ಬಿಗ್ ಬಾಸ್ ಮತ್ತು ಫಿಂಗರ್ ಚಿಪ್ಸ್-೨

ಬಿಗ್ ಬಾಸ್ ಮತ್ತು ಫಿಂಗರ್ ಚಿಪ್ಸ್-೨

ಚಿತ್ರ

ಫಿಂಗರ್ ಚಿಪ್ಸ್ ಬಗ್ಗೆ ಆಸಕ್ತಿ ತೋರಿಸಿದ ಸುಮ ನಾಡಿಗ್ ಹಾಗೂ ನೀಳಾದೇವಿಯವರಿಗೂ, ಮುಂದಿನ  ಕಂತಿಗೆ ಕಾತರದಿಂದಿರುವ ಹೆಬ್ಬಾರರಿಗೂ, ಇಟ್ನಾಳರಿಗೂ ಧನ್ಯವಾದಗಳು.
 ಈ ಫಿಂಗರ್ ಚಿಪ್ಸ್ ಮಾಡುವುದು ಬಹಳ ಅಂದ್ರೆ ಬಹಳ ಸುಲಭ-
-ಚೆನ್ನಾಗಿ ತೊಳೆದ ಆಲೂಗಡ್ಡೆಗಳ ಸಿಪ್ಪೆ ತೆಗೆದು, ಉದ್ದಕ್ಕೆ ಸಣ್ಣದಾಗಿ ಕತ್ತರಿಸಿ.
  - ಕತ್ತರಿಸಿದ ತುಂಡುಗಳನ್ನು ನೀರು ತುಂಬಿದ ಪಾತ್ರೆಯಲ್ಲಿ ಹಾಕಿಡಿ.
-ನೀರಿಂದ ತೆಗೆದ ಆಲೂಗಡ್ಡೆ ಕಡ್ಡಿಗಳ ಮೇಲೆ ಸ್ವಲ್ಪ ಉಪ್ಪು ಮಿಕ್ಸ್ ಮಾಡಿ ಇಡಿ.
-ಒಂದು ಬಾಣಲೆಯಲ್ಲಿ ಎಣ್ಣೆ ತೆಗೆದುಕೊಂಡು ಬಿಸಿಯಾಗಲು ಇಡಿ.
ಎಣ್ಣೆ ಬಿಸಿಯಾಗುವ ತನಕ (ಮಗಳು ನೋಡಿಕೊಳ್ಳುತ್ತಾಳೆ) ನಾವು ಬಿಗ್ ಬಾಸ್ ನೋಡೋಣ ಬನ್ನಿ :
"ನಮದೇ ನಮಗೆ ಸಾಕಷ್ಟಿದೆ, ನಮಗ್ಯಾಕೆ ಇನ್ನೊಬ್ಬರ ಉಸಾಬರಿ" ಅನ್ನುವವರೇ, ಸಿನೆಮಾ ಸ್ಟಾರ್ ವಿಜಯ್ ಮತ್ತು ಪತ್ನಿಗೆ ಜಗಳವಾದಾಗ ಟಿ.ವಿ.ಯಲ್ಲಿ ಬರುತ್ತಿದ್ದ ರಿಲೇಯನ್ನು ರಾತ್ರಿ ಹಗಲು ಟಿವಿ ಮುಂದೆ ಜಡಿದು ಕೂತು ನೋಡುವರು. ಇದನ್ನು ತಪ್ಪು ಎನ್ನುತ್ತಿಲ್ಲ. ಸ್ವಭಾವ ಸಹಜ ಕುತೂಹಲ- ಶ್ರೀಮಂತರು, ಸ್ಟಾರ್‌ಗಳು, ಸಾಹಿತಿಗಳು, ಸ್ವಾಮಿಗಳು.., ತಮ್ಮ ತಮ್ಮ ಮನೆಯಲ್ಲಿ ಹೇಗಿರುವರೆಂದು ತಿಳಕೊಳ್ಳುವ ಆಸಕ್ತಿ. ಬಿಗ್ ಬಾಸ್‌ನಲ್ಲಿ ರಾಜ್ಯಾದ್ಯಂತ ಖ್ಯಾತ/ ಕುಖ್ಯಾತರಾದವರ ಜೀವನದ ಒಂದು ಪುಟ್ಟ ಪುಟ ನಮಗೆ ನೋಡಲು ಸಿಗುವುದು-ಬಿಗ್ ಲಾಭವಲ್ವಾ?
ತಂದೆ- ಮಕ್ಕಳು, ಗಂಡ-ಹೆಂಡತಿಗಳೇ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳದ ಈ ಕಾಲದಲ್ಲಿ, ಬೇರೆ ಬೇರೆ ಫೀಲ್ಡ್‌ನ ೧೦-೧೩ ಜನ ಜತೆಯಲ್ಲಿ, ಹೊರಗಿನ ಪ್ರಪಂಚದ ಅರಿವಿಲ್ಲದೇ, ಬಿಗ್ ಬಾಸ್ ಮನೆಯಲ್ಲಿ ಕಳೆಯುವುದು ಬಹಳ ಕಷ್ಟ. ಕಸಗುಡಿಸಿ,ಒರೆಸಿ, ಪಾತ್ರೆ ತೊಳೆದು, ...ಹೀಗೆ ಪ್ರತಿಯೊಂದು ಕೆಲಸಕ್ಕೂ ಕೆಲಸಗಾರರನ್ನು ಇಟ್ಟುಕೊಂಡು ನೆಮ್ಮದಿಯಲ್ಲಿದ್ದ ಜನ, ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ತಾವೇ ಮಾಡಬೇಕಾಗಿ ಬಂದಾಗ ಜಗಳ ಬರುವುದು ಸಾಮಾನ್ಯ.
