ಅವನು ನನ್ನೊಳಗೇ ಇರಲಿ...!!
ಕಡಲ ತೀರದಿ
ಅವನ ಹೆಸರು ಬರೆದೆ
ಅಲೆ ಬಂದು ಅಳಿಸಿತು...
ಒಡಲ ಆಳದಿ ಇನ್ನು
ಅಲೆಗಳು ಏಳುವುದಿಲ್ಲ...!!
ಮಿನುಗುವ ನಕ್ಷತ್ರಕೆ
ಅವನ ಹೆಸರಿಟ್ಟೆ
ಮೋಡ ಬಂದು ಮರೆಸಿತು...
ಹೊಳೆವ ಕಣ್ಣುಗಳಲಿನ್ನು
ಮೋಡ ಕಟ್ಟುವುದಿಲ್ಲ...!!
ಮುಡಿದ ಮಲ್ಲಿಗೆ ಗಂಧ
ಅವಗೆ ಮುಡಿಪೆಂದೆ..
ಗಾಳಿ ಬಂದು ಹೊತ್ತೊಯ್ದಿತು..
ಮನದ ಕಿಡಕಿಯ ಕದವ
ಇನ್ನು ತೆರೆಯುವುದಿಲ್ಲ...!!
ಕವಿತೆಯ ಪ್ರತಿ ಸಾಲಲ್ಲು
ಅವನಿರುವ ಕಂಡೆ..
ಹಾಡುಗನ ಕಂಠದಲಿ ಲೀನವಾಯ್ತು..
ಎದೆಯ ಆಸೆಗಳಿನ್ನು
ಹಾಡಾಗುವುದಿಲ್ಲ...!!
Comments
ಒಳ್ಳೆಯ ಕಲ್ಪನೆ ದಿಲೀಪ್
In reply to ಒಳ್ಳೆಯ ಕಲ್ಪನೆ ದಿಲೀಪ್ by makara
ಮಕರ ಅವರೇ.. ನಮಸ್ತೆ... ಹೊರ
In reply to ಮಕರ ಅವರೇ.. ನಮಸ್ತೆ... ಹೊರ by Dileep Hegde
ನಮಸ್ಕಾರ ದೀಲಿಪರವರೆ, ಮನಸೆಂಬ
ಪ್ರೇಮಭಂಗದ ಉತ್ತಮ ಕವಿತೆ !
In reply to ಪ್ರೇಮಭಂಗದ ಉತ್ತಮ ಕವಿತೆ ! by partha1059
ಪಾರ್ಥರವರೆ.. ನಮಸ್ಕಾರ..