ಕ್ಲೌಡ್ ಬರ್ಷ್ಟ್ - ನಲುಗಿದ ಉತ್ತರ ಭಾರತ

ಕ್ಲೌಡ್ ಬರ್ಷ್ಟ್ - ನಲುಗಿದ ಉತ್ತರ ಭಾರತ

ಚಿತ್ರ
ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಸತತವಾಗಿ ಮಳೆ ಸುರಿದು , ದಿನದಲ್ಲಿ ಸುಮಾರು ೧೦ ಸೆಂ.ಮಿ (೧೦೦ ಮಿ.ಮಿ.) ಮಳೆ ಬಿತ್ತು ಅಂದುಕೊಳ್ಳೋಣ, ಆಗ ಅದರ ಪರಿಣಾಮ ಬೆಂಗಳೂರಿನ ಮೇಲೆ ಘೋರವಾಗಿರುತ್ತದೆ.
 
 ಈಗ ಅದೆ ಮಳೆ ರಾತ್ರಿಯೆಲ್ಲ ಬೀಳುವ ಬದಲಿಗೆ ಆ ೧೦ ಸೆಂ.ಮಿ ಮಳೆಯು, ಕೆಲವೆ ನಿಮಿಶಗಳಲ್ಲಿ ಅಂದರೆ ಬರಿ ಐದು ನಿಮಿಷದಲ್ಲಿ ಬೆಂಗಳೂರಿನ ಮೇಲೆ ಸುರಿದರೆ, ಅದರ ಪರಿಣಾಮ ನಮಗೆ ಉಹಿಸಲು ಸಾದ್ಯವಿಲ್ಲ.  
 
ಆ ರೀತಿ ಇದ್ದಕ್ಕಿದಂತೆ ಸುರಿಯುವ ಕುಂಭದ್ರೋಣ ಮಳೆಯನ್ನು ಅಂಗ್ಲದಲ್ಲಿ 'ಕ್ಲೌಡ್ ಬರ್ಷ್ಟ್' ಅನ್ನುತ್ತಾರೆ, ಅದಕ್ಕೆ ಕನ್ನಡ ಪದ 'ಮೋಡಸ್ಪೋಟ' ಅಂದುಕೊಳ್ಳಬಹುದೇನೊ
 
ಈಚಿನ ವರ್ಷಗಳಲ್ಲಿ ಪದೆ ಪದೆ ಕೇಳಿ ಬರುವ ಪದ 'ಕ್ಲೌಡ್ ಬರ್ಷ್ಟ್'  ಬಹುಷ ಕಳೆದ ವರ್ಷ ದಿಸೆಂಬರ್-೨೦೧೨ ನಲ್ಲಿ ಇದೆ ಮಳೆ ಬಂದಿದ್ದಲ್ಲಿ ಅದು ಮಹಾಪ್ರಳಯದ ಬಾಗವಾಗುತ್ತಿತ್ತು.  
 
ತೀರ ಅನಿರೀಕ್ಷಿತವಾಗಿ, ಕೆಲವೆ ನಿಮಿಷಗಳಲ್ಲಿ ಬೀಳುವ ಇಂತಹ ದೊಡ್ಡ ಮಳೆಗಳೆ ಕ್ಲೌಡ್ ಬರ್ಷ್ಟ್ ನ ಪರಿಣಾಮ , ಇದನ್ನು ಮೊದಲೆ ಉಹಿಸುವುದು ಬಹಳ ಕಷ್ಟ.  
 
ಈಗ ಒಂದೆರಡು ದಿನಗಳಿಂದ ಸುದ್ದಿಯಾಗಿರುವ ಉತ್ತರ ಭಾರತದ ಮಳೆ , ಹಿಮಾಲಯದ ತಪ್ಪಲಿನಲ್ಲಿ ಸುರಿಯುತ್ತ, ಗಂಗೆ ಯಮುನೆಯರು ಉಕ್ಕಿ ಹರಿದು,  ನೂರಾರು ಜನ ತಮ್ಮ ಜೀವವನ್ನೆ ಕಳೆದುಕೊಂಡು, ಸಾವಿರ ಸಾವಿರ ಮಂದಿ ಸ್ಥಳಿಯರು ಹಾಗು ಯಾತ್ರಾರ್ಥಿಗಳು ಅಸಹಾಯಕರಾಗಿ  ಕಣ್ಣೀರು ಸುರಿಸುವಂತೆ ಮಾಡಿದೆ ಈ ಮಳೆಯ ಸುನಾಮಿ. ಇದೆ ಜೂನ್ ೧೭ , ೧೮ ರ ಮಳೆಯ ಪ್ರತಾಪ ಉಹಿಸಲು ಆಗದಷ್ಟು.
 
