ಚದುರಿದ ಚಿಂತನೆಗಳು - ೩ ಚುನಾವಣೆಯ ನಂತರ

ಚದುರಿದ ಚಿಂತನೆಗಳು - ೩ ಚುನಾವಣೆಯ ನಂತರ

 

ಚುನಾವಣೆಯ ನಂತರ
=============
ಇಂದು ರಾತ್ರಿ ಕಳೆದರೆ ನಾಳೆ ಕರ್ನಾಟಕದ ಮಹಾಚುನಾವಣೆ. ರಾಜಕೀಯ ಪಕ್ಷಗಳೆಲ್ಲ ಉತ್ಸಾಹದಿಂದ  ಪ್ರಚಾರ ಕಾರ್ಯ ಮುಗಿಸಿ (ಅಯ್ಯೊ ಎಲ್ಲಿ ಬಂತು ಸ್ವಾಮಿ, ನಾವು ಪ್ರಚಾರ ಮಾಡಲೆ ಇಲ್ಲ ಬರಿ ಅಪಪ್ರಚಾರ ಅಷ್ಟೆ ಉಳಿದ ಪಕ್ಷಗಳ ಬಗ್ಗೆ ಮಾಡಿದ್ದು) ಚುನಾವಣೆಗೆ ಸಜ್ಜಾಗಿದ್ದಾರೆ. ಇಂದು ರಾತ್ರಿ ಸಾದ್ಯವಾದ ಮಟ್ಟಿಗೆ ಹಣ , ಹೆಂಡದ ಉಳಿದ ಆಮಿಶಗಳ ಹಂಚುವಿಗೆ ತಕ್ಕಮಟ್ಟಿಗೆ ನಡೆಯುತ್ತದೆ ಬಿಡಿ. ಚುನಾವಣ ಪ್ರಾಧಿಕಾರವು ತಕ್ಕಮಟ್ಟಿಗೆ ಅಲ್ಲಲ್ಲಿ ಇರುವ ಹಣ ಹಾಗು ಹೆಂಡ , ಚಿನ್ನ ಬಳೆ, ಮೂಗುತಿ ಎಲ್ಲವನ್ನು ವಶಪಡಿಸಿಕೊಂಡಿದೆ (ನಂತರ ಇವೆಲ್ಲ ಏನಾಗುತ್ತದೆ ಅನ್ನುವ ಕುತೂಹಲಕ್ಕೆ ಉತ್ತರವಿಲ್ಲ) . ಯಾವುದೊ ಒಂದು ಪಕ್ಷ ಅಥವ ಪಕ್ಷಗಳ ಸಂಗಮ ಸರ್ಕಾರ ರಚಿಸುತ್ತವೆ, ನಂತರ ಮುಖ್ಯಮಂತ್ರಿ ಪಟ್ಟದ ಬಗ್ಗೆ, ಉಳಿದ ಕ್ಯಾಬಿನೆಟ್ ಮಂತ್ರಿ ಪಟ್ಟದ ಬಗ್ಗೆ, ಅಳಿದುಳಿದ ಪ್ರಾಧಿಕಾರ ಸೊಸೈಟಿಗಳ ಅಧ್ಯಕ್ಷ ಸ್ಥಾನಗಳೆಲ್ಲ,  ಶಕ್ತಿ ಜಾತಿ ಎಲ್ಲವನ್ನು ಪರಿಗಣಿಸಿ ಹಂಚಲಾಗುತ್ತದೆ, ನಂತರ ಪತ್ರಿಕೆಗಳೆಲ್ಲ ಚುನಾವಣೆ ಬಿಸಿಕಳೆದು ಕೊಂಡು, ತೆಂಡೂಲ್ಕರನ ಹಿಂದೊ, ಇಲ್ಲ ಬಿಗ್ ಬಾಸ್ ಮನೆಯತ್ತಲೊ ನಡೆಯುತ್ತಾರೆ, ಜನ ಸಾಮಾನ್ಯ ಅನುದಿನದ ಸಂಸಾರ ತೂಗಿಸಲು ಗೋಳಾಡುತ್ತಾನೆ, ಅಯ್ಯಯ್ಯೊ ಅಕ್ಕಿ  ೫೦ ರೂಪಾಯಿ ಆಯಿತಲ್ಲ, ತರಕಾರಿ ಇಷ್ಟೊಂದು ರೇಟೆ ಎನ್ನುವ ಅವನ ಉದ್ಗಾರಗಳಿಗಳು, ಮಂತ್ರಿವರ್ಯರ ತಣ್ಣಾನೆಯ ಕಾರಿನೊಳಗೆ ಹೋಗುವದಿಲ್ಲ. ಹೋಗಲಿ ಬಿಡಿ , 
 
