ಕವನ : ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ
ಚಿತ್ರ
ಹೆದರಿಕೆ ಏಕೆ ಮನವೆ ಬದುಕಿಗೊ ಸಾವಿಗೋ?
ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ
ಬದುಕು ನೂರೆಂಟು ತಿರುವಿನ ಒಳಸುಳಿಗಳ ಕಂತೆ
ಅರ್ಥವಾಗಿಯು ಅರ್ಥವಾಗದ ಕಗ್ಗಗಳ ಸಂತೆ
ಎಲ್ಲ ಸಂಬಂಧಗಳು ಒಮ್ಮೊಮ್ಮೆ ಹೊರಲಾರದ ಬಾರ
ಬಿಡಿಸಲು ಹೋದಷ್ಟು ಹೆಚ್ಚುವ ಗೋಜಲುಗಳ ದಾರ
ಸಾವೆಂಬುದರ ಅರ್ಥ ತಿಳಿಯಲು ಹೆಚ್ಚು ಕಷ್ಟವೇನಿಲ್ಲ
ಬದುಕಿನ ಕೊನೆ ಎಂದು ಅರಿತರಾಯ್ತಲ್ಲ
ಬದುಕೋ ಸಾವೊ ಆಯ್ಕೆಗೆ ಸ್ವತಂತ್ರವೂ ಇಲ್ಲ
ಆದರು ಸಾವಿನ ನಂತರ ನಿಗೂಡವು ಎಲ್ಲ
ಬದುಕಿನ ಬಾರ ಹೊರಲಾರದೆ ಸಾವನ್ನು ಹಂಬಲಿಸುವರು ಒಮ್ಮೊಮ್ಮೆ
ಸಾವಿನ ಹೊಸ್ತಿಲಲ್ಲಿ ನಿಂತು ಬದುಕಿಗಾಗಿ ಹಾತೊರೆಯುವರು ಮತ್ತೊಮ್ಮೆ
ಬದುಕಿಯು ಸತ್ತಂತೆ ಇರುವರು ಕೆಲವರು
ಸತ್ತ ನಂತರವು ಬದುಕಿರುವರು ಮತ್ತೆ ಹಲವರು
ಹೆದರಿಕೆ ಏಕೆ ಮನವೆ ಬದುಕಿಗೊ ಸಾವಿಗೋ?
ಬದುಕಿಗು ಸಾವಿಗೂ ಹೆಚ್ಚು ಅಂತರವೇನು ಇಲ್ಲ
Rating
Comments
ಕವನದ ಚಿತ್ರಮೂಲ : https:/
ಕವನದ ಚಿತ್ರಮೂಲ : https://encrypted-tbn2.gstatic.com/images?q=tbn:ANd9GcS3msYgAPBiLiVfbOF…
>>>ಹೊರಲಾರದ ಬಾರ...ಬದುಕಿನ ಬಾರ..
>>>ಹೊರಲಾರದ ಬಾರ...ಬದುಕಿನ ಬಾರ...
-ಪಾರ್ಥರೆ, ನೀವು "ಭಾ"ರ ಕಮ್ಮಿ ಮಾಡಿದರೂ, ಸಾವನ್ನು ಹಂಬಲಿಸುತ್ತಾರಲ್ಲಾ ಒಮ್ಮೊಮ್ಮೆ :)
ಇದು ಸಹಜ "ತೂಕ"ದ ವಿಮರ್ಶೆ :)
ಕವನ ಚೆನ್ನಾಗಿದೆ.
In reply to >>>ಹೊರಲಾರದ ಬಾರ...ಬದುಕಿನ ಬಾರ.. by ಗಣೇಶ
ವಿಮರ್ಷೆ ಚೆನ್ನಾಗಿದೆ. ನಾನು
ವಿಮರ್ಷೆ ಚೆನ್ನಾಗಿದೆ. ನಾನು ಬದುಕು ಬಾರವೆಂದಿಲ್ಲ ಕೆಲವು ಸಂಬಂಧಗಳು ಬಾರವೆಂದೆ ! ಹಾಗೆ ಬಿಡಿಸಹೋದಷ್ಟು ಗೋಜಲಾಗುವ ದಾರದಂತೆ ಎಂದಿದ್ದೆ ಸಂಬಂಧಗಳನ್ನು ! ಏಕೆಂದರೆ ಕೆಲವು ಸಂಬಂಧಗಳನ್ನು ನೀವು ಬಿಡಿಸಿಕೊಳ್ಲಲಾರಿರಿ ಬಿಡಿಸಹೋದಷ್ಟು ಹೆಚ್ಚೆ ಹೆಚ್ಚು ಸುತ್ತಿಕೊಳ್ಳುತ್ತವೆ !
