ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಏನು ಹೇಳಿದೆ?

ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಏನು ಹೇಳಿದೆ?

     ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ(ರ)ರವರು ಪವಿತ್ರ ಕುರ್ ಆನಿನ ಭಾವಾನುವಾದ ಮತ್ತು ಸಂಕ್ಷಿಪ್ತ ವಿವರಣೆಯನ್ನು ಉರ್ದುವಿನಲ್ಲಿ ಮಾಡಿದ್ದು, ಇದನ್ನು ಶ್ರೀ ಎಸ್. ಅಬ್ದುಲ್ ಗಫ್ಫಾರ್ ರವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಈ ಕೃತಿಯನ್ನು ಮೌಲಾನಾ ಸಯ್ಯದ್ ಯೂಸುಫ್, ಇಬ್ರಾಹಿಮ್ ಸಯೀದ್ ಮತ್ತು ಮುಹಮ್ಮದ್ ಸಾದುಲ್ಲಾರವರು ಸಮೀಕ್ಷಿಸಿದ್ದಾರೆ. ಈ ಕೃತಿಯಲ್ಲಿ ಕುರ್ ಆನಿನ ಪದಶಃ ಅನುವಾದ ಮಾಡದೆ ಅದರ ಭಾವಾನುವಾದವನ್ನು ಸಂಕ್ಷಿಪ್ತ ಅಡಿ ಟಿಪ್ಪಣಿಗಳೊಂದಿಗೆ ಮಾಡಲಾಗಿದೆ. ಪದಶಃ ಅನುವಾದದಲ್ಲಿ ಪೂರ್ಣ ಮತ್ತು ಸರಿಯಾದ ಅರ್ಥ ಹೊರಹೊಮ್ಮುವುದು ಕಷ್ಟವೆಂಬ ಕಾರಣದಿಂದ, ಅಲ್ಲದೆ ಪದಶಃ ಅನುವಾದದ ಕೃತಿಗಳು ಲಭ್ಯವೂ ಇರುವುದರಿಂದ ಈ ರೀತಿ ಮಾಡಲಾಗಿದೆಯೆಂದು ಅನುವಾದಕರು ನಿವೇದಿಸಿಕೊಂಡಿದ್ದಾರೆ. 

    ಈ ಕೃತಿಯಲ್ಲಿ ತಿಳಿಸಿರುವಂತೆ, ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಬರುವ ಉಲ್ಲೇಖಗಳ ಭಾವಾನುವಾದ ಮತ್ತು ಅಡಿ ಟಿಪ್ಪಣಿಗಳು ಹೀಗಿವೆ: 

 

 

 

 

Comments

Submitted by H A Patil Thu, 04/04/2013 - 15:58

ಕವಿ ನಾಗರಾಜರವರಿಗೆ ವಂದನೆಗಳು ' ಗೋ ಹತ್ಯೆ ಕುರಿತು ಕುರಾನಿನಲ್ಲಿ ಏನು ಹೇಳಿದೆ ' ಉಪಯುಕ್ತ ಮಾಹಿತಿಯುಳ್ಳ ಲೇಖನ. ಎಸ್ ಅಬ್ದುಲ್ ಗಫಾರರ ಕನ್ನಡಾನುವಾದದ ಕೃತಿಯ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ. ಯಾವುದೆ ಕೃತಿಗಳ ಭಾವಾನುವಾದಗಳು ಸಾಮಾನ್ಯ ಓದುಗರಿಗೆ ಹಿಡಿಸುತ್ತವೆ, ಅನ್ಯ ಭಾಷೆಯ ಕೃತಿಗಳ ಪರಿಚಯ ಕನ್ನಡದ ಓದುಗರಿಗೆ ಆಗುತ್ತದೆ. ಧನ್ಯವಾದಗಳು.
Submitted by kavinagaraj Tue, 04/23/2013 - 22:53

In reply to by H A Patil

ಧನ್ಯವಾದಗಳು, ಪಾಟೀಲರೇ. . . . . . . ಇಂತಹ ವಿಷಯಗಳಲ್ಲಿ ಮುಕ್ತ ಅಭಿಪ್ರಾಯಗಳು ಓದುಗರಿಂದ ಬರಲಾರದೆಂಬ ನನ್ನ ನಿರೀಕ್ಷೆ ನಿಜವಾಗಿದೆ.
Submitted by makara Wed, 04/24/2013 - 08:21

ಕವಿಗಳೇ, ಪಾಟೀಲ್ ಸರ್ ಹೇಳಿರುವಂತೆ ನಿಮ್ಮ ಲೇಖನ ಕುರಾನಿನ ಕನ್ನಡ ಅನುವಾದದ ಪುಸ್ತಕದ ಬಗೆಗೆ ಒತ್ತು ಕೊಟ್ಟಿದೆ ಎನಿಸುತ್ತದೆ. ಇದರಲ್ಲಿ ನೀವು ಕೊಟ್ಟಿರುವ ಕುರಾನಿನ ಪುಟಗಳಲ್ಲಿ ವಿಷಯದ ಮಂಡನೆ ಅಸ್ಪಷ್ಟವಾಗಿದೆ ಹಾಗಾಗಿ ನೀವೆಣಿಸಿದಂತೆ ಈ ಲೇಖನಕ್ಕೆ ಮತ್ತು ಇಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಭಂದಿಸಿದಂತೆ ಮುಕ್ತ ಅಭಿಪ್ರಾಯ ಬರಲು ಕಷ್ಟವಾಗುತ್ತದೆ.
Submitted by kavinagaraj Thu, 04/25/2013 - 14:45

