ನಮ್ಮನ್ನು 40 ನೇ ವರ್ಷದ (Ruby) ಹಬ್ಬದ ಹೊಸ್ತಿಲಲ್ಲಿ, ತಂದು ನಿಲ್ಲಿಸಿದಾತನಿಗೆ ನಮನಗಳು !

ನಮ್ಮನ್ನು 40 ನೇ ವರ್ಷದ (Ruby) ಹಬ್ಬದ ಹೊಸ್ತಿಲಲ್ಲಿ, ತಂದು ನಿಲ್ಲಿಸಿದಾತನಿಗೆ ನಮನಗಳು !

ಚಿತ್ರ
೪೦ (Ruby) ನೆಯ ವರ್ಷದ ದಾಂಪತ್ಯದ ಶುಭ ಸಮಾರಂಭದ ಹೊಸ್ತಿಲಿನಲ್ಲಿ (ಜೂನ್ ೧೦ ರಂದು) ನಮ್ಮನ್ನು ಎತ್ತಿ ತಂದು ನಿಲ್ಲಿಸಿದ ಆ ಅಗೋಚರ ಶಕ್ತಿಗೆ  ನಮನಗಳು. ನಿರಂತರವಾಗಿ ಓಡುತ್ತಿರುವ ಈ ಜೀವನ ಪಥದಲ್ಲಿ ಮನುಷ್ಯನ ಬಾಳು ಬಹಳ ಕಡಿಮೆ ಅವಧಿಯದು. ಹಾಗೆ ನೋಡಿದರೆ ೭೦ + ನಷ್ಟು ದೂರ ನಮ್ಮನ್ನು ನಡೆಸಿಮುನ್ನಡೆಸುತ್ತಿರುವ ಅವ್ಯಕ್ತ ಸೂತ್ರಧಾರನಿಗೆ ನಮ್ಮ ಅನಂತ ವಂದನೆಗಳು.
 
ಯಾರೋ ಹೇಳಿದ ಮಾತು : ಎಷ್ಟು ವರ್ಷ ಜೀವಿಸಿದೆ ಅನ್ನುವುದು ಮುಖ್ಯವಲ್ಲ ಹೇಗೆ ಜೀವಿಸಿದೆ ಎನ್ನುವುದು ಅತಿ ಮುಖ್ಯ ! ಇದನ್ನು ನಮಗೆ ನಾವೇ ಪ್ರಶ್ನೆ ಹಾಕಿಕೊಂಡಾಗ ಅದಕ್ಕೆ ಸಿಗುವ ಉತ್ತರ ನಮ್ಮನ್ನು ಧೃತಿಗೆಡಿಸುತ್ತದೆ. 
 
ಇಷ್ಟು ವರ್ಷ ನಾವು ಮಾಡಿದ್ದಾದರೂ ಏನು ?
 
ವಿದ್ಯಾಭ್ಯಾಸ, ನೌಕರಿ, ಮದುವೆ, ಮಕ್ಕಳು ಅವರ ಲಾಲನೆ ಪಾಲನೆ, ವಿದ್ಯಾಭ್ಯಾಸ, ಅವರ ವೃತ್ತಿಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವುದು, ಮತ್ತೆ ಅವರಿಗೆ ಮುಂಜಿ- ಮದುವೆ. ಮತ್ತೆ ಅದೇ ಚಕ್ರ ಪುನರಾವರ್ತನೆ ಆಗುತ್ತದೆ. ಇದೇ ತಾನೇ ನಾವು ಬಯಸುವ ಸುಂದ ಬಾಳಿನ ಒಂದು ಆಪ್ಯಾಯಮಾನವಾದ ಕ್ಷಣ ! ಇದನ್ನು ಬಿಟ್ಟು ನಿರ್ಲಿಪ್ತರಾಗಲು ಸಾಧ್ಯವಿಲ್ಲ. 
 
ನಾವು ಜೀವನದ ಹೋರಾಟದಲ್ಲಿ ಏನೋ ಅದು-ಇದು ಮಾಡಿದ್ದೇವೆ. ಅದು 'ಏನೋ ಮಹಾ' ಎಂದು ಹೊಗಳುವಂತಹದೂ ಅಲ್ಲ. ಇಲ್ಲವೇ,  'ಜುಜುಬಿ ಎಂದು ಅಲ್ಲಗಳೆಯುವಂತಹದು ಅಲ್ಲ' ಎನ್ನುವುದು  ನನ್ನ ಭಾವನೆ.  ಎಲ್ಲರೂ ಅಮಿತಾಭ್ ಆಗಲು ಸಾಧ್ಯವೇ ?
 
