ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013)
ಕವನ
ಹೇಗೆ ಮರೆಯಲಿ ಹೇಳಿ
ಬಯಸುವ ಮುನ್ನವೇ ತಂದುಕೊಡುತ್ತಿದ್ದಿದು
ಚಾಕೋಲೇಟು ,ಬಟ್ಟೆ ,ಬಿಸ್ಕತ್ತು
ತಿಂಡಿ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದಿದು
ನನ್ನನು ನಿಮ್ಮ ಹೆಗಲ ಮೇಲೆ ಹೊತ್ತು
ನೆನಪಿದೆ ಹೊಟ್ಟು ಕೊಟ್ಟು ತಂದವಳೆಂದು
ಅಜ್ಜ ರೇಗಿಸಿದ ಮಾತಿಗೆ ಹತ್ತಾಗ
ಮುದ್ದಿಸಿ ಎಳನೀರು ಕುಡಿಸಿ ಒರೆಸಿದ್ದು ನನ್ನ ಕಂಬನಿ
ಎಲ್ಲರಂತಲ್ಲ ನನ್ನ ಅಪ್ಪ
ಸ್ವಾಭಿಮಾನಿ ,ಸ್ಪೂರ್ತಿನೆಲೆ ,ಚೇತನಾಮೂರ್ತಿಯೆಂದು
ಯಾವಾಗಲು ಸಾರಿ ಹೇಳುವುದು ನನ್ನ ಮನದ ದನಿ
ಎಷ್ಟು ಹೊಗಳಲಿ ಹೇಳಿ
ನಿಮ್ಮ ಕೆಲಸ,ಆಯ್ಕೆಯ ಗುಣಮಟ್ಟವ
ನೀವು ತೋರುವ ನಿಸ್ವಾರ್ಥ ವಾತ್ಸಲ್ಯವ
ನನ್ನ ಒಳಿತಿಗಾಗಿ ನೀವು ಪಟ್ಟ ಕಷ್ಟವ
ನನ್ನ ಕಷ್ಟಗಳಲಿ ನೀಡಿದ ಸಂತ್ವಾನವ
ಗೆಳಯರು ,ಆದರ್ಶ ವ್ಯಕ್ತಿಗಳ ಪಟ್ಟಿಯಲ್ಲಿ
ಬರುತ್ತಿದುದು ನಿಮ್ಮದೇ ಮೊದಲ ಹೆಸರು
ಬಯಸುವುದು ವಿಧಿ ಬರೆದಿರಲಿ ನನ್ನ ಹಣೆಯಲ್ಲಿ
ನೀವಿರುವರೆಗೆ ಮಾತ್ರ ಇರಲಿ ಈ ಉಸಿರು
ಬೋ . ಕು .ವಿ
ಚಿತ್ರ್
Comments
ವಿನುತಾರವರೆ, ಅಪ್ಪನ ಕುರಿತ ನಿಮ್ಮ
ವಿನುತಾರವರೆ, ಅಪ್ಪನ ಕುರಿತ ನಿಮ್ಮ ಈ ಸುಂದರ ಕವನ ಯಾಕೊ ಸಂಪದದ ಮಾಮೂಲಿ ಪುಟಗಳಲ್ಲಿ ಕಾಣುತ್ತಿಲ್ಲ (15.ಜೂನ್.2013 ನಲ್ಲಿ ಬರೆದಿದ್ದು). ನಾನು ನಿಮ್ಮ ಈವತ್ತಿನ 'ಹೀಗೊಂದು ಮನವಿ' ಓದುವಾಗ, ಆಕಸ್ಮಿಕವಾಗಿ ಬಳಗಡೆಯ ಲಿಸ್ಟಿಂಗ್ನಿಂದಾಗಿ ಕಣ್ಣಿಗೆ ಬಿತ್ತು. ಇದನ್ನು ಮಾಮೂಲಿ ಪುಟಕ್ಕೆ ಸೇರಿಸಿರೆಂದು ಸಂಪದ ನಿರ್ವಹಣ ತಂಡಕ್ಕೆ ಬೇಡಿಕೆ ಸಲ್ಲಿಸಿ. ಮುದ್ದು ಮಗು ತಿಂದ ಸೊಗಸಾದ ಚಕೊಲೇಟಿನಂತೆ ಇದೆ ನಿಮ್ಮೀ ಕವನ - ನಾಗೇಶ ಮೈಸೂರು, ಸಿಂಗಪುರದಿಂದ
In reply to ವಿನುತಾರವರೆ, ಅಪ್ಪನ ಕುರಿತ ನಿಮ್ಮ by nageshamysore
ಧನ್ಯವಾದಗಳು ನಾಗೇಶ್ ರವರೆ