In reply to by makara

ಧನ್ಯವಾದ ಶ್ರೀಧರರೇ. ನನ್ನ ಪ್ರತಿಕ್ರಿಯೆ ಪಾಟೀಲರನ್ನು ಕುರಿತು ಅಲ್ಲ. ಕುರ್ ಆನ್ ಬಗ್ಗೆ ಚರ್ಚಿಸಲು, ಮಾತನಾಡಲು ಜನರು ಬಯಸದಿರುವ ಕಾರಣದ ಬಗ್ಗೆ ಹೇಳಿದ್ದೆ. ಇತರರ ಶ್ರದ್ಧಾವಿಷಯಗಳಲ್ಲಿ ಅವರ ಅಸಹನೆ, ಕರುವನ್ನು ಪೂಜಿಸುವ ಜನರನ್ನು ಕೊಲ್ಲಿರಿ ಎಂಬ ಕುರ್ ಆನ್ ಹೇಳಿಕೆ ದಿಗ್ಭ್ರಮೆ ಹುಟ್ಟಿಸುವಂತಹದು.
Submitted by abdul Thu, 05/16/2013 - 16:35

ಗೋಹತ್ಯೆ ಕುರಿತು ಕುರ್ ಆನಿನಲ್ಲಿ ಏನು ಹೇಳಿದೆ? ತಮ್ಮ ಈ ಲೇಖನವನ್ನು ಇಂದು ನೋಡಿದೆ. ಕುರ್'ಆನಿನಲ್ಲಿ ಬರುವ ಹಲವು ವಿಚಾರಗಳು ಆಯಾ ಕಾಲದ ನಡೆ, ಸಂಸ್ಕಾರಗಳಿಗೆ ಸ್ಪಂದಿಸುವಂಥವು. ಮಾಂಸಾಹಾರದ ಬಗ್ಗೆ ಕುರಾನಿನಲ್ಲಿ ಹೇಳಿದ್ದರೂ ಒಬ್ಬ ಮುಸ್ಲಿಂ ಸಸ್ಯಾಹಾರಿಯಾಗಲು ಇಸ್ಲಾಮ್ ಅಡ್ಡ ಬರುವುದಿಲ್ಲ. ಅದೇ ರೀತಿ ಹಲವು ಅಪರಾಧಗಳಿಗೆ ಇರುವ ಶಿಕ್ಷೆಗಳನ್ನು ಎಲ್ಲ ಮುಸ್ಲಿಂ ದೇಶಗಳೂ ಪಾಲಿಸುತ್ತಿಲ್ಲ. ವಿವಾಹ, ವಿಚ್ಛೇದನೆ, ಮುಂತಾ ವಿಷಯಗಳಲ್ಲೂ ಹಲವು ದೇಶಗಳು ಹಲವು ತೆರನಾದ ಕಾನೂನುಗಳನ್ನು ಮಾಡಿ ಕೊಂಡಿವೆ. ಕುರ್'ಆನಿನಲ್ಲಿ ಬರುವ ಸೂಕ್ತಗಳನ್ನು ಅನುಕೂಲಕ್ಕೆ ಬೇಕಾದ ರೀತಿಯಲ್ಲಿ ಹೆಕ್ಕಿ ವಿಮರ್ಶೆಗೆ ಒಳಪಡಿಸಿದಾಗ ಅಭಾಸ ಉಂಟಾಗುತ್ತದೆಯೇ ವಿನಃ ಜ್ಞಾನೋದಯ ವಾಗೋಲ್ಲ. ಪೂರ್ವಗ್ರಹ ಪೀಡಿತರಾಗಿ ಯಾವುದೇ ಧಾರ್ಮಿಕ ಗ್ರಂಥಗಳನ್ನು ಓದಿದರೂ ನಮಗೆ ಅದರ ಸಾರ ಅರಿವಾಗದು. ವೇದಗಳಲ್ಲಿ', ಮನುಸ್ಮೃತಿ ಗಳಲ್ಲಿ ವಿವಿಧ ಸಮಾಜದ ಜನರನ್ನು ನಡೆಸಿಕೊಳ್ಳುವ, ಶಿಕ್ಷೆಗೆ ಒಳಪಡಿಸಿ ಕೊಳ್ಳುವ ಉಲ್ಲೇಖಗಳಿಗೂ ಮೇಲಿನ ಮಾತು ಅನ್ವಯ. ಧರ್ಮ ಗ್ರಂಥಗಳನ್ನು ತಿಳಿಯಾದ ಮನಸ್ಸಿನಿಂದ ಅಭ್ಯಸಿಸಿದಾಗ ನಮಗೆ ಆಗುವ ಅನುಭವವೇ ಬೇರೆ.
Submitted by kavinagaraj Fri, 05/17/2013 - 08:08

In reply to by abdul

ಧನ್ಯವಾದ, ಅಬ್ದುಲ್ಲರೇ. ನಾನು ಲೇಖನದಲ್ಲಿ ನನ್ನ ಅನಿಸಿಕೆಗಳನ್ನೇನೂ ತಿಳಿಸಿಲ್ಲ. ಆದರೆ ಕುರ್ ಅನಿನಲ್ಲಿ ಇರುವುದನ್ನು ಯಥಾವತ್ ತಿಳಿಸಿರುವೆ. ಈ ಸಾಲುಗಳನ್ನು ಯಥಾವತ್ ಅರ್ಥೈಸಿಕೊಳ್ಳುವವರಿಂದ ಅನುಸರಿಸುವವರೂ, ಓದುವವರೂ ಗೊಂದಲಕ್ಕೆ ಈಡಾಗುವರು. ಈ ವಾಕ್ಯಗಳ ಕುರಿತು ನೀವೇ ಒಂದು ವಿವರಣಾತ್ಮಕ, ವಿಶ್ಲೇಷಣಾತ್ಮಕ ಲೇಖನ ಬರೆಯಲು ಕೋರುವೆ.