ಅಂತರಾತ್ಮ - ೩ (ತುಳು)

ಅಂತರಾತ್ಮ - ೩ (ತುಳು)

ಈಯತ್ತ ಎಂಕೀತ್ ಸ್ಫೂರ್ತಿಲುನು ಕೊರ್‍ನಾಯೆ
ಈ ಪೆದ್ದಿ ಲೋಕೊನು ಸುಗಿತ್ತೋನುವೆ

ಈಯತ್ತ ಬದ್‍ಕ್‍ಡ್ ಬೊಳುಪು ಕೊರ್‍ದಿನ ಗುರುವು
ನಿನ್ನವೊಂಜಿ ದಯೆಟ್ಟಿನಿಲ ಸುಖಿ ಯಾನ್‍ಗಾ

ಒಂಜೆತುಳಾ ರಡ್ಡ್‍ನ್ | ರಡ್ಡೆತುಳಾ ಒಂಜೆನ್ |
ಸೇರಾದ್ ಸೃಷ್ಟಿನ್ ಈ ಮಾಲ್ತಗಾ

ಈಯತ್ತ ಎಂಕಿನಿಲ ತೆಲಿಕೆ ನಲಿಕೆದ ತುಡರ್
ಬಾಳುವೆದ ಎದ್‍ಪುಲು ನಿನ್ನ ದಯೊಟೆಗಾ

ನಿನ್ನವೊಂಜಿ ಒಲುಮೆಡ್ ಮಾಂತ ಗೆಂದೆರೆ ಚಲೊನು
ಕೊರುದು ಕೈ ಪತ್ತ್‍ದ್ ನಡಪಾಯಗಾ

ಮಾಂತೈಟ್ ಒಂಜೆನ್ | ಮಾಂತೆರೆಡ ಒರಿಯೆನ್ |
ತೋಜಾದ್ ಮಾಯೊನ್ ಪೂಜಾದಗಾ

ಮೂಡಾಯಿ ಅಯ್ತೆ ಸಿರಿ ಮೂಡ್‍ದ್ ಕಂತುನ ಮುಟ್ಟ
ತುಡಿಟ್ ತುಡಿಪುನ ತಾಳ ಈಯತ್ತಗಾ
 

Rating
No votes yet

Comments

Submitted by ಗಣೇಶ Tue, 11/06/2012 - 00:23

In reply to by kpbolumbu

ವ್ಯಾಕಾರಣ ಪಂಡಿತನಾದ ನಾನು ನಿಮ್ಮ ವ್ಯಾಕರಣ ದೋಷಗಳನ್ನು ಹೇಳೋಣ ಎಂದು ಓದಿದೆ.:) ವ್ಹಾ.. ತುಳುವಿನಲ್ಲೂ ಕವಿತೆ ರಚಿಸಬಲ್ಲಿರಿ!
-ಗಣೇಶ.

Submitted by kpbolumbu Tue, 11/06/2012 - 17:16

In reply to by ಗಣೇಶ

ಧನ್ಯವಾದಗಳು ಗಣೇಶ್. :)

ವ್ಯಾಕಾರಣ ಪಂಡಿತರು ವ್ಯಾಕರಣ ದೋಷಗಳಿದ್ದರೂ ಹೇಳರು. ವ್ಯಾಕರಣ ಪಂಡಿತರು ವಿನಾ ಕಾರಣ ದೋಷ ಹುಡುಕಿ ಅಂದಗೆಡಿಸುವವರು. ಆದರೆ ನನ್ನ ತುಳು ಪ್ರಯೋಗದ ಬಗ್ಗೆ ನನಗೆ ಅನುಮಾನಗಳಿವೆ.
೧. ದೇವರನ್ನು ತುಳುವಿನಲ್ಲಿ ಏಕವಚನದಲ್ಲಿ ಸಂಬೋಧಿಸಬಹುದೇ?
೨. ’ಸ್ಫೂರ್ತಿಲುನು’ ಸರಿಯಾದ ಪ್ರಯೋಗವೇ?

