೫೮. ಶ್ರೀ ಲಲಿತಾ ಸಹಸ್ರನಾಮ ೧೮೨ರಿಂದ ೧೮೫ನೇ ನಾಮಗಳ ವಿವರಣೆ

೫೮. ಶ್ರೀ ಲಲಿತಾ ಸಹಸ್ರನಾಮ ೧೮೨ರಿಂದ ೧೮೫ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೮೨ - ೧೮೫

Niṣkriyā निष्क्रिया (182)

೧೮೨. ನಿಷ್ಕ್ರಿಯಾ

           ದೇವಿಯು ಕ್ರಿಯೆಗಳಲ್ಲಿ ಆಸಕ್ತಳಾಗುವುದಿಲ್ಲ. ಆಕೆಯು ಬ್ರಹ್ಮದ ಅಥವಾ ಶಿವನ ಕ್ರಿಯಾಶೀಲ ಶಕ್ತಿಯಾಗಿದ್ದು ಆಕೆಯು ಕ್ರಿಯೆಯಿಲ್ಲದೇ ಇರಲಾಗುವುದಿಲ್ಲ. ಈ ಮುಂಚೆ ಚರ್ಚಿಸಿದಂತೆ, ಬ್ರಹ್ಮವು ಜಡ ಮತ್ತು ಕ್ರಿಯಾಶೀಲ (ಚಲನಶೀಲ) ಶಕ್ತಿಗಳ ಸಂಯೋಗವಾಗಿದೆ. ಆದ್ದರಿಂದ ಸಹಜವಾಗಿಯೇ ಕ್ರಿಯಾಶೀಲ ಶಕ್ತಿಯು ಕ್ರಿಯೆಯೊಂದಿಗೆ ಸಹಯೋಗ ಹೊಂದಿರುತ್ತದೆ. ಆದರೆ ಇದನ್ನು ನಿರ್ಗುಣ ಬ್ರಹ್ಮದ ದೃಷ್ಟಿಕೋನದಿಂದ ನೋಡಿದಾಗ ದೇವಿಯು ಕ್ರಿಯೆಯಲ್ಲಿ ಆಸಕ್ತಳಾಗಿರುವುದಿಲ್ಲ ಆದರೆ ಆಕೆಯು ಕೇವಲ ಅವಕ್ಕೆ ಸಾಕ್ಷೀಭೂತಳಾಗಿರುತ್ತಾಳೆ.

           ಎರಡನೆಯದಾಗಿ, ಭೌತಿಕ ಕಾಯವು ಮಾತ್ರವೇ ಕ್ರಿಯೆಗಳಿಗೆ ಒಳಪಡುತ್ತದೆ ಮತ್ತು ಆ ವಿಧವಾದ ಕ್ರಿಯೆಗಳು ಒಳ್ಳೆಯವಾಗಿರಬಹುದು ಅಥವಾ ಕೆಟ್ಟವಾಗಿರಬಹುದು. ಈ ವಿಧವಾದ ಕ್ರಿಯೆಗಳ ಮೂಲಕ ಆತ್ಮದ ಕರ್ಮಫಲವು ಅವಲಂಭಿಸಿರುತ್ತದೆ. ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿಗೆ ಸ್ಥೂಲ ಶರೀರವಿದ್ದರೂ ಕೂಡಾ ಅವನು ತನ್ನ ದೇಹವನ್ನು ಗ್ರಹಿಸುವುದಿಲ್ಲ ಏಕೆಂದರೆ ಅವನು ತನ್ನನ್ನು ಬ್ರಹ್ಮದಿಂದ ಪ್ರತ್ಯೇಕವೆಂದು ತಿಳಿದುಕೊಳ್ಳುವುದಿಲ್ಲ. ಅಂತಹ ವ್ಯಕ್ತಿಗಳ ಕ್ರಿಯೆಗಳು ಕರ್ಮಫಲಗಳನ್ನುಂಟು ಮಾಡುವುದಿಲ್ಲ.

           ಇದನ್ನೇ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೩.೧೭) ಹೀಗೆ ವಿವರಿಸುತ್ತಾನೆ, "ಯಾರು ಆತ್ಮದಲ್ಲಿಯೇ ಸಂತೋಷಗೊಂಡಿರುತ್ತಾನೆಯೋ ಮತ್ತು ಆತ್ಮದಲ್ಲಿಯೇ ತೃಪ್ತಿಯನ್ನು ಹೊಂದುತ್ತಾನೆಯೋ ಮತ್ತು ಆತ್ಮದಲ್ಲಿಯೇ ಸ್ಥಿರವಾಗಿರುತ್ತಾನೆಯೋ ಅವನಿಗೆ ಯಾವುದೇ ವಿಧವಾದ ಕರ್ತವ್ಯಗಳಿರುವುದಿಲ್ಲ". 

Niṣparigrahā निष्परिग्रहा (183)

೧೮೩. ನಿಷ್ಪರಿಗ್ರಹಾ

            ದೇವಿಯು ತನ್ನ ಕ್ರಿಯೆಗಳಿಗೆ ಪ್ರತಿಯಾಗಿ ಏನನ್ನೂ ಪಡೆಯುವುದಿಲ್ಲ. ಈ ಗುಣವು ಹಿಂದಿನ ನಾಮದೊಂದಿಗೆ ತಾಳೆಯಾಗುತ್ತದೆ. ಈ ನಾಮವು ದೇವಿಯು ಕ್ರಿಯೆಗಳನ್ನು (ಸೃಷ್ಟಿ, ಸ್ಥಿತಿ ಮತ್ತು ಲಯ) ಕೈಗೊಳ್ಳುತ್ತಾಳೆ ಎಂದು ಹೇಳುತ್ತದೆ. ಈ ನಾಮದಲ್ಲಿ ಒಟ್ಟಾರೆಯಾಗಿ ನಾವು ತಿಳಿದುಕೊಳ್ಳಬೇಕಾದದ್ದೇನೆಂದರೆ ದೇವಿಯು ತನ್ನ ಕ್ರಿಯೆಗಳಲ್ಲಿ ಆಸಕ್ತಿ ಹೊಂದುವುದಿಲ್ಲ. ಆಕೆಯು ಯಾವುದೇ ಕ್ರಿಯೆಗಳನ್ನು ಕೈಗೊಳ್ಳದಿದ್ದಲ್ಲಿ (ಕೇವಲ ಒಂದೇ ಒಂದನ್ನು ಕೈಗೊಳ್ಳದಿದ್ದರೂ ಕೂಡಾ), ಈ ಪ್ರಪಂಚದ ಇರುವಿಕೆಯು ಕೊನೆಗೊಳ್ಳುತ್ತದೆ. ಈ ರೀತಿಯಾಗಿ ಕಾರ್ಯ ನಿರ್ವಹಿಸುವುದರಿಂದ ಆಕೆಗೆ ಪ್ರತಿಯಾಗಿ ಏನೂ ಸಿಗುವುದಿಲ್ಲ. ಇದಕ್ಕೆ ಸೂಕ್ತವಾದ ವ್ಯಾಖ್ಯಾನವೇನೆಂದರೆ, ದೇವಿಯು ತನ್ನ ಭಕ್ತರು ಹೂವು, ಆಹಾರ, ಮೊದಲಾದವುಗಳನ್ನು ಅರ್ಪಿಸಿ ಪೂಜಾ ವಿಧಿಗಳನ್ನು ಕೈಗೊಂಡು ಅವಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದನ್ನು ಬಯಸುವುದಿಲ್ಲ. ಈ ನಾಮವು ಶಾಸ್ತ್ರವಿಧಿತ ಪೂಜಾ ಪದ್ಧತಿಗಳು ಬಹಳವೆಂದರೆ ಆತ್ಮಸಾಕ್ಷಾತ್ಕಾರಕ್ಕೆ ಒಂದು ಹೆಜ್ಜೆ ಮಾತ್ರವೇ ಎನ್ನುವುದನ್ನು ಪುನರುಚ್ಛರಿಸುತ್ತದೆ. ಒಬ್ಬನು ಇಲ್ಲಿಯೇ ನಿರ್ಭಂದಿತನಾದರೆ, ಸಹಜವಾಗಿಯೇ ಅವನು ದೇವಿಯ ಬಳಿಗೆ ಸಾಗಲಾರ.