ಬಿಗ್ ಬಾಸ್‌ನಲ್ಲಿ ಏನಿದೆ-ಏನಿಲ್ಲಾ : ಸ್ನೇಹ,ವೈರ,ಪ್ರೀತಿ, ಕ್ರೌರ್ಯ, ಭಕ್ತಿ, ನಟನೆ, ವಿರಸ, ಹಾಸ್ಯ...ಯಾವ ರಸ ಹೇಳಿ ಅದು ಇದೆ.
 ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ನಚ್ ಬಲಿಯೇ...ಇವೆಲ್ಲಾ ಒಂದು ತೂಕವಾದರೆ, ನಮ್ಮ ಕಾಳೀ ಮಠದ ಸ್ವಾಮಿಯ ಡ್ಯಾನ್ಸೇ(ತಪ್ಪು ಮಾಡದವರ್ಯಾರವ್ರೇ..) ಒಂದು ತೂಕ. http://www.youtube.com/watch?v=7c-JbmzsSwE
ಮಗಳು ಮುಖದೆದುರು ಫಿಂಗರ್ ಚಿಪ್ಸ್ ಪ್ಲೇಟ್ ಹಿಡಿದಾಗಲೇ ನಾನು ಈ ಲೋಕಕ್ಕೆ ಬಂದದ್ದು!
"ಅರೆ..ಇಷ್ಟು ಬೇಗ ಮಾಡಿಯಾಯಿತಾ? ಹೇಗೆ ಮಾಡಿದಿ?"
"ಒಂದೊಂದೇ ಆಲೂ ಕಡ್ಡಿಯನ್ನು ಎಣ್ಣೆಯಲ್ಲಿ ಬಿಟ್ಟು ಕೆಂಪಗೆ ಬಣ್ಣ ಬಂದಾಗ ತೆಗೆದೆ" ಅಂದಳು ಮಗಳು. ಕಡ್ಡಿಯನ್ನು "ಸಾಸ್"ನಲ್ಲಿ ಅದ್ದಿ ತಿಂದೆ- "ವ್ಹಾ..ವೆರಿಗುಡ್..ಬಹಳ ಚೆನ್ನಾಗಿದೆ. ನಾನು ಇಂತಹ ಚಿಪ್ಸನ್ನು ಇದುವರೆಗೆ ತಿಂದಿಲ್ಲ. ನೆಕ್ಸ್ಟ್ ಕಾಯಿಸುವಾಗ ಇನ್ನೂ ಸ್ವಲ್ಪ ಜಾಸ್ತಿ ಕಾಯಿಸಿದರೆ ಇನ್ನೂ ಸೂಪರ್ ಆಗುವುದು." ಎಂದು, ಪುನಃ ಬಿಗ್ ಬಾಸ್ ನೋಡುತ್ತಾ, ಫಿಂಗರ್ ಚಿಪ್ಸ್ ತಿನ್ನುತ್ತಾ ಇದ್ದೆ. "ಅಯ್...ಯ್ಯ...ಮ್ಮಾಆಆ... ಫಿಂಗರ್ ಜಗಿದೆ..ಬೇಗ ಐಸ್ ತಗೊಂಬಾರೆ.. ಒಂದು ಚಿಕ್ಕ ಬ್ರೇಕ್..ಆಆ......ಬೇಗ ತಾಆಆಅರೇಏಏಏಏಏ"
(ಸೂಚನೆ- ಬೆಚ್ಚ ಗಣೇಶರ ಬೆರಳ ಗಾಯ ಕೂಲ್ ಆಗಲು ಸಮಯವಾಗುವುದರಿಂದ, ಮುಂದಿನ ಬಿಗ್ ಬಾಸ್ ಎಪಿಸೋಡ್ ಬಚ್ಚನ್ ಪಾರ್ಥರು ಮುಂದುವರೆಸುವರು. ಏನು? ಇನ್ನೂ ನೋಡುತ್ತಿದ್ದೀರಿ. ಬೇಗ ಚಾನಲ್ ಚೇಂಜ್ ಮಾಡಿ..ಅಲ್ಲಾಗಲೇ ಬಿಗ್ ಬಾಸ್ ಪ್ರಾರಂಭವಾಗಿದೆ- http://sampada.net/blog/%E0%B2%AC%E0%B2%BF%E0%B2%97%E0%B3%8D-%E0%B2%AC%E0%B2%BE%E0%B2%B8%E0%B3%8D-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AD%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%BE%E0%B2%82%E0%B2%A1-%E0%B2%B6%E0%B2%B0%E0%B3%8D%E0%B2%AE%E0%B2%B0%E0%B3%81/24-4-2013/40726
 

