ರಾಗಿ ಮಿಲ್ಕ್ ಶೇಕ್
ಬೇಕಿರುವ ಸಾಮಗ್ರಿ
ಕಾಲು ಗಂಟೆ ನೆನೆಸಿದ ರಾಗಿ -ಅರ್ಧ ಕಪ್,
ಹಾಲು-೧ ದೊಡ್ಡ ಕಪ್,
ಬೆಲ್ಲದ ಹುಡಿ - ೫ ಚಮಚ,
ಬಾದಾಮಿ ತರಿ- ೧ ಚಮಚ,
ಏಲಕ್ಕಿ ಪುಡಿ-ಸ್ವಲ್ಪ.
ತಯಾರಿಸುವ ವಿಧಾನ
ನೆನೆಸಿದ ರಾಗಿಯನ್ನು ರುಬ್ಬಿ ಸೋಸಿ ಹಾಲು ತೆಗೆಯಿರಿ.ಅದಕ್ಕೆ ಬೆಲ್ಲದ ಪುಡಿ ಸೇರಿಸಿ ರುಬ್ಬಿ.ನಂತರ ಹಾಲು, ಬಾದಾಮಿ ತರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಕುಡಿಯಿರಿ.
ರಾಗಿ ಎಂದಾಕ್ಷಣ ಮೂಗು ಮುರಿಯುವವರಿಗೆ ಇದನ್ನು ರಾಗಿಯದ್ದು ಎಂದು ಹೇಳದೆ ಕುಡಿಯಲು ಕೊಟ್ಟು ನೋಡಿ.
Comments
ರಾಗಿ ಮಿಲ್ಕ್ ಶೇಕ್ ತುಂಬಾ
ರಾಗಿ ಮಿಲ್ಕ್ ಶೇಕ್ ತುಂಬಾ ಆರೋಗ್ಯಕರವಾಗಿದೆ. ಇದು ಎಲ್ಲರೂ (ಡಯಾಬಿಟಿಕ್ ಪೇಷಂಟ್ಸ್) ಉಪಯೋಗಿಸಬಹುದಾದ ಪಾನೀಯವಾಗಿದೆ. ಇಂಥ ರೆಸಿಪಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
In reply to ರಾಗಿ ಮಿಲ್ಕ್ ಶೇಕ್ ತುಂಬಾ by ಸರಿತಾ
ವಂದನೆಗಳು ಸರಿತಾ ಅವರೆ.
ವಂದನೆಗಳು ಸರಿತಾ ಅವರೆ.