ಬದಲಾದ ಘಳಿಗೆಗಳು?
ಮುಂಚೆ:
(ಪುಟ್ಟವನಾಗಿದ್ದಾಗ)
4:30 PM - ಸಾಯಂಕಾಲ
8:00 PM - ರಾತ್ರಿ
10:00 PM - ತೀರ ಲೇಟು (ಅಷ್ಟು ಹೊತ್ತಾದ ಮೇಲೂ ಎದ್ದಿದ್ರೆ ಅಪ್ಪ ಬೈತಿದ್ರು - 'ಹೋಗಿ ಮಲಕ್ಕೋ, ಹೊತ್ತು ಗೊತ್ತು ಏನೂ ಇಲ್ಲ, ಬೆಳಿಗ್ಗೆ ಬೇಗ ಏಳಬೇಕು!' ಅಂತ)
ಆಮೇಲೆ:
(ಶಾಲೆಯಲ್ಲಿ ಓದುತ್ತಿದ್ದಾಗ)
6:30 PM - ಸಾಯಂಕಾಲ
10:00 PM - ರಾತ್ರಿ
12:00 PM - ಇಷ್ಟೊತ್ತಿಗೆ ದೆವ್ವ ಬರುತ್ತದೆ ಎಂದು ಟಿವೀಲಿ ಬರುತ್ತಿದ್ದ ಸಿನಿಮಾಗಳು ಹೆದರಿಸುತ್ತಿದ್ದುದರಿಂದ ಈ ಟೈಮಿಗಿಂತ ಹೆಚ್ಚು ಹೊತ್ತು ಎಚ್ಚರವಿದ್ದದ್ದು ಕಡಿಮೆ.
ಈಗ:
7:30 PM - ಸಾಯಂಕಾಲ
12:00 PM - ರಾತ್ರಿ
2:30 PM - ಮಲಗುವ ಹೊತ್ತು - ದಿನ ಸುದೀರ್ಘವೆನಿಸಿ ಸುಸ್ತಾದಾಗ ಈ ಹೊತ್ತಿಗಿಂತ ಹೆಚ್ಚು ಎಚ್ಚರವಿರಲಾಗದಾದ್ದರಿಂದ!
ಈಗ 12:00 ಕ್ಕೆ ಇನ್ನೂ ಎದ್ದು ಕುಳಿತ ಭೂತ ನಾನೇ. :)
ಕೆಲವೊಮ್ಮೆ ಇಂಜಿನೀಯರಿಂಗ್ ಓದುತಿದ್ದಾಗ ಸಂಪೂರ್ಣ ನಿಶಾಚರರಾಗಿದ್ದೂ ಉಂಟು (ಬೆಳಿಗ್ಗೆ ೫ - ೬ ಆದರೂ ಇನ್ನೂ ಎಚ್ಚರವೇ ಇರುತ್ತಿದ್ದೆವು, ಕೆಲವೊಮ್ಮೆ ಪರೀಕ್ಷೆ ಹತ್ತಿರ ಬಂತೆಂದು ಓದುವ ಗುಂಗಿನಲ್ಲಿ, ಕೆಲವೊಮ್ಮೆ ನಮ್ಮ ನೆಚ್ಚಿನ ಕಂಪ್ಯೂಟರ್ ಗೇಮ್ ಆಡುವ ಭರಾಟೆಯಲ್ಲಿ ;)
Comments
ಇನ್ಮುಂದೆ?
In reply to ಇನ್ಮುಂದೆ? by tvsrinivas41
ಶಿಫ್ಟಾದ ನೈಟುಗಳು