Nistulā निस्तुला (184)

೧೮೪. ನಿಸ್ತುಲಾ

           ದೇವಿಯು ಹೋಲಿಕೆ ಇಲ್ಲದವಳು, ಏಕೆಂದರೆ ಹೋಲಿಕೆಯನ್ನು ಇಬ್ಬರು ಸಮಾನರಲ್ಲಿ ಮಾಡಬಹುದು. ದೇವಿಯು ಪರಮೋನ್ನತವಾದವಳಾದ್ದರಿಂದ ಆಕೆಗೆ ಯಾರೂ ಸರಿ ಸಮಾನರಿಲ್ಲ ಆದ್ದರಿಂದ ಅವಳನ್ನು ಹೋಲಿಸುವ ಪ್ರಶ್ನೆಯೇ ಇಲ್ಲ. ೩೮೯ನೇ ನಾಮವೂ ಕೂಡಾ ಆಕೆಯ ಹೋಲಿಕೆಗೆ ಅತೀತಳಾಗಿರುವುದನ್ನು ಸೂಚಿಸುತ್ತದೆ.

Nīlacikurā नीलचिकुरा (185)

೧೮೫. ನೀಲಚಿಕುರಾ

          ನೀಲವೆಂದರೆ ನೀಲಿ ಬಣ್ಣ ಮತ್ತು ಚಿಕುರಾ ಎಂದರೆ ಕೂದಲು ಅಥವಾ ಮುಡಿ. ದೇವಿಗೆ ನೀಲಿ ಬಣ್ಣದ ಕೂದಲುಗಳಿವೆ. ಈ ಅರ್ಥವು ಇಲ್ಲಿ ಅಪ್ರಸ್ತುತವೆನಿಸುತ್ತದೆ. ಈ ನಾಮಕ್ಕೆ ಸೂಕ್ತವಾದ ವ್ಯಾಖ್ಯಾನವು ಕ್ಲಿಷ್ಟವೆನಿಸುತ್ತದೆ. ಈ ನಾಮವು ಇಲ್ಲಿ ಅಸಾಂದರ್ಭಿಕವೆನಿಸುತ್ತದೆ; ಏಕೆಂದರೆ ಅವರು ಇಲ್ಲಿ ಆಕೆಯ ನಿರ್ಗುಣ ಬ್ರಹ್ಮ ರೂಪದ ಪೂಜೆಯಿಂದ ದೊರಕುವ ಲಾಭಗಳ ಕುರಿತಾಗಿ ಚರ್ಚಿಸುತ್ತಿದ್ದಾರೆ. ಅದೇ ಸಮಯದಲ್ಲಿ, ವಾಕ್ ದೇವಿಗಳು ಈ ನಾಮದ ವೈಶಿಷ್ಠ್ಯವನ್ನು ತಿಳಿಯದೇ ಅದನ್ನು ಇಲ್ಲಿ ಇರಿಸಿರುವುದಿಲ್ಲ. ಕೆಲವರ ಅಭಿಪ್ರಾಯದಂತೆ ವಾಕ್-ದೇವಿಯರು ದೇವಿಯ ನಿರ್ಗುಣ ರೂಪದ ಫಲಗಳ ಕುರಿತಾಗಿ ಧ್ಯಾನಿಸುತ್ತಿರಬೇಕಾದರೆ ಅವರಿಗೆ ದೇವಿಯ ಕೂದಲಿನ ಸೌಂದರ್ಯವು ಮಿಂಚಿನಂತೆ ಹೊಳೆದು ಅವರು ಇದನ್ನು ಇಲ್ಲಿ ಇರಿಸಿದ್ದಾರೆನ್ನುತ್ತಾರೆ. ಇದನ್ನೇ ಲಲಿತಾ ತ್ರಿಶತಿಯ ೧೫೦ನೇ ನಾಮವಾದ ’ಕಚಜಿತಾಂಬುದಾ’ದಲ್ಲಿಯೂ ವಿವರಿಸಲಾಗಿದೆ.

          (ನನ್ನ ವೈಯ್ಯಕ್ತಿಕ ಅಭಿಪ್ರಾಯವೇನೆಂದರೆ, ದೇವಿಯ ಕೂದಲುಗಳು ಆಕಾಶದಂತೆ ನೀಲಿಯಾಗಿವೆ ಅಥವಾ ಆಕಾಶವೇ ಅವಳ ಕೂದಲುಗಳು ಎಂದು ಅರ್ಥೈಸಿದರೆ ಅವಳು ಅನಂತಳು ಎನ್ನುವ ಅರ್ಥ ಬರುತ್ತದೆ. ಏಕೆಂದರೆ ಅನಂತವಾದದ್ದು - ಸಮುದ್ರ ಹಾಗೂ ಆಕಾಶಗಳು ನೀಲಿ ಬಣ್ಣವನ್ನು ಹೊಂದಿರುತ್ತವೆ. ಆಕೆಯು ಅನಂತವಾಗಿರುವುದರಿಂದ ಆಕೆಯು ಎಣೆಯಿಲ್ಲದವಳು ಆದ್ದರಿಂದ ಹೋಲಿಕೆ ಇಲ್ಲದವಳು ಎನ್ನುವ ಹಿಂದಿನ ನಾಮಕ್ಕೆ ಇದು ಪೂರಕವಾಗಿದೆ).

