"ಅ", ಎಂದರೆ ಅಮ್ಮ. ಇದು ಕೇವಲ ಅಕ್ಷರಮಾಲೆಯ ’ಒಣ ಪದ ಅಮ್ಮನಲ್ಲ’ !
’ಅಮ್ಮ' ಎಂಬ ಪದ ಕೇಳಿದರೆ ಸಾಕು ಕಿವಿಗಳಿಗೆ ಅಮೃತ ಹೊಯ್ದಂತೆ ಭಾಸವಾಗುತ್ತದೆ. ಅಮ್ಮನ ಪ್ರೀತಿಯಮುಂದೆ ಜಗತ್ತಿನ ವ್ಯಾಪಾರಗಳೆಲ್ಲವೂ ಎಲ್ಲವೂ ಸಪ್ಪೆಯಾಗಿ ತೋರುವುದು ಸ್ವಾಭಾವಿಕ.
ಅಮ್ಮ, ಎಂದರೆ, ಸಮಾಧಾನ, ಸಹನೆ, ತ್ಯಾಗ, ಸಮರ್ಪಣೆ, ಸಂತಸ, ಸೌಂದರ್ಯ, ಮತ್ತು ವಿಶ್ವದ ಎಲ್ಲ ವಸ್ತುಗಳೂ ದೊರಕಿದ ಅನುಭವವಾಗುವುದು ಎಲ್ಲರಿಗೂ ತಿಳಿದ ವಿಶಯ ! ಅದೊಂದು ಅಲೌಖಿಕ ಅನುಭವ. ಇಂದು ವಿಶ ತಾಯಿಯದಿನವೆಂದು ಆಚರಿಸುತ್ತಿರುವುದು ತಿಳಿದಮೇಲೆ ಆ ಚೇತನಕ್ಕೆ ನಮಿಸುವುದು ನನ್ನ ಆದ್ಯಕರ್ತವ್ಯನೆನ್ನಿಸಿತು. ಈ ಅಮಿತಾನಂದವನ್ನು ನಮ್ಮ ಸಂಪದದ ಗೆಳೆಯರ ಜೊತೆ ಹಂಚಿಕೊಳ್ಳೋಣ ಎನ್ನಿಸಿತು.
ಸರ್ವರಿಗೂ ನಮಸ್ಕಾರ.
ಧನ್ಯವಾದಗಳು...
-ಹೊರಂಲವೆಂ,
ಮುಂಬೈ-೪೦೦೦೮೪
ಮೊ : ೯೮೬೭೬೦೬೮೧೯
Link : ಸಂಪ್ರದಾಯಗಳ ಹಾಡಿನ ರಾಧಮ್ಮನವರು ನಮ್ಮ ಹೆತ್ತ ತಾಯಿ (ನನ್ನ ಅಣ್ಣಂದಿರು, ನಾಗರಾಜ್, ಮತ್ತು ರಾಮಕೃಷ್ಣ, ತಮ್ಮ ಚಂದ್ರಶೇಖರ)
Rating
Comments
ವೆಂಕಟೇಶ್ ಸರ್,
ವೆಂಕಟೇಶ್ ಸರ್,
ನಿಮ್ಮ ತಾಯಿಯವರನ್ನು ಕುರಿತಾದ ಲಿಂಕನ್ನು ಕೊಟ್ಟು ಅವರ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಮಾಡಿ ನಿಜವಾದ ಅರ್ಥದಲ್ಲಿ ತಾಯಂದಿರ ಆಚರಿಸಿದ್ದೀರ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ವೆಂಕಟೇಶ್ ಸರ್, by makara
ಧನ್ಯವಾದಗಳು. ನಮ್ಮ ತಾಯಿಯವರ ಗುಣ
ಧನ್ಯವಾದಗಳು. ನಮ್ಮ ತಾಯಿಯವರ ಗುಣ ಗಾನ ಮಾಡುತ್ತಿದ್ದೇನೆ ಅಂತ ಅನ್ನಿಸಬಹುದೇನೋ. ಅದೆಷ್ಟು ಸಹನೆ, ಕಸ್ಟ ಸಹಿಷ್ಣುತೆ, ಇರುವುದರಲ್ಲೇ ತೃಪ್ತಿ ಪಡುವ ಗುಣ, ದೇವರನಾಮವನ್ನೋ ಏನಾದರೂ ಹೇಳುತ್ತಾ ಇಲ್ಲವೇ ಕೆಲಸಮಾಡಿಕೊಳ್ಳುತ್ತಾ ಅವರು ಮನರಂಜನೆ ಮಾಡಿಕೊಳ್ಳುತ್ತಿದ್ದರು. ಅಂತಹ ಕಗ್ಗ ಹಳ್ಳಿಯಲ್ಲಿ ಎಂದು ಅವರು ನನಗೆ ಬೇಜಾರು ಎಂದು ಹೇಳಿದವರಲ್ಲ. ನಮ್ಮಮ್ಮ ಆಗಿನಕಾಲದ ಕಾನ್ವೆಂಟ್ ಕಲಿತ ಹುಡುಗಿ. ದೊಡ್ಡ ಪರಿವಾರದಲ್ಲಿ ಬೆಳೆದವರು. ನಮ್ಮ ಹೊಳಲ್ಕೆರೆಯಲ್ಲಿ ಕೇವಲ 3-4 ಜನರ ಜೊತೆ ದೊಡ್ಡ ವಠಾರದಲ್ಲಿ ನೀರುಸೇಡುವುದು, ಬೀಸುವುದು, ಕುಟ್ಟುವುದು, ಮನೆ ಸಾರಿಸುವುದು, ಸುಣ್ಣ ಬಳಿಯುವುದು, ಪೇಟೆ ಭಾವಿಯಿಂದ ನೀರು ಸೊಂಟಾದಮೇಲೆ ಹೊತ್ತು ತರುವುದು, ಮೊದಲಾದ ಕಾರ್ಯಗಳನ್ನು ನಗುನಗುತ್ತಾ ವರ್ಷಾನುಗಟ್ಟಲೆ ಮಾಡಿದರಲ್ಲಾ ! ಅವರಿಗೆ ಶಿರಾ ಸಾಸ್ಥಾಂಗ ನಮಸ್ಕಾರಗಳನ್ನು ನಾವು ಮಾಡಬೇಕು. ಮಾತು ಮಾತಿಗೂ ಗಾದೆಗಳು, ಹಾಡುಗಳು, ಕೆಲವು ಸ್ವಾರಸ್ಯಕರ ಪ್ರಸಂಗಗಳು...ಅದ್ಭುತ. ಇದನ್ನು ತಮ್ಮ ಮುಂದೆ ಹಂಚಿಕೊಂದಬಾಳಿಕೆ ನನ್ನ ಮನಸ್ಸಿಗೆ ನೆಮ್ಮದಿಯಾಗಿದೆ !!