ಇದು ಒಂದು ಭಾಗ ಹೌದು. ಆದರೆ ಇದೇ ಎಲ್ಲವೂ ಅಲ್ಲ. ನಮ್ಮ ಬೌಧ್ಧಿಕ ಜೀವನದಲ್ಲಿ ಸ್ವಲ್ಪ ಕಲಿಯುವ ಅಗತ್ಯ ಇದೆ. ನಮ್ಮ ಇಂದಿನ, ಸ್ವಲ್ಪವೂ ಅರಿವಿಲ್ಲದ ನಾಳೆಗಳ ಒಡೆಯನನ್ನು ತಿಳಿಯುವ ಆ ಬೃಹತ್ ಶಕ್ತಿಗೆ ನಮಿಸುವ ಕಡೆ ಸಾಗಬೇಕು. ಇದು ನಮ್ಮ ಅಂತಿಮ ಗುರಿಯಲ್ಲವೇ ?
 
ಈಗಾಗಲೇ ಮೊನ್ನೆ ನಮ್ಮ ದೇಶದ ಅತಿ ಮಹತ್ವದ ಸಿನಿ-ನಾಯಕ, ದೊಡ್ಡ ಕಲಾವಿದ ಶ್ರೀ. ಅಮಿತಾಬ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್, ಜೂನ್ ೩ ರಂದು,  'ರ‍್ಯೂಬಿ ವರ್ಷದ ಆನಂದವನ್ನು ಸವಿದರು' ! ಈಗ ಅದೇ ಸುಂದರ ಕ್ಷಣಗಳಿಗೆ  ನಾವು ಕಾಯಿತ್ತಿದ್ದೇವೆ. ಇರುವಷ್ಟು ದಿನ ನಮ್ಮ ಕೆಲಸ ನಾವೇ ಮಾಡಿಕೊಳ್ಳುವಷ್ಟು ಮತ್ತು ಮಕ್ಕಳಿಗೆ ಹೊರೆಯಾಗದಂತೆ  ನಮ್ಮಮುಂದಿನ  ಜೀವಿತ ನಡೆಯಲಿ ಎನ್ನುವ ಆಸೆಯೊಂದಿಗೆ,  ಸಂಪದದ ಗೆಳೆಯರಜೊತೆಗೆ ನಮ್ಮ ಈ ಅನುಭವವನ್ನು ಹಂಚಿಕೊಂಡಿದ್ದೇವೆ.
 
ನಮಸ್ಕಾರಗಳು. ಇದು ಎಲ್ಲರ ಜೀವನದಲ್ಲೂ ಬರುವಂತಹ ಸನ್ನಿವೇಶ ಅಲ್ಲವೇ !  ಮದುವೆ ಜೀವನ  ಒಂದು  ಘಟ್ಟ. ಅದರ ಮಹತ್ವವನ್ನೂ ಅರಿಯುವುದು ಮುಖ್ಯ. ಅದರಲ್ಲಿ ಕಹಿ-ಸಿಹಿ- ಸಂಭ್ರಮ, ಸೌದರ್ಯ, ಸಂತಾಪ, ಕೋಪ-ತಾಪ, ಕಲಿಕೆ, ತ್ಯಾಗ, ಅಗಲಿಕೆ, ಮಿಲನ, ಕೊರಗು, ಎಲ್ಲವೂ ತುಂಬಿದೆ.
 
ಅವನ್ನು ಅದೆಷ್ಟು ಜನ ಯಶಸ್ವಿಯಾಗಿ ತಮ್ಮದನ್ನಾಗಿ ಮಾಡಿಕೊಳ್ಳುವರೋ ಅವರೇ ಧನ್ಯರು. 
 
-ಹೊರಂಲವೆಂ 
Rating
No votes yet

Comments

Submitted by nageshamysore Wed, 06/05/2013 - 11:52

ವೆಂಕಟೇಶ ದಂಪತಿಗಳಿಗೆ ಮುಂಚಿತವಾಗಿ ಅಭಿನಂಧನೆಗಳು - ನನಗೆ ನಿಜಕ್ಕೂ ಅಚ್ಚರಿ ಮತ್ತು ಸೋಜಿಗ ತರಿಸುವುದು - ನಿಮ್ಮ ಇನ್ನು ಬತ್ತದ ಜೀವನೋತ್ಸಾಹ! ಅದು ಸದಾ ಹೀಗೆ ಇರಲಿ ಎಂದು ಆಶಿಸುತ್ತಾ - ನಾಗೇಶ ಮೈಸೂರು, ಸಿಂಗಪುರದಿಂದ

Submitted by venkatesh Wed, 06/05/2013 - 12:10

In reply to by nageshamysore

ಪ್ರೀತಿಯ ನಾಗೇಶ್, ಅಚ್ಚರಿ ಏನಲ್ಲ. ಅದು ನೀವೇ ಹೇಳಿದಂತೆ, 'ಬತ್ತದ (Paddy) ಜೀವನೋತ್ಸಾಹ ಅದಕ್ಕೆ' !!
ತಮ್ಮ ಪ್ರೀತಿಯ ಅಭಿನಂದನೆಗೆ ನಾವು ಚಿರಋಣಿಗಳು.

