ರೀ ಸ್ವಾಮಿ, ಬೇಜವಾಬ್ದಾರಿಗೇನೂ ಒಂದ್ ಲಿಮಿಟ್ ಬ್ಯಾಡ್ವೇನ್ರಿ ?
ಚಿತ್ರ
೨೧ ವರ್ಷದ ಹರೆಯದ 'ರಮಿತ್ ರಾಮ್ಬುಕ್ವೆಲ್ಲಾ' ಒಬ್ಬ ಶ್ರೀಲಂಕಾದೇಶದ ತಲಹರಟೆ ಕ್ರಿಕೆಟಿಗ. (೭ ಮ್ಯಾಚ್ ಗಳಲ್ಲಿ ಆಡಿದ್ದನಂತೆ, ಸುಸ್ತಾಗಿತ್ತಂತೆ. ಸರಿ ಇದೆಲ್ಲಾ ಸಾಮಾನ್ಯವಲ್ಲವೇ ?)
ಕ್ರಿಕೆಟ್ ನಲ್ಲಿ ಅಂತಾ ಹೆಸ್ರೇನೂ ಮಾಡ್ದಿದ್ರೂ ಅವನು ಪ್ರಯಾಣಿಸುತ್ತಿದ್ದ ಬ್ರಿಟಿಷ್ ಏರ್ವೇಸ್ ನ ಕ್ಯಾಬಿ ಕ್ರ್ಯೂಗೆಮತ್ತು ಸಹಪ್ರಯಾಣಿಕರಿಗೆ ಚಳಿ-ಜ್ವರ ಬರೋಹಾಗೆ ವರ್ತಿಸಿ ಬಹಳ ಜನ(ಅ)ಪ್ರಿಯನಾಗಿದ್ದಾನೆ.
ಅವ್ನು ಮಾಡಿದ ಘನಕಾರ್ಯವೇನು ಅಂತೀರಾ ! ಇದೇ, ೨೦೧೩ ರ ಜೂನ್, ೩೦ ರ ಮಧ್ಯರಾತ್ರಿ ಗ್ರೆನೆಡ್ ನಿಂದ ಲಂಡನ್ ನಗರಕ್ಕೆ ಹಾರುತ್ತಿದ್ದ ವಿಮಾನ,(BA 2158) ೩೫ ಸಾವಿರ ಅಡಿ ಎತ್ತರದಲ್ಲಿ
ಹಾರುತ್ತಿದ್ದ ಕುಡಿದ ಅಮಲಿನಲ್ಲಿ, ಅವನ ವಿಮಾನದ ಕ್ಯಾಬಿನ್ ಬಾಗಿಲು ತೆರೆಯಲು ಎದ್ದು ಬಾಗಿಲವರೆಗೂ ಹೋಗಿದ್ದ.
ಅದರೆ (ಅವರು ನಮ್ಮ ಏರ್ ಇಂಡಿಯದ ನಿದ್ದೆ ಹೊಡ್ಯೋ ಗುಂಪಿಗೆ ಸೇರಿದವರಲ್ಲವಲ್ಲ)ಗಳು ತಕ್ಷಣವೇ ಧಾವಿಸಿಬಂದು ರೆಟ್ಟಿಹಿಡಿದು ಕೂಡಿಸಿದರಂತೆ. ಇಲ್ದಿದ್ರೆ, ಅವನೂ ಪಾತಾಳಕ್ಕೆ ಬಿದ್ದು ವಿಮಾನದ ಎಲ್ಲರನ್ನೂ ಸಾವಿನ ದವಡೆಗೆ ಒಪ್ಪಿಸ್ತಿದ್ದ.
ಈಗ ಶ್ರೀಲಂಕಾ ಕ್ರಿಕೆಟ್ ತನಿಖೆಗೆ ಒಳಪಡಿಸಿದೆ. ಅವರು ತಮ್ಮ ಆಟಗಾರನನ್ನು ಸಮರ್ಥಿಸುವ ಮೋಡಿ ನೋಡಿ. ಒಳಗೆ ದೀಪಗಳು ಮಂದ ಪ್ರಕಾಶದವು. ಅವನು ಟಾಯ್ಲೆಟ್ ಹೋಗಲು ಬಾಗಿಲು ಹುಡುಕುತ್ತಿದ್ದ. ಬಾಗಿಲು ಸಿಕ್ಕಿದ್ದಾಗ ಎಳೆದು ಒಳಗೆ ಹೋಗಲು ಯತ್ನಿಸುತ್ತಿದ್ದ. ವಗೈರ, ವಗೈರ.
ಈಗ ತಪ್ಪೊಪ್ಪಿಗೆಕೇಳಿದ ನಾಟಕ ನಡೆದರೂ ಸ್ವಲ್ಪ ಯೋಚಿಸೋಣ. ಏನಾಗ್ತಿತ್ತು. ಆ ವಿಮಾನದ ಪ್ರಯಾಣಿಕರ ಗತಿ !
ಅವರ ಅಪ್ಪ ಒಬ್ಬ ಶ್ರೀಲಂಕಾ ಸರಕಾರದ ಇನ್ಫಾರ್ಮೇಶನ್ ಮಿನಿಸ್ಟರ್; ಹಾಗಾಗಿ ಒಂದು ಚಿಕ್ಕ ವಿಷಯನ ಪೆಡಾಂಭೂತವಾಗಿ ಮೀಡಿಯ ವರದಿಮಾಡಿದೆ ಅಂತಾರೆ. ಈ ಕೆಹೆಲಿಯ ರಾಮ್ಬುಕ್ವೆಲ್ಲಾ, ಶ್ರೀಲಂಕಾ ಸರ್ಕಾರದ ಮಿನಿಸ್ಟರ್, ಎಂದು ಹೇಳಿಕೊಳ್ಳುವುದರಲ್ಲೇ ದೊಡ್ಡತನ ಕಾಣುವ ನಮ್ಮ ಭಾರತದ ಯಾವ ಮಿನಿಸ್ಟರ್ ಗೂ ಕಡಿಮೆ ಇಲ್ಲ.
'ಮಿರರ್ ಮ್ಯಾಗಜೀನ್' ನಲ್ಲಿ ವರದಿಯಾಗಿರುವ ಸುದ್ದಿಯನ್ನು ನಮ್ಮ ಏರ್ ಇಂಡಿಯದ ಸ್ಟಾಫ್ ಅಂತೂ ಓದಲೇ ಬೇಕು. ಅಜಿತ್ ಸಿಂಗ್ ಓದಿದರೂ ಒಳ್ಳೆಯದೆ. ಈ ಸುದ್ದಿ ಯಾವಾಗಲಾದರೂ ಕೆಲಸಕ್ಕೆ ಬರಬಹುದು.
-ಬೇಜಾರ್ ಪಟ್ಕೊಳ್ಳೋ ಮಾತೇ ಇಲ್ಲ. ಪೋಸ್ ಕೊಟ್ಟೀರೋದ್ ನೋಡಿ; ಒಳ್ಳೇ ಖಳ ನಾಯಕನ ತರ್ಹಾ !
-’ಮಿರರ್ ಪತ್ರಿಕೆ’, ಬುಧವಾರ, ಜುಲೈ. ೩, ೨೦೧೩
Rating
Comments
ಏರ್ ಇಂಡಿಯಾ ನೌಕರಾದರೂ ಈ
ಏರ್ ಇಂಡಿಯಾ ನೌಕರಾದರೂ ಈ ರಿಪೋರ್ಟ್ ನ್ನು ಮುಂಬೈ ಮಿರರ್ ನಲ್ಲಿ ಓದಿ.