ಕೇದಾರನಾಥ, ರುದ್ರಪ್ರಯಾಗ, ಹೃಷಿಕೇಶ  ಕೆಳಗಿನ ಯಮುನೆಯ ದಡ ದೆಹಲಿಯವರೆಗು ಉತ್ತರ ಭಾರತ ಮಳೆಯಿಂದ ತತ್ತರಿಸಿದೆ,  ಗಂಗೆ ಯಮುನೆಯರು ದಡದ ಉದ್ದಕ್ಕು ಸಾವಿರಾರು ಮನೆಗಳನ್ನು ಕೆಡವುತ್ತ,  ಜನ ಪ್ರಾಣಿಗಳ ಜೀವಹರಣ ಮಾಡುತ್ತ ತನ್ನ ರುದ್ರನರ್ತನ ನಡೆಸಿದ್ದರೆ. ಅವರ ತಾಂಡವ ನರ್ತನಕ್ಕೆ ದಡಲ್ಲಿರುವ ಹಲವಾರು ದೇವಾಲಯಗಳು ನಾಶವಾಗಿವೆ, ಪವಿತ್ರ ಕೇದಾರನಾಥ ಕ್ಷೇತ್ರವೆ ಕೊಚ್ಚಿಹೋಗಿದೆ. ಹಲವು ಕ್ಷೇತ್ರಗಳು ಕೆಸರಿನಲ್ಲಿ ಹೂತುಹೋಗಿವೆ, ಆ ಕೆಸರಿನಲ್ಲಿ ನೂರಾರು ಮನುಷ್ಯ ದೇಹಗಳು ಸೇರಿವೆ. ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ತಮ್ಮ ರೂಪ ಕಳೆದುಕೊಂಡಿವೆ. ಎಲ್ಲವು ಸಹಜ ಸ್ಥಿಥಿಗೆ ಬರುವಾಗ ಕೆಲವಾರು ವರ್ಷಗಳೆ ಆಗಬಹುದೇನೊ ಅನ್ನಿಸುತ್ತವೆ. 
 
 ಬಹುತೇಕ ಗಂಗ ಯಮುನೆಯರ ಪ್ರತಾಪಕ್ಕೆ ನಲುಗಿರುವ ಜಾಗಗಳೆಲ್ಲ ಯಾತ್ರ ಸ್ಥಳಗಳೆ, ಹಾಗಾಗಿ ಭಾರತದ, ವಿದೇಶದ ಸಾವಿರಾರು ಯಾತ್ರಾರ್ಥಿಗಳು ನೀರು ಅಹಾರ, ಔಷದಗಳ ಕೊರತೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಕರ್ನಾಟಕದ ಹಲವಾರು ಯಾತ್ರಾರ್ಥಿಗಳು ಸಹ ಇವರಲ್ಲಿ ಸೇರಿರುವರು. ಹಾಗೆ ಕೇಳಿಬಂದ ಹೆಸರು, ಹಿಂದೊಮ್ಮೆ ಮಂತ್ರಾಲಯದಲ್ಲಿ ಪ್ರವಾಹಬಂದಾಗ ಸ್ವತಃ ಹೆಲಿಕಾಫ್ಟರ್ ನಲ್ಲಿ ಹೋಗಿ ಅಲ್ಲಿದ್ದ ಗುರುಗಳನ್ನು ರಕ್ಷಿಸಿದ ಕರ್ನಾಟಕದ ಹಿಂದನ ಸರ್ಕಾರದ ಸಚೀವೆ ಶೋಭ ಕರದ್ಲಾಜೆಯವರು . 
 
