ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)

ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)

ಚಿತ್ರ

ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್)
======================

ಹುಟ್ಟಿ ಬೆಳೆವಾಗ ಇರುವ ಅಪ್ಪ ಅಮ್ಮನ ಪ್ರೀತಿಯ ಹಿತ
ಹುಟ್ಟಿ ಬೆಳೆದಾಗ ಬಂದನವೆನಿಸುವುದು ಏಕೆ ?

ಜೊತೆಯಾಗಿ ಆಡಿ ತಿಂದು ಒಂದೆ ಹಾಸಿಗೆಯಲ್ಲಿ ಮಲಗಿ
ಪ್ರೀತಿಯಲ್ಲಿ ಬೆಳೆದ ಅಣ್ಣ ತಮ್ಮರು ಕೊನೆಯಲ್ಲಿ ದಾಯದಿಗಳು ಏಕೆ ?

ಪ್ರೀತಿಯಲೆ ಸಾಕಿ ಸಲಹಿ ಬೆಳೆಸಿದ ತಂದೆ ತಾಯಿಯರು
ಮದುವೆ ಸಂಸಾರ ಬೆಳೆದೊಡೆ ಮಕ್ಕಳಿಗೆ ಬಾರವಾಗುವುದು ಏಕೆ ?

ಹುಟ್ಟುವಾಗಲೆ ಬೀಜರೂಪದಿ ಹುಟ್ಟಿ
ಮನುಜನ ಮನವೆಂಬ ತಿಪ್ಪೆಯಲಿ ಬೆಳೆವ
ಸ್ವಾರ್ಥರೂಪದ ಅಣಬೆಗೆ
ಅಧುನಿಕರು ಕೊಡುವ ಹೆಸರು ’ಪೀಳಿಗೆಯ ಅಂತರ’

 

ಚಿತ್ರ :  generation gap

Rating
No votes yet

Comments

Submitted by venkatb83 Thu, 06/27/2013 - 16:38

ಅಂ---------
------ತ--------
--------------------ರ

? ??????
ಏಕೆ ಏಕೆ ?
ಉತ್ತರ ಸಿಕ್ಕೀತೆ?
ಗುರುಗಳೇ
ಬಾಲ್ಯದಲ್ಲಿ ಮಕ್ಕಳಿಗೆ ಒಳ್ಳೊಳ್ಳೆ ವಿಷಯಗಳು -ಒಳ್ಳೆಯದ್ದು ಕೆಟ್ಟದ್ದು - ಧಾನ ಧರ್ಮ -ಸಹನೆ ಕರುಣೆ -ಮಮತೆ ಮಮಕಾರ -ಇತ್ಯಾದಿ ಬಗ್ಗೆ ಹೇಳಿ ತಿದ್ದಿದರೆ ಮುಂದೊಮ್ಮೆ ಅದು ಪೀಳಿಗೆಯಲ್ಲಿ ಹಾಗ್ಯೇ ಮುಂದುವರೆದರೆ ಮುಂದಿನ ಪರಮ್ಪರೆಗಳಾದರೂ ಚೆನ್ನಾಗಿ ಬಾಳಿ ಬದುಕಿಯಾವು .
ಆದರೆ ಇಂದಿನ ಯುಗದಲ್ಲಿ ಪಟ್ಯದಲ್ಲಿ ಇರುವುದೆಲ್ಲ ತಿದ್ದಿದ ಇತಿಹಾಸ .. ;
;((

ನಿಮ್ಮ ಈ ಕವನದಲ್ಲಿ ಬಂದ ಭಾವ ನನಗೆ ಯಾವತ್ತಿಂದಲೋ ಬರುತ್ತಿದೆ . ನನಗದೇ ಅಚ್ಚರಿ ಜೋತೆಯಾಗಿದ್ದವರೇ ದೂರಾಗಿ ಮತ್ಸರದಲಿ ಕತ್ತಿ ಮಸೆವದು ಕಂಡು ;((

