ಹೂವಿನ ಹುಡುಗಿ
ಚಿತ್ರ
(ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಚಿತ್ರಕ್ಕೆ ಕವಿತೆ)
ದೇವ ಪೂಜೆಗೆನುತ್ತ ತಂದಿರೆ ಹೂವು ತುಂಬಿದ ಪಾತ್ರೆಯ
ಹೂವ ಕೋದಿಹಳೀಕೆ ಮಲ್ಲಿಗೆ ಮಾಲೆಯೊಂದನು ಮಾಡುತ
ಯಾವ ಧ್ಯಾನವದಾವ ಮಾಯವದೆತ್ತಲೋಡಿವೆ ಕಂಗಳು?
ಸಾವಧಾನದೊಳೀಕೆ ಯಾರನು ಕಾಯುತಾ ನಸು ನಕ್ಕಳೊ!
-ಹಂಸಾನಂದಿ
ಕೊ: ಇದು ಮತ್ತಕೋಕಿಲ/ಮಲ್ಲಿಕಾಮಾಲೆಯ ಮಾತ್ರಾ ಚೌಪದಿಯ ಛಂದಸ್ಸಿನಲ್ಲಿದೆ
Rating
Comments
ಉ: ಹೂವಿನ ಹುಡುಗಿ
ಅದೇನೋ ನಾನು ಹಾಕಿದ ಚಿತ್ರ ಸರಿಯಾಗಿ ಬರಲಿಲ್ಲ. ಚಿತ್ರವನ್ನು ಈ ಕೊಂಡಿಯಲ್ಲಿ ನೋಡಬಹುದು: http://hamsanada.blogspot.com/2013/07/blog-post_17.html
In reply to ಉ: ಹೂವಿನ ಹುಡುಗಿ by hamsanandi
ಉ: ಹೂವಿನ ಹುಡುಗಿ
ರಾಮಪ್ರಸಾದ್, ಎಲ್ಲರೂ ಪೋಸ್ಟ್ ಮಾಡುವಾಗ ಹೆಚ್ಚಿನ ಎಚ್ ಟಿ ಎಂ ಎಲ್ ಸೇರಿಸುತ್ತಿದ್ದು ಅದರಿಂದಾಗಿ ಈಗಾಗಲೇ ತೀರ ದೊಡ್ಡದಿರುವ ಸಂಪದ ಡೇಟಬೇಸ್ ಮತ್ತಷ್ಟು ದೊಡ್ಡದಾಗಿ ತೊಂದರೆ ಕೊಡುತ್ತಿತ್ತು. ಇದೆಲ್ಲ ಮತ್ತೆ cache ಆಗುತ್ತೆ ನೋಡಿ. ಜೊತೆಗೆ ಹೊರಗಿನಿಂದ ಲಿಂಕ್ ಮಾಡಿದ ಫೋಟೋ ಮತ್ತೊಬ್ಬರ ಸರ್ವರ್ ಮೇಲೆ ಅನುಮತಿಯಿಲ್ಲದೆ ಹೊರಿಸಿದ ಹೊರೆಯಾಗುತ್ತದೆ - ಇದು ಸರಿಯಾಗುವುದಿಲ್ಲ. ಹೀಗಾಗಿ ಇನ್ಲೈನ್ ಚಿತ್ರ ಕಾಪಿ ಪೇಸ್ಟ್ ಮಾಡುವುದನ್ನು ಡಿಸೇಬಲ್ ಮಾಡಿದ್ದೇವೆ.
ಚಿತ್ರ ಸೇರಿಸಲು ಶೀರ್ಷಿಕೆಯ ಅಡಿ ಅಪ್ಲೋಡ್ ಬಟನ್ ಒಂದು ಕಾಣುತ್ತಿರಬೇಕು ನೋಡಿ. ಅದನ್ನು ಬಳಸಿ ಚಿತ್ರ ಅಪ್ಲೋಡ್ ಮಾಡಬಹುದು.
ಲೇಖನವನ್ನು ಕಾಪಿ ಪೇಸ್ಟ್ ಮಾಡುವಾಗ ಟೆಕ್ಸ್ಟ್ ಎಡಿಟರ್ ಒಂದಕ್ಕೆ ಹಾಕಿಕೊಂಡು ಇಲ್ಲಿ ಹಾಕಿದರೆ ಉತ್ತಮ.
ಮೇಲಿನ ಲೇಖನಕ್ಕೆ ಚಿತ್ರ ಸರಿಪಡಿಸಿರುವೆ.
ಉ: ಹೂವಿನ ಹುಡುಗಿ
ಧನ್ಯವಾದಗಳು ಹರಿ,
In reply to ಉ: ಹೂವಿನ ಹುಡುಗಿ by hamsanandi
ಉ: ಹೂವಿನ ಹುಡುಗಿ
"ಸಾವಧಾನದೊಳೀಕೆ ಯಾರನು ಕಾಯುತಾ ನಸು ನಕ್ಕಳೊ!"
;(೦)
ಚಿತ್ರ ಸಮೇತ ಬರಹ ಸೂಪರ್ ..
ಚಿತ್ರ ಇಲ್ಲಿ ನಮಗೆ ಕಾಣಿಸುತ್ತಿದೆ
ಶುಭವಾಗಲಿ
\।