ಶ್ವಾನ (ಪ್ರೇಮ ) ಪುರಾಣ
ಮೇಲಿನ ಹಣೆ ಬರಹ ಓದಿ ಏನು ಗೆಸ್ ಮಾಡಿದಿರಿ? ಲವ್ story ಅಂತಲೇ ... ಇರಬಹುದು.. ಓದುತ್ತ ಹೋದರೆ ನಿಮಗೆ ತಿಳಿಯುತ್ತೆ ..
ನಮ್ಮ ಪರಿಚಯಸ್ಥರ ಮನೆಯಲ್ಲಿ ಒಂದು ಗಂಡು ನಾಯಿಯೊಂದು ಇತ್ತು. ನಾವು ಅದರ ಮನೆಗೆ ಹೋದಾಗಲೆಲ್ಲ ಬಾಲ ಅಲ್ಲಾಡಿಸುತ್ತ ಇತ್ತು... ಬಾಲ ಅಲ್ಲಾಡಿಸುವ ಉದ್ದೇಶ ಅಥವಾ ಅರ್ಥ ನಮಗೆ ಗೊತ್ತಿಲ್ಲ.. ಇದೇನು ಇವರೇ ಮತ್ತೆ ಬಂದರಾ !!! ಅಯ್ಯೋ ಇವರೇನಾ !! ಅನ್ನೋ ಅರ್ಥದಲ್ಲಿ ಇರಬಹುದು.. ಏನಾದರು ಇರಲಿ ಬಿಡಿ... ನಾಯಿಯನ್ನು ನಾವುಗಳು ಯಾವಾಗಲೂ ದೂರದಿಂದನೆ ಮಾತು ಕಥೆ ...
ಎಲ್ಲಿ ನಮ್ಮ ಮೇಲೆ ಹಾರಿಬಿಡುತ್ತೋ ಎಂಬ ಹೆದರಿಕೆಯಿಂದಲೇ ನಮ್ಮ ಪ್ರೀತಿಯನ್ನು ದೂರದಿಂದಲೇ ಮಾತುಗಳಿಂದ ಮಾತ್ರ ವ್ಯಕ್ತ ಪಡಿ ಸುತಿದ್ದೆವು.
ಹೀಗೆ ಒಂದು ದಿನ ನಾಯಿ owner ( Dog 's Dad ) ಮನೆಗೆ ಹೊದೆವು. ನಮಗೂ ಸ್ವಲ್ಪ ನಾಯಿ ಕಂಡರೆ ಇಷ್ಟ ಓನರ್ ಮಾತಾಡಿಸುವ ಸಲುವಾಗಿ ನಾಯಿಯನ್ನು ಒಂದು ಸಲ ನೋಡಿ ಬರೋಣ ಎನ್ದು. .... ಯಾವಾಗಲೂ ಬಾಲ ಅಲ್ಲಾಡಿಸಿ ನಮ್ಮನ್ನು ಬರ ಮಾಡಿಕೊಳ್ಳು ತಿದ್ದ ನಾಯಿ ಪೆಚ್ಚು ಮುಖ ಇಟ್ಟುಕೊಂಡು ಕೂತಿದೆ ... ಅಯ್ಯೋ ಅಂತ ಚೆನ್ನಿದ್ದ ನಾಯಿಗೆ ಏನು ಹುಶಾರಿಲ್ಲವೇ ಎಂದು ನಮ್ಮ ಕಳಕಳಿ ತೋರಿಸಿದೆವು ನಾಯಿ ಓನರ್ ಹತ್ತಿರ.. ಅವರೆಂದರು ಏನಿಲ್ಲ ಸ್ವಲ್ಪ ದಿನಗಳ ಕೆಳಗೆ ನಮ್ಮ ಫ್ರೆಂಡ್ ಒಬ್ಬರು ಅವರ ಹೆಣ್ಣು ನಾಯಿಯನ್ನು 1 5 ದಿನ ಬಿಟ್ಟು ಹೊಗಿದ್ದರು. ಈಗ (ಶ್ವಾನ) ಅವಳಿಲ್ಲ ಅದಕ್ಕೆ !!!! ಓಹೋ ಅರ್ಥವಾಯಿತು ಅರ್ಥವಾಯಿತು.. ಇದು ಶ್ವಾನ ವಿರಹ ವೇದನೆ !!!!!
ಈಗ ನಿಮಗೆಲ್ಲ ಅರ್ಥ ಆಗಿರಬಹುದು ನಾನು ಯಾರ ಪ್ರೇಮ ಪ್ರಸಂಗ ಬರೆಯುತ್ತಿದ್ದೇನೆ ಎನ್ದು... !!!!!!!