ಧನ್ಯವಾದಗಳು ನಾಗೇಶ್ ರವರೆ ,ಸಂಪದಕ್ಕೆ ಎಷ್ಟೋ ಕೋರಿಕೆಗಳನ್ನ ಕಳುಹಿಸಿದರು ಪ್ರತಿಕ್ರಿಯೆ ಇಲ್ಲ ,ಹಾಗೆ ಪದೇ ಪದೆ ಸೆಟ್ಟಿಂಗ್ಸ್ ನಲ್ಲಿ ಪ್ರತಿಕ್ರಿಯೆಗೆ ಇಮೇಲ್ ಬರಲೆಂದು ಹಾಕಿದರೂ ಬರುತ್ತಿಲ್ಲ, ಅದೇ ಕಾರಣದಿಂದಲೇ ನಿಮ್ಮ ಪ್ರತಿಕ್ರಿಯೆಯನ್ನು ನಾನು ಇವತ್ತು ನೋಡಿದ್ದು . ಧನ್ಯವಾದಗಳು
In reply to ಧನ್ಯವಾದಗಳು ನಾಗೇಶ್ ರವರೆ by Vinutha B K
ನಮಸ್ಕಾರ ವಿನುತರವರೆ, ಈಗಲೂ ಈ
ನಮಸ್ಕಾರ ವಿನುತರವರೆ, ಈಗಲೂ ಈ ಸಮಸ್ಯೆ ಪರಿಹಾರವಾಗಿಲ್ಲ. ಈಗ ತಾನೆ 15ನೆ ತಾರೀಖಿನ ಲೇಖನದಲ್ಲಿ ಹುಡುಕಿದೆ , ಇನ್ನೂ ಕಾಣುತ್ತಿಲ್ಲ. ಸದ್ಯ ಈ ಪ್ರತಿಕ್ರಿಯೆಯ ಮೂಲಕವಷ್ಟೆ ನೋಡಲು ಸಾಧ್ಯ - ನಾಗೇಶ ಮೈಸೂರು, ಸಿಂಗಾಪುರ
In reply to ನಮಸ್ಕಾರ ವಿನುತರವರೆ, ಈಗಲೂ ಈ by nageshamysore
ಹೌದು ಕೊನೆಯಪಕ್ಷ ಪ್ರತಿಕ್ರಿಯೆ
ಹೌದು ಕೊನೆಯಪಕ್ಷ ಪ್ರತಿಕ್ರಿಯೆ ಬಂದದ್ದಾದರು ಮೇಲ್ ಬರುತ್ತಿಲ್ಲ ,ಸಂಪದದಲ್ಲಿ ಇನ್ನು ಕೆಲವು ಮಾರ್ಪಾಡುಗಳ ಅವಶ್ಯಕತೆಯಿದೆ .
bahala sogasaagide vinutha
bahala sogasaagide vinutha avare. appana nenapinaalakke karedukondu hoyitu nimma padya odi..
In reply to bahala sogasaagide vinutha by smitha melkote
ಧನ್ಯವಾದಗಳು ಸ್ಮಿತಾ ..ನಾನು
ಧನ್ಯವಾದಗಳು ಸ್ಮಿತಾ ..ನಾನು ಶುರುಮಾಡಿದ್ದೆ ಅಪ್ಪನ ಕವನದಿಂದ ಯಾಕೋ ಗೊತ್ತಿಲ್ಲ ಸಂಪದದಲ್ಲಿ ನನ್ನ ಮೊದಲ ಕೆಲವು ಕವನಗಳು ಕಾಣಸಿಗುತ್ತಿಲ್ಲ . ಲಿಂಕ್ ಕಳಿಸಿದರು ಪ್ರಯೋಜನವಿಲ್ಲವಾದರಿಂದ ಇಗೋ ಇದು ನನ್ನ ಮೊದಲ ಕವನ .
*********** ಅಪ್ಪ ******************
ಹುಟ್ಟಿದಾಗಿನಿಂದಲು ಒಂದು ದಿನ ತಪ್ಪಲಿಲ್ಲ ಅವರ ಪ್ರೀತಿ
ಅದೇನೋ ಅಷ್ಟು ಪ್ರೀತಿಸಿದರು ಅವರೆಂದರೆ ಪ್ರೀತಿ ಜೊತೆಗೆ ಸ್ವಲ್ಪ ಭೀತಿ
ಎಲ್ಲರನ್ನು ಆಕರ್ಷಿಸುವುದು ಅವರ ನಗು ಮತ್ತು ಮಾತನಾಡುವ ರೀತಿ
ಸ್ವಂತವಾಗಿ ಕಲಿವ ,ಹಲವಾರು ಕಲೆಯುಳ್ಳ ಚಿಲುಮೆಯ ಮೂರ್ತಿ
ನಿಷ್ಟೆ, ಸ್ವಾಭಿಮಾನ,ಕಲಿಕೆ ಇವುಗಳಲಿ ನನಗೆ ಸ್ಪೂರ್ತಿ
ಇಂಥಹ ಅಪ್ಪನಿಗೆ ಮಗಳಾಗಿ ತರಬೇಕು ಒಳ್ಳೆಯ ಕೀರ್ತಿ.