ಇಂತಹ ಪರಿಣಾಮಕ್ಕೆ ಕಾರಣವಾಗಿರುವ ಕ್ಲೌಡ್ ಬರ್ಷ್ಟಗೆ ಭಾರತದಲ್ಲಿ ಪ್ರಪಂಚದಲ್ಲಿ ಸಾಕಷ್ಟು ಇತಿಹಾಸವಿದೆ, ಇದರ ವಿವರ ಪರಿಣಾಮಗಳನ್ನೆಲ್ಲ ಈ ಲಿಂಕ್ ನಲ್ಲಿ ನೋಡಬಹುದು 
 
ಚಿತ್ರಕೃಪೆ :  ಇಂಟರ್ ನೆಟ್ ಲಿಂಕ್ ಗಳು
 ಚಿತ್ರ ೧       ಚಿತ್ರ೨   ಚಿತ್ರ೩  ಚಿತ್ರ೪ ಚಿತ್ರ೫ ಚಿತ್ರ೬
Rating
No votes yet

Comments

Submitted by nageshamysore Fri, 06/21/2013 - 23:00

In reply to by partha1059

<<ಮೋಡಸ್ಪೋಟ>> ಇದನ್ನು 'ಸಿಡಿಮೋಡ' ಅಥವಾ 'ಸಿಡಿಮೇಘ' ಅಂತಲೂ ಅನ್ನಬಹುದಾ? ಅಂತೂ ಮೋಡಕ್ಕೂ 'ಮೂಡು'ಗಳಿರುತ್ತೆಂದಾಯ್ತು! ಹಾಗಾಗಿ ಧಾರಳ ಹೆಣ್ಣಿಗೆ ಹೋಲಿಸುತ್ತ 'ಸಿಡಿ(ಮಿಡಿ)ಮೇಘಲ(ನಾ)' ಅಂತಲು ಸ್ತ್ರೀಲಿಂಗಿಸಬಹುದೇನೊ? :-)- ನಾಗೇಶ ಮೈಸೂರು

Submitted by makara Sat, 06/22/2013 - 10:13

In reply to by nageshamysore

ಮೋಡ ಸ್ಪೋಟ ಸರಿಯಾದ ಶಬ್ದವೇ ಆದರೆ ಒಂದು ಕನ್ನಡ ಒಂದು ಸಂಸ್ಕೃತ ಶಬ್ದ ಆದ್ದರಿಂದ ಮೇಘಸ್ಪೋಟ ಎನ್ನುವುದು ಹೆಚ್ಚು ಸೂಕ್ತವಾದೀತು. ಅಥವಾ ಕನ್ನಡೀಕರಿಸಬೇಕೆಂದರೆ ನಾಗೇಶರು ಹೇಳಿದ್ದನ್ನೇ ಸ್ವಲ್ಪ ಮಾರ್ಪಡಿಸಿ ’ಮೋಡ ಸಿಡಿತ’ ಎನ್ನಬಹುದೆನಿಸುತ್ತದೆ.

Submitted by venkatb83 Sat, 06/22/2013 - 18:52

ಗುರುಗಳೆ - ಈ ಮಳೆಯ ಬಗ್ಗೆ ಈಗ ಎಲ್ಲೆಡೆ ಸುದ್ಧಿ - ಮ್ರುತರಿಗೆ ಮರುಗುವ -ಸರಕಾರಗಳ ನಿರ್ಲಕ್ಷ್ಯ -ಬ್ರಸ್ತಾಚಾರ ಕಾಮಗಾರಿ -ಬಹು ಸಂಖ್ಯೆಯಲ್ಲಿ ಪ್ರವಾಸಿಗರ ರವಾನೆ -ಅನ್ಧಾದುನ್ದಿ ಕಾಮಗಾರಿಗಳು ಒಟ್ಟಿನಲ್ಲಿ ಮಾನವ ನಿರ್ಮಿತ ಘೋರ ದುರಂತ ಎಂದು ಎಲ್ಲ ಪತ್ರಿಕೆಗಳು ಪ್ರಕಟಿಸುತ್ತಿವೆ .
ದೇವರ ದರ್ಶನಕ್ಕೆ ಹೋದವರಿಗೆ -ಈ ದುರ್ಮರಣವೇ ?
ಟೀವಿಯಲ್ಲಿ ಬಿತ್ತರವಾಗುತ್ತಿರುವ ಈ ಸುದ್ಧಿ ಬಗೆಗಿನ ವಿಡಿಯೋ ನೋಡುವಾಗ ಮನ ತಲ್ಲಣಗೊಳ್ಳುವುದು -
ಬದುಕಿ ಬಂದವರು ಹೇಳೋದು- ಅಲ್ಲಿ ಸತ್ತಿರುವವರು ಸಾವಿರಾರು ಜನ -
ಸರಕಾರ ಹೇಳೋದು ಕೆಲವೇ ನೂರು .. ;(೯
ಮರಣಿಸಿದವರಿಗೆ ಸದ್ಗತಿ ಸಿಗಲಿ ಎಂದು
ಸಹಾಯಕ್ಕಾಗಿ ಮೊರೆ ಇಡುತ್ತಿರುವವರ ಶೀಘ್ರ ವಾಪಸಾತಿ ಆಗಲಿ ಎಂದು ಅದಕಾಗಿ ಮಳೆರಾಯನಿಗೆ ಕೊಂಚ ವಿರಾಮ ನೀಡು ಎಂದು ಬೇಡುವ ..