Rating
No votes yet

Comments

Submitted by partha1059 Thu, 04/25/2013 - 07:30

ಇಲ್ಲಿ ಓದದೆ ಅಲ್ಲಿ ಪ್ರತಿಕ್ರಿಯೆಸಿದೆ, ಒಂದೊ೦ದೆ ಕಡ್ಡಿಯನ್ನು ಎಣ್ಣೆಯಲ್ಲಿ ಬಿಡುವುದೆ ? ಬಾನುವಾರ ಆದ್ದರಿಂದ ಸರಿಹೋಯಿತು ಬೆಳಗ್ಗೆ ಇಂದ ಸಂಜೆ ವರೆಗು ನೋಡುತ್ತ ಇರುತ್ತೀರಿ, ಆದರು ಒಂದು ಸಲಹೆ ಅದನ್ನೆ ನೋಡುತ್ತ ಇರಬೇಡಿ, ಹೊರಗಡೆ ಬಂದು ನಿಮ್ಮ ಗಿಡಗಳನ್ನು, ಗಿಣಿಯನ್ನು , ಕಾರುಗಳು ನಿಂತಿರುವ ಸ್ವಿಮಿಂಗ್ ಫೂಲನ್ನು, ಪಕ್ಕದಲ್ಲಿ ಕಟ್ಟುತ್ತಿರುವ ಹೊಸ ಅಪಾರ್ಟ್ ಮೆಂಟು, ಸ್ವಲ್ಪ ದೂರದಲ್ಲಿರುವ ಶಿವ ದೇವಾಲಯ ಹೀಗೆ ನೋಡುತ್ತ ಇರಿ, ಬಿಗ್ ಬಾಸ್ ಇನ್ನು ಮೂರು ನಾಲಕ್ಕು ತಿಂಗಳು ಇರುತ್ತದೆ ಬಯವಿಲ್ಲ.
ನಿನ್ನೆ ಹಾಗೆ ಆಯಿತು.ಯಾರೊ ಕೇಳಿದರು, ಗೇಲ್ ಆಟ ನೋಡಿದ್ರ ಅಂತ, ಇಲ್ಲ ಅಂದೆ, ಬೈದ್ರು ಏನೊ ತಪ್ಪು ಮಾಡಿದೆ ಅನ್ನೊ ಹಾಗೆ, ಎಂತ ಚಾನ್ಸ್ ಮಿಸ್ ಮಾಡಿದ್ರಿ, ಅವನ ಆಟ ಬಿಟ್ಟು ನಿದ್ದೆ ಮಾಡ್ತೀರ ಅಂತ. ಅಲ್ಲ ಯಾರೊ ಗೇಲ್ ಕರ್ನಾಟಕದ ಪರವಾಗಿ ಯಾವಾಗಲೊ ಬಂದು ಸಿಕ್ಸ್ ರ್ ಗಳನ್ನು ಹೊಡಿತಾನೆ ಅಂದರೆ ನಾನು ಎಲ್ಲ ಬಿಟ್ಟು ವರ್ಷ ಪೂರ್ತಿ ಕ್ರಿಕೇಟ್ ನೋಡ್ತಾ ಇರಕ್ಕೆ ಆಗಲ್ಲ, ಅಷ್ಟಕ್ಕು ತಲೆಕೆಟ್ಟು ಆ ಗೇಲ್ ಸೊನ್ನೆ ಸುತ್ತಿದ್ದರೆ, ಇರೋರೆಲ್ಲ ಪಾಪ ಅರ್ ಸಿ ಬಿ ಚೀಫ್ ಗೆ ತಲೆ ತಿನ್ತ ಇದ್ರು. ಎಲ್ಲಾದ್ರು ಹಾಳಾಗ್ಲಿ ಆ ದ...ಡೇವು, ನಮಗೇಕೆ ಬೇಕು ಒಟ್ಟಿನಲ್ಲಿ ನಾವು ಮುಂ..ಮೋಚ್ಗಂಡು ಹೋಗದೆ ಇದ್ದರೆ ಸಾಕು... ಅಲ್ವೆ,. ಥೂ ... ಬಿಗ್ ಬಾಸ್ ಎಫೆಕ್ಟ್ ಜಾಸ್ತಿ ಆಯಿತು ಅನ್ನಿಸುತ್ತೆ ಬೈ

