ಚದುರಿದ ಚಿತ್ರಗಳು
-೧-
ಗಾಳಿ ಹೆಚ್ಚಾದ೦ತೆ,
ದೀಪವು ಎಲ್ಲಿ ಆರಿಬಿಡುವುದೋ
ಎ೦ದು,
ಪತ೦ಗದ ವ್ಯಾಕುಲತೆ
ಹೆಚ್ಚಾಯಿತು....
-೨-
ಈಗೀಗ,
ಕಾಡು ಪ್ರಾಣಿಗಳು
ಆಕ್ರಮಿಸುತ್ತಿವೆ
ಮನುಷ್ಯನ ವಾಸಸ್ಥಾನವನ್ನು...,
ಆದರೆ,
ಮನುಷ್ಯ ಪ್ರಾಣಿಯೇ
ಅವುಗಳ ಮನೆಯನ್ನು ಆಕ್ರಮಿಸುವುದು
ಹೆಚ್ಚು....!!
-೩-
ಕಾದ ಕಾವಲಿಯ ಮೇಲೆ
ಕಾರ್ನ್ ಪಾಪ್ ಆದ೦ತಲ್ಲ
ಕನಸುವುದು,
ಕಾವು ಕೊಟ್ಟು
ಮೊಟ್ಟೆ ಮರಿಯಾಗುವ ರೀತಿ
ಕನಸು....
-೪-
ನಿನ್ನ ಕಣ್ಬೆಳಕು
ಮುಟ್ಟುವ ಕೊನೇ ತುದಿಯಲ್ಲಿ,
ಮತ್ತು ಅದರಿ೦ದ,
ನನ್ನ ನೆರಳು ಶುರುವಾಗುವ
ಬಿ೦ದುವಿನಲ್ಲಿ
ನನ್ನ ಅಸ್ತಿತ್ವ...
Rating
Comments
ಹನಿಗವನಗಳು ಚೆನ್ನಾಗಿವೆ. ಒಳ್ಳೆಯ
ಹನಿಗವನಗಳು ಚೆನ್ನಾಗಿವೆ. ಒಳ್ಳೆಯ ಪ್ರಯತ್ನ. ಭಾವನೆಯ ಹನಿಗಳನ್ನು ಹಿಡಿಯುವ ನಿಮ್ಮ ಕಾವ್ಯ ಕೃಷಿ ಇನ್ನಷ್ಟು ವೃದ್ಧಿಸಲಿ
ಎಲ್ಲ ಕವನಗಳು ಇಷ್ಟವಾದವು ಮೊದಲ
ಎಲ್ಲ ಕವನಗಳು ಇಷ್ಟವಾದವು ಮೊದಲ ಪತಂಗದ ವ್ಯಾಕುಲತೆಯಂತು ಮಾರ್ಮಿಕ
ಮೂರು ಮತ್ತು ನಾಲ್ಕು ಸೊಗಸಾಗಿವೆ.
ಮೂರು ಮತ್ತು ನಾಲ್ಕು ಸೊಗಸಾಗಿವೆ. ಸು೦ದರ ಅಭಿವ್ಯಕ್ತಿ...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಕನಸುವುದು - ಹೊಸ ಭಾಷಾ ಪ್ರಯೋಗ .
ಕನಸುವುದು - ಹೊಸ ಭಾಷಾ ಪ್ರಯೋಗ ..
ಹಾಗೆ ಕವನ ಕೂಡ ನಿಮಾಂ ಹಿಂದಿನ ಬರಹಗಳಿಗಿಂತ ವಿಭಿನ್ನ
ಶುಭವಾಗಲಿ
\॥