\।/

Submitted by H A Patil Sat, 06/22/2013 - 19:13

ಪಾರ್ಥ ಸಾರಥಿಯವರಿಗೆ ವಂದನೆಗಳು

ತಮ್ಮ ಲೇಖನ ಓದಿದೆ ಹಿಮಾಲಯದ ಪುಣ್ಯ ಕ್ಷೇತ್ರಗಳಲ್ಲಿ ನಡೆದ ದುರಂತದ ಚಿತ್ರಣವನ್ನು ಚಿಕ್ಕದಾಗಿ ಜೊತೆಗೆ ಚೊಕ್ಕವಾಗಿ ಸಮಗ್ರವಾಗಿ ನೀಡಿದ್ದಿರಿ, ' ಮೇಘ ಸ್ಪೋಟ ' ಎನ್ನುವ ಪದ ಸೂಕ್ತವಾಗಿ ಹೊಂದುತ್ತದೆ, ಇದು ಸಂಸ್ಕೃತ ಪದವಾದರೂ ಕನ್ನಡದ ಪದವೆ ಎನ್ನುವಷ್ಟು ನಮ್ಮದಾಗಿ ಹೋಗಿದೆ, ಅದನ್ನೆ ಕನ್ನಡದ ಪದವಾಗಿ ಸ್ವೀಕರಿಸಿದರೆ ತಪ್ಪೆನೂ ಇಲ್ಲ ಎನ್ನುವ ಅನಿಸಿಕೆ ನನ್ನದು, ಇಂಗ್ಲಿಷ್ ಭಾಷೆ ಯಾವುದೆ ಮಡಿವಂತಿಕೆ ತೋರದೆ ತೆರೆದ ತೋಳಿನ ಮೂಲಕ ಹೊಸತನ್ನು ಸ್ವೀಕರಿಸಿ ತನ್ನದಾಗಿಸಿಕೊಂಡು ಬೆಳೆದಿದೆ, ಈ ದಿಶೆಯಲ್ಲಿ ಆ ಭಾಷೆ ನಮಗೆ ಮಾದರಿಯಾಗಬೇಕು, ಉತ್ತಮ ಸಕಾಲಿಕ ಬರಹ ನೀಡಿದ್ದಕ್ಕೆ ಧನ್ಯವಾದಗಳು.