ಯಾವುದೆ ಪಕ್ಷ ಬರಬಹುದು, ಆದರೆ ಅವರಲ್ಲಿ ಈ ರೀತಿ ಬೇಡಿಕೆ ಇಡೋಣವೆ
 
ಮುಂದೆ ಚುನಾವಣಾ ಸಮಿತಿಯವರು ಬೆಕ್ಕು ಇಲ್ಲಿಯ ಚೆಲ್ಲಾಟದಂತೆ ಅಲ್ಲಿ ಇಲ್ಲಿ ಹಣ ಹಿಡಿಯುವ, ಬ್ಯಾನರ್ ಗಳನ್ನು ಪ್ರತಿಬಂದಿಸಿ ಏನೊ ಮಾಡಿಬಿಟ್ಟೆ ಎಂದು ಬೀಗುವ , ಸಣ್ಣ ಪುಟ್ಟ ಆಟಗಳನ್ನೆಲ್ಲ ಬಿಟ್ಟು , ಗಂಬೀರವಾದ ಕಾನೂನುಗಳ ಮೂಲಕ ರಾಜಕೀಯವನ್ನು ಶಿಸ್ತಿಗೆ ಒಳಪಡಿಸುವ ಕಾನೂನುಗಳನ್ನು ತರಲು ಪ್ರಯತ್ನ ಪಡಬಹುದು
 
೧. ಯಾವುದೆ ರಾಜಕೀಯ ಪಕ್ಷ ಚುನಾವಣೆಯಲ್ಲಿ ಚಿನ್ಹೆಯನ್ನು ಪಡೆದು ಸ್ಪರ್ದಿಸಲು, ಪಕ್ಷ ಸ್ಥಾಪನೆಯಾಗಿ ಚುನಾವಣ ದಿನಾಂಕಕ್ಕೆ ಕನಿಷ್ಣ  ಐದು ವರ್ಷವಾಗಿರಬೇಕು
 
೨. ಯಾವುದೆ ಪಕ್ಷ ಒಬ್ಬ ಅಭ್ಯರ್ಥಿಗೆ ತನ್ನ ಪಕ್ಶದ ಬೀ ಫಾರ್ಮ್ ಕೊಟ್ಟು ತನ್ನ ಪರವಾಗಿ ಚುನಾವಣೆಯಲ್ಲಿ ನಿಲ್ಲಿಸಲು, ಚುನಾವಣ ದಿನಾಂಕಕ್ಕೆ ಆ ಅಭ್ಯರ್ಥಿ ಕನಿಷ್ಟ ಪಕ್ಷ ಐದು ವರ್ಷ ಸತ್ತತ ಆ ಪಕ್ಷದ ಮೆಂಬರ್ ಆಗಿರಬೇಕು, ಇಲ್ಲದಿದ್ದರೆ ಅವನಿಗೆ 'ಬಿ' ಫಾರ್ಮ್ ಕೊಡುವಂತಿಲ್ಲ
 
೩. ಎರಡನೆ ಭಾರಿ ನೊಂದಾಯಿತ ಪಕ್ಷವೊಂದು ಚುನಾವಣೆಯಲ್ಲಿ ಸ್ಪರ್ದಿಸಲು , ಹಿಂದಿನ ಚುನಾವಣೆಯಲ್ಲಿ ಆ ಪಕ್ಷ ಕಡೇಯ ಪಕ್ಷ ಒಟ್ಟು ಮತದಾನದ ಕನಿಷ್ಟ  ೧- ರಿಂದ ೫ ಪ್ರತಿಶತ ಮತವನ್ನಾದರು ಪಡೆದಿರಬೇಕು. ಹಾಗು ಚುನಾವಣೆಯಲ್ಲಿ ಕಡಿಮೆ ಎಂದರು ಅರ್ದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ದಿಸಬೇಕು, ಇಲ್ಲದಿದ್ದರೆ ಅವರು ಗೆದ್ದು ಸರ್ಕಾರ ರಚಿಸುವದಾದರು ಹೇಗೆ ? , ಸರ್ಕಾರ ರಚನೆಯಲ್ಲಿ ಅಪಮಾರ್ಗ ಹಿಡಿಯುವದಿಲ್ಲವೆ ?
 
