25 ನೇ ಮದುವೆ ವಾರ್ಷಿಕೋತ್ಸವ
ಕವನ
ನನ್ನ ಪೋಷಕರ 25 ನೇ ಮದುವೆ ವಾರ್ಷಿಕೋತ್ಸವದ ಸಲುವಾಗಿ--------->
25 ವರ್ಷಗಳ ಹಿಂದೆ ನವಜೋಡಿ ಇವರಿಬ್ಬರು
ಬೆಳ್ಳಿ ಮಹೋತ್ಸವಕ್ಕೆ ಹರಸಿ ,ಹಾರೈಸಿ ಸರ್ವರು
ಮನೆ-ಹೊಲ ಕೆಲಸ ಒಬ್ಬಳೇ ನಿರ್ವಹಿಸಿ ಯಾರನ್ನು ದೂರದ ಸುಗುಣ ಅಮ್ಮನದು
ಎರಡೆಣ್ಮಕ್ಕಳೆoದು ಒಂದ್ಮಾತು ಅನ್ನದೇ ಪ್ರೀತಿ ತೋರುವ ಚಂದದ ಮನ ಅಪ್ಪನದು
ಎಲ್ಲ ಮಕ್ಕಳನ್ನು ಸಮನಾಗಿ ನೋಡಿ ಉತ್ತಮ ಮಟ್ಟಕ್ಕೇರಿಸಿದ ದೈವೀಗುಣ ಇವರದು ..
ಅಪ್ಪನ ಬುದ್ದಿ,ಕುಶಲತೆಗೆ ಅಮ್ಮನಲ್ಲಿ ಗೌರವ
ಅಮ್ಮನ ತಾಳ್ಮೆ ಹಾಗೂ ನಿಷ್ಠೆಗೆ ಅಪ್ಪನಲ್ಲಿ ಗೌರವ
ಚಿಕ್ಕಪುಟ್ಟ ತಪ್ಪುಗಳಿಗೆ ಒಬ್ಬರಿಗೊಬ್ಬರು ತಾಳುವರು ಮೌನವ
ಬಿಟ್ಟುಕೊಡುವುದಿಲ್ಲ ಯಾರ ಮುಂದೆಯೂ ಇವರ ಸಣ್ಣ ಸರಸವ
ನಾ ಕಂಡಿಲ್ಲ ಜೋರು ಮಾತ್ನಾಡಿ ನೋಯಿಸಿದ್ದು ಯಾರ ಮನವ ......
ಮೇ 13 ಇವರ ನಡುವೆ ಭಾಂಧವ್ಯ ಬೆಸೆದ ಮದುವೆ ದಿನಾಂಕ
ಇಂತಹ ಜೋಡಿಗೆ ಕೊಡಲಾರೆ ನೂರಕ್ಕಿಂತ ಕಡಿಮೆ ಅಂಕ ....
ಬೊ . ಕು .ವಿ
ಚಿತ್ರ್
Comments
ನಿಮ್ಮ ತಂದೆ-ತಾಯಿಯರಿಗೆ
ನಿಮ್ಮ ತಂದೆ-ತಾಯಿಯರಿಗೆ ನಮ್ಮೆಲ್ಲರ ಆದರದ ಅಭಿನಂದನೆಗಳನ್ನು ತಿಳಿಸಿ..
In reply to ನಿಮ್ಮ ತಂದೆ-ತಾಯಿಯರಿಗೆ by ಸುಮ ನಾಡಿಗ್
+1
+1
In reply to ನಿಮ್ಮ ತಂದೆ-ತಾಯಿಯರಿಗೆ by ಸುಮ ನಾಡಿಗ್
ಖಂಡಿತ ,ತುಂಬಾ ಧನ್ಯವಾದಗಳು
ಖಂಡಿತ ,ತುಂಬಾ ಧನ್ಯವಾದಗಳು ಸುಮವ್ರೆ
ಉ: 25 ನೇ ಮದುವೆ ವಾರ್ಷಿಕೋತ್ಸವ
>>>25 ವರ್ಷಗಳ ಹಿಂದೆ ನವಜೋಡಿ ಇವರಿಬ್ಬರು
ಬೆಳ್ಳಿ ಮಹೋತ್ಸವಕ್ಕೆ ಹರಸಿ ,ಹಾರೈಸಿ ಸರ್ವರು---
-ನಿಮ್ಮ ತಂದೆ ತಾಯಿಯವರಿಗೆ ನನ್ನ ಶುಭ ಹಾರೈಕೆಗಳು.
