನವನ್ನು ತೋರಿಸಿದ್ದರೆ, ಯುವಕರಿಗೆ ದಾರಿದೀಪವಾಗಬಹುದಿತ್ತೇನೊ ....................... ಹಾಗೆ ಮಾಡಿದ್ದರೆ, ಟೀ ಅರ್ ಪಿ ಬಿದ್ದುಹೋಗುತ್ತಿತ್ತು ಬಿಡಿ.
----------------------------------------------------
ಇಷ್ಟಾದರು ಮನುಷ್ಯನ ವ್ಯಕ್ತಿತ್ವ ಗಳನ್ನು ಗಮನಿಸುವಾಗ ಅಚ್ಚರಿ ಮೂಡಿಸುತ್ತದೆ, ಅತಿ ಸಾದಾರಣವಾಗಿ ಒಳಬಂದು ನಿದಾನವಾಗಿ ತಮ್ಮ ವಿಭಿನ್ನ ನಡೆ ನುಡಿಗಳಿಂದ ಎಲ್ಲರ ಗಮನ ಸೆಳೆದು, ಅಲ್ಲಿ ಎಲ್ಲರ ನಡುವು ಸ್ಥಿರಗೊಂಡ ಭ್ರಹ್ಮಾಂಡ ಶರ್ಮರ ಸ್ಥಿರ ವ್ಯಕ್ತಿತ್ವ ಅಚ್ಚರಿ ಹುಟ್ಟಿಸುತ್ತದೆ. ಕೆಲವೊಮ್ಮೆ ಮುಗ್ದವಾಗಿ, ಕೆಲವೊಮ್ಮೆ ದಬ್ಬಾಳಿಕೆಯಂತೆ ಕಾಣುವ, ಅತಿ ಅತ್ಮ ವಿಶ್ಸಾಸ ಹಾಗು ಬೇಕೆದ್ದರೆ ಎಲ್ಲವನ್ನು ಬಿಟ್ಟು ಹೊರಹೋಗಲು ಸಿದ್ದವಾಗುವ ಅವರ ನಡೆನುಡಿ ಎಲ್ಲರು ಮೆಚ್ಚಿದ್ದಾರೆ ಎಂದೆ ಅನ್ನಿಸುತ್ತೆ. 'ಲೇ ಬಾರೆ ಇಲ್ಲಿ' , 'ಸ್ವಲ್ಪ ಬೆನ್ನು ಒತ್ತು' , 'ನಿನಗೆ ಗೊತ್ತಾಗಲ್ಲ ಬಿಡು' ಎಂದು ಎಲ್ಲರನ್ನು ಏಕವಾಗಿ ಏಕವಚನದಲ್ಲಿಯೆ ಕರೆಯುವ ಅವರ ಶೈಲಿ ಮೊದಲಿಗೆ ಕಸಿವಿಸಿ ಅನಿಸಿದರು, ನಂತರ ಎಲ್ಲರು ಹೊಂದಿಕೊಂಡರು, ಒಳಗಿರುವರು, ಅವರನ್ನು ವಿರೋದಿಸಿದವರು ಸಹ 'ಅಪ್ಪಾಜಿ...' ಎಂದು ಕರೆಯುವ ಮಟ್ಟಿಗೆ, ಸಂದಿ ಮಾಡಿಕೊಂಡರು. ಮನೆ ಒಳಗಿನವರಲ್ಲದೆ ಹೊರಗಿನ ಸುಧೀಪ್ ಹಾಗು ಬಿಗ್ ಬಾಸ್ ಸಹ ಅವರ ಮಾತಿಗೆ ಒಗ್ಗಿಕೊಳ್ಳಲೆ ಬೇಕಿತ್ತು.
