ದೆವ್ವ ಭೂತದ ಭೀತಿ!
ಮುಸುಕಿದ ರಾತ್ರಿಯ
ನಿರ್ಜನ ಹಾದಿ;
ಇಕ್ಕೆಲ ಸಾಲು ಕಳ್ಳಿಗಳ
ನಡುವೆ ತುಳಿದ ಸೈಕಲ್ಲಿನ ವೇಗ,
ಹಾಳು ಸರಿಗಟ್ಟದ ಮನೋವೇಗ.
ದೀಪವಿಲ್ಲದ ರಸ್ತೆ ಕುಳಿ
ಅಮಾವಾಸೆಯಾಗಸದ ಹಳ್ಳಿ,
ಪೆಡಲೊತ್ತಿ ಮಿಣಮಿಣ ದೀಪ
ಊರು ತಲುಪಿದರೆ ಸಾಕಪ್ಪ!
ತಂಗಾಳಿಗೆ ಬೆವರೊ
ಕಗ್ಗತ್ತಲಿನ ತಿಮಿರೊ
ಹತ್ತಿಳಿಸಿದ ರಸ್ತೆಯ ನಿಮಿರೊ..
ದೂರದಳ್ಳಿಯ ಮನೆದೀಪ
ಹಾಕಿ ಆಶಾಕಿರಣಕೆ ಧೂಪ;
ಆವರ್ತನಗಳ ಸೊನ್ನೆ
ಅರೆ! ಏನಿದು ಸ್ಥಗಿತ ದಿಣ್ಣೆ?
ಮುಂದೋಡದೆ ತೆವಳಿದ ಚಕ್ರ
ಕಲ್ಲೊಡೆದು ತೂತಾದನೆ ಮಿತ್ರ!
ತಳ್ಳುತ ಭೀತಿಯ ಕಾಲ
ನಡುಗುವ ಬರಿಗಾಲ,
ನಿಶೀಥಕು ಬೆವರಲೆ ಜಳಕ
ಸವೆಯದ ಹಾದಿಯ ತವಕ..
ಹಿಡಿದೆಳೆದ್ಯಾರೊ ಬೈಸಿಕಲ್ಲು
ಎಳೆದಂತೆ ಬಂಡೆಗಲ್ಲು
ಕಥೆಗಳೆಲ್ಲ ಹೂಡಿ ದಾವೆ
ಪ್ರತ್ಯಕ್ಷ ಕಣ್ಣಲಿ ನಾವೆ
ದೆವ್ವ ಪಿಶಾಚಿಗಳ ಕಾವೆ!
ನಡುಗಿಸಿ ಥರಥರ ಭೀತಿ
ಅಪರಿಚಿತ ಚೀತ್ಕರಿಸಿದ ರೀತಿ,
ಬಲ ಬಿಟ್ಟೆಳೆದೂ ಜಗ್ಗದೆ
ಪುಕ್ಕಲೆ ತಿರುಗಿ ನೋಡಲಳ್ಳೆದೆ...
ಸಾಲು ದೈವಗಳೆಲ್ಲರ ಅವತಾರ
ಬರದ ಮಂತ್ರಗಳಿಗು ಅಪಚಾರ;
ತಟ್ಟನೆ ಮಿಂಚು ಗುಡುಗಿದ ಸದ್ದು
ಬಿಟ್ಟೆಲ್ಲ ಸಡಿಲ ಓಡೆದ್ದೂ ಬಿದ್ದು;
- ಕಲ್ತುದಿಯಡಿ ಸಿಕ್ಕ ಚಕ್ರ ಕೆಳಬಿದ್ದು!
Comments
ಉ: ದೆವ್ವ ಭೂತದ ಭೀತಿ!
In reply to ಉ: ದೆವ್ವ ಭೂತದ ಭೀತಿ! by makara
ಉ: ದೆವ್ವ ಭೂತದ ಭೀತಿ!
ಉ: ದೆವ್ವ ಭೂತದ ಭೀತಿ!
In reply to ಉ: ದೆವ್ವ ಭೂತದ ಭೀತಿ! by kavinagaraj
ಉ: ದೆವ್ವ ಭೂತದ ಭೀತಿ!