ನಿಮ್ಮ ಈ ಲೇಖನ ನೋಡುವಾಗ ಒಂದು ಘಟನೆ ನೆನಪಾಯಿತು.ಇದೇ ವರ್ಷ ಎಪ್ರಿಲ್ ೮ ನೇ ತಾರೀಕು ನಾನು ಮಗಳು ಪೇಟೆಯಿಂದ ಬರುವಾಗ, ಒಂದು ಬೇಕರಿಯ ಹತ್ತಿರ ಬೈಕ್ ನಿಲ್ಲಿಸಲು ಹೇಳಿದಳು. ಏನೋ ತಿನ್ನಲು ತರುವಳು ಎಂದು ಹಣ ಕೊಡಲು ಹೋದಾಗ ಬೇಡ ಎಂದಳು. ಸ್ವಲ್ಪ ಹೊತ್ತು ಬೈಕಲ್ಲೇ ಕಾದು ಕುಳಿತೆ. ಬೈಕ್ ಪಾರ್ಕ್ ಮಾಡಿ ಒಳಗೆ ಹೋಗಿ ನೋಡುವಾಗ ಕೇಕ್ ಮೇಲೆ "೨೫ನೇ ಮದುವೆ ವಾರ್ಷಿಕೋತ್ಸವದ ಶುಭಾಶಯ" ಎಂದು ನನ್ನ+ಹೆಂಡತಿಯ ಹೆಸರು ಬರೆಯಿಸುತ್ತಿದ್ದಳು! ಮನೆಗೆ ಹೋದಾಗ ಮಗಳು ಮತ್ತು ನೆಂಟರಿಷ್ಟರ ಮಕ್ಕಳೆಲ್ಲಾ ಸೇರಿ ನನ್ನ+ ಹೆಂಡತಿಯ ಫೋಟೋಗಳನ್ನೆಲ್ಲಾ ಸೇರಿಸಿ,ಹೊಗಳಿ ಒಂದು ಹತ್ತು ಪೇಜ್ ಪುಸ್ತಕವೇ ಮಾಡಿದ್ದರು. :) (ನನ್ನ ತಂದೆ ತಾಯಿಯವರ ನಿಧನಾನಂತರ ಈ ಹುಟ್ಟುಹಬ್ಬ, ವಾರ್ಷಿಕೋತ್ಸವ ಆಚರಿಸುವುದೇ ಬಿಟ್ಟಿದ್ದೆ.) ಹೊಸ ಮದುಮಕ್ಕಳಂತೆ ಸಂತೋಷಪಟ್ಟೆವು.:)
In reply to ಉ: 25 ನೇ ಮದುವೆ ವಾರ್ಷಿಕೋತ್ಸವ by ಗಣೇಶ
ಉ: 25 ನೇ ಮದುವೆ ವಾರ್ಷಿಕೋತ್ಸವ
ಏಪ್ರಿಲ್'ನಲ್ಲಿ ಮದುವೆಯ ಇಪ್ಪತ್ತೈದನೇ ವಾಷಿಕೋತ್ಸವ ಆಚರಿಸಿಕೊಂಡ 'ವಿನುತ ಅವರ "ತಂದೆ-ತಾಯಿ" ಮತ್ತು ಗಣೇಶ್'ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ...