Submitted by ಗಣೇಶ Sun, 06/23/2013 - 22:10

ಕೇದಾರ ಅಂದರೆ ಸಂಸ್ಕೃತದಲ್ಲಿ- ಗಿಡದ ಬುಡಕ್ಕೆ ನೀರು ಹಾಕಲು ಮಾಡಿದ ಮಡಿ. ಬೆಟ್ಟಗಳ ನಡುವಿನಿಂದ ಮಂದಾಕಿನಿ ನದಿ ನೋಡಲು ಹಾಗೇ ಕಾಣಿಸುವುದು. ನಮ್ಮ ಜನ ಕೇದಾರನಾಥಕ್ಕೆ ಹೋಗುವುದು ಎಂದರೆ ಧರ್ಮಸ್ಥಳ, ತಿರುಪತಿ ಹೋದ ಹಾಗೆ ಅಂದುಕೊಂಡಿದ್ದಾರೆ. ಅದಕ್ಕೆ ಬೇಕಾದ ತಯಾರಿಯೇ ಇಲ್ಲ. ಚಿಕ್ಕಚಿಕ್ಕಮಕ್ಕಳನ್ನೂ ಕರಕೊಂಡು ಹೋಗುವರು. ಅಲ್ಲಿ ಬರುವ ಜನರ ಸಂಖ್ಯೆ ಜಾಸ್ತಿ ಆದ ಹಾಗೇ ಹೋಟಲ್ ಇತ್ಯಾದಿ ಮಂದಾಕಿನಿ ನದಿಗೂ ಸ್ಥಳ ನೀಡದಂತೆ ಎದ್ದಿರುವುದು. ಈ ಲೇಖನದ ಎರಡನೇ ಚಿತ್ರ ಗಮನಿಸಿ- http://blogs.agu.org/landslideblog/2013/06/21/the-kedarnath-debris-flow… ಕೇದಾರನಾಥದಲ್ಲಿ ಹಿಮಪಾತ ಜತೆಗೆ ಕಲ್ಲು ಬಂಡೆಗಳೂ ಉರುಳಿಕೊಂಡು ಬರುವುದು ಗೊತ್ತಿಲ್ಲದ ವಿಷಯವೇನಲ್ಲ. ಸರಿಯಾದ ಜಾಗ್ರತೆ ಮಾಡದಿದ್ದುದರ ಫಲವಿದು.ಇಲ್ಲಿ ಭಕ್ತಿಗಿಂತ ಪ್ರವಾಸೋದ್ಯಮ, ಹಣ ಮಾಡುವ ಕಡೆ ಜಾಸ್ತಿ ಗಮನವಾಯಿತು. ಸುಮ್ಮನೇ ಕ್ಲೌಡ್ ಬರ್ಸ್ಟ್ ಎಂದೆಲ್ಲಾ ತಮ್ಮ ತಪ್ಪನ್ನು ಪ್ರಕೃತಿ ಮೇಲೆ ಹೊರಿಸುತ್ತಿದ್ದಾರೆ. ಕೇದಾರ ನಾಥ ಯಾತ್ರೆ ಬಗ್ಗೆ, ಅಲ್ಲಿನ ಚರಿತ್ರೆ ಇತ್ಯಾದಿ ಬಗ್ಗೆ ಈ ಲೇಖನದಲ್ಲಿ ಬಹಳ ವಿವರವಾಗಿ ಬರೆದಿರುವರು. ಸುಂದರ ಚಿತ್ರಗಳನ್ನು ನೋಡುವಾಗ ಕೇದಾರನಾಥಕ್ಕೆ ನಾವೂ ಹೋಗಿ ಬಂದ ಹಾಗೇ ಆಗುವುದು. ಒಮ್ಮೆ ಓದಿ- http://tirtha-yatra.blogspot.in/2012/11/triyugi-narayan-kedarnath.html ಈ ಲೇಖನದಲ್ಲೇ ಒಂದು ಕಡೆ- ಶಿವ ಲೋಕ ಕಲ್ಯಾಣಕ್ಕಾಗಿ ತಪ ಮಾಡಲು ತೊಡಗಿದಾಗ ಅವನ ತಪಃಶಕ್ತಿಗೆ ಜಟೆಯಿಂದ ಕಿಡಿಗಳು ದೊಡ್ಡ ದೊಡ್ಡ ಕಲ್ಲುಗಳ ರೂಪದಲ್ಲಿ ಹೊರಬಂದವಂತೆ..ಅದೇ ಕೇದಾರದಲಿ ಬಿದ್ದುವಂತೆ..! ಈಗ ಶಿವ ಪುನಃ ಲೋಕಕಲ್ಯಾಣಕ್ಕಾಗಿ ತಪ ಪ್ರಾರಂಭಿಸಿರಬಹುದೇ!?

Submitted by partha1059 Sun, 06/23/2013 - 22:19

In reply to by ಗಣೇಶ

ನಮ್ಮ ಜನ ಕೇದಾರನಾಥಕ್ಕೆ ಹೋಗುವುದು ಎಂದರೆ ಧರ್ಮಸ್ಥಳ, ತಿರುಪತಿ ಹೋದ ಹಾಗೆ ಅಂದುಕೊಂಡಿದ್ದಾರೆ. ಅದಕ್ಕೆ ಬೇಕಾದ ತಯಾರಿಯೇ ಇಲ್ಲ. ಚಿಕ್ಕಚಿಕ್ಕಮಕ್ಕಳನ್ನೂ ಕರಕೊಂಡು ಹೋಗುವರು. >>>
:-))))

Submitted by Shreekar Mon, 06/24/2013 - 19:12

In reply to by partha1059

ತ್ರಿಮೂರ್ತಿಗಳಲ್ಲಿ ಶಿವ ನಾಶಕ್ಕೆ ಕಾರಣ ಮತ್ತು ವಿಷ್ಣು ರಕ್ಷಿಸಿ ಪೊರೆಯಲು ಹೆಸರಾದವನು.