ಎಂತಹ ಸಂದರ್ಭದಲ್ಲಿಯು ತನ್ನ ಕಾವಿಯನ್ನು ಬಿಟ್ಟು ಬೇರೆ ವಸ್ತ್ರ ಧರಿಸದ, ಅವಶ್ಯಕ ಎನಿಸಿದರೆ ಬಿಗ್ ಬಾಸ್ ಮಾತನ್ನು ಮೀರುವ, ಹಣಕ್ಕಾಗಿಯೆ ಬಂದಿದ್ದರು, ಹಣವನ್ನು ಕೇರ್ ಮಾಡದೆ ಹೊರಹೋಗಲು ಸಿದ್ದವಾಗುವ ಅವರ ದೃಡ ಸ್ವಭಾವ ಸಹ ವಿಚಿತ್ರ ಅನಿಸುತ್ತದೆ
ಮೊದಲವಾರದಲ್ಲಿ ಕೆಲವರು ಮಾಂಸಾಹಾರ ಬಯಸಿದಾಗ, ಶರ್ಮರು ನೇರವಾಗಿ ಬಿಗ್ ಬಾಸ್ ಅನ್ನೆ ಕರೆದು , ತನ್ನ ಇಚ್ಚೆ ತಿಳಿಸಿ, ಅವರು ಅಲ್ಲಿರುವ ತನಕ ಯಾರು ಮಾಂಸಹಾರ ತಿನ್ನಬಾರದು ಎಂದು , ನಿಯಮ ಮಾಡಿಸಿದ್ದು ಸಹ ಅವರ ದೃಡ ಮನಸಿನ ಪ್ರತೀಕ.
ಅಂತಹ ನರೇಂದ್ರ ಶರ್ಮರು ಸ್ವಲ್ಪ ಅಲ್ಲಾಡಿದ್ದು , ಮತ್ತೊಬ್ಬ ಸ್ವಾಮಿ ಕಾಳಿ ಸ್ವಾಮಿ ಒಳಗೆ ಅಡಿ ಇಟ್ಟಾಗ, ಆದರೆ ಆತ ಇವರ ರೀತಿಯ ತೂಕದ ವ್ಯಕ್ತಿತ್ವ ಕಾಪಾಡಿಕೊಳ್ಳಲು ವಿಫಲರಾಗಿ, ಸೊಂಟದ ವಿಷಯ ಬೇಡ, ಎನ್ನುವ ಹಾಡಿಗೆ ನರ್ತಿಸಿ, ಎಲ್ಲರನ್ನು ತನ್ನತ್ತ ಸೆಳೆಯಲು ಹೋಗಿ, ಮತ್ತೊಮ್ಮೆ ವಿವಾದದೊಡನೆ ಹೊರಬಂದರು. ನರೇಂದ್ರ ಶರ್ಮರ ಮೇಲೆ ಟೀ ಅರ್ ಪಿ ಏರುತ್ತಿರುವಾಗ, ಮತ್ತೊಬ್ಬ ಸ್ವಾಮಿಯನ್ನು ಕಳಿಸಿ, ಶರ್ಮರ ಟಿ ಅರ್ ಪಿ ಇಳಿಸಲು ಯತ್ನಿಸಿದ ಬಿಗ್ ಬಾಸ್ ಕ್ರಮ ಸ್ವಲ್ಪ ಅಚ್ಚರಿ ಮೂಡಿಸಿತು.