ಗಣೇಶ್'ಜಿ ಅವರು ನನ್ನನ್ನು ಹಾಸ್ಯ ಹೊನಲನ್ನು ಹರಿಸುತ್ತಲೇ ಇರು ಎಂದು ಶಪಿಸಿದ್ದಾರೆ .. ಆ ಪ್ರಯುಕ್ತ ಹೇಳುತ್ತಿದ್ದೇನೆ -
ಗಣೇಶ್'ಜಿ, ಮೊದಲಿಗೆ ನಿಮ್ಮ "ಇಪ್ಪತ್ತೈದನೆಯ ಮದುವೆಯ" ವಾರ್ಷಿಕೋತ್ಸವಕ್ಕೆ ಅಭಿನಂದಿಸೋಣ ಅಂತ ... ಇರಲಾರದು ಎನಿಸಿದ ಮೇಲೆ "ಮದುವೆಯ ಇಪ್ಪತ್ತೈದನೆಯ ವಾರ್ಷಿಕೋತ್ಸವಕ್ಕೆ" ಅಭಿನಂದಿಸಿದೆ :-))
In reply to ಉ: 25 ನೇ ಮದುವೆ ವಾರ್ಷಿಕೋತ್ಸವ by bhalle
ಉ: 25 ನೇ ಮದುವೆ ವಾರ್ಷಿಕೋತ್ಸವ
ಗಣೇಶ್'ಜಿ,
ಮೊದಲಿಗೆ ನಿಮ್ಮ "ಇಪ್ಪತ್ತೈದನೆಯ ಮದುವೆಯ" ವಾರ್ಷಿಕೋತ್ಸವಕ್ಕೆ ಅಭಿನಂದಿಸೋಣ ಅಂತ ...
ಇರಲಾರದು ಎನಿಸಿದ ಮೇಲೆ
"ಮದುವೆಯ ಇಪ್ಪತ್ತೈದನೆಯ ವಾರ್ಷಿಕೋತ್ಸವಕ್ಕೆ" :-))
+1
In reply to ಉ: 25 ನೇ ಮದುವೆ ವಾರ್ಷಿಕೋತ್ಸವ by bhalle
ಉ: 25 ನೇ ಮದುವೆ ವಾರ್ಷಿಕೋತ್ಸವ
ಹ ಹ ಎಲ್ಲದರಲ್ಲೂ ನಗುವಿನ ಅಲೆ ಎಬ್ಬಿಸುವಂತ ನಿಮ್ಮಂತ ಕಲೆ ಎಲ್ಲರಲ್ಲೂ ಬರುವುದಿಲ್ಲ ..ಧನ್ಯವಾದಗಳು
In reply to ಉ: 25 ನೇ ಮದುವೆ ವಾರ್ಷಿಕೋತ್ಸವ by bhalle
ಉ: 25 ನೇ ಮದುವೆ ವಾರ್ಷಿಕೋತ್ಸವ
ಇಪ್ಪತ್ತೈದನೆಯ ಮದುವೆ! :) ಶುಭಕೋರಿದ ಭಲ್ಲೇಜಿ, ಪಾರ್ಥಸಾರಥಿ, ವಿನುತಾ, ಸಪ್ತಗಿರಿವಾಸಿಗೆ ಧನ್ಯವಾದಗಳು.