Submitted by ಸುಮ ನಾಡಿಗ್ Thu, 04/25/2013 - 21:52

In reply to by partha1059

>> ಗೇಲ್ ಕರ್ನಾಟಕದ ಪರವಾಗಿ ಯಾವಾಗಲೊ ಬಂದು ಸಿಕ್ಸ್ ರ್ ಗಳನ್ನು ಹೊಡಿತಾನೆ

 

ಬೆಂಗಳೂರು ರಾಯಲ್ ಚ್ಯಾಲೆಂಜರ್ಸ್ ಪರವಾಗಿ, ಅಲ್ಲವೆ? :)

Submitted by partha1059 Fri, 04/26/2013 - 08:06

In reply to by ಸುಮ ನಾಡಿಗ್

ಹೌದಲ್ವ ಸುಮ ಮೇಡಮ್ , ಆದ್ರು ನೋಡಿ ಕ್ರೀಡೆಗಳು ದೇಶಗಳನ್ನು ಒಂದು ಮಾಡುತ್ತೆ ಅಂತಾರೆ , ಈ ಐಪಿಲ್ ನೋಡಿದ್ರೆ ದೇಶಾನೆ ಅರೆಂಟು ಬಾಗ ಮಾಡಿದೆ, ಹೋಗ್ಲಿ ಅಂತ ಬಿಟ್ರೆ, ಕರ್ನಾಟಕ ಹಾಗು ಬೆಂಗಳೂರನ್ನು ಬೇರೆ ಮಾಡಿದೆ !!!! , ಆಯ್ತು ಬೆಂಗಳೂರಿನ ಗೇಲ್ ಗೊಂದು ಸಲಾಮ್ ಇರ್ಲಿ ಬಿಡಿ ! :-))))