ನಾನು ಅವರ ಹತ್ತಿರ ಹೆಣ್ಣು ನಾಯಿ ಬಂದಾಗ ನಿಮ್ಮ ನಾಯಿಯ ಸ್ವಭಾವ ಹೇಗಿತ್ತು ಎಂದು ವಿಚಾರಿಸಿದೆ ... ಅದನ್ನು ನೀವುಗಳು ನನ್ನ ಬರಹದಲ್ಲಿ ಓದಿ .....
ಗಂಡು ನಾಯಿಗೆ ಪಾಪ ಬೆಳಿಗ್ಗೆ ವಾಕಿಂಗ್ ಆಮೇಲೆ ಅದರ ಊಟ ಮತ್ತೆ ಮನೆ ಕಾಯುವ ಕೆಲಸ ಓನರ್ ಮತ್ತೆ ಅವರ ಹೆಂಡತಿ ಬಂದ ಮೇಲೆ ಮತ್ತೆ ವಾಕಿಂಗ್ .. ಇಷ್ಟೇ ಅದರ ದಿನಚರಿಯಾಗಿತ್ತು. ನಾಯಿಗಳು ನಮ್ಮ ತರ ಅಂದರೆ ಮನುಷ್ಯರ ತರ ನನಗೆ ಈ routine ಬೇಸತ್ತಿದೆ ಎಂದು ಯಾವಾಗಲೂ ಹೇಳುವುದಿಲ್ಲ ನೊಡಿ .... ಪಾಪ ನಾಯಿ ದಿನಚರಿಯನ್ನು ತುಂಬಾನೆ ಇಷ್ಟ ಪಡುತಿತ್ತು ...
ಇಲ್ಲಿ ನಾವಿರುವ ದೇಶದಲ್ಲಿ ನಾಯಿ ಸಾಕುವುದು ಎಂದರೆ ಇನ್ನೊಂದು ಮಗುವನ್ನು ಸಾಕಿದ ಹಾಗೆ ಎಂದು ಎಲ್ಲರೂ ಹೇಳುತ್ತಾರೆ .... ನಾಯಿ ವಾಕಿಂಗ್ ಕರೆದುಕೊಂಡು ಹೋಗದಿದ್ದರೆ ಗಲಾಟೆ ಮಾಡುತ್ತೆ ಅದೇ ಮಗು.. ಚಿನ್ನು ನನಗೆ ಪಾರ್ಕ್ ಕರೆದುಕೊಂಡು ಹೋಗಲು ಆಗಲ್ಲ Tv ನೊಡುತ್ತಿರುಎಂದರೆ ಸುಮ್ಮನಾಗುತ್ತೆ .... ವ್ಯತ್ಯಾಸ ಅದೇನೇ ಇರಲಿ.... ನಾನು ಹೇಳಲು ಹೊರಟಿರುವ ವಿಷಯ ನಾಯಿ ಪ್ರೇಮ ಪುರಾಣ..
ದೇವರಿಗೆ ಎಲ್ಲ ಗೊತ್ತು ಪಾಪ ಈ ನಾಯಿಯ ಮೇಲೆ ಸ್ವಲ್ಪ ಕರುಣೆ ಉಕ್ಕಿ ಅದರ ದಿನಚರಿಯನ್ನು ಸ್ವಲ್ಪ ಬದಲಾಯಿಸೋಣ ಎನ್ದು.. ಈ ನಾಯಿಯ ಮನೆಗೆ ಜೋಡಿ ನಾಯಿಯನ್ನು ಕಳಿಸಿದ ....
ಹೆಣ್ಣು ನಾಯಿ ಮನೆಗೆ (ಅಕ್ಕಿ ಬೆಲ್ಲ ಒದ್ದು ) ಬಂತು !!! ಗಂಡು ನಾಯಿ ತುಂಬಾ ದಿನದಿಂದ ತನ್ನ ಪ್ರೇಮಿಗೆ ಕಾಯುವ ರೀತಿ ಬರಮಾಡಿಕೊಂಡಿತು ...
ನಾನೂ ಯಾವುದೂ ಅತಿಶಯವಾಗಿ ಹೇಳುತ್ತಿಲ್ಲ ... ಓನರ್ ಹೇಳಿದ ವಿಷಯವನ್ನೇ ಹಾಸ್ಯದ ಒರೆ ಹಚ್ಚಿ ಬರೆಯುತಿದ್ದೇನೆ ....