ಅಂದು ಕೃಷ್ಣ ಭಗವದ್ಗೀತೆಯಲ್ಲಿ
ಅಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದನ್ನು ಇಂದು ನೀವು ಸರಳವಾಗಿ (ಸ್ವಲ್ಪ ಪ್ರಶ್ನಾರ್ಥಕವಾಗಿಯೂ) ಹೇಳಿದ್ದರೀ. ನೀವು ಎಷ್ಟೇ ಆಗಲಿ ಪಾರ್ಥಸಾರಥಿಗಳಲ್ಲವೇ! ಕ್ಲಿಷ್ಟವಾದ ವಿಷಯಗಳನ್ನು ಸೊಗಸಾಗಿ ಹೇಳಿದ್ದೀರ; ಅಭಿನಂದನೆಗಳು ಪಾರ್ಥ ಸರ್.
In reply to ಅಂದು ಕೃಷ್ಣ ಭಗವದ್ಗೀತೆಯಲ್ಲಿ by makara
ಆದರೆ ಶ್ರೀದರ ಬಂಡ್ರಿಯವರೆ ನಾನು
ಆದರೆ ಶ್ರೀದರ ಬಂಡ್ರಿಯವರೆ ನಾನು ಎಷ್ಟು ಸರಳವಾಗಿ ಹೇಳಿದರೆ ಅದು ಮತ್ತೆ ಕ್ಲಿಷ್ಟವೆ ! ಅರ್ಥವಾಯಿತು ಎನ್ನಿಸಿದರು ಅರ್ಥವಾಗದ ಬದುಕು ನಮ್ಮದಲ್ಲವೆ
In reply to ಆದರೆ ಶ್ರೀದರ ಬಂಡ್ರಿಯವರೆ ನಾನು by partha1059
ಅರ್ಥವಾಯಿತು ಎನ್ನಿಸಿದರು
ಅರ್ಥವಾಯಿತು ಎನ್ನಿಸಿದರು ಅರ್ಥವಾಗದ ಬದುಕು ನಮ್ಮದಲ್ಲವೆ ..+1
ಬದುಕು ಕಟ್ಟುವ ಮತ್ತು ಅನುಸರಿಸಿ,
ಬದುಕು ಕಟ್ಟುವ ಮತ್ತು ಅನುಸರಿಸಿ, ಅನುಭವಿಸುವ ರೀತಿಯಲ್ಲಿ ಬದುಕು-ಸಾವಿನ ನಡುವಿನ ಅ೦ತರದ ಮೌಲ್ಯಮಾಪನವಿದೆ!
ಎಲ್ಲರಿಗೂ ಸಾವೆ೦ದರೆ ಹೆದರಿಕೆಯೇ... ಸಾಧಕರ ದೃಷ್ಟಿಯಲ್ಲಿ ಆ ಮಾತು ಅಪವಾದ.. ಎಲ್ಲವನ್ನೂ ಅನುಭವಿಸಿ, ಅನುಭಾವಿಸಿದ ರೀತಿ, ಸಾಧನೆಯನ್ನು ಮಾಡಿದ , ಹತ್ತು ಜನರಿಗೆ ಇಷ್ಟವಾಗಿ ಬದುಕಿದ ಜೀವನದ ಸೊಗಸು ಸಾವನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುವ ಮನಸ್ಠಿತಿಯ ಉಧ್ಬವಕ್ಕೆ ಕಾರಣವಾಗುತ್ತದೆ..
ಕವನದ ಆಶಯ ಸೊಗಸಾಗಿದೆ.. ಬಾಳುವ೦ಥ ಹೂವೆ ಬಾಡುವಾಸೆ ಏಕೆ? ನಾಗಾಭರಣರ ಚಿತ್ರದ ರಾಜಣ್ಣನ ಕ೦ಠದ ಚಿತ್ರಗೀತೆ ನೆನಪಾಗುವುದು ಸಹಜ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
In reply to ಬದುಕು ಕಟ್ಟುವ ಮತ್ತು ಅನುಸರಿಸಿ, by ksraghavendranavada
ನಾವಡರೆ ನಿಮ್ಮ ಎಲ್ಲ ಸಾಲುಗಳು
ನಾವಡರೆ ನಿಮ್ಮ ಎಲ್ಲ ಸಾಲುಗಳು ಇಷ್ಟವಾಯಿತು, ನನ್ನ ಕವನಕ್ಕೆ ಮತ್ತಷ್ಟು ಹೆಚ್ಚು ಅರ್ಥ ವಿಸ್ತಾರ ಒದಗಿಸಿತು ಅನ್ನಿಸುತ್ತೆ
ಹಾಗೆ ಕಡೆಯಲ್ಲಿ 'ನಿಮ್ಮವ ನಾವಡ' ಎನ್ನುವ ಅಕ್ಷರಗಳು ಎಂದಿಗು ಆತ್ಮೀಯತೆನನ್ನು ಹುಟ್ಟಿಸುತ್ತದೆ
ಪಾರ್ಥಾ ಸಾರ್, ಕವನಾ ಚೆನ್ನಾಗಿದೆ!