Submitted by ಗಣೇಶ Sat, 04/27/2013 - 00:16

In reply to by partha1059

ಸುಮ ಅವರೆ, "ರಾಯಲ್ ಚಾಲೇಂಜರ್ಸ್ ಬೆಂಗಳೂರು" ಮಲ್ಯ ಮತ್ತು ಮಗನ ಟೀಮು. ಕೊಯ್ಲಿ/ಗೇಲ್... ಅವರು ದುಡ್ಡು ಕೊಟ್ಟು ಪರ್ಚೇಸ್ ಮಾಡಿದ ದೇಶ/ ವಿದೇಶದ ಆಳುಗಳು.(ರೇಸ್ ಕುದುರೆಗಳಂತೆ). ಚೆನ್ನಾಗಿ ಓಡದಿದ್ದರೆ ಗೇಲನ್ನು ಬಿಟ್ಟು ಮುಂದಿನ ವರ್ಷ ಇನ್ನೊಂದು ಕುದುರೆ ಪರ್ಚೇಸ್ ಮಾಡುವರು. ಅವರೆಲ್ಲಾ ಕೋಟಿಗಟ್ಟಲೆ ಹಣ ಮಾಡಿಕೊಳ್ಳಲು, ನಾವ್ಯಾಕೆ ನಿದ್ರೆ ಬಿಟ್ಟು ಜಾಹೀರಾತು ನೋಡಬೇಕು. ಅದರ ಬದಲು ಸಂಪದ ಓದಿದರೆ ಹೊಸ ವಿಷಯ ಗೊತ್ತಾಗುವುದು. ಪಾರ್ಥ ಅವರೆ ನಿಮ್ಮ ಮೊದಲ ತೀರ್ಮಾನವೇ ಸರಿ. ಸಲಾಮು ಹಿಂದೆ..:)

Submitted by makara Thu, 04/25/2013 - 07:52

ಗಣೇಶ್..ಜಿ;
ಇತ್ತೀಚೆಗೆ ಹಳೆಯ ಕಾಲದ ಹೀರೋಯಿನ್ನುಗಳ ಬಗ್ಗೆ ಒಂದು ತೆಲುಗು ಕಾರ್ಯಕ್ರಮವನ್ನು ನೋಡುತ್ತಾ ಇದ್ದೆ. ಆಗಿನ ಹೀರೋಯಿನ್ನುಗಳು ಮತ್ತು ಈಗಿನ ನಾಯಕಿಯರನ್ನು ತುಲನೆ ಮಾಡುತ್ತಾ ಒಬ್ಬ ಹಿರಿಯ ಸಿನಿಮಾ ಸಾಹಿತಿ ಹೇಳಿದ್ದು ಹೀಗೆ, "ಇಂದಿನ ಹೀರೋಯಿನ್ನುಗಳು ಮೇಲೊಂದು ಕರ್ಚಿಫು ಮತ್ತು ಕೆಳಗೊಂದು ಕರ್ಚಿಫು ಕಟ್ಟಿಕೊಂಡಿರುತ್ತಾರೆ" ಅಂತಾ. ಇದನ್ನೇ "ರಿಯಾಲಿಟಿ ಷೋ" ಆದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತೋರಿಸುತ್ತಿದ್ದಾರೆ ಅಂತ ಸಮಾಧಾನ ಪಟ್ಕೊಳ್ಳೋಣ ಬಿಡಿ...ಅಲ್ಲಲ್ಲಾ ಸುಮ್ಮನೇ ಫಿಂಗರ್ ಚಿಪ್ಸ್ ಅಲ್ಲಲ್ಲಾ .......ಫಿಂಗರ್ ತಿನ್ನೋಣ ಬಿಡಿ. :))

ಇರಲಿ ಅಷ್ಟಕ್ಕೂ ಈ ಫಿಂಗರ್...ಚೀಪ್...ಬರಹವನ್ನು ಮುಂದುವರಿಸುತ್ತೀರೋ ಇಲ್ಲವೋ ನಾವು ಚಾನೆಲ್ ಛೇಂಜ್ ಮಾಡಿ ಪಾರ್ಥರ ಬ್ರಹ್ಮಾಂಡ ಸ್ವಾಮಿಯವರ ಚಾನೆಲ್ಲಿಗೆ ಷಿಪ್ಟ್ ಆಗೋಣವೋ ಹೇಗೆ?

Submitted by ಗಣೇಶ Sat, 04/27/2013 - 00:20

In reply to by makara

:) :) ಶ್ರೀಧರ್‌ಜಿ, ನಮ್ಮ ಡ್ಯಾನ್ಸ್ ಸ್ವಾಮಿಯನ್ನು ಹೊರಹಾಕಿ ಆಯಿತು.:(. ಈಗ ಅವರ ಸ್ವಾಮಿಗಳೇ ಇರುವುದು.:) ನೀವು ಅಲ್ಲಿಗೇ ಶಿಫ್ಟ್ ಆಗಿ.:)