ಹಣಬೆ ರೂಪಕ ಪದ ಪ್ರಯೋಗ ಸಖತ್ ..!!
ಶುಭವಾಗಲಿ

\।

Submitted by nageshamysore Fri, 06/28/2013 - 05:07

ಪಾರ್ಥಾ ಸಾರ್, ಕೇಳಿದ ಪ್ರಶ್ನೆಗೆಲ್ಲ ಉತ್ತರವನ್ನು ಕವನವೆ ಹೇಳಿಬಿಟ್ಟಿದೆ - ಅಣಬೆ ತರದ ಸ್ವಾರ್ಥ ಅಂತ. ನಿರೀಕ್ಷೆಗಳು ಹೆಚ್ಚಿದ್ದಷ್ಟೂ ಆಘಾತಗಳು ಹೆಚ್ಚು (ಅದು ಇನ್ನೊಂದು ತರದ ಸ್ವಾರ್ಥವೆಂದು ಅನ್ನಬಹುದೇನೊ). ಬದಲಿಗೆ ಕರ್ತವ್ಯವೆಂಬ ನಿರ್ಲಿಪ್ತತೆಯ ದಾರಿ ಹಿಡಿಯುವುದೆ ಹೆಚ್ಚು ಕ್ಷೇಮ - ನಾಗೇಶ  ಮೈಸೂರು

Submitted by partha1059 Fri, 06/28/2013 - 14:04

In reply to by nageshamysore

ನಾಗೇಶಮೈಸೂರು ರವರಿಗೆ ನಿರ್ಲಿಪ್ತ ಕರ್ತವ್ಯ ಆಫೀಸಿನಲ್ಲಿ ಸಾದ್ಯ.
ತಂದೆಯಾಯಿ ತಾಯಿಯಾಗಿ ಅಣ್ಣನಾಗಿ ಅಥವ ಸಹೋದರಿಯಾಗಿ ನೀವು ನಿಮ್ಮ ಮಗ/ಮಗಳು/ತಮ್ಮ/ತಂಗಿ ಇವರು ತಪ್ಪು ಮಾರ್ಗದಲ್ಲಿ ನಡೆಯುತ್ತಿದ್ದಾರೆ ಅನ್ನುವಾಗಿ ನೀವು ಸುಮ್ಮನಿರಲು ಆಗದೆ ಅದನ್ನು ಅವರ ಗಮನಕ್ಕೆ ತರಬೇಕಾಗಿರುವುದು ನಿಮ್ಮ ಕರ್ತವ್ಯ. ಆದರೆ ಈಗ ಅದಕ್ಕೆ ದಬ್ಬಾಳಿಕೆ ಎನ್ನುತ್ತಾರೆ, ತಮ್ಮಗೆ ಸ್ವಾತಂತ್ರ್ಯವಿಲ್ಲ ಎನ್ನುತ್ತಾರೆ, ಕೆಲವರು ದೊಡ್ದವರಿಗೆ ಉಪದೇಶ ಕೊಡುತ್ತಾರೆ ನೀವು ಈಗಿನ ಜನಾಂಗದ ಸ್ವಭಾವ ಅರ್ಥಮಾಡಿಕೊಳ್ಲಬೇಕು, ಅವರ ಮನಸಿನಂತೆ ನಡೆಯಬೇಕು ಎಂದು, ಆಗ ನಿಮ್ಮ ಕರ್ತವ್ಯಕ್ಕು ಅವರ ಸ್ವತಂತ್ರ್ಯದ ಕಲ್ಪನೆಗೆ ಘರ್ಷಣೆ ಅನಿವಾರ್ಯವಲ್ಲವೆ, ಇಲ್ಲದಿದ್ದರೆ ನನಗೆ ಸಂಬಂದಿಸಿದ್ದಲ್ಲ ಏನಾದರು ಮಾಡಿಕೊಳ್ಳಲ್ಲಿ, ಮಗ/ಮಗಳಾಗಿರುವದಕ್ಕೆ ಹಣಕೊಡುವುದಷ್ಟೆ ಅವರ ಅಗತ್ಯ ಪೂರೈಸುವದಷ್ಟೆ ನನ್ನ ಕರ್ತವ್ಯ ಎಂದು ಸುಮ್ಮನಿರಬೇಕಾ? ಆಗಲು ಬೇರೆ ವಾದವಿದೆಯಲ್ಲ, ದೊಡ್ದವರು ತಮ್ಮ ಜವಾಬ್ದಾರಿ ನಿರ್ವಹಿಸಲಿಲ್ಲ, ತಪ್ಪು ನಡೆದಾಗ ಮಕ್ಕಳನ್ನು ತಿದ್ದಲಿಲ್ಲ ಹಾಗಾಗಿ ಮಕ್ಕಳು ಹಾಳಾದರು ಎನ್ನುವರಲ್ಲ. ಈಗಂತು ಮಕ್ಕಳು ಎಲ್ ಕೆ ಜಿಯಿಂದಲೆ ಸ್ವಾತಂತ್ರರಲ್ಲವೆ !!! :-))). ನಿಮ್ಮ ಒಂದು ಮಾತನ್ನು ಒಪ್ಪಬಹುದು ದೊಡ್ಡವರು ಚಿಕ್ಕವರಿಂದ ಏನನ್ನು ನಿರೀಕ್ಷಿಸದೆ ತಮ್ಮ ಸಲುಹುವ ಕರ್ತವ್ಯ ಮಾಡಬಹುದು. ಆದರೆ ಸಂಸಾರಿಗಳ ಜೀವನವನ್ನು ಸನ್ಯಾಸದತ್ತ ಒಯ್ಯುತಿರುವಿರಲ್ಲ !!. ನಿರೀಕ್ಷೆಗಳಿಲ್ಲದೆ, ಆಸೆಗಳಿಲ್ಲದೆ ಬದುಕಿರುವ ಹಾಗಿದ್ದರೆ, ಯಾರಿಗಾದರು ಸಂಸಾರ ಏಕೆ ಬೇಕು, ಅಣ್ಣ ತಮ್ಮ ಮಗ ಮಗಳು ಅಪ್ಪ ಅಮ್ಮ ಎನ್ನುವ ಈ ಸಂಬಂದಗಳೆಲ್ಲ ಏಕೆ ಬೇಕು?