ಇಷ್ಟಾದರು ಸಹ, ಮತ್ತೆ ಬಿಗ್ ಬಾಸ್ ಮತ್ತೊಂದು ಪ್ರಯತ್ನ ಮಾಡುತ್ತಿದ್ದಾರೆ, ಗಂಭೀರವಾಗಿರಲು ಪ್ರಯತ್ನಪಡುತ್ತಿರುವ ನರೇಂದ್ರರ ವ್ಯಕ್ತಿತ್ವ ಪರೀಕ್ಷೆಗೆ, 'ಕಿಸ್ ಖ್ಯಾತಿಯ' ನರ್ಸ್ ಜಯಮ್ಮನನ್ನು ಗುರುಗಳ ಹೆಸರಿನ ಜೊತೆ ಸೇರಿಸಲು ಪ್ರಯತ್ನ ಪಡುತ್ತಿದ್ದಾರೆ, ಈ ವ್ಯೂಹದಿಂದ ಪುನ ನರೇಂದ್ರ ಶರ್ಮ, ಉರೂಪ್ ಬ್ರಹ್ಮಾಂಡ ಗುರುಗಳು ತಪ್ಪಿಸಿಕೊಳ್ಳುವರೊ ಸಿಕ್ಕಿಕೊಳ್ಳೊವರೊ , ಎನ್ನುವುದು ಅವರ ಮನಸಿನ 'ಗಟ್ಟಿತನದ'ಮೇಲೆ ನಿರ್ದರವಾಗುತ್ತದೆ .
ಅಷ್ಟಕ್ಕು ಅವರು ಏನಾದರು 'ಮುಂಡಾಮೋಚ್ಗಂಡು ಹೋಗಲಿ ಬಿಡಿ' ನಮಗೇನು ಅಲ್ಲವೆ. 'ದರಿದ್ರ ಮುಂಡೇವು' ಎಲ್ಲಾದರು ಹಾಳಾಗಲಿ , ಕಡೇಪಕ್ಷ ಅಲ್ಲಿರುವ ಹೆಣ್ಮಕ್ಕಳಿಗೆ ಸ್ವಲ್ಪ ಬಟ್ಟೆ ಹಾಕ್ಕೊಳ್ಳಿ ಅಂತ ಬಿಗ್ ಬಾಸ್ ಹೇಳಿದ್ರೆ ಸಾಕು, 'ಬಿಗ್ ಬಾಸ್ ' ನೋಡುತ್ತ ಕುಳಿತ ಯಾರ ಮನೆ ಹೆಣ್ಮಕ್ಕಳನ್ನು ಯಾರ ಮನೆಯಲ್ಲಿ ನೋಡಿದರು ಭಯವಾಗುತ್ತೆ.
----------------------------------------------------
ಯಾವಾಗಲು ಶಿಟ್ ಎಂದು ವಿವಿದ ಅಂಗ್ಲಪದಗಳನ್ನು ಬಳಸಿ ಅನ್ನುತ್ತಿದ್ದ ಕಾಲೇಜ್ ಹುಡುಗರಿಗು ಸಹ ಸ್ವಚ್ಚ ಕನ್ನಡ ಪದಗಳಾದ 'ಮುಂಡಾಮೊಚ್ಗಂಡು' 'ದರಿದ್ರ ಮುಂಡೇವು' ಗಳನ್ನು ಖ್ಯಾತಿಗೊಳಿಸಿದ ಬಿಗ್ ಬಾಸ್ ಕನ್ನಡ ಪ್ರೇಮ ಮೆಚ್ಚಲೆ ಬೇಕು
Rating
Comments
ಉತ್ತಮವಾಗಿ ವಿಶ್ಲೇಷಿಸಿದ್ದೀರಿ.
ಉತ್ತಮವಾಗಿ ವಿಶ್ಲೇಷಿಸಿದ್ದೀರಿ. ಪಾರ್ಥರವರೇ, ನಿಮ್ಮ ಅನಿಸಿಕೆಗಳು ಅರ್ಥಪೂರ್ಣ..
