ಆ ಕಂಗಳಲಿ … ನಾ ಹುಡುಕಿದ್ಯಾರನ್ನ...??!

ಆ ಕಂಗಳಲಿ … ನಾ ಹುಡುಕಿದ್ಯಾರನ್ನ...??!

ಕವನ

ಈ ಬಾರಿಯ ಆಶುಕವನ ಸ್ಪರ್ಧೆಯಲ್ಲಿ ನಾ ಬರೆದ ಕವನ....

                              ತೋರಿದ್ದು  ಚಿತ್ರ; ನೀಡಿದ್ದು ೧೦ ನಿಮಿಷ

 

ಎದೆಹಾಲುಣಿದು, ಬಾಯಿ ಚಪ್ಪರಿಸಿ

ಭಾವಲೋಕದ ಸುಖ ನಿದ್ರೆಯಲಿ ಮಿಂದು

ಕಣ್ಣರಳಿಸಿ ಕಾಲಗಲಿಸಿ ಅರೆ ಹೆಜ್ಜೆಯಿಟ್ಟ

ಮಗನ ಕಂಡ ಕಂಗಳ ಅವು ?

                  ನೆನೆದೆನು ನನ್ನ ಅಮ್ಮನ !

 

ಅಕ್ಕರೆಯಲಿ ಸಕ್ಕರೆಯಾಟದಲಿ ಜೊತೆಯಾಗಿ

ತುಂಟತನದಲಿ ಕಿತ್ತಾಡಿ ಜಗಳವಾಡಿ

ಅವಳದೆಂದು ಎತ್ತಿಟ್ಟ ಸಿಹಿಗೆ

ಕೈ ಹಾಕಿದೆನೆಂದು ಕಂಡ ಕಂಗಳ ಅವು ?

                                   ನೆನೆದೆನು ನನ್ನ ಸಹೋದರಿಯ !

 

ನನ್ನ ಪ್ರೀತಿಗೆ ಒಸರಾದವಳು

ನನ್ನ ಪ್ರೇಮಕ್ಕೆ ಉಸಿರಾದವಳು

ಕರೆದಾಗ ತುಸು ತಡ ಮಾಡಿದೆನೆಂದು

ಸಿಡುಕ ತೋರಿದ ಅವಳ ಕಂಗಳ ಅವು?

                                 ನೆನೆದೆನು ನನ್ನ ಪ್ರೇಯಸಿಯ !

 

ಮುದ್ದಿನ ಚಿಲುಮೆಯವಳು ಕನಸು

ನಲ್ಮೆಯ ಗೆಳತಿಯವಳು ಕೂಸು

ಸಹನೆಯ ತಾಯಿಯವಳು ಮನಸು

ನನ್ನ ಕಂಡಳು ಅವಳು ಹೆಣ್ಣು !

ಈ ಪರಿ ಪರಿಯಾಗಿ…

ಕಲ್ಪಿಸಿದೆನು ಅವಳು ನನ್ನ ಮಗಳು !                         

                                                     ಇತಿ ಪ್ರೀತಿಯ

                                                  ಕೆ.ವಿಶಾಂತ್ ರಾವ್

 

ಚಿತ್ರ್

Comments