In reply to ಉ: 25 ನೇ ಮದುವೆ ವಾರ್ಷಿಕೋತ್ಸವ by ಗಣೇಶ
ಉ: 25 ನೇ ಮದುವೆ ವಾರ್ಷಿಕೋತ್ಸವ
ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ಗಣೇಶ್ ರವರೆ ... ನಿಮ್ಮದು ಏಪ್ರಿಲ್ ೮ ಎಂದರೆ ೩೫ ದಿನಗಳಾದ ನಂತರ ನನ್ನ ಪೋಷಕರದು .. ಸ್ವಲ್ಪ ತಿಂಗಳುಗಳು ಕಳೆದಿವೆಯಾದರು ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ... ನಿಮ್ಮ ಮನೆಯಂತೆಯೇ ನಾವುಗಳು ಕೂಡ ಕೇಕ್ ಕತ್ತರಿಸಿ ಒಂದು ರೀತಿಯ ಗ್ರಾಂಡ್ ಸೆಲೆಬ್ರೇಶನ್ ಮಾಡಿದೆವು ಫೋಟೋ ಗಳನ್ನೂ fb ಯಲ್ಲಿ ಹಾಕಿದೆವು (ಸಂಪದದಲ್ಲಿ ವೈಯಕ್ತಿಕ ಫೋಟೋ ಹಾಕಬಾರದೆಂದು ಭಾವಿಸಿ ಹಾಕಲಿಲ್ಲ ).. ದೊಡ್ಡಮ್ಮನ ಮಗಳ ಮದುವೆಯ ಮೊದಲ ಶಾಸ್ತ್ರದ ದಿನವಾದ್ದರಿಂದ ಜಾಸ್ತಿ ನೆಂಟರಿದ್ದರು , ಅವರ ಮಧ್ಯೆ ಮೊದಲು ನಮಗೆ ಮುಜುಗರವೆನಿಸಿದರು ಆ ಆಚರಣೆಯ ಖುಷಿಗೆ ಪಾರವೇ ಇಲ್ಲದಂತಾಗಿದ್ದೆವು ,ಏನು ತಿಳಿಸದಂತೆ ಇದೆಲ್ಲ ಏರ್ಪಡಿಸುವಾಗ ಭಯವಿದ್ದರು ,ಅನಿರೀಕ್ಷಿತ ಆಚರಣೆಗೆ ,ಕೊಡುಗೆಗಳಿಗೆ ನಮ್ಮಗಳ ಹುಟ್ಟುಹಬ್ಬ ಬಿಟ್ಟರೆ ಬೇರೆ ಆಚರಿಸದಿದ್ದರಿಂದ ಅವರಿಗೆ ಆಶ್ಚರ್ಯಪಟ್ಟಿದ್ದು ಮತ್ತು ಈ ಕವನಕ್ಕೆ ಅಮ್ಮನ ಕಣ್ತುಂಬಿ ಬಂದಿದ್ದು , ಇದೆಲ್ಲ ಎಲ್ಲರಲ್ಲು ಸಂತಸ ಮೂಡಿಸಿತ್ತು ... ನಿಮ್ಮ ಪ್ರತಿಕ್ರಿಯೆ ನೋಡಿ ಮತ್ತೊಮ್ಮೆ ಆ ಸಂಭ್ರಮದ ನೆನಪಿಗೆ ಜಾರಿದ್ದೆ ಧನ್ಯವಾದಗಳು ..
In reply to ಉ: 25 ನೇ ಮದುವೆ ವಾರ್ಷಿಕೋತ್ಸವ by ಗಣೇಶ
ಉ: 25 ನೇ ಮದುವೆ ವಾರ್ಷಿಕೋತ್ಸವ
@ವಿನುತ ಅವರೇ ಪೋಷಕರಿಗೆ ಈ ಕವನ ಶುಭಾಷಯ ಹೇಳಿದ ರೀತಿ ಹಿಡಿಸಿತು .
ಅವರಿಗೆ ೨೫ ನೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು .
ಅವರು ನೂರಾರು ವರ್ಷ ಸುಖ ಶಾಂತಿ ಹರ್ಷೋಲ್ಲಾಸಗಳೊಂದಿಗೆ ಬಾಳಲಿ .
@ಗಣೇಶ್ ಅಣ್ಣ ಅವರಿಗೆ ೨೫ ನೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು .
ನೂರಾರು ವರ್ಷ ಸುಖ ಶಾಂತಿ ಹರ್ಷೋಲ್ಲಾಸಗಳೊಂದಿಗೆ ಬಾಳಿ
ಶುಭವಾಗಲಿ
\।
In reply to ಉ: 25 ನೇ ಮದುವೆ ವಾರ್ಷಿಕೋತ್ಸವ by venkatb83
ಉ: 25 ನೇ ಮದುವೆ ವಾರ್ಷಿಕೋತ್ಸವ
ತುಂಬು ಹೃದಯದ ಧನ್ಯವಾದಗಳು ನಿಮ್ಮ ಶುಭಾಶಯಕ್ಕೆ..