In reply to ಉತ್ತಮವಾಗಿ ವಿಶ್ಲೇಷಿಸಿದ್ದೀರಿ. by gnanadev
ವಂದನೆಗಳು ಜ್ಞಾನದೇವ್ ರವರಿಗೆ,
ವಂದನೆಗಳು ಜ್ಞಾನದೇವ್ ರವರಿಗೆ, ತಮ್ಮ ಪ್ರತಿಕ್ರಿಯೆಗೆ
"ಈಗ ಇರುವ ಹದಿಮೂರು ವ್ಯಕ್ತಿಗಳೂ
"ಈಗ ಇರುವ ಹದಿಮೂರು ವ್ಯಕ್ತಿಗಳೂ ವಿವಾದಿತರು" ಎನ್ನುವ ನಿಮ್ಮ ಮಾತಿಗೆ ನನ್ನ ಪ್ರಭಲ ಆಕ್ಷೇಪವಿದೆ, ಹಾಗು
"ಹೊರಗೆ ಹೋಗವರನ್ನು ನಾಮಿನೇಟ್ ಮಾಡುವ ಬದಲು, ಒಳಗೆ ಯಾರಿರಬೇಕೆಂದು ಅವರೆ ನಾಮಿನೇಟ್ ಮಾಡುವಂತೆ ಮಾಡಿದ್ದರೆ"
ಎನ್ನುವ ವಿಚಾರವು ಅಷ್ಟೆ, ಒಳಗೆ ಯಾರಿರಬೇಕೆಂದು ನಾಮಿನೇಟ್ ಮಾಡುವುದು ಪರೊಕ್ಷವಾಗಿ ಹೊರಗೆ ಹೋಗವರನ್ನು ನಾಮಿನೇಟ್ ಮಾಡಿದಂತೆ.
In reply to "ಈಗ ಇರುವ ಹದಿಮೂರು ವ್ಯಕ್ತಿಗಳೂ by amith naik
"ಈಗ ಇರುವ ಹದಿಮೂರು ವ್ಯಕ್ತಿಗಳೂ
"ಈಗ ಇರುವ ಹದಿಮೂರು ವ್ಯಕ್ತಿಗಳೂ ವಿವಾದಿತರು" ಎನ್ನುವ ನಿಮ್ಮ ಮಾತಿಗೆ ನನ್ನ ಪ್ರಭಲ ಆಕ್ಷೇಪವಿದೆ>><>>>
ಆಯಿತು ಬದಲಾಯಿಸಿಕೊಳ್ಳುವೆ 'ವಿವಾದಿತರೆ ಅಧಿಕ ಜನರಿರುವ ಹದಿಮೂರು ಜನ' ಎನ್ನುವೆ :-)) , ಎಲ್ಲರು ವಿವಾದಿತರೆ ಆಗಬೇಕಿಲ್ಲ, ಆದರೆ ಅಲ್ಲಿಂದ ಹೊರಬರುವಾಗ ವಿವಾದಿತರಾಗಗೆ ಹೊರಬರಲಿ ಎಂದು ಹಾರೈಸುವ.
ಹಾಗೆ ನಾಮಿನೇಟ್ ಮಾಡುವ ವಿಚಾರ, ನನಗೆ ಇವರು ಜೊತೆಗೆರಲಿ ಎನ್ನುವುದು ಮನಸಿನ ಪಾಸಿಟೀವ್ ಚಿಂತನೆಯಾದರೆ, ಇವರು ಬೇಡ ಹೊರಗೆ ಕಳಿಸಿ ಎನ್ನುವುದು ಪರೋಕ್ಷವಾದರು, ನೆಗಿಟೀವ್, ಹಾಗು ದ್ವೇಶ ಹೆಚ್ಚುಸುವ, ದ್ವೇಷಪೂರಿತವಾಗಿ ಚಿಂತಿಸುವ ಪರಿಯಾಗಿದೆ ಅನ್ನಿಸಿತು, ಹಾಗಾಗಿ, ಇವರು ಬೇಡ ಅನ್ನುವ ಭಾವಕ್ಕಿಂತ, ಇವರು ಬೇಕು ಇರಲಿ ಎನ್ನುವ ಭಾವ ವಿರಲಿ ಎಂದೆ ಅಷ್ಟೆ.