ಹೆಣ್ಣು ನಾಯಿಯ ಓನರ್ holiday 1 5 ದಿನ ಮಾತ್ರ ಇವರ ಮನೆಯಲ್ಲಿ ಬಿಟ್ಟಿ ದ್ದರು ... ನಮ್ಮ Hero ನಾಯಿಯ Duet ಶುರುವಾಯಿತು ನೋಡಿ ... ಪಾಪ ಅವುಗಳಿಗೆ ಹಾಡಲು ಬಂದಿದ್ದಾರೆ ಪ್ರೇಮ ಲೋಕದಿಂದ ನನಗಾಗಿ ಬಂದ ಶ್ವಾನವೇ ಅಂತ ಒಂದು ಕಂಪೋಸ್ ಮಾಡಿ ರಾಗ ಹಾಕಿ ಆಸ್ಕರ್ ಕೂಡ ಬಂದು ಬಿಡುತ್ತಿತ್ತೋ ಏನೋ ಗೊತ್ತಿಲ್ಲ ....
ಹೆಣ್ಣು ನಾಯಿಯ ಓನರ್ ಅದರೆದೆ ಡಾಗ್ ಫುಡ್ ಬೇರೆ ಬ್ರಾಂಡ್ ತಂದು ಕೊಟ್ಟಿದ್ದರಂತೆ ... ಗಂಡು ನಾಯಿಯನ್ನು ಮೀಟ್ ಮಾಡಿದ ಮೇಲೆ ಅದು ತನ್ನ ಬ್ರಾಂಡ್ ಫುಡ್ ತಿನ್ನದೇ ಗೆಳೆಯನ ಬ್ರಾಂಡ್ ಫುಡ್ ಮಾತ್ರ ತಿನ್ನತೊಡಗಿತು .. ನೋಡಿ ಜೋಡಿ ಅಂದರೆ ಹೇಗಿರಬೆಕು.. ಅಂತ ತೋರಿಸುವ ಗುಣ.. ಒಂದೇ ತಟ್ಟೆಯಲ್ಲಿ ತಿನ್ನು.. ಒಂದೇ ಮಣ್ಣ ಮೇಲಿರು ಅಂತ ಅದರ policy ಏನೋ ಗೊತ್ತಿಲ್ಲ..
ಗಂಡು ನಾಯಿಯ ದಿನಚರಿ ಬದಲಾಯಿತು.. ಬೆಳಿಗ್ಗೆ ಏಳು ಪ್ರೇಮಿಯ ಜೊತೆ ವಾಕಿಂಗ್ ... ಬಂದು ಇಬ್ಬರೂ ಜೊತೆಗೂಡಿ ತಿಂಡಿ ... ಬೇಕೋ ಬೇಡವೋ ಎನ್ನುತ್ತಾ ಓನರ್ ಮೇಲೆ ಹಾರಿ ಟಾಟಾ ... ಮತ್ತೆ ಪ್ರೇಮಿ ಜೊತೆ ಪ್ರಣಯ...... ಸಾಯಂಕಾಲ ಮತ್ತೆ ಪ್ರೇಮಿ ಜೊತೆ ವಾಕಿಂಗ್ ರಾತ್ರಿ ಊಟ ... ನಮ್ಮ ಓನರ್ ಮತ್ತು ಅವರ ಹೆಂಡತಿ ಟಿವಿ ನೋಡುತಿದ್ದಾಗ ಇದೇನಪ್ಪ ನಮ್ಮ ನಾಯಿ ಇಷ್ಟು silent ಆಗಿದೆ ಏನೆಂದು ನೋಡಿದರೆ ಎರಡೂ ನಾಯಿಗಳು ಎದುರು ಬದರು ಕೂತು ಕಣ್ಣಲ್ಲಿ ಕಣ್ಣಿಟ್ಟು ಪ್ರೇಮ exchange ಮಾಡಿಕೊಳ್ಳುತ್ತ ಇವೆ. ಪಾಪ ಇಬ್ಬರನ್ನೂ ಅವರ ಪಾಡಿಗೆ ಹೊರಗಡೆ ಕಳಿಸಿದ್ದಾರೆ ಮರ ಸುತ್ತಿ ಹಾಡಾದರೊ ಹೇಳಬಹುದಿತ್ತು ... ಪಾಪ ಓನರ್ ಬೇರೆ ಅಲ್ಲೇ ನೊಡುತ್ತಿರುತ್ತಾನೆ ... ಮತ್ತೆ ನಾಯಿಗಳು ಇರುವವರು ಸುಮ್ಮನೆ ಅದರ ಬಾಲದ ಹಿಂದೆ ತಿರುಗುವುದನ್ನು ನೋಡಿರಬಹುದು ... ಇಲ್ಲಿ ಗಂಡು ಮತ್ತು ಹೆಣ್ಣು ನಾಯಿ... ಅದರ ಬಾಲ ಇದು ಇದರ ಬಾಲ ಅದು ಹಿಡಿಯಲು ತಿರುಗಿ ತಿರುಗಿ ಒಳ್ಳೆ ಡುಯೆಟ್ ಆಡಿದವು ...
