ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ

ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ

ಹಿಂದೊಮ್ಮೆ ನಮ್ಮ ಸುನಿಲ ಜಯಪ್ರಕಾಶರು 'ಊ' ವನ್ನು 'random' ಅರಿತದಲ್ಲಿ ಬಳಸಬಹುದೆಂದು ತೋರಿಸಿಕೊಟ್ಟಿದ್ದರು. ಇವತ್ತು(ಇವೊತ್ತು) ಹಳೆಗನ್ನಡದ ಹುಚ್ಚು ಹೆಚ್ಚಾಗಿ  ಕವಿರಾಜಮಾರ್ಗದ ಸಾಲುಗಳಲ್ಲಿ ಹಾಗೆ ಕಣ್ಣುಹಾಯಿಸಿದಾಗ ಅವರ ವಾದಕ್ಕೆ ಇಂಬು ಕೊಡುವ ಅಂಶಗಳನ್ನು ಗಮನಿಸಿದೆ. ಅದನ್ನೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.ಕವಿರಾಜಮಾರ್ಗದ ಬಿಡಿ ೧ ರ ೬೩ ನೇ ಪದ್ಯದಲ್ಲಿ ಹೀಗಿದೆ.

ನಿಲ್ತೋಳಂ ಬರ್ಪುದು ಸ
ಯ್ತಲ್ತೂರುಂ (ದೂರಮೆನೆಡೆತುಡಗರ್ಪೂರಂ)
ಕಲ್ತುಲ್ಲಿಂದೋಡವಮೆಂ
ಬಲ್ತುಣ್ಣಿಂ ತಂದ ಕೂೞನೂ ಸಂಗಮದೊಳ್

ಬಿಡಿಸಿದರೆ

"ನಿಲ್, ತೋಳಂ ಬರ್ಪುದು, ಸಯ್ತಲ್ತು, ಊರುಂ ದೂರಂ
 ಎನ್, ಎಡೆತುಡಗರ್ಪೂರಂ ಕಲ್ತು ಉಲ್ಲಿಂದೆ ಓಡುವಂ
ಎಂಬ ಅಲ್ತು, ತಂದ ಕೂೞಂ ಊ ಸಂಗಮದೊಳ್ ಉಣ್ಣಿಂ"

ಇದನ್ನು ಗಮನಿಸಿದರೆ 'ಊ' ಪಯಣಿಗ ತನ್ನ ಒಡಪಯಣಿಗರಿಗೆ ಕಾಡುದಾರಿಯಲ್ಲಿ ಹೋಗುತ್ತಿರುವಾಗ ಎಚ್ಚರಿಕೆ ಮಾತುಗಳನ್ನಾಡುತ್ತಿದ್ದಾನೆ ಅನ್ಸುತ್ತೆ. ನಿಲ್ಲು ತೋಳ ಬರುತ್ತಿದೆ; ಈಗ ನಮ್ಮ ಪಾಡು ನೆಟ್ಟಗಿಲ್ಲ(ಸಯ್ತಲ್ತು), ಊರು ಬೇರೆ ದೂರದಲ್ಲಿದೆ. ಇತ್ತ ಹಾದಿಗಳ್ಳರ(ಎಡೆತುಡಗರ್) ಕಾಟ ಬೇರೆ.ಓಡುವುದನ್ನು ಕಲಿತು ಉಲ್ಲಿ(random place) ಓಡಕ್ಕು ಕೂಡ ಆಗಲ್ಲ. ತಂದಿರುವ ಬುತ್ತಿ(ಕೂೞ)ನ್ನು 'ಊ'(random) ಕೂಡಲಿನಲ್ಲಿ/ಸಂಗಮದಲ್ಲಿ ತಿನ್ನಿ

ಈಗ ನೋಡೋಣ  ಹೇಗೆ'ಊ'ನಿಂದ ಕೆಲವು ಇಂಗಲೀಸ್ ಪದಗಳನ್ನು ಕನ್ನಡಯ್ಸಬಹುದು.

Random = ಊ
Randomness= ಊತನ
Random signal = ಊತೋರುಗ
Random process = ಊ+ಓರಣ= ಊವೋರಣ
Random sample = ಊಮಾದರಿ

ಈಗ ನೋಡೋಣ  ಹೇಗೆ 'ಉಲ್ಲಿ' ಬಳಸಬಹುದು.
೧) let's meet somewhere
         ನಾವು ಉಲ್ಲಿ ಸಿಗೋಣ.
೨) That shop is somewhere on this road
         ಆ ಅಂಗಡಿ ಈ ದಾರಿವುಲ್ಲಿದೆ (ದಾರಿ+ಉಲ್ಲಿದೆ).

ಕವಿರಾಜಮಾರ್ಗದಲ್ಲಿ ಹೀಗೆ ಹಲವು ಕನ್ನಡದ ಕೆಲವು ನಿಬ್ಬರ/ವಿಶೇಶಗಳು ಕಾಣಿಸುತ್ತವೆ. ಆ ನಿಬ್ಬರಗಳನ್ನು ಬಳಸಿಕೊಂಡು ಈಗಿನ ಕಾಲದ ಕೆಲವು ಹೊರಗಿನಿಂದ(ಇಂಗಲೀಸ್) ಬಂದ ಹೊಸ ವಿಶ್ಯ/ಒರೆಗಳನ್ನು ಕನ್ನಡಯ್ಸುಬಹುದು.

ತೊಡರ್ಚು = ಕಟ್ಟು,ಸೇರಿಸು , ಒಳಗಿಸಿಕೊಳ್ಳು (ನುಡಿಯಂ ಛಂದದೊಳೊಂದಿರೆ ತೊಡರ್ಚಲರಿವಾತನಾತನಿಂದಂ ಜಾಣಂ ತಡೆಯದೆ ಮಹಾಧ್ವಕೃತಿಗಳನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ)
ನಿಕ್ಕುವ = ನಿಶ್ಚಿತ = definite

Rating
No votes yet

Comments