          ಇನ್ನೊಂದು ಸಾಧ್ಯವಾದ ವಿಶ್ಲೇಷಣೆ ಏನೆಂದರೆ, ಆಜ್ಞಾಚಕ್ರವು ನೀಲಿ ಬಣ್ಣದೊಂದಿಗೆ ಸಂಭಂದ ಹೊಂದಿದೆ. ನೀಲ-ಚಿಕುರ ಎಂದರೆ ಸಂಪೂರ್ಣ ಕೂದಲಿನಿಂದ ಆವರಿಸಲ್ಪಟ್ಟ ತಲೆಯ ಹಿಂಭಾಗದಲ್ಲಿರುವ ಚಕ್ರ ಅಂದರೆ ಆಜ್ಞಾ ಚಕ್ರದ ಸ್ವಲ್ಪ ಹಿಂದೆ (just above medulla oblongata) ಇರುವ ಚಕ್ರವನ್ನು ಸೂಚಿಸಬಹುದು. ಈ ತಲೆಯ ಹಿಂಭಾಗದಲ್ಲಿರುವ ಚಕ್ರವು ಅಭಿವೃದ್ಧಿಯಾದರೆ ಒಬ್ಬನಿಗೆ ಪ್ರಪಂಚದಲ್ಲಿ ನಡೆಯುತ್ತಿರುವುದೆಲ್ಲಾ ಗೋಚರಿಸುವುದು. ಇದು ಬ್ರಹ್ಮಾಂಡದೊಂದಿಗೆ ಸಂಪರ್ಕವನ್ನು ಏರ್ಪಡಿಸಿಕೊಳ್ಳಲು ಸಹಾಯಕವಾಗಿದೆ. ಈ ಚಕ್ರವು ಬಹಳ ನಿಗೂಢವಾದುದೆಂದು ಪರಿಗಣಿಸಲ್ಪಟ್ಟಿದೆ. ಕೆಲವರ ಅಭಿಪ್ರಾಯದಂತೆ ಈ ಜಾಗದಲ್ಲಿ ಚಂಡಿಕೆಯನ್ನು ಬಿಡುವ ಉದ್ದೇಶವೇನೆಂದರೆ ಈ ಜಾಗವು ಇತರರ ದೃಷ್ಟಿಗೆ ಬೀಳಬಾರದೆನ್ನುವುದು. ಈ ಚಕ್ರವಿರುವ ಪ್ರದೇಶವು, ಚಕ್ರವು ಸಂಪೂರ್ಣ ಕ್ರಿಯಾಶೀಲವಾದಾಗ ಪ್ರಬಲವಾಗಿ ಉಬ್ಬುತ್ತದೆ. ಚಿಕುರ ಎಂದರೆ ಪರ್ವತವೆನ್ನುವ ಅರ್ಥವೂ ಇದೆ ಬಹುಶಃ ಈ ಉಬ್ಬು ಪ್ರದೇಶವನ್ನು ಅದು ಸೂಚಿಸುತ್ತದೆ. ಈ ಚಕ್ರಕ್ಕೆ ಬ್ರಹ್ಮಾಂಡದ ಶಕ್ತಿಯು ದೊರೆಯುತ್ತದೆ. ಇನ್ನೊಂದು ವಿಧವಾಗಿ ಹೇಳಬೇಕೆಂದರೆ, ನೀಲ-ಚಿಕುರವನ್ನು (ತಲೆಯ ಹಿಂಭಾಗದಲ್ಲಿರುವ ಚಕ್ರವನ್ನು) ಅಭಿವೃದ್ಧಿಗೊಳಿಸಿಕೊಳ್ಳುವುದರ ಮೂಲಕ ನೀಲಿ ಬಣ್ಣದಲ್ಲಿರುವ ದೇವಿಯ ಸ್ವಯಂಪ್ರಕಾಶಿತ ರೂಪವನ್ನು ಅರಿಯಬಹುದು.

******

           ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 182-185 http://www.manblunder.com/2009/09/lalitha-sahasranamam-182-185.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sun, 06/30/2013 - 07:17

ಶ್ರೀಧರರೆ, 182-185 ತಮ್ಮ ಅವಗಾಹನೆ / ಪರಿಷ್ಕರಣೆಗೆ ಸಿದ್ದ ಈ ಲಿಂಕಿನಲ್ಲಿ ( ಅಂದಹಾಗೆ ಲಿಂಕಿನಲ್ಲಿ ಪ್ರತ್ಯೇಕವಾಗಿ ಪರಿಷ್ಕರಿಸುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಯಲಿಲ್ಲ..ಅದು ತೊಡಕಿನದಾರಿ ಅನಿಸಿದರೆ ಮತ್ತೆ ಹಳೆ ವಿಧಾನಕ್ಕೆ ಮರಳೋಣ) - ನಾಗೇಶ ಮೈಸೂರು, ಸಿಂಗಪುರದಿಂದ
 
https://ardharaatriaalaapagalu.wordpress.com/%e0%b3%ab%e0%b3%ae-%e0%b2%…

Submitted by nageshamysore Sun, 06/30/2013 - 07:27

In reply to by nageshamysore

ಅಂದ ಹಾಗೆ - ಇದುವರೆವಿಗೂ ಬರೆದ ಕಾವ್ಯ ಸಾರ ಸಂಗ್ರಹವನ್ನೆಲ್ಲ ಅಲ್ಲೆ ಒಟ್ಟಾಗಿ ಕ್ರೋಡೀಕರಿಸಿ ಹಾಕುತ್ತಿದ್ದೇನೆ - ಚದುರಿ ಹೋಗಿ ಮುಂದೆ ಹುಡಾಕಾಟ ಕಷ್ಟ ಕೊಡದಿರಲೆಂದು (ಕೆಲವು ನೀವು ಧೀರ್ಘ ರಜೆಯಲ್ಲಿದ್ದಾಗ ಬರೆದದ್ದನ್ನು ಸೇರಿಸಿ - ನೀವದನ್ನಿನ್ನು ನೋಡಿ, ತಿದ್ದಿ ಪರಿಷ್ಕರಿಸಬೇಕಿದೆ). ಸಾಧ್ಯವಾದಾಗ ಬಿಟ್ಟು ಹೋಗಿರುವ ಹಳೆಯದನೆಲ್ಲ ಒಂದೊಂದಾಗಿ ಬರೆದು ಸೇರಿಸುತ್ತೇನೆ - ಸಂಪುರ್ಣತೆಯ ದೃಷ್ಟಿಯಿಂದ. ಅದನ್ನು ಮತ್ತೆ ವಿಮರ್ಶಿಸಿ ತಿದ್ದುವ ತೊಂದರೆ ತಮಗೆ :-)

Submitted by neela devi kn Fri, 07/05/2013 - 12:31

In reply to by nageshamysore

nageshmysore ravaralli namaskaragalu,
taavu bereya link nalli tamma padya galannu kalisabedi ide link nalli barali namagoo padagala jodane hege yendu tiliyali shridhar ravara lalithasahasra namada jotege tamma padya haagoo adakke baruva pratikriyegalannu oodalu chennagiruthade so taavu bere link nalli kalisi final matra prakatisabedi pl.
neela
kannada dalli bareyuva soulabya villa kshamisi