ತಮ್ಮ ಪ್ರತಿಕ್ರಿಯೆಗೆ ವಂದನೆಗಳು ಹಾಗು ವಿಚಾರದಲ್ಲಿ ಇರುವ ಆಸಕ್ತಿಗೆ ಅಭಿನಂದನೆಗಳು
ಪಾರ್ಥರೇ, ಲಕ್ಷ್ಮೀಕಾಂತ ಇಟ್ನಾಳ ರ
ಪಾರ್ಥರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆ. ಬಿಗ್ ಬಾಸ್ ಮತ್ತು ನರೇಂದ್ರ ಶರ್ಮ ಕುರಿತು ವಿಶ್ಲೇಷಣೆ ಚನ್ನಾಗಿದೆ. ಮೊದ ಮೊದಲು ಅಷ್ಟೊಂದು ಗಮನ ಸೆಳೆಯದವೆರು ಈಗ ತಮ್ಮತ್ತಲೇ ದೃಷ್ಟಿ ಕೇಂದ್ರೀ ಕರಿಸಿಕೊಳ್ಳುತ್ತಿದ್ದಾರೆ. ಎಲ್ಲವು ಸ್ಕೃಪ್ಟೆಡ್ ಅನ್ನಿಸುತ್ತದೆ.
In reply to ಪಾರ್ಥರೇ, ಲಕ್ಷ್ಮೀಕಾಂತ ಇಟ್ನಾಳ ರ by lpitnal@gmail.com
ವ0ದನೆಗಳು ಇಟ್ನಾಳರೆ , ನೀವು
ವ0ದನೆಗಳು ಇಟ್ನಾಳರೆ , ನೀವು ಹೇಳಿರುವ0ತೆ ಪೂರ್ವ ನಿರ್ದಾರಿತ ನಡೆ ನುಡಿಗಳು ಹಾಗು ಮಾತುಗಳು ಇರಬಹುದು. ಆದರೆ ಸೂಕ್ಷ್ಮವಾಗಿ ನೋಡಿದರೆ ಒಬ್ಬರ ಕಾಲು ಎಳೆಯಲು ಮತ್ತೊಬ್ಬರು ಪ್ರಯತ್ನ ಪಡುತ್ತಲೆ ಇದ್ದಾರೆ, ಹುಚ್ಚಿಯ0ತೆ ಅಭಿನಯಿಸುತ್ತಿದ್ದ ನಿಕಿತಾರನ್ನು , ನರ್ಸ್ ಕನ್ನಡತಿ ಅಪರ್ಣ ಒಳ್ಳೆ ಮಾತಿನಲ್ಲಿ ಕೇಳುತ್ತಿದ್ದರು 'ನಿನ್ನ ಹೊಸ ಬಾಯ್ ಪ್ರೇ0ಡ್ ಯಾರು ಪುಟ್ಟ, ಯಾರಮ್ಮ ನನಗೆ ಹೇಳಲ್ವ" ಎ0ದು. ಹಾಗೆ ನೋಡಿದರೆ, ನರೇ0ದ್ರ ಶರ್ಮರೆ ಮೇಲೆ ಒಳಗಿನ ಒತ್ತಡಕ್ಕಿ0ತಲು ಹೊರಗಿನ ಬಿಗ್ ಬಾಸ್ ಒತ್ತಡವೆ ಜಾಸ್ತಿ ಇರುವ0ತಿದೆ, ಅವರಿಗಾಗಿ ನರ್ಸ್ ಕೈಲಿ ಡ್ಯಾನ್ಸ್ ಮಾಡಿಸಿ ಎ0ದು ಹೇಳುವ ಅವಶ್ಯಕತೆ ಯಾಕೆ ಇತ್ತು ಅರ್ಥವಾಗಲಿಲ್ಲ.