ಇದರಂತೆ ನರ ನಾರಾಯಣರ ಬದರೀ ಧಾಮವು ಉಳಿಯಿತು, ಕೇದಾರ ನಾಶವಾಯಿತು ?

Submitted by Shreekar Wed, 06/26/2013 - 12:10

In reply to by ಗಣೇಶ

ಜಗತ್ತಿನ ಮೊದಲ ಭಯೋತ್ಪಾದಕ!:)

ಜಗತ್ತಿನ ಮೊದಲ ಭಯೋತ್ಪಾದಕ ಶಿವ ಎಂದು ಸ್ಮಾರ್ತರು,ಶಿವಭಕ್ತರು ಪ್ರತಿಪಾದಿಸಬಹುದು.

ಆದರೆ, ವೈಷ್ಣವರ ಪ್ರಕಾರ ವಿಷ್ಣುವೇ "ಭಯಕ್ರತ್ ಭಯನಾಶನಃ"

ಭಯವನ್ನು ಉಂಟುಮಾಡುವವನೂ ವಿಷ್ಣುವೇ, ಭಯನಾಶನನೂ ವಿಷ್ಣುವೇ !

Submitted by partha1059 Wed, 06/26/2013 - 13:45

In reply to by Shreekar

ಶ್ರೀಕರರೆ ಸರಿಯೆ ಶಿವನ ವಿಷ್ಣುವಿನ ವಿಷಯವಾಯಿತು!
ಸದಾ ಕಾಲ ತಿಂದುಂಡು ದುಂಡು ದುಂಡಾಗಿ ಓಡಾಡಿಕೊಂಡಿದ್ದ
ಗಣೇಶ ಏನು ಮಾಡಲಿಲ್ಲವೆ ಎಂದು ಅನುಮಾನ!

Submitted by Shreekar Wed, 06/26/2013 - 17:30

In reply to by partha1059

ಶಿವ ಶಿವಾ !
ಸದಾ ಕಾಲ ತಿಂದುಂಡು ದುಂಡು ದುಂಡಾಗಿ ಓಡಾಡಿಕೊಂಡಿದ್ದ
ಗಣೇಶ ಏನೂ ಮಾಡಲಿಲ್ಲವೆ ಎಂಬ ಅನುಮಾನ ಸಂಪದಿಗರಿಗೆ ಬೇಡ !

ತನ್ನ ಸಾವಿರಾರು ಗಣಗಳನ್ನು ಸೈನಿಕರ ವೇಷದಲ್ಲಿ ಕಳಿಸಿದ್ದು ಸಾಕ್ಷಾತ್ ಗಣೇಶನೇ ಅಲ್ಲವೇ !

Submitted by Shreekar Wed, 06/26/2013 - 18:33

In reply to by Shreekar

ಅಂದ ಹಾಗೆ, ಜಗತ್ತಿನ ಮೊತ್ತ ಮೊದಲ transcriptionist ಆದ ಶ್ರೀ ಗಣೇಶನು ವ್ಯಾಸಮಹರ್ಷಿಯವರು ಹೇಳುತ್ತ ಹೋದ ಹಾಗೆ ತಡವರಿಸದೆ ಮಹಾಭಾರತ ಬರೆಯುತ್ತ ಹೋದ ಸ್ಥಳ ವ್ಯಾಸ ಗುಫಾ ಬದರಿಯಲ್ಲಿದೆ. ಹಾಗೆಯೇ, ಪಾಂಡವರು ತಮ್ಮ ಅಂತಿಮ ಯಾತ್ರೆ, ಸ್ವರ್ಗಾರೋಹಣ ಮಾಡಿದ್ದು ಕೂಡಾ ಬದರಿಯಿಂದ !