Submitted by nageshamysore Fri, 07/05/2013 - 13:27

In reply to by neela devi kn

ನೀಲಾದೇವಿಯವರೆ, ಓದುಗ ಬಳಗಕ್ಕೆ ಈ ಸಂವಾದವೆ ಅಷ್ಟೊಂದು ಇಷ್ಟವಾಗುತ್ತೆಂದರೆ ಖಂಡಿತ ನಿಮ್ಮ ಸಲಹೆಯಂತೆ ಮಾಡೋಣ ಬಿಡಿ - ಅದೇನು ದೊಡ್ಡ ವಿಷಯವಲ್ಲ - ನಾನು ಒದುಗರೆಲ್ಲ ಅಲ್ಲಿ ಇಲ್ಲಿ ಅಡ್ಡಾಡಿ ಕಷ್ಟ ಪಡುವರೇನೊ ಅಂದುಕೊಂಡಿದ್ದೆ! ಅದರಲ್ಲು ನೀವು ಹೇಳಿದ ಮೇಲೆ ಶ್ರೀ ಲಲಿತೆಯಿಂದಲೆ ಬಂದ ಆದೇಶದ ಹಾಗೆ :-) - ನಾಗೇಶ ಮೈಸೂರು

Submitted by partha1059 Sun, 06/30/2013 - 13:20

೧೮೫. ನೀಲಚಿಕುರಾ

ನೀಲವೆಂದರೆ ನೀಲಿ ಬಣ್ಣ ಮತ್ತು ಚಿಕುರಾ ಎಂದರೆ ಕೂದಲು ಅಥವಾ ಮುಡಿ. ದೇವಿಗೆ ನೀಲಿ ಬಣ್ಣದ ಕೂದಲುಗಳಿವೆ. ಈ ಅರ್ಥವು ಇಲ್ಲಿ ಅಪ್ರಸ್ತುತವೆನಿಸುತ್ತದೆ. ಈ ನಾಮಕ್ಕೆ ಸೂಕ್ತವಾದ ವ್ಯಾಖ್ಯಾನವು ಕ್ಲಿಷ್ಟವೆನಿಸುತ್ತದೆ. ಈ ನಾಮವು ಇಲ್ಲಿ ಅಸಾಂದರ್ಭಿಕವೆನಿಸುತ್ತದೆ; ಏಕೆಂದರೆ ಅವರು ಇಲ್ಲಿ ಆಕೆಯ ನಿರ್ಗುಣ ಬ್ರಹ್ಮ ರೂಪದ ಪೂಜೆಯಿಂದ ದೊರಕುವ ಲಾಭಗಳ ಕುರಿತಾಗಿ ಚರ್ಚಿಸುತ್ತಿದ್ದಾರೆ. >>>
ಹಿಂದೊಮ್ಮೆ ನಿಮ್ಮ ಬರಹದಲ್ಲೆ ಈ ಚರ್ಚೆ ಆಗಿದೆ ಮರೆತಿರಿ ಅನ್ನಿಸುತ್ತೆ ನೀಲ ಅಂದರೆ ಕಪ್ಪು ಅನ್ನುವ ಅರ್ಥವು ಇದೆ ನೀಲಮೇಘಶ್ಯಾಮನೆಂದರೆ ..ಕಪ್ಪುವರ್ಣದ ಮೋಡದ ಬಣ್ಣದವನು - ಕೃಷ್ಣ
.
ದೇವರ ಬಣ್ಣ ಏಕೆ ನೀಲಿ?
September 26, 2011 - 3:39pmmakara
5
ಒಮ್ಮೆ ಸ್ವಾಮಿ ವಿವೇಕಾನಂದರು ಮದ್ರಾಸ್ (ಈಗಿನ ಚೆನ್ನೈ) ನಗರದಲ್ಲಿ ಕೆಲವೊಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಒಂದು ಪ್ರಶ್ನೆ ಕೇಳಿದರಂತೆ. ವಿಷ್ಣು, ರಾಮ, ಕೃಷ್ಣ ಮೊದಲಾದ ದೇವರುಗಳ ಬಣ್ಣ ನೀಲಿಯಾಗಿ ಏಕೆ ಚಿತ್ರಿಸುತ್ತಾರೆಂದು? ಆಗ ಒಬ್ಬ ವಿದ್ಯಾರ್ಥಿ ಹೀಗೆ ಉತ್ತರಿಸಿದನಂತೆ, "ಆಕಾಶಕ್ಕೆ ಕೊನೆ ಎಂಬುದಿಲ್ಲ ಮತ್ತು ಸಮುದ್ರಕ್ಕೂ ಕೊನೆಯೆಂಬುದಿಲ್ಲ ಅವೆರಡೂ ಕೊನೆಯಿಲ್ಲದ್ದು ಅಂದರೆ ಅನಂತವಾದದ್ದು. ಅವೆರಡರ ಬಣ್ಣ ನೀಲಿ ಅಂದರೆ ಅನಂತವಾದದ್ದರ ಬಣ್ಣ ನೀಲಿ, ದೇವರೂ ಕೂಡ ಅನಂತವಾಗಿರೋದರಿಂದ ಅವನನ್ನು ನೀಲಿ ಬಣ್ಣದಲ್ಲಿ ಚಿತ್ರಿಸುತ್ತಾರೆ." ಈ ಉತ್ತರವನ್ನು ಕೇಳಿ ಸ್ವಾಮಿ ವಿವೇಕಾನಂದರು ತುಂಬಾ ಸಂತೋಷಗೊಂಡರಂತೆ. ಆ ಉತ್ತರವನ್ನು ಕೊಟ್ಟವರು ಬೇರಾರೂ ಅಲ್ಲ "ರಾಜಾಜಿ" ಎಂದು ಮುಂದೆ ಪ್ರಖ್ಯಾತರಾದ ಸ್ವತಂತ್ರ ಭಾರತದ ಮೊತ್ತಮೊದಲ ಹಾಗು ಕಡೆಯ ಗವರ್ನರ್ ಜನರಲ್ ಆದ ಚಕ್ರವರ್ತಿ ರಾಜಗೋಪಾಲಾಚಾರಿಗಳು.