1 5 ದಿನ ಕಳೆಯಿತು .. ಹೆಣ್ಣು ನಾಯಿ ಓನರ್ ವಾಪಸ್.. ವಿಲ್ಲನ್ ತರ ಅನ್ನಿಸಿರಬಹುದು ನಮ್ಮ ಗಂಡು ನಾಯಿಗೆ.. ಜೋರಾಗಿ ಬೊಗಳಿ ತನ್ನ ಕೋಪ ತೋರಿಸಿತು ... ಹೆಣ್ಣು ನಾಯಿಯು ನಾನು ಬರುವುದಿಲ್ಲ ಎಂದು ಗಂಡು ನಾಯಿಯ ಹಿಂದೆಯೇ ನಿಂತು ತನ್ನ ವಿರೋಧ ವ್ಯಕ್ತ ಪಡಿಸಿತು..
ಆದರೆ ವಿಧಿ ಬರಹ ಯಾರೂ ಬಂದರೂ ಅಳಿಸಲಾಗುವುದಿಲ್ಲ ... ಹೆಣ್ಣು ನಾಯಿಯ ಓನರ್ ಧನ್ಯವಾದಗಳನ್ನು ಅರ್ಪಿಸಿ ಕರೆದುಕೊಂಡು ಹೊರಟೆ ಬಿಟ್ಟರು .... ಪಾಪ ಗಂಡು ನಾಯಿ ಫಿಲಂ ಹೀರೋ ತರ ಚೈನ್ ಬಿಡಿಸಿಕೊಂಡು ಹೋಗಲೂ ಇಲ್ಲ.. ಹೆಣ್ಣು ನಾಯಿ ಹೋದ ದಾರಿಯನ್ನೇ ದೃಷ್ಟಿಸುತ್ತ ಮತ್ತೊಂದು ದಿನ ನನ್ನ ಪ್ರೇಮಿ ಬರಬಹುದೋ ಎಂದು ಕಾಯುತ್ತ ಮಂಕಾಗಿ
ಕುಳಿತುಬಿಟ್ಟಿ ತು ..
ನಮ್ಮ ಮನುಷ್ಯರ ಹಾಗೆ ಎಣ್ಣೆ ಹಾಕಲು ಶುರು ಮಾಡಲಿಲ್ಲ !!! ದೊಡ್ಡ ನಾಯಿ ದೇವದಾಸ ಅಂತ ಕರೆಸಿಕೊಳ್ಳುವ ಆಸೆಯು ಇಲ್ಲ ಅದಕ್ಕೆ.. ಸ್ವಲ್ಪ ದಿನ ಊಟ ಬಿಟ್ಟಿತು ... ನಮ್ಮ ನಾಯಿ ಓನರ್ ಏನಾಯಿತಪ್ಪ ಅಂತ ಚೆನ್ನಾಗಿದ್ದ ನಾಯಿ ಎಂದು ಡಾಕ್ಟರ ಹತ್ತಿರ ಕೂಡ ಕರೆದು ಕೊಂಡು ಹೊದರು.. ಏನೂ problem ಇಲ್ಲ. ಚೆನ್ನಾಗೆ ಇದ್ದಾನೆ ಎನ್ದರು..
ದಿನ ಕಳೆದ ಹಾಗೆ ಹೆಣ್ಣು ನಾಯಿ ಬಂದು ಹೋದದ್ದು ಒಂದು ಕನಸು ಎನ್ನುವ ಹಾಗೆ ಮತ್ತೆ ನಮ್ಮ ಹೀರೋ ನಾಯಿ ತನ್ನ ಹಿಂದಿನ ದಿನಚರಿಗೆ ವಾಪಸ್!!!
ನನ್ನ ಈ ಮೇಲಿನ ಬರಹ ಸ್ವಲ್ಪನಾರೂ ನಿಮ್ಮ ಮುಖದಲ್ಲಿ ನಗು ಮೂಡಿದ್ದರೆ ನಾನು ಧನ್ಯಳು !!!
ಸ್ಮಿತಾ ಮೇಲ್ಕೋಟೆ
ಸಿಡ್ನಿ
ಆಸ್ಟ್ರೇಲಿಯಾ
Comments
ಸ್ಮಿತ ಮೇಲ್ಕೋಟೆಯವರೆ,
ಸ್ಮಿತಾ ಅವರೆ,
ನಮ್ಮ ಗೋಪೀನಾಥರ ೩ ಅಧ್ಯಾಯದ