Submitted by neela devi kn Thu, 04/25/2013 - 08:20

ಗಣೇಶರವರಿಗೆ ನಮಸ್ಕಾರಗಳು ಫಿಂಗರ್ ಚಿಪ್ಸ್ ನೋಡಿದೆ ಮಗಳು ತು0ಬಾಚೆನ್ನಾಗಿ ಮಾಡಿದ್ದಾಳೆ ಪಾಪ‌ ನಿಮ್ಮಾಕೈ ವಾಸಿಯಾದಮೇಲಾದರೂ ಸರಿ ಅಥವಾ ಪಾರ್ಥಸಾರಥಿ ರವರಾದರೂ ಮು0ದುವರೆಸಿ ನಮಗೆ ಇ0ತಾ ವಿಷಯಗಳನ್ನು ಉಣಬದಿಸಿರಿ .... ನೀಳಾ

Submitted by venkatb83 Thu, 04/25/2013 - 13:27

In reply to by neela devi kn

ಗಣೇಶ್ ಅಣ್ಣ- ಬಹು ದಿನಗಳ ನಂತರ ನಿಮ್ಮಿಂದ ಮತ್ತೊಂದು ನಾಲಗೆ ನೀರೂರಿಸೋ ಬರಹ ....!
ಫಿಂಗರ್ ಚಿಪ್ಸ್ ಹೆಸರು ಕೇಳಿದಾಗ ಮಾಮೂಲಾಗಿ ನೆನಪಿಗೆ ಬರೋದು ಬೆರಳು , ಹಾಗೆಯೇ ನನ್ನ ಊಹೆಯಂತೆ ಈ ಚಿಪ್ಸ್ ಬೆರಳಿನಸ್ಟು ದಪ್ಪಗಿರುತ್ತೆ ಎಂದುಕೊಂಡಿದ್ದೆ ...!! ಆದರೆ ಇದು ಜಿರಲೆಗಿಂತ ಕಮ್ಮಿ ಸೈಜು ಮತ್ತು ಇದನ್ನು ದಿನ ನಿತ್ಯ ನಾ ತಿನ್ನುವೆ , ಆದರೆ ನಾ ಅದಕೆ ಹೆಸರು ಇಕ್ಕಿದ್ದು ಕಡ್ಡಿ ಚಿಪ್ಸ್ ಅಂತ ... ಮತ್ತು ಕೊಳ್ಳುವಾಗಲೂ ಹಾಗೆಯೇ ಅದನ್ನು ತೋರಿಸಿ ಹೇಳೋದು , ಆ ಬೇಕರಿಯವನು ಅದು ಫಿಂಗರ್ ಚಿಪ್ಸ್ ಎಂದು ಹೇಳಿರಲಿಲ್ಲ , ಈಗ ಗೊತ್ತಾಯ್ತು ಅದ್ಕೆ ನನ್ನಿ ..
ಆದ್ರೆ ಎಂದಿನಂತೆ ನೀವು ಅಡುಗೆ ಮಾಡಿ ನೀವೇ ರುಚಿ ನೋಡುವ ಹಾಗೆ ಇದನ್ನು ರುಚಿ ನೋಡಿ ನಮಗೆ ಬರೀ ಚಿತ್ರಗಳನ್ನು ಆಸ್ವಾದಿಸಿ ನಾಲಗೆ ಆಚೀಚೆ ಆಡಿಸಿ ಕೊರಗುವ -ಮರುಗುವ ಹಾಗೆ ಮಾಡಿರುವಿರಿ ;(

ಆ ಚಿಪ್ಸ್ಗೆ ನೀವ್ ಖಾರ ಉಪ್ಪು ಸವರಿದ ಹಾಗಿಲ್ಲ ....!!

ಫಿಂಗರಲ್ಲಿ ಚಿಪ್ಸ್ ತಿನ್ನ್ಡದೆ ಫಿಂಗರನ್ನೇ ತಿಂದ ........ !!

ಶುಭವಾಗಲಿ ..
\।/

Submitted by ಗಣೇಶ Sat, 04/27/2013 - 00:27

In reply to by venkatb83

ಸಪ್ತಗಿರಿವಾಸಿಯವರೆ, ಫ್ರೆಂಚ್ ಫ್ರೈ, ಫಿಂಗರ್ ಚಿಪ್ಸ್ ಎಲ್ಲಾ ಕಡ್ಡಿ ಚಿಪ್ಸ್ಗಳೇ. ಇಂತಹದ್ದನ್ನೆಲ್ಲಾ ತಿನ್ನುವಾಗ ಜಿರಳೆ ನೆನಪು ಮಾಡಬೇಡಿ :(