(ರಾಮಕೃಷ್ಣ ಮಠದ ಸ್ವಾಮಿಗಳೊಬ್ಬರಿಂದ ಕೇಳಿದ್ದು)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
Give it 1/5
Give it 2/5
Give it 3/5
Give it 4/5
Give it 5/5
ಲೇಖನ ವರ್ಗ (Category):
ಚಿಂತನೆ
ಈ ಪುಟವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ
ಹೊಸ ಪ್ರತಿಕ್ರಿಯೆ ಸೇರಿಸಿprinter-friendly version274 ಹಿಟ್ಸ್ *ಈ ಪುಟವನ್ನು ನಿರ್ವಾಹಕರ ಗಮನಕ್ಕೆ ತನ್ನಿ
ಪ್ರತಿಕ್ರಿಯೆಗಳು
ಉ: ದೇವರ ಬಣ್ಣ ಏಕೆ ನೀಲಿ?
Submitted by partha1059 on September 26, 2011 - 4:10pm
ಶ್ರೀದರ್
ಆದರೆ ಶ್ರೀಕ್ರಿಶ್ಣನ ಬಣ್ಣ ಕಪ್ಪಲವೆ ?
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by RAMAMOHANA on September 26, 2011 - 4:21pm
ಕಪ್ಪು ಮಿಶ್ರಿತ ನೀಲಿ ಎಂದು ಕೇಳಿದ ನೆನಪು ಪಾರ್ಥಸಾರಥಿ ಅವರೆ,
`ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ`
-ರಾಮಮೋಹನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by manju787 on September 26, 2011 - 4:39pm
+1 :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by partha1059 on September 26, 2011 - 4:42pm
ಕೃಷ್ಣ ಎಂದರೆ ಕಪ್ಪು ಎಂದರ್ಥ ಅದಕ್ಕಾಗಿ ಕೇಳಿದೆ
ದ್ರೌಪತಿ ಕಪ್ಪಗಿದ್ದು ’ಕೃಷ್ಣೆ”ಯಾದಳು
ರಾಮನು ನೀಲ ವರ್ಣ
ಮತ್ತೆ

"ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ`" ಇದು ಸಿನಿಮಾ ಹಾಡು ಪ್ರಾಸಕ್ಕಾಗಿ ಬರೆದಿರುವುದು ಅನ್ನಿಸುತ್ತೆ
ಇಷ್ಟಾಗಿ ಕೃಷ್ಣ ನೀಲಿಯಾಗಿದ್ದರು ತಪ್ಪೇನಿಲ್ಲ ಬಿಡಿ
ಸುಮ್ಮನೆ ಕುತೂಹಲಕ್ಕೆ ಕೇಳಿದೆ ಅಷ್ಟೆ !
===================================================
ಹುಡುಕು ಪದ: ಕೃಷ್ಣ

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ಕೃಷ್ಣ ನಾಮಪದ
(ಸಂ) ೧ ಕಪ್ಪು ಬಣ್ಣ ೨ ವಿಷ್ಣುವಿನ ಒಂದು ಅವತಾರ ೩ ಕಾಗೆ ೪ ಕೋಗಿಲೆ ೫ ಒಂದು ಜಾತಿಯ ಜಿಂಕೆ ೬ ಕಬ್ಬಿಣ
ಕೃಷ್ಣ ಗುಣವಾಚಕ
(ಸಂ) ೧ ಕಪ್ಪಾದ ೨ ಕೆಟ್ಟ, ದುಷ್ಟವಾದ
ಕೃಷ್ಣ ನಾಮಪದ
ಪಕ್ಷ ಹುಣ್ಣಿಮೆಯ ಮರುದಿನದಿಂದ ಅಮಾವಾಸ್ಯೆವರೆಗಿನ ಕಾಲ, ಬಹುಳ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by makara on September 27, 2011 - 8:28am
ಪಾರ್ಥ ಸರ್,
ನೀವು ಎತ್ತಿದ ಪ್ರಶ್ನೆ ಸರಿಯಾಗಿಯೇ ಇದೆ. ಕೃಷ್ಣ ಅಂದರೆ ಕಪ್ಪು ವರ್ಣದವನೇ ಅದಕ್ಕಾಗಿ ಅಲ್ಲವೇ ರಾಮನನ್ನು ಒಪ್ಪಿಕೊಳ್ಳದ ತಮಿಳರು ಕೃಷ್ಣನನ್ನು ಅಪ್ಪಿಕೊಳ್ಳುವುದು. ಹಾಗೆಯೇ ರಾಮಮೋಹನರೆಂದಂತೆ ನೀಲ ಮೇಘಶ್ಯಾಮ ಕೂಡ ಸರಿ ಏಕೆಂದರೆ ಮೇಘಗಳು ಕಡುಕಪ್ಪಾಗಿರುತ್ತವೆಯೋ ಹೊರತು ನೀಲಿಯಾಗಿರುವುದಿಲ್ಲ. ಆದರೆ ಆ ಮೇಘಗಳು ಕಪ್ಪಾಗಿರುವ ಕೃಷ್ಣನನ್ನು ನೆನಪಿಗೆ ತರುವುದರಿಂದ ನೀಲ ಮೇಘಶ್ಯಾಮ ನಿತ್ಯಾನಂದ ಧಾಮ ಎಂಬುದು ಹುಟ್ಟಿಕೊಂಡಿದೆ. ಉಳಿದಂತೆ ನೀವು ಕೊಟ್ಟಿರುವ ಕೃಷ್ಣ ಪದದ ಅರ್ಥಗಳೂ ಸರಿ. ಆದರೆ ಇವೆಲ್ಲಾ ನಾವು ಕೃಷ್ಣನನ್ನು ಮಾನವನಾಗಿ ನೋಡಿದಾಗ ಅನ್ವಯವಾಗುವುವು ಅಥವಾ ಅವುಗಳ ಸಾಮಾನ್ಯ ಅರ್ಥವನ್ನು ತೆಗೆದುಕೊಂಡಾಗ ಸರಿಹೊಂದುತ್ತವೆ. ಆದೇ ಕೃಷ್ಣನಿಗೆ ದೈವತ್ವವನ್ನು ಆರೋಪಿಸಿದಾಗ ಅವನನ್ನು ಚಿತ್ರಿಸುವುದು ನೀಲಿಯಾಗಿ. ಮತ್ತು ಕೃಷ್ಣನನ್ನು ಆಧ್ಯಾತ್ಮಿಕವಾಗಿ ಹೇಳುವುದು "ಪಾಪಾನ್ ಕರ್ಷತಿ ಇತಿ ಕೃಷ್ಣಃ" ಅಂದರೆ ಪಾಪಗಳನ್ನು ಆಕರ್ಷಿಸಿ (ಸೆಳೆದುಕೊಂಡು) ನಾಶಪಡಿಸುವವನು ಕೃಷ್ಣಃ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by swara kamath on September 27, 2011 - 12:10pm
ನನ್ನ ತಿಳುವಳಿಕೆಗೆ ಒಂದು ಹೊಸ ವಿಚಾರ ಕೊಟ್ಟಿದ್ದಕ್ಕೆ ಧನ್ಯವಾದಗಳು ಬಂಡ್ರಿ ಯವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by makara on September 27, 2011 - 2:21pm
ಪ್ರತಿಕ್ರಿಯೆಗೆ ಧನ್ಯವಾದಗಳು ಕಾಮತರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by kavinagaraj on September 27, 2011 - 12:31pm
ತರ್ಕ: ಆಕಾಶಕ್ಕೆ ಬಣ್ಣವಿಲ್ಲ. ಏಕೆಂದರೆ ಅದು ಶೂನ್ಯ. ತಪ್ಪು ತಿಳಿಯದಿರಿ. ಘಟನೆ ಮತ್ತು ಅದರ ಹಿಂದಿನ ಭಾವಗಳಲ್ಲಿ ಸತ್ಯಾಂಶವಿದೆ.

ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ ||

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by makara on September 27, 2011 - 2:28pm
ನಾಗರಾಜ್ ಸರ್, ನೀವು ಹೇಳಿದ್ದು ನೂರಕ್ಕೆ ನೂರು ನಿಜ. ದೂರದಿಂದ ನೋಡಿದಾಗ ನೀರು ಹಾಗು ಆಕಾಶಕ್ಕೆ ನೀಲಿ ಬಣ್ಣವಿರುತ್ತದೆ. ಆದರೆ ನೀರನ್ನು ಕೈಯ್ಯಲ್ಲಿ ಹಿಡಿದಾಗ ಯಾವುದೇ ಬಣ್ಣವಿರುವುದಿಲ್ಲ ಅದರಂತೆಯೇ ಆಕಾಶವೇನೆಂದು ನಾವು ಅರಿಯಲಾರೆವು ಏಕೆಂದರೆ ಅದು ಶೂನ್ಯವೆನ್ನುವುದು ನಿಜ. ಕಣ್ಣಿಗೆ ಕಾಣುವ ಆಕಾಶದ ನಿಜರೂಪವನ್ನು ಅಳೆಯಲಾರದ ನಾವು ಇನ್ನು ಆ ಭಗವಂತನ ಸ್ವರೂಪವನ್ನು ಅಳೆಯುವುದು ಖಂಡಿತಾ ಅಸಾಧ್ಯ; ಆದರೆ ಮಾನವ ಬುದ್ಧಿವಂತಿಕೆಗೆ ನಿಲುಕುವಂತದ್ದು ಆಕಾಶವಾದ್ದರಿಂದ ಮಾನವ ತನ್ನ ದೃಷ್ಟಿಕೋನದಿಂದಲೇ ದೇವರನ್ನು ಅಳೆಯುವ ಒಂದು ಪ್ರಯತ್ನದಲ್ಲಿ ಸ್ಥೂಲವಾಗಿ ಅವನನ್ನು ಹೀಗೆ ಚಿತ್ರಿಸಿಕೊಂಡಿದ್ದಾನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by kavinagaraj on September 27, 2011 - 4:40pm
[ಘಟನೆ ಮತ್ತು ಅದರ ಹಿಂದಿನ ಭಾವಗಳಲ್ಲಿ ಸತ್ಯಾಂಶವಿದೆ.] ನಿಜ, ಶ್ರೀಧರರೇ. ಅದಕ್ಕೇ ನನ್ನ ಹಿಂದಿನ ಪ್ರತಿಕ್ರಿಯೆಯಲ್ಲಿ ಹೀಗೆ ತಿಳಿಸಿದ್ದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by partha1059 on October 6, 2011 - 7:56pm
ಶ್ರೀದರ್
ಲಲಿತ ಸಹಸ್ರನಾಮ ನೋಡುತ್ತಿದ್ದೆ ವಿಜಯದಶಮಿ ದಿನ
ಅಲ್ಲಿ ದೇವಿಯನ್ನು ವರ್ಣಿಸುವಾಗ "ನೀಲ ಚಿಕುರಾ" ಎನ್ನುತ್ತಾರೆ
ಅರ್ಥ 'ಕಪ್ಪನೆಯ ತಲೆಕೂದಲು' ಇರುವವಳು
ಅಂದರೆ ನೀಲ ಅನ್ನುವದನ್ನು ಕಪ್ಪು ಅಂತ ಬಳಸಿದ್ದಾರೆ,
ಹಾಗೆಯೆ ನೀಲ ಮೇಘ ಅಂದರೆ ಕಪ್ಪುಮೋಡ ಎಂದು ಅರ್ಥೈಸಬಹುದು
ಹಾಗೆ ರಾಮ ಕೃಷ್ಣರು ಕಪ್ಪೆ ಇದ್ದರೊ ಏನೊ
ಇರಲಿ ಸುಮ್ಮನೆ ಓದಿದ್ದನ್ನು ನಿಮ್ಮ ಜೊತೆ ಹಂಚಿಕೊಂಡೆ
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ:
Cancel rating
Give it 1/5
Give it 2/5
Give it 3/5
Give it 4/5
Give it 5/5
ಇದಕ್ಕೆ ಪ್ರತಿಕ್ರಿಯೆ ಸೇರಿಸಿ
ಉ: ದೇವರ ಬಣ್ಣ ಏಕೆ ನೀಲಿ?
Submitted by makara on October 6, 2011 - 8:06pm
ಉತ್ತಮ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು; ಹಬ್ಬ ಚೆನ್ನಾಗಿ ಆಚರಿಸಿದೆರೆ0ದುಕೊಳ್ಳುತ್ತೇನೆ ಪಾರ್ಥ ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟ

Submitted by makara Wed, 07/03/2013 - 05:03

ಪ್ರತಿಕ್ರಿಯಿಸಿರುವ ಎಲ್ಲರಿಗೂ ನಮಸ್ಕಾರಗಳು. ಅದೇಕೋ ನನ್ನ ಸಿಸ್ಟಮ್ಮಿನಲ್ಲಿ ಗೂಗಲ್ ಕ್ರ‍್ಯಾಷ್ ಆಗಿತ್ತು. ಹಾಗಾಗಿ ಮೂರ‍್ನಾಲ್ಕು ದಿನಗಳಿಂದ ಸಂಪದದಲ್ಲಿ ಭಾಗವಹಿಸಲಾಗಲಿಲ್ಲ. ಎಲ್ಲರಿಗೂ ಮರು ಪ್ರತಿಕ್ರಿಯೆ ನೀಡುತ್ತೇನೆ; ಇಂದು ಈ ಸಮಸ್ಯೆ ಬಗೆಹರಿಯುವುದೆಂದು ಆಶಿಸುತ್ತೇನೆ.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Wed, 07/03/2013 - 23:36

In reply to by makara

ಕೇದಾರದಲ್ಲಿ ಕ್ಲೌಡ್ ಬರ್ಸ್ಟ್, ಮೋಡದ ವಿಷಯ ಬಂದಾಗ ಗೂಗ್‌ಲ್ ಕ್ರ್ಯಾಶ್..!?
ಇಲ್ಲಿ ನಮ್ಮ ನಾಗೇಶರು (ದೇವಿ ಭಜನೆ ಬಿಟ್ಟು) ಚಿಂತೆಯಲ್ಲಿ "ಧೂಮಪಾನ" ಪ್ರಾರಂಭಿಸಿದ್ದಾರೆ :)
ಸಮಸ್ಯೆ ಬೇಗ ಬಗೆಹರಿಯಲಿ..

