ಈ ಅಪ್ಪಗಳು...!
ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡುವ ಚಿತ್ರಣಗಳಿಗೇನೂ ಕಡಿಮೆಯಿಲ್ಲ. ಇದೆಲ್ಲಕ್ಕು ಮೀರಿ, ಸಾಮಾನ್ಯ ಅಪ್ಪನೊಬ್ಬನ ತುಡಿತ, ಹಂಬಲ, ಒದ್ದಾಟ, ಹೋರಾಟದತ್ತ ನೋಡುವ ಹಂಬಲ ಈ ಪುಟ್ಟ ಕವನದ್ದು - ಸಾಧಾರಣ ಕಾಣುವ ಎಲ್ಲಾ ಅಪ್ಪಗಳ ಹಾಗೆ ಕಡಿಮೆ ಮಾತಿನದೂ ಹೌದು :-) ಅಪ್ಪಗಳನ್ನು ಹಚ್ಚಿಕೊಂಡ ಪ್ರತಿಯೊಬ್ಬರಲ್ಲು ಅವರದೆ ಆದ ಕಥೆಗಳಿರಬಹುದಾದರೂ, ಸಾಂಕೇತಿಕವಾಗಿ ಇದು ಅವರೆಲ್ಲರ ಭಾವನೆಗಳ ಪ್ರತಿನಿಧಿ ಎಂಬ ಸಮಷ್ಟಿಭಾವದೊಂದಿಗೆ ಎಲ್ಲ ಅಪ್ಪಂದಿರಿಗೂ ಈ ಕವನ ಅರ್ಪಿತ. ಹಾಗೆಯೆ ಅಂತಹ ಅಪ್ಪಂದಿರನ್ನು ನೆನೆದು ಕೃತಜ್ಞತೆ ಹೇಳುವ ಪುಟ್ಟ ಪ್ರೇರೇಪಣೆ ಸಹ - ನಾಗೇಶ ಮೈಸೂರು, ಸಿಂಗಪೂರದಿಂದ
ಈ ಅಪ್ಪಗಳು
---------------------------------
ಅಪ್ಪಗಳೇನಿಲ್ಲಾ ಕಮ್ಮಿ ಹೆಮ್ಮರ
ನೀರೂಡಲಿ ಬಿಡಲಿ ಬೆಳೆದವರ
ಆಲದ ಹಾಗೆ ವಿಶಾಲ ಚಾಮರ
ಬಾಗೆ ಗೊಬ್ಬಳಿ ಮರ ನೆರಳಾಗಿರ!
ಪೊದೆಯ ಮೀಸೆಯಿರಲಿ ಬಿಡಲಿ
ನರೆತ ಕೂದಲೆಲ್ಲ ಕಪ್ಪ ಹಚ್ಚಿರಲಿ
ಸ್ಕೂಟರು ಬಸ್ಸು ಸೈಕಲ್ಲೆ ತುಳಿದ
ಮಾತಾಡದೆಲೆ ಸುತ್ತಿ ಬಸವಳಿದ!
ಮಾತೆ ಮಿತಾ ಗತ್ತು ದರ್ಪ ಅವ್ಯಕ್ತ
ಡಬ್ಬೀ ಮನೆಯೂಟದಲೆ ಸಂತೃಪ್ತ
ಹನಿ ಹನಿಗುಳಿಸುತೆ ಕಟ್ಟೆ ಸಂಕಲ್ಪ
ಮಕ್ಕಳೋದಿ ಬೆಳೆಸಲೆಷ್ಟು ವಿಕಲ್ಪ!
ಸೈಟು ಮನೆಯೊಂದಾ ಕಟ್ಟಿ ನಿವೃತ್ತಿ
ಮಗಳ ಮದುವೆ ಕಾಡೆ ಮಹರಾಯ್ತಿ
ಮಾಡಬೇಕೆ ಬಿಡದೆ ನೀತೀ ನಿಜಾಯ್ತಿ
ಮಾಡೆ ನೆಮ್ಮದಿ ಆಮೇಲ್ಹಿಡಿ ಪ್ರವೃತ್ತಿ!
ಅಂತಃಕರಣ ವಾತ್ಸಲ್ಯ ಅಂತರ ಗಂಗೆ
ಬಾಯ್ಬಿಡದೆ ಹಿಡಿದಾ ತ್ಯಾಗದ ಹಂಗೆ
ಸಂಭಾಳಿಸಿ ನೆಂಟ ಬಳಗದೆಲ್ಲ ಟೊಂಗೆ
ನೇಪಥ್ಯ ನೋವ್ಹಿರುತೆ ತುಟಿಯಾ ನಗೆ!
- ನಾಗೇಶ ಮೈಸೂರು, ಸಿಂಗಪೂರದಿಂದ
Comments
ಸಲಾಂ ನಾಗೇಶ್ ,ಒಂಥರಾ
In reply to ಸಲಾಂ ನಾಗೇಶ್ ,ಒಂಥರಾ by Vinutha B K
ಸಲಾಂ ವಿನುತಾ ಜಿ, ಈ ವಿಭಿನ್ನ
In reply to ಸಲಾಂ ವಿನುತಾ ಜಿ, ಈ ವಿಭಿನ್ನ by nageshamysore
ಅಪ್ಪನ ಬಗ್ಗೆ ನಿಮ್ಮ ಊಹೆ ನೂರಕ್ಕೆ
In reply to ಸಲಾಂ ವಿನುತಾ ಜಿ, ಈ ವಿಭಿನ್ನ by nageshamysore
ಒಂದು ಹೆಮ್ಮೆಯೆಂದರೆ ನನ್ನ
In reply to ಒಂದು ಹೆಮ್ಮೆಯೆಂದರೆ ನನ್ನ by Vinutha B K
ನಿಮ್ಮ ಈ ಲೇಖನ ನಾನು ಮುಂಚೆ
In reply to ನಿಮ್ಮ ಈ ಲೇಖನ ನಾನು ಮುಂಚೆ by nageshamysore
ವಾರೆವ್ಹ ತುಂಬಾ ಅರ್ಥಪೂರ್ಣವಾಗಿದೆ
In reply to ವಾರೆವ್ಹ ತುಂಬಾ ಅರ್ಥಪೂರ್ಣವಾಗಿದೆ by Vinutha B K
ಅಲ್ಲಿಗೆ ನಿಮಗೆ ಟ್ಯೂನ್ ಮಾಡಲು
ಕವನ ಚೆನ್ನಾಗಿದೆ...
In reply to ಕವನ ಚೆನ್ನಾಗಿದೆ... by ರಾಮಕುಮಾರ್
ರಾಮಕುಮಾರರೆ ಧನ್ಯವಾದಗಳು.