ಪಾರ್ಥಾ ಸಾರ್, ಕವನಾ ಚೆನ್ನಾಗಿದೆ!
ಸಾರಿ ಸಾರಿ ಕುಣಿದು ಹೇಳಿ ಬರುವುದು ಹುಟ್ಟು
ಹೇಳುವುದೊ ಬಿಡುವುದೊ ನಡು ಜೀವನದೊಗಟು
ಬಿಡಿಸುವುದರೊಳಗೆ ಬಿಟ್ಟೊರಡೊ ಸಿದ್ದತೆ ಸಗಟು
ಕಟ್ಟಿಟ್ಟು ಹೇಳದೆ ಹೋಗುವುದು ಸಾವಿನೊಳಗುಟ್ಟು!
- ನಾಗೇಶ ಮೈಸೂರು
In reply to ಪಾರ್ಥಾ ಸಾರ್, ಕವನಾ ಚೆನ್ನಾಗಿದೆ! by nageshamysore
ನಾಗೇಶ ಮೈಸೂರು ನಮಸ್ಕಾರ
ನಾಗೇಶ ಮೈಸೂರು ನಮಸ್ಕಾರ
ನಾನು ಅಷ್ಟುದ್ದ ಹೇಳಲು ಪ್ರಯತ್ನ ಪಟ್ಟಿದ್ದನ್ನು ನೀವು ನಾಲಕ್ಕೆ ಸಾಲಿನಲ್ಲಿ ಹೇಳಿಬಿಟ್ಟಿರಿ! ಕವನ ಹೆಣೆಯುವ ಕಲೆ ನಿಮಗೆ ಸಿದ್ದಿಸಿದೆ !
ನಿಮ್ಮ ಕವನಗಳು ಸದಾ ಮಾರುದ್ದ ಕತೆ ಬರೆಯುವ ನನಗೆ ಕವನ ಬರೆಯಲು ಪ್ರೇರೇಪಿಸಿತು.
In reply to ನಾಗೇಶ ಮೈಸೂರು ನಮಸ್ಕಾರ by partha1059
"ಬದುಕೋ ಸಾವೊ ಆಯ್ಕೆಗೆ
"ಬದುಕೋ ಸಾವೊ ಆಯ್ಕೆಗೆ ಸ್ವತಂತ್ರವೂ ಇಲ್ಲ
ಆದರು ಸಾವಿನ ನಂತರ ನಿಗೂಡವು ಎಲ್ಲ "
;())
ಗುರುಗಳೇ
ಹುಟ್ಟು ಉಚಿತ - ಸಾವು ಖಚಿತ
ಜಾತಸ್ಯಂ ಮರಣಂ ಧ್ರುವಂ
ಏಕ ಸಾಲುಗಳಲ್ಲಿ ಬದುಕಿನ ಸಾರ ಹೇಳಿದ್ದರೆ ನೀವು ಅದನ್ನು ವಿಸ್ತರಿಸಿ ಸರಳವಾಗಿ ಹೇಳಿ ಪ್ರತಿಕ್ರಿಯೆಗಳ ಚರ್ಚೆಗೆ ದಾರಿ ಮಾಡಿಕೊಟ್ಟಿರುವಿರಿ
ಹಾಗೆ ನೋಡಿದರೆ ಸಾವು ಬದುಕಿನ ಬಗ್ಗೆ ಹೋದ ವರ್ಷ ಜಾಸ್ತಿ ಚರ್ಚೆ ಇತ್ತು ( ೨೦೧೨ ರ ಭೂ ಪ್ರಳಯ )..
ಶುಭವಾಗಲಿ
\।
In reply to "ಬದುಕೋ ಸಾವೊ ಆಯ್ಕೆಗೆ by venkatb83
ಸಪ್ತಗಿರಿಯವರೆ ಹುಟ್ಟು ಸಾವುಗಳ
ಸಪ್ತಗಿರಿಯವರೆ ಹುಟ್ಟು ಸಾವುಗಳ ಬಗ್ಗೆ ಅಲ್ಲ ಬರೆದಿರುವುದು ಹುಟ್ಟು ಸಾವುಗಳ ಬಗ್ಗೆ ನಮ್ಮಮನೋಭಾವ ಪ್ರತಿಕ್ರಿಯೆಗಳನ್ನ. ಅವುಗಳನ್ನು ಮನುಷ್ಯ ಹೇಗೆ ಸ್ವೀಕರಿಸುವ ಎನ್ನುವ ಚಿಂತನೆ ಅಷ್ಟೆ