Submitted by nageshamysore Thu, 07/04/2013 - 19:40

In reply to by ಗಣೇಶ

ಗಣೇಶರೆ 'ಧೂಮಪಾನ' ಬರಿ ಕಮರ್ಶಿಯಲ್ ಬ್ರೇಕ್ ಮಾತ್ರ - ಅದೂ ಬಿಟ್ಟುಬಿಡಿ ಎಂದು ಪ್ರೋತ್ಸಾಹಿಸಲು :-) ದೇವಿ ಭಜನೆ ಅವಿರತ ಸಾಗಿದೆ - ಹಳೆಯದನ್ನು ಆದಷ್ಟು ಸೇರಿಸುವ ಯತ್ನದಲ್ಲಿ! (ಶ್ರೀಧರರಿಗೆ ಪುರುಸೊತ್ತಾಗುವವರೆಗೂ ಅಪರಿಷ್ಕೃತ ಆವೃತ್ತಿಯೆ!) - ನಾಗೇಶ ಮೈಸೂರು

Submitted by makara Fri, 07/05/2013 - 06:43

In reply to by nageshamysore

@ಗಣೇಶ್‌ಜಿ ಅಂಡ್ ನಾಗೇಶ್‌ಜಿ
ಇನ್ನೆರಡು ದಿನ ಈ ಗೂಗಲ್ ಕ್ರ‍್ಯಾಷ್ ಆಗಿದ್ದರೆ ನನ್ನ ತಲೆಕೂಡಾ ಕ್ಯ್ರಾಷ್ ಆಗಿ ನಾನೂ ಧೂಮಕೇತು ಆಗಬೇಕಿತ್ತೇನೋ :))

Submitted by nageshamysore Wed, 07/03/2013 - 18:48

ಶ್ರೀಧರರೆ, ನೀವಿನ್ನು ಗೂಗಲ್ ಕ್ರಾಶ್ ರಿಕವರಿಯಲ್ಲಿ ನಿರತರಿರುವುದರಿಂದ , ಸಂಪದದಲ್ಲೆ ಕವನ ಹಾಕುತ್ತೇನೆ - ನಿಮ್ಮ ತೊಂದರೆಯೆಲ್ಲ ಕಳೆದ ಮೇಲೆ ನಿಧಾನವಾಗಿ ಪರಿಷ್ಕರಿಸೋಣ - ನಾಗೇಶ ಮೈಸೂರು

ಲಲಿತಾ ಸಹಸ್ರನಾಮ ೧೮೨ - ೧೮೫

೧೮೨. ನಿಷ್ಕ್ರಿಯಾ 
ಜಡ ಜತೆಗೆ ಕ್ರಿಯಾಶೀಲ ಶಕ್ತಿ ಸಂಯೋಗವೆ ಬ್ರಹ್ಮ
ಅನಾಸಕ್ತೆ ಕ್ರಿಯೆಗೆ, ಸಾಕ್ಷೀಭೂತಳಷ್ಟೆ ಲಲಿತಾಗುಣ 
ಕರ್ಮಫಲ ಫಲಿತ, ಭೌತಿಕ ಕಾಯ ಕ್ರಿಯಾ ಮೊತ್ತ
ಆತ್ಮ ಸಾಕ್ಷಾತ್ಕಾರಿಸೆ ಕಾಯ, ಕಾಡದ ಕರ್ಮಫಲಿತ!

೧೮೩.ನಿಷ್ಪರಿಗ್ರಹಾ 
ಕೈಗೊಳ್ಳುತಾ ಸೃಷ್ಟಿ ಸ್ಥಿತಿ ಲಯ ಕ್ರಿಯೆ ನಿರ್ಲಿಪ್ತತೆ
ಪ್ರತಿಯಾಗೇನನು ಪಡೆಯದೆ ನಡೆಸುವಳು ಲಲಿತೆ
ಬಯಸಳು ಹೂ ಹಣ್ಣು ಹಂಪಲದ ಅರ್ಪಣೆ ಭಕ್ತಿಗೆ
ಲೌಕಿಕ ಮೀರಲಷ್ಟೆ ಆತ್ಮಸಾಕ್ಷಾತ್ಕಾರ ದೇವಿ ಕಡೆಗೆ!

೧೮೪. ನಿಸ್ತುಲಾ 
ಹೋಲಿಕೆ ಸಾಧ್ಯವೆ ಬ್ರಹ್ಮಕೆ ಬ್ರಹ್ಮವಷ್ಟೇ ಸಾಟಿ
ತುಲನೆಗೆಲ್ಲಿದೆ ಸಮಾನ ಪರಮೋನ್ನತ ಸಮಷ್ಟಿ
ಸರಿ ಸಮರೆಲ್ಲಿ, ಹೋಲಿಕೆಗತೀತಳಾಗಿ ನಿಸ್ತುಲಾ
ಆಕಾರ ರೂಪ ಗುಣರಾಹಿತ್ಯ ತುಲನೆಗೆ ದಕ್ಕದಲ್ಲ!
     
೧೮೫. ನೀಲಚಿಕುರಾ 

ಕೇಶರಾಶಿಯೆ ಅನಂತ ನೀಲಾಕಾಶ ದಿಟ
ಅನಂತಳಾಗಿಹ ದೇವಿಯ ಶಿರ ಮುಕುಟ
ಎಣೆಯಿಲ್ಲದ ಗಣನೆ ಗಣಿಸಲ್ಹೇಗೊ ಮುಡಿ
ಹೋಲಿಕೆಗಸಾಧ್ಯಾ ಮಾತಲಷ್ಟೆ ಮುನ್ನುಡಿ!

(ಶ್ರೀಧರರೆ, ಇದು ನಿಮ್ಮ ಅಭಿಪ್ರಾಯದ ಆಧಾರದ ಮೇಲೆ)
         
ಕೇಶಾವೃತ್ತ ಚಕ್ರ ಆಜ್ಞಾಚಕ್ರಕೆ ಸನಿಹ
ಬೆಳೆದರೆ ಗೋಚರಿಸುವ ಭೌತಿಕ ಇಹ
ಕ್ರಿಯಾಶೀಲ ನಿಗೂಢ ಬ್ರಹ್ಮಾಂಡ ಶಕ್ತಿ
ನೀಲ ಪ್ರಕಾಶಿತ ರೂಪವರಿಯೆ ಸದ್ಗತಿ!