ಪಾರ್ಥ ಸರ್,
ಪಾರ್ಥ ಸರ್,
ಮನೆಯಲ್ಲಿ ಕೇವಲ ನನ್ನ ಹೆಂಡತಿ-ಮಕ್ಕಳು ಮಾತ್ರ ನೋಡುತ್ತಿದ್ದ ಬಿಗ್-ಬಾಸ್ ಕಾರ್ಯಕ್ರಮವನ್ನು ನಿಮ್ಮ ಹಾಗೂ ಗಣೇಶ್..ಜಿಯವರು ನಾನೂ ಸಹ ಅದನ್ನು ನೋಡಬೇಕು ಅನ್ನಿಸುವಂತೆ ಮಾಡಿದ್ದೀರ. :))
In reply to ಪಾರ್ಥ ಸರ್, by makara
ಮಕರರವರೆ ನೋಡಿ ನೋಡಿ ದಾರಳವಾಗಿ
ಮಕರರವರೆ ನೋಡಿ ನೋಡಿ ದಾರಳವಾಗಿ ನೋಡಿ ಆದರೆ ನಾವೆಲ್ಲ ಯಾವಗಲು ನೊಡುವೆವೆ ಅ0ದುಕೊಳ್ಳದಿರಿ, ಅದೆಲ್ಲ ಕಾಲ ಕೆಲಸ ಮರ್ಜಿಯನ್ನು ಅನುಸರಿಸಿರುತ್ತೆ. ಹೆ0ಡತಿ ಮಕ್ಕಳ ಜೊತೆಗೆ ನೀವು ಕ0ಪನಿ ಕೊಡಿ :))
In reply to ಮಕರರವರೆ ನೋಡಿ ನೋಡಿ ದಾರಳವಾಗಿ by partha1059
ಬಿಗ್ ಬಾಸ್ಗೆ ಗ್ರಾಂಡ್ ಎಂಟ್ರಿ
ಬಿಗ್ ಬಾಸ್ಗೆ ಗ್ರಾಂಡ್ ಎಂಟ್ರಿ ಕೊಟ್ಟ ನಮ್ಮ ಅಂಡಾ .. ಬ್ರ '''''''''''''''''''''''''''''''''''''' ಆ ಎಪಿಸೋಡ್ ನೋಡಿದೆ , ಆದರೆ ದೇವರಾಣೆ ನನಗೆ ಹಿಂದಿ ಬಿಗ್ ಬಾಸ್ ಅರ್ಥವಾದ ಹಾಗೆ ಈ ಕನ್ನಡ ಬಿಗ್ ಬಾಸ್ ಏನೇನೂ ಅರ್ಥ ಆಗಲಿಲ್ಲ ಮತ್ತು ಇಂಥ ಕಾರ್ಯಕ್ರಮದ ಅವಶ್ಯಕತೆ ಇದೆಯಾ ಅನ್ನ್ಸಿತು ..
ಅಂದೇ ಕೊನೆ ಮತ್ತೆ ನೋಡಿಲ್ಲ ನೋಡೋದು ಇಲ್ಲ ... ಕನ್ನಡದ ಕೋಟ್ಯಾಧಿಪತಿ ಒಮ್ಮೆ ಮಾಲಾಶ್ರಿ ಬಂದಾಗ ಮತ್ತೊಮ್ಮೆ ನ ಮ್ ಉ. ಕ ಹುಡುಗ ಒಂದು ಕೋಟಿ ಗೆದ್ದಾಗ ನೋಡಿದ್ದೇ ಅಸ್ಟೆ . ಇನ್ನು ಮೊದಲೇ ಹೇಳಿದ ಹಾಗೆ ಯಾವದೇ ವಾರ್ತಾ ವಾಹಿನಿ ನೋಡೋಲ್ಲ ...
ಶುಭವಾಗಲಿ ...
