"ಮನವು ಮೌನ ಮಾಡಿದೆ"

"ಮನವು ಮೌನ ಮಾಡಿದೆ"

ಕವನ
ನನ್ನ ಕಣ್ಣ ನೋಟ ನೋಡಿ
ನಿನ್ನ ಮನದ ಭಾವ ಹೇಳು
ನನ್ನ ಕವಿತೆ ಒಮ್ಮೆ ಓದಿ
ಅದರ ಮೂಲ ನೀನು ಕೇಳು

ನನ್ನ ಕವಿತೆ ಮೂಲ ತಿಳಿದು
ನೀನಿ ನನ್ನ ನೂಕಿದೆ
ನಿನ್ನ ಮನದ ಸುತ್ತ ನಾನು
ಬರಲು ಬೇಲಿ ಹಾಕಿದೆ

ಬೇಲಿ ಮುಳ್ಳು ಎದೆಗೆ ನಾಟಿ
ರಕ್ತ ಚಿಮ್ಮಿ ಬಂದಿದೆ
ನೀನು ನನ್ನ ಒಲ್ಲೆ ಎನಲು
ಹೃದಯ ಕೊರಗಿ ಅಳುತಿದೆ

ನಿನ್ನ ಸೇರಲೆಂದು ಮನವು
ದಿನವು ಹಟವ ಮಾಡಿದೆ
ನೀನು ದೂರ ಹೋದ ಮೇಲೆ
ಮನವು ಮೌನ ತಾಳಿದೆ

Comments