(ಇದು ಮತ್ತೊಂದು ಸಾಧ್ಯತೆಯನ್ನು ಆಧರಿಸಿ ಬರೆದಿದ್ದು)

ಅಖಂಡ ಬ್ರಹ್ಮಾಂಡ ನೀಲಾಕಾಶ ಶರಧಿ
ದೇವಿ ನಿಯಂತ್ರಿಸೆ ಕಟ್ಟಿಟ್ಟ ಮುಡಿ ತರದಿ
ಬಿಚ್ಚಿ ಹರಡೊ ನಭ ಚಿಕುರದಷ್ಟೆ ವಿಶಾಲ
ಸುತ್ತಿ ನೀಲ ತುರುಬಾಗಿ ದೇವಿಯ ಬಲ!

(ಶ್ರೀಧರರೆ, ಇದು ನನ್ನ ಊಹೆ, ಕಲ್ಪನೆ ; ನಿಮ್ಮ ಅಭಿಪ್ರಾಯಕ್ಕೆ ಹತ್ತಿರವಾಗಿಯೆ, ತುಸು ಭಿನ್ನವಾಗಿದೆ - ಸಂಗತವಾಗಿ ಕಾಣುತ್ತದೆಯೆ?)

Submitted by makara Fri, 07/05/2013 - 06:39

In reply to by nageshamysore

೧೮೨-೧೮೫ ಕವನಗಳ ಕುರಿತು
ನಾಗೇಶರೆ,
ಎಲ್ಲಾ ಕವನಗಳು ಚೆನ್ನಾಗಿ ಬಂದಿವೆ. ನೀವು ನೀಲಚಿಕುರಾದ ಬಗ್ಗೆ ಹೊಸೆದಿರುವ ಮೂರೂ ಕವನಗಳು ಸೂಪರ್. ನನ್ನ ಅಭಿ‌ಪ್ರಾಯವನ್ನು ಶ್ರೀಯುತ ರವಿಯವರೂ ಸಹ ಅನುಮೋದಿಸಿರುವುದರಿಂದ ನಿಮ್ಮ ಕವನಕ್ಕೆ ಚ್ಯುತಿಬಾರದು. ನಿಮ್ಮ ಕಲ್ಪನೆಯ ಅಖಂಡ ಬ್ರಹ್ಮಾಂಡದ ಕವನ ಎಲ್ಲಕ್ಕಿಂತ ಹೆಚ್ಚು ಅರ್ಥಪೂರ್ಣ ಮತ್ತು ಸೊಗಸಾಗಿದೆ.

ಭೌತಿಕ ಜಗತ್ತು ಸಾಮಾನ್ಯರಿಗೆ ಗೋಚರಿಸುತ್ತಿರುವುದರಿಂದ ಕೇಶಾವೃತ ಚಕ್ರದ ಮೂಲಕ ನಾವು ಅಭೌತಿಕ ಜಗತ್ತನ್ನು ಸಹ ವೀಕ್ಷಿಸಬಹುದು. ಆದ್ದರಿಂದ ಎರಡನೆಯ ಕವನದ, ೨ನೇ ಸಾಲನ್ನು ಸ್ವಲ್ಪ ಮಾರ್ಪಡಿಸಿದರೆ ಚೆನ್ನಾಗಿರುತ್ತದೆ.

ಕೇಶಾವೃತ್ತ ಚಕ್ರ ಆಜ್ಞಾಚಕ್ರಕೆ ಸನಿಹ
ಬೆಳೆದರೆ ಗೋಚರಿಸುವ ಭೌತಿಕ ಇಹ
ಭೌತಿಕ=ಅಭೌತಿಕ ...ಎಂದು ಮಾಡಿ;
ಹಾಗೆಯೇ ಬೆಳೆದರೆ ಶಬ್ದದ ಬದಲು ಅದೇ ಅರ್ಥಕೊಡುವ ಮತ್ತೊಂದು ಪದ ಬಳಸಲು ಸಾಧ್ಯವಿದೆಯೇ ಪ್ರಯತ್ನಿಸಿ.

Submitted by nageshamysore Fri, 07/05/2013 - 17:48

In reply to by makara

ಶ್ರೀಧರರೆ ೧೮೫ (೨) ತಿದ್ದುಪಡಿಯಾದ ಎರಡು ಆವೃತ್ತಿ ಸಿದ್ದ. 'ಬೆಳೆದರೆ' ಬದಲಾಗಿ 'ವೃದ್ಧಿಸೆ' ಮತ್ತು 'ಅಭಿವೃದ್ಧಿಸೆ' ನಡುವೆ ಆಯ್ಕೆ ಯಾವುದು ಸೂಕ್ತವೆನಿಸುತ್ತದೆ? - ನಾಗೇಶ ಮೈಸೂರು

ಕೇಶಾವೃತ್ತ ಚಕ್ರ ಆಜ್ಞಾಚಕ್ರಕೆ ಸನಿಹ
ವೃದ್ಧಿಸೆ ಗೋಚರಿಸುವ ಅಭೌತಿಕ ಇಹ
ಕ್ರಿಯಾಶೀಲ ನಿಗೂಢ ಬ್ರಹ್ಮಾಂಡ ಶಕ್ತಿ
ನೀಲ ಪ್ರಕಾಶಿತ ರೂಪವರಿಯೆ ಸದ್ಗತಿ!

ಕೇಶಾವೃತ್ತ ಚಕ್ರ ಆಜ್ಞಾಚಕ್ರಕೆ ಸನಿಹ
ಅಭಿವೃದ್ಧಿಸೆ ಗೋಚರಿಸೊ ಅಭೌತಿಕ ಇಹ
ಕ್ರಿಯಾಶೀಲ ನಿಗೂಢ ಬ್ರಹ್ಮಾಂಡ ಶಕ್ತಿ
ನೀಲ ಪ್ರಕಾಶಿತ ರೂಪವರಿಯೆ ಸದ್ಗತಿ!

Submitted by nageshamysore Fri, 07/05/2013 - 21:35

In reply to by makara

ಕೇಶಾವೃತ್ತ ಚಕ್ರ ಆಜ್ಞಾಚಕ್ರಕೆ ಸನಿಹ
ವೃದ್ಧಿಸೆ ಗೋಚರಿಸುವ ಅಭೌತಿಕ ಇಹ
ಕ್ರಿಯಾಶೀಲ ನಿಗೂಢ ಬ್ರಹ್ಮಾಂಡ ಶಕ್ತಿ
ನೀಲ ಪ್ರಕಾಶಿತ ರೂಪವರಿಯೆ ಸದ್ಗತಿ!

- ನಿಮಗೂ ಶುಭರಾತ್ರಿ - ಇದೀಗ ನಿದ್ದೆಗೆ :-)

Submitted by nageshamysore Wed, 07/17/2013 - 19:10

In reply to by nageshamysore

ಶ್ರೀಧರರೆ, ಈ ಮೊದಲೆ ಪರಿಷ್ಕರಿಸಿದ್ದ 58ಕ್ಕೆ ಅಂತಿಮ ಕೊಂಡಿ ಸೇರಿಸುತ್ತಿದ್ದೇನೆ - ನಾಗೇಶ ಮೈಸೂರು
https://ardharaatria...