\।/
In reply to ಬಿಗ್ ಬಾಸ್ಗೆ ಗ್ರಾಂಡ್ ಎಂಟ್ರಿ by venkatb83
ಸಪ್ತಗಿರಿಯವರೆ ಖಂಡೀತ ಬಿಗ್ ಬಾಸ್
ಸಪ್ತಗಿರಿಯವರೆ ಖಂಡೀತ ಬಿಗ್ ಬಾಸ್ ನೋಡಬೇಡಿ, ಇಂತ ಕಾರ್ಯಕ್ರಮದ ಅವಶ್ಯಕತೆಯಂತು ಖಂಡಿತ ಇಲ್ಲ. ಆದರೇನು ಬರುತ್ತಲ್ಲ. ಹಾಗೆ ಕರ್ನಾಟಕವೆ ಕರೆಂಟ್ ಇಲ್ಲ ನೀರು ಇಲ್ಲ ಅಂತ ಸಂಕಟ ಪಡುವಾಗ ಅರ್ದ ರಾತ್ರಿಯಲ್ಲಿ ಜಗಮಗಿಸುವ ಲೈಟ್ ಹಚ್ಚಿ ಆಡುವ ಐಪಿಎಲ್ ಕ್ರಿಕೇಟ್ ಅವಶ್ಯಕತೆ ಇದೆಯ, ಇಲ್ಲ, ಹೀಗೆ ನಮ್ಮ ಸುತ್ತ ಬೇಡವಾದುದ್ದೆ ಬಹಳ ಇದೆ, ಕಡೆಗೆ ನಮಗೆ ನಡೆಯುತ್ತಿರುವ ಚುನಾವಣೆ ಬೇಕಿದೆಯ, ಆದರೆ ಯಾವುದನ್ನು ನಿಲ್ಲಿಸಲು ಆಗುತ್ತಿಲ್ಲ ಏನು ಮಾಡುವುದು ಅದೆಲ್ಲ ಬಿಟ್ಟುಹಾಕಿ, ನಮಗೆ ಅಗತ್ಯವಿರುವುದು ನೋಡಿದರಾಯಿತು ಬಿಡಿ.
ಆದರೆ.... ಸಂಪದದಲ್ಲಿ ಸಪ್ತಗಿರಿಯ ಪ್ರತಿಕ್ರಿಯೆ ಅವಶ್ಯಕತೆ ಖಂಡೀತ ಇದೆ ಅನ್ನಿಸುತ್ತೆ :)) , ಅವರೆಕಾಯಿ ಎಷ್ಟೆ ನೋಡಲು ಚೆನ್ನಾಗಿದ್ದರು, ರುಚಿ ಇದ್ದರು ಅದರಲ್ಲಿ ಸೊಗಡು....( ಹಿತವಾದ ವಾಸನೆ) ಇಲ್ಲದಿದ್ದರೆ ತಿನ್ನಲು ಎಲ್ಲರಿಗು ಬೇಸರ, ಹಾಗೆ ಸಂಪದ ಎಷ್ಟೆ ಚೆನ್ನಾಗಿದ್ದರು, ಸಪ್ತಗಿರಿಯ ಪ್ರತಿಕ್ರಿಯೆಯ ಸೊಗಡಿಲ್ಲದಿದ್ದರೆ ಬೇಸರ , ನಿಮ್ಮ ಗಣೇಶಣ್ಣ ಏನನ್ನುವರೊ ಕೇಳೀ ನೋಡಿ...
In reply to ಸಪ್ತಗಿರಿಯವರೆ ಖಂಡೀತ ಬಿಗ್ ಬಾಸ್ by partha1059
ಗುರುಗಳೇ ಈಗೀಗ ನಾನು ಬರಹಗಳನ್ನು
ಗುರುಗಳೇ ಈಗೀಗ ನಾನು ಬರಹಗಳನ್ನು ಬರೆವದು ಕಡಿಮೆ ಆಗಿದೆ ನಿಜ , ಆದರೆ ದಿನ ನಿತ್ಯ ಕನಿಸ್ಥ ಅಂದರೂ ೧ ಸಾರಿ ಘಂಟೆಗೊಮ್ಮೆ ಸಂಪದ ತೆರೆದು ಹೊಸ ಬರಹ ಓದುವ ಪ್ರತಿಕ್ರಿಯಿಸುವ ರೂಡಿ ಇದೆ , ಕೆಲವೊಮ್ಮೆ ಓದಿ ಪ್ರತಿಕ್ರಿಯಿಸದೆ ಹೋಗಿರುವೆ ಆದರೆ ಮರೆವ ಮುನ್ನವೇ ಪ್ರತಿಕ್ರಿಯಿಸೋದು ಖಾತರಿ ಮತ್ತು ಇಲ್ಲವಾದರೆ ನನಗೆ ನೆಮ್ಮದಿ ಇರೋಲ್ಲ ..!!