೪. ಭಾರತದಲ್ಲಿ ಚುನಾವಣೆಯ ಉದ್ದೇಶವೆ , ಬಹುಸಂಖ್ಯಾತ ಪಕ್ಷವು ಸರ್ಕಾರ ರಚಿಸುವುದು. ಹಾಗಿರಬೇಕಾದಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪ್ರರ್ಧಿಸುವ ನಂತರ ಗೆದ್ದ ಪಕ್ಷಕ್ಕೆ ಹಣವನ್ನೊ ಮತ್ತೇನನ್ನೊ ಪಡೆದು ತನ್ನ ಬೆಂಬಲ ಸೂಚಿಸುವ ಅಗತ್ಯವಿದೆಯ? ಹಾಗಾಗಿ ಸ್ವತಂತ್ರ್ಯ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲುವಂತಿಲ್ಲ ಎಂದು ಕಾನೂನು ಮಾಡಬಹುದು, ಹಾಗೆ ಮಾಡಿದಲ್ಲಿ ಮೂಲಭೂತವಾದಕ್ಕೆ ಬಂಗ ಬರುತ್ತದೆ ಎಂದು ಕೆಲವರು ಬಂಡವಾದ ಮಾಡಬಹುದು, ಆದರೆ, ದೇಶದಲ್ಲಿ ಎಷ್ಟೋ ಜನರಿಗೆ ಅನ್ನು ತಿನ್ನುವ ನೀರು ಕುಡಿಯುವ , ಸೂರು ಪಡೆದುಕೊಳ್ಳುವ ಮೂಲಭೂತ ಹಕ್ಕೆ ಇಲ್ಲ ಹಾಗಿರಲು ಯಾರೊ ಒಬ್ಬನಿಗೆ ಚುನಾವಣೆಯಲ್ಲಿ ನಿಲ್ಲುವ ಅವಕಾಶ ತಪ್ಪಿದರೆ , ಅದರಿಂದ ದೇಶದ ಪ್ರಜಾಪ್ರಭುತ್ವಕ್ಕೆ ಯಾವ ತೊಂದರೆ ಇಲ್ಲ. ಅಷ್ಟಕ್ಕು ಸ್ವತಂತ್ರ್ಯ ಅಭ್ಯರ್ಥಿಗಳಿಂದ ಏನು ಲಾಭವೆಂದು ನನಗೆ ಅರ್ಥವಾಗುತ್ತಿಲ್ಲ,  
 
 
 
    ಇಂತಹ ಬದಲಾವಣೆಗಳೆಲ್ಲ ಆಗಬೇಕೆಂದು ಮತದಾರರು ಸರ್ಕಾರವನ್ನು ಒತ್ತಾಯಿಸಬೇಕು. ಆಗ ದಿನಾ ಒಂದು ಪಕ್ಷ ಕಟ್ಟುವುದು, ಚುನಾವಣೆ ಎನ್ನುವಾಗ ಮತ್ತೊಂದು ಪಕ್ಷಕ್ಕೆ ನೆಗೆಯುವುದು ತಪ್ಪುತ್ತದೆ. ಈಗಿರುವ ಪಕ್ಷಾಂತರಿ ಕಾನೂನು ಸತ್ತ ಹಾವು. 
Rating
No votes yet

Comments

Submitted by makara Sat, 05/04/2013 - 23:00

ಪಾರ್ಥ ಸರ್,
ಪಕ್ಷಾಂತರ ಮಸೂದೆ ಹೇಗೆ ಸತ್ತ ಹಾವೋ ಹಾಗೆ ಮುಂದೆ ಬರುವ ಕಾನೂನುಗಳೂ ಸಹ ಆಗುತ್ತವೆ. ನಾವು ಏನೇ ಕಾನೂನು ಮಾಡಿದರೂ ಸಹ ಚಾಪೆ ಕೆಳಗೆ ಇಲ್ಲಾ ರಂಗೋಲಿ ಕೆಳಗೆ ತೂರುವವರು ಇದ್ದೇ ಇರುತ್ತಾರೆ. ಇದಕ್ಕೆಲ್ಲಾ ಒಂದೇ ಅಸ್ತ್ರವೆಂದರೆ ಮತದಾರ ಜಾಗೃತನಾಗಬೇಕು. ಸರಿಯಾದ ವ್ಯಕ್ತಿಗೆ ಮತವನ್ನು ಕಡ್ಡಾಯವಾಗಿ ಹಾಕುವುದು.