Submitted by ಗಣೇಶ Sat, 06/29/2013 - 00:13

In reply to by partha1059

ಪಾರ್ಥರೆ, ಚಿಕ್ಕ ವಿಷಯ ಆದರೆ ಬಿಡಿಸಲಾಗದ ಕಗ್ಗಂಟು. ನೀವಂದಂತೆ "ಸ್ವಾರ್ಥ" ಗೆಲ್ಲುತ್ತಿದೆ. ಸಂಬಂಧಗಳು ಬಂಧನ ಅನಿಸುತ್ತಿದೆ. ತಂದೆ, ತಾಯಿ ಅಣ್ಣ...ಎಲ್ಲರನ್ನ ದೂರಮಾಡಲಿ. ಪರವಾಗಿಲ್ಲ.. ಈ ಪಾಪಿಗಳೊಂದಿಗೆ ಒದ್ದಾಡುವ ಬದಲು ಅವರು ಹೇಗೋ ಜೀವನ ಮಾಡಿಕೊಂಡಿರುತ್ತಾರೆ. ಕೊನೇ ಪಕ್ಷ ಅವರವರ ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸಲಿ. ೧-೨ ಕ್ಲಾಸ್ ಪಾಸಾಗುವಾಗಲೇ ಮೊಬೈಲ್.. ಅದೂ ಸಾಧಾರಣದ್ದು ಕಣ್ಣಿಗೆ ನಾಟುವುದೇ ಇಲ್ಲ. ಮಾರುತಿ ಅವರ ಕಣ್ಣಿಗೆ ಡಬ್ಬಾ ಕಾರು...ಡವ್ ಗಿವ್ ಅಂತ ತಂದೆ ತಾಯಿಯೇ ೯-೧೦ ವಯಸ್ಸಿನ ಮಕ್ಕಳ ಜತೆ ಮಾತನಾಡುವುದು..ಗುರುಗಳ ಬಗ್ಗೆ ಗೌರವವೇ ಇಲ್ಲ. ಅಜ್ಜ-ಅಜ್ಜಿಯನ್ನು ಮನೆಕೆಲಸದವರಿಗಿಂತ ಕಡೆಯಾಗಿ ನೋಡುವುದು. ಮೊದಲು ಹಣದ ಮದದಲ್ಲಿರುವ ಈಗಿನ ತಂದೆತಾಯಿಯರ ರಿಪೇರಿ ಆಗಬೇಕು.

Submitted by ksraghavendranavada Sat, 06/29/2013 - 09:56

ನಮ್ಮ ಸ೦ಸ್ಕಾರ ಮ್ಮ ಮಕ್ಕಳಿಗೆ.... ನಾವು ನೀಡಿದ್ದು.. ನಮ್ಮ ಮಕ್ಕಳು ಅವರ ಮಕ್ಕಳಿಗೆ ನೀಡುತ್ತಾರೆ...
ಆದ್ದರಿ೦ದ ಜೀವನಾನುಭವ ಮುಖ್ಯ! ಆದರೆ ಏನು ಮಾಡ್ತೀರಿ.. ಎಲ್ಲವೂ ಅನುಭವಕ್ಕೆ ಬರುತ್ತದೆ ಎನ್ನುವಷ್ಟರಲ್ಲಿ ಆಯುಷ್ಯವೇ ಮುಗಿದು ಹೋಗಿರುತ್ತದೆ!