ಅಲ್ಲದೆ ಈಗ ನನಗೆ ಪದವಿ ದ್ವಿತೀಯ ವರ್ಷದ ಪರೀಕ್ಷೆ ನಡೆಯುತ್ತಿವೆ .. ಆದರೂ ಸಂಪದ ಓದಲು ಪ್ರತಿಕ್ರಿಯಿಸಲು ಅಡ್ಡಿ ಇಲ್ಲ ..!!
ಸದ್ಯದ ಯೋಜನೆ ಯೋಚನೆ ಎಂದರೆ ಮೊದಲು ಪರೀಕ್ಷೆ ಮುಗಿದ ಕೂಡಲೇ ಅಥವಾ ಅದ್ಕೆ ಮಧ್ಯದಲಿ ಮಲೆಗಳಲ್ಲಿ ಮದುಮಗಳು ನಾಟಕವನ್ನು ನೋಡಿ ಆ ಬಗ್ಗೆ ಬರಹ ಒಂದನ್ನು ಇಲ್ಲಿ ಬರೆಯುವುದು - ನಾ ಓದಿ ಮೆಚ್ಚಿದ ಈಗಲೂ ಮತ್ತೆ ಮತ್ತೆ ಓದಬೇಕು ಆ ಪರಿಸರದಲ್ಲಿ ಕಳೆದು ಹೋಗಬೇಕು ಎಂದೆನ್ನಿಸುವ ಬರಹ ಮಲೆಗಳಲ್ಲಿ ಮದುಮಗಳು , ಮತ್ತು ಪಕ್ಕಾ ಗುಡ್ಡಗಾಡು ಬಯಲು ಸೀಮೆಯ ಹುಡುಗನಾದ ನನಗೆ ಮತ್ತು ನನ್ನಂತವರಿಗೆ ಮಹಾಕವಿ ಕುವೆಂಪು ಅಕ್ಷರಗಳಲೇ ಹಸಿರು ತೋರಿಸಿ ತಂಪು ನೀಡಿ ಹಚ್ಹ ಹಸುರಿನ ಮಲೆನಾಡು ತೊರಿಸಿದವರು ..
ನೀವ್ ಬರುವಿರಾದರೆ ಆ ದಿನ ಗೊತ್ತು ಮಾಡುವ - ಒಟ್ಟಿಗೆ ಹೋಗಿ ನೋಡುವ .....
>>ನಿಮ್ಮ ಗಣೇಶಣ್ಣ ಏನನ್ನುವರೊ
>>>>>>>ಗಣೇಶ್ ಅಣ್ಣ ವರು ಫಿಂಗರ್ ತಿಂದು ಅಲ್ಲಲ್ಲ ಫಿಂಗರ್ ಚಿಪ್ಸ್ ತಿಂದು ......................
ಅದ್ಕೆ ಅದನ್ನೇ ಸಬೂಬು ಮಾಡಿ ೩ ದಿನ ಸಂಪದಕ್ಕೆ ರಜೆ ಹಾಕಿ ಪ್ರತಿಕ್ರಿಯಿಸೋಲ್ಲ ಅನ್ಸುತ್ತೆ ..!!
ಶುಭವಾಗಲಿ
\।