ಬದರಿಯಿಂದಾಚೆಗೆ ಇರುವುದೇ ಟಿಬೆಟ್ - ಇಂದು ಕಾರ್ಮಿಕರ ಸ್ವರ್ಗವೆನಿಸಿದ ಚೀನಾ ದೇಶ.

Submitted by ಗಣೇಶ Wed, 06/26/2013 - 23:56

In reply to by Shreekar

>>ತನ್ನ ಸಾವಿರಾರು ಗಣಗಳನ್ನು ಸೈನಿಕರ ವೇಷದಲ್ಲಿ ಕಳಿಸಿದ್ದು ಸಾಕ್ಷಾತ್ ಗಣೇಶನೇ ಅಲ್ಲವೇ !:)
>>ಗಣೇಶ ಏನೂ ಮಾಡಲಿಲ್ಲವೆ ಎಂಬ ಅನುಮಾನ ಸಂಪದಿಗರಿಗೆ ಬೇಡ !-ಈ ಅನುಮಾನ ಪಾರ್ಥಸಾರಥಿಯವರಿಗೆ ಮಾತ್ರ ಬರುವುದು.:)
ಗಣೇಶ- ಮಹಾಭಾರತ ಬರೆಯುತ್ತಾ ಹೋದದ್ದು ವ್ಯಾಸ ಗುಫಾದಲ್ಲಾದರೆ, ಆನೆ ತಲೆ ಬಂದುದು ಗೌರಿಕುಂಡದಲ್ಲಿ..ಅಲ್ಲಿಂದ ೧೩ ಕಿ.ಮೀ ಟ್ರೆಕಿಂಗ್ ಮಾಡಿದರೆ ಕೇದಾರನಾಥ.

Submitted by Shreekar Thu, 06/27/2013 - 13:53

In reply to by ಗಣೇಶ

ಗೌರಿಕುಂಡದಲ್ಲಿ ಗಜಮುಖ fixing.

ಗೌರಿಕುಂಡದ ಬಿಸಿನೀರ ಬುಗ್ಗೆಯಲ್ಲಿ ಮಿಂದು ಗಾರ್ಧಬಾರೂಢನಾಗಿ ಕೇದಾರನಾಥನ ದರ್ಶನ ಕಳೆದ ಶತಮಾನದಲ್ಲೇ ಪಡೆದಿದ್ದರೂ ಗೌರಿಕುಂಡದಲ್ಲಿ ಗಜ ಮುಖವನ್ನು ಗಣೇಶನಿಗೆ ಜೋಡಿಸಿದ ಸ್ಥಳಮಹಾತ್ಮೆ ಇದುವರೆಗೂ ಗೊತ್ತಿರಲಿಲ್ಲ.

ಧನ್ಯವಾದಗಳು, ಗಣೇಶಣ್ಣಾ !

Submitted by ಗಣೇಶ Mon, 07/01/2013 - 23:58

In reply to by Shreekar

>>>ಕೇದಾರನಾಥನ ದರ್ಶನ ಕಳೆದ ಶತಮಾನದಲ್ಲೇ ಪಡೆದಿದ್ದರೂ !-->ಹತ್ತು ವರ್ಷದ ಹಿಂದೆ ಕೇದಾರನಾಥ ಹೇಗಿತ್ತು ಈಗ ಹೇಗಿದೆ ಎಂದು ತಿಳಕೊಳ್ಳಲು "ಬ್ಲಾಗ್ ಲೋಕ"ವೆಲ್ಲಾ ಸುತ್ತಾಡಿದ್ದೆ.:( ಕೇದಾರನಾಥ ದರ್ಶನದ ಬಗ್ಗೆ ನೀವು ಲೇಖನ ಏನಾದರೂ ಆಗ ಬರೆದಿದ್ದೀರಾ? ಬರೆದಿಲ್ಲವೆಂದಾದರೆ ಈಗಾದರೂ ನೆನಪಿಸಿಕೊಂಡು ಬರೆಯಿರಿ-ಜತೆಯಲ್ಲಿ ಚಿತ್ರಗಳಿದ್ದರೆ ಸೇರಿಸಿ. ಕ್ಲೌಡ್ ಬರ್ಸ್ಟ್ ಬಗ್ಗೆ - http://www.rediff.com/news/report/exclusive-why-we-will-never-know-what…