Submitted by Vinutha B K Wed, 06/05/2013 - 13:30

ಮುಂಚಿತವಾಗಿ 40 ನೆ ಮದುವೆ ವಾರ್ಷಿಕೋತ್ಸವದ ಶುಭಾಷಯಗಳು .. ನಿಮ್ಮ ಅನಿಸಿಕೆ ನನಗೆ ತುಂಬಾ ಇಷ್ಟ ಆಯ್ತು .. ಯಾರ ಜೀವನಕ್ಕೂ ಹೋಲಿಸುವಂಥಹದ್ದು ಅಲ್ಲ ,ಎಲ್ಲರ ಜೀವನದಲ್ಲೂ ಅವರದೇ ಆದ ಸಾಧನೆಗಳಿರುತ್ತವೆ . ಏನೋ ಮಹಾ ಅಂದಲ್ಲ ,ಇದು ಸಹಬಾಳ್ವೆಯ ಮಹಾ ಸಾದನೆ ..

Submitted by venkatesh Wed, 06/05/2013 - 17:49

In reply to by Vinutha B K

ಹೋಲಿಕೆ ಇದ್ದರೆ ನಾನು ಉತ್ತಮಗೊಳ್ಳುವ ಸಾಧ್ಯತೆ ಹೆಚ್ಚು. ದೇವರು ಕೊಟ್ಟ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವುದು ಮಾತ್ರ ನಮ್ಮಕೈಯಲ್ಲೇ ಇದೆ. ಇಲ್ಲಿ ನಾವು ನಿಗಾವಹಿಸುವುದು ಅಗತ್ಯ ಎಂದು ನನಗೆ ತಿಳಿದ ಸಂಗತಿ. 'ಸಹಬಾಳ್ವೆಯ ಉತ್ತಮ ಉದಾಹರಣೆ ಮನೆಯಲ್ಲೇ ಮೊದಲು ಎನ್ನುವ ಮಾತು ಚೆನ್ನಾಗಿ ಜ್ಞಾಪಿಸಿದಿರಿ. ಇವೆಲ್ಲಾ ನಮಗೆ ತಿಳಿಯದಂತೆ ನಡೆದುಹೋಯಿತು. ನಾವು ತೊರೆಯ ಪ್ರವಾಹದಲ್ಲಿ ತೇಲುವ ದೋಣಿಯಲ್ಲಿ ಪಯಣಿಸುವ ಎರಡು ಜೀವಿಗಳು...

Submitted by Vinutha B K Thu, 06/06/2013 - 12:48

In reply to by venkatesh

ಒಬ್ಬರ ಜೀವನಕ್ಕೆ ಹೋಲಿಸುವುದು ಮನುಷ್ಯನ ಸಹಜ ಗುಣ ಹೌದು ಅದರಿಂದನೆ ನಾಗರೀಕತೆ ಎಲ್ಲ ಕಡೆ ಹರಡಿದ್ದು ಎಂದೇಳಬಹುದು , ಆದ್ರೆ ನನ್ನ ಮಾತಿನ ,"ಎಲ್ಲರ ಜೀವನದಲ್ಲೂ ಅವರದೇ ಆದ ಸಾಧನೆಗಳಿರುತ್ತವೆ" ಅರ್ಥ -- ಮಾಡಿರುವ ಸಾಧನೆಗಳಿಗೆ ತ್ರುಪ್ತಿಯಿರಬೇಕೆಂದಷ್ಟೇ ಹೇಳಿದೆ ..ಧನ್ಯವಾದಗಳು ..

Submitted by partha1059 Wed, 06/05/2013 - 14:49

ವೆಂಕಟೇಶರವರಿಗೆ
ನಲವತ್ತನೆ ವರ್ಷದ ಸಾರ್ಥಕ ದಾಂಪತ್ಯ ಜೀವನಕ್ಕೆ ತಮಗೆ ಹಾಗು ತಮ್ಮವರಿಗೆ ಶುಭಾಶಯಗಳು.
ಇಂತಹ ಬದುಕೆ ಇಂದಿನ ಯುವಜನಾಂಗಕ್ಕೆ ಮಾದರಿ ಹಾಗು ಸ್ಪೂರ್ತಿಯಾಗಲಿ ಎಂದು ಹಾರೈಸುವೆ
-ಪಾರ್ಥಸಾರಥಿ