ಚುನಾವಣಾ ಫಲಿತಾಂಶ !
ಸಂಪದಕ್ಕ ಸಂಪದಕ್ಕ
ಉಸಿರ್ಯಾಕಿಂಗೆ ಬಿಗಿದಿತ್ತಕ್ಕ
ಎಲ್ಲಾರ ಹಂಗೆ ನಿಂಗೂ ಜೋಶಾ
ಏನಾಯ್ತು ಅಂತ ಫಲಿತಾಂಶ?
ಅಯ್ತಲ್ಲಕ್ಕ ಲೆಕ್ಕಾಚಾರ
ಆಗಲ್ಲ ಟೋಪಿ ವ್ಯವಹಾರ
ಮಾಡೋಂಗಿಲ್ಲ ಕುದುರೆ ವ್ಯಾಪಾರ
ಅವ್ರ ಕಾಲ್ಮೆಲವ್ರೆ ಸರದಾರ!
ಕೊಟ್ಟು ಕೊಳ್ಳೊ ಲೆಕ್ಕಾ ಇಲ್ಲ
ಮುಲಾಜಿಗ್ ಬೀಳೋ ದುಃಖ ಇಲ್ಲ
ಬ್ರೀಫ್ಕೇಸ್ ರೊಕ್ಕ ಬೇಕಾಗಿಲ್ಲ
ರೆಸಾರ್ಟು ಸುದ್ದಿ ಕೇಳಬೇಕಿಲ್ಲ!
ನಮ್ಬುಟ್ಟವ್ರೆ ಎಕ್ಕಾಮುಕ್ಕಾ
ಕೊಟ್ಬುಟ್ಟವ್ರೆ ಅಧಿಕಾರ ಚೊಕ್ಕ
ಮಣ್ಣಾಗ್ದಂಗೆ ಅವರಾಸೆ ದೋಸೆ
ಉಳ್ಸ್ಕೊಳ್ರಣ್ಣ ಈ ಸಲವಾದ್ರೂ ಭಾಷೆ!
ಕಚ್ಚಾಡ್ಕೊಳ್ದೆ ಸಿಗ್ಗಿಲ್ದಂಗೆ
ನಾಯಿ ನರಿಗಳ್ಗೆಗ್ಗಿಲ್ದಂಗೆ
ಡಿಸ್ಟಿಂಕ್ಷನ್ನಲ್ಲಿ ಓಟ್ ಹಾಕ್ದೊರ್ಗೆ
ಫಸ್ಟ್ ಕ್ಲಾಸ್ಲಾದ್ರು ಪಾಸ್ ಮಾಡುಸ್ರಣ್ಣ!
- ನಾಗೇಶ ಮೈಸೂರು, ಸಿಂಗಾಪುರದಿಂದ
Comments
ನಾಗೇಶ ಮೈಸೂರು ರವರಿಗೆ ವಂದನೆಗಳು
In reply to ನಾಗೇಶ ಮೈಸೂರು ರವರಿಗೆ ವಂದನೆಗಳು by H.A.Patil.
ಹಿರಿಯರಾದ ಪಾಟೀಲರಿಗೆ,
ಕರ್ನಾಟಕದ ಮತದಾರ ಪ್ರಬುದ್ಫ
In reply to ಕರ್ನಾಟಕದ ಮತದಾರ ಪ್ರಬುದ್ಫ by makara
ಶ್ರೀಧರ್ ಜೀ ನಿಮ್ಮ ಅಮೂಲ್ಯ ಮತ
In reply to ಶ್ರೀಧರ್ ಜೀ ನಿಮ್ಮ ಅಮೂಲ್ಯ ಮತ by venkatb83
ನಮಸ್ಕಾರ ವೆಂಕಟ್ ರವರಿಗೆ,
In reply to ಕರ್ನಾಟಕದ ಮತದಾರ ಪ್ರಬುದ್ಫ by makara
ನಮಸ್ಕಾರ ಶ್ರೀಧರರವರಿಗೆ,
ನಾಗೇಶ್ ಅವರೆ,
In reply to ನಾಗೇಶ್ ಅವರೆ, by Vasant Kulkarni
ನಮಸ್ಕಾರ ವಸಂತರವರೆ,