In reply to ಧನ್ಯವಾದಗಳು. ನಮ್ಮ ತಾಯಿಯವರ ಗುಣ by venkatesh
ಅಯ್ಯೋ ಈ ಸಾಲು ಮರೆತೆನಲ್ಲ.
ಅಯ್ಯೋ ಈ ಸಾಲು ಮರೆತೆನಲ್ಲ. ಎನ್ನುವ ಸೊಲ್ಲೇ ಇಲ್ಲ. ಕಂಚಿನ ಕಂಠದಲ್ಲಿ ಮೊದಲಿನಿಂದ ಕೊನೆಯವರೆಗೆ ನಿರರ್ಗಳವಾಗಿ ಹೇಳುತ್ತಿದ್ದರು...
In reply to ಧನ್ಯವಾದಗಳು. ನಮ್ಮ ತಾಯಿಯವರ ಗುಣ by venkatesh
ನಿಮ್ಮ ತಾಯಿಯವರಿಗೆ ನನ್ನದೂ
ನಿಮ್ಮ ತಾಯಿಯವರಿಗೆ ನನ್ನದೂ ಶಿರಸಾಷ್ಟಾಂಗ ನಮಸ್ಕಾರಗಳು. (ಮದರ್ಸ್ ಡೇ ಭಾರತದಲ್ಲಿ ಮೇ ಎರಡನೆ ಸಂಡೇ ದಿನ ಆಚರಿಸುವರು. http://en.wikipedia.org/wiki/Mother%27s_Day ) ನಮಗೆ ದಿನವೂ ಮದರ್ಸ್ ಡೇನೇ.
ವೆಂಕಟೇಶರೆ ತಾಯಿಯವರಿಗೆ ನನ್ನ ನಮನ
ವೆಂಕಟೇಶರೆ ತಾಯಿಯವರಿಗೆ ನನ್ನ ನಮನ , ಹಾಗೆ ಅವರ ಜೊತೆ ಮಗು ಕುಳಿತಿರುವ ಚಿತ್ರವಿದೆ ಅದು ನೀವೆನಾ??
In reply to ವೆಂಕಟೇಶರೆ ತಾಯಿಯವರಿಗೆ ನನ್ನ ನಮನ by partha1059
ಪಾರ್ಥರವರೇ, ವಿಚಾರಿಸಿದ್ದಕ್ಕೆ
ಪಾರ್ಥರವರೇ, ವಿಚಾರಿಸಿದ್ದಕ್ಕೆ ಧನ್ಯವಾದಗಳು.
ಆ ಮಗು ನಾನಲ್ಲ. ನಮ್ಮ ಅಣ್ಣ, ಶ್ರೀ. ನಾಗರಾಜ್ ರವರದು. ಅವರ ಜೊತೆ ಜನಿಸಿದ ಅವಳಿ-ಜವಳಿಗಳಲ್ಲಿ ಅವರು ಉಳಿದು ಮತ್ತೊಬ್ಬರು ಮೃತರಾದರು. ಹೀಗೆ ನಮ್ಮ ತಾಯಿಯವರು, 4 ಮಕ್ಕಳನ್ನು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಕಳೆದುಕೊಂಡು, ಬಹಳ ವ್ಯಥೆಪಟ್ಟರು. ನಂತರ, 'ವಿದುರಾಶ್ವತ್ಥ ಕ್ಷೇತ್ರದಲ್ಲಿ ನಾಗರ ಪ್ರತಿಷ್ಠೆ' ಮಾಡಿಸಿದ ಬಳಿಕ ಮತ್ತೆ 4 ಜನ ಜನಿಸಿದರು. ಅವರೆಲ್ಲ ಗಂಡು ಮಕ್ಕಳು,(ಎಲ್ಲರೂ ಗಂಡುಮಕ್ಕಳೆ) ನಾನು 3 ನೆಯವನು.