* ಬೋ .ಕು .ವಿ
ಉ: ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013)
ಕವನ ನನಗೆ ಬಹಳ ಇಷ್ಟವಾಯಿತು. >>>"ನಿಮ್ಮ ಕೆಲಸ,ಆಯ್ಕೆಯ ಗುಣಮಟ್ಟವ
ನೀವು ತೋರುವ ನಿಸ್ವಾರ್ಥ ವಾತ್ಸಲ್ಯವ
ನನ್ನ ಒಳಿತಿಗಾಗಿ ನೀವು ಪಟ್ಟ ಕಷ್ಟವ
ನನ್ನ ಕಷ್ಟಗಳಲಿ ನೀಡಿದ ಸಂತ್ವಾನವ"...ಹೆಚ್ಚು ಕಮ್ಮಿ.. ತಂದೆ ತನ್ನ ಮಗ- ಮಗಳಿಗೆ ಹಗಲು ರಾತ್ರಿ ಒಳಿತನ್ನೇ ಚಿಂತಿಸುವರು. ಅದೇ ಪ್ರೀತಿ ವಿಷಯಕ್ಕಾಗುವಾಗ ಅದೇ ತಂದೆ ವಿಲನ್ ( http://sampada.net/f... ) ಹೇಗೆ ಆಗುವರು? (ನಿಮ್ಮ ಬಗ್ಗೆ ಕೇಳಿದ್ದಲ್ಲ. ಸಾಮಾನ್ಯ ಪ್ರೇಮಿಗಳು ಯಾಕೆ ಹೀಗೆ?)
In reply to ಉ: ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013) by ಗಣೇಶ
ಉ: ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013)
ಕೊಂಡಿ ಓಪನ್ ಆಗದು. ನಿಮ್ಮದೇ ಲೇಖನ "ಅಂತರ್ಜಾತಿ ವಿವಾಹ ಸರಿಯೋ ತಪ್ಪೋ?" ದ ಕೊಂಡಿ.
In reply to ಉ: ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013) by ಗಣೇಶ
ಉ: ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013)
ಅದೇ ತಂದೆ ವಿಲನ್ ( http://sampada.net/f... ) ಹೇಗೆ ಆಗುವರು?
ಇದು ಯಾವ ಲಿಂಕ್ ಎಂದು ತಿಳಿಯಲಿಲ್ಲ ,ಮತ್ತೊಮ್ಮೆ ಹಾಕಿ ...
"ಅಂತರ್ಜಾತಿ ವಿವಾಹ ಸರಿಯೋ ತಪ್ಪೋ?" ದ ಕೊಂಡಿ.
http://sampada.net/f...
In reply to ಉ: ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013) by ಗಣೇಶ
ಉ: ನನ್ನ ಅಪ್ಪ (ಹ್ಯಾಪಿ ಫಾದರ್ಸ್ ಡೇ-2013)
ಕವನ ಇಷ್ಟವಾಗಿದಕ್ಕೆ ಋಣಿ ,ಹಾಗು ನಿಮ್ಮ ಉತ್ತಮ ಪ್ರಶ್ನೆಗೆ ಧನ್ಯವಾದಗಳು ..
ತಂದೆ ವಿಲನ್ ಆಗುವುದಿಲ್ಲ ಅವರ ಅತಿಯಾದ ಪ್ರೀತಿಯ ವ್ಯಾಮೋಹ ವಿಲನ್ನಂತೆ ಕಾಣುತ್ತದೆಯಷ್ಟೇ ,ಎಲ್ಲ ವಿಷಯದಲ್ಲೂ ತಂದೆಯ ಹೆಸರಿಗೆ ದಕ್ಕೆತರದ್ದಂತೆ ಇದ್ದ ಮಗ/ಮಗಳು ಪ್ರೀತಿ ವಿಷಯಕ್ಕೆ ಬಂದಾಗ ತಾನೇ ಹುಡುಕಿಕೊಂಡವರೊಡನೆ ಮದುವೆಯಾದರೆ ತಪ್ಪು ,ತಾನು ಹುಡುಕಿ ಮಾಡಿದರೆ ಮಾತ್ರ ಸುಖವಾಗಿರುತ್ತಾರೆ ಎಂಬ ಗುಂಗಿನಲ್ಲಿರುತ್ತಾರೆ .. ಇಷ್ಟು ದಿನ ದಕ್ಕೆ ತರದವರು ಮುಂದೆಯೂ ಹಾಗೆ ಬದುಕುತ್ತಾರೆ,ನಿರ್ದಾರ ಸರಿಯಾಗಿರುತ್ತದೆ ಎಂಬ ಬರವಸೆಯನ್ನು ಕಿತ್ತುಹಾಕಿದಾಗ ,ಸಹಜವಾಗಿ ತಂದೆಯ ವ್ಯಾಮೋಹ ವಿಲನ್ ಆಗಿ ಕಾಣುತ್ತಿರುತ್ತದೆ