Submitted by ಗಣೇಶ Fri, 03/22/2013 - 23:38

In reply to by kpbolumbu

ನಮಸ್ಕಾರ. ಯಾನ್ ಈರ್‌ನ ಪೊಸ ಕವಿತೆ "ಹಳೆಯ ಕವಿತೆಗೆ ಹೊಸರೂಪ.." ಓದುನಾಗ, ಈ ಕವಿತೆ ನೆನಪಾದ್ ಇತ್ತೆ ತೂಯೆ. ತಡ ಆಯಿನೆಕ್ಕು ಕ್ಷಮೆ ಇಪ್ಪಡು. ೧. ದೇವೆರೆನು ಒಂಜಿ ಪಿಚಾಚಿ ಬಾಯಿಗ್ ಬತ್ತಿಲೆಕ್ಕ ನೆರೊಂದುಂಡು,ಎಂಕ್ಲ್ ಮನಿಪ್ಪಂದೆ ಉಳ್ಳ. ಈರ್ ತೂಂಡ ಏಕವಚನೊಡು ಲೆಪ್ಪೊಳ್ಯಾಂದು ಕೇಣುವರತ್ತಾ! ೨. "ಸ್ಪೂರ್ತಿಲುನು" ಸರಿ. ಓಳಾಂಡಲಾ ಆ ಪದ ಇಜ್ಜಾಂಡಲಾ "ಕವಿ ಸ್ವಾತಂತ್ರ್ಯ"-ಈರ್ ಪಂಡಿ ಬೊಕ್ಕ ಎಂಕ್ಲ್ ಸೇರ್ಸಾಪ. :)

Submitted by Shreekar Sat, 03/23/2013 - 06:41

In reply to by ಗಣೇಶ

"........ ದೇವರನ್ನು ತುಳುವಿನಲ್ಲಿ ಏಕವಚನದಲ್ಲಿ ಸಂಬೋಧಿಸಬಹುದೇ?"

ಕುತೂಹಲಕಾರಿ ಪ್ರಶ್ನೆ !

ದೇವರು ತುಳುಭಾಷಾ ಪಕ್ಷಪಾತಿಯೇ? :-)))

ತುಳುವೆರ್ ದೈವಸ್ವರೂಪೀ ಪುಟ್ಟ ಮಕ್ಕಳೊಡನೆ ಮಾತಾಡುವಾಗ ಬಹುವಚನದಲ್ಲಿ ಮಾತಾಡುವುದು ಕೇಳಿದ್ದೇನೆ; ಆದರೆ, ಇದು ಮಕ್ಕಳಿಗೆ ಬಹುವಚನ ಪ್ರಯೋಗದ ಅಭ್ಯಾಸ ಮಾಡಿಸುವುದಕ್ಕಾಗಿ ಎಂದು ತಿಳಿದಿದ್ದೇನೆ.

ಭಾಷೆಗಿಂತ ಭಕ್ತಿ ಮುಖ್ಯ.
ಶಿವಶರಣರ ವಚನವೇ ಇದೆಯಲ್ಲ: ನಂಬಿ ಕರೆದರೆ ಓ ಎನ್ನನೇ ಶಿವನು !

Submitted by Shreekar Sat, 03/23/2013 - 06:47

In reply to by Shreekar

@ ಗಣೇಶಣ್ಣ

"ದೇವೆರೆನು ಒಂಜಿ ಪಿಚಾಚಿ ಬಾಯಿಗ್ ಬತ್ತಿಲೆಕ್ಕ ನೆರೊಂದುಂಡು,"

ಇದು ಸಂಪದದ ಪುಟಗಳಲ್ಲಿ ಪ್ರಕಟವಾದ ಗಣೇಶ್ ದೇವರನ್ನು ಜರೆಯುತ್ತಿದ್ದ ಬಗ್ಗೆಯೇ? :-)))

Submitted by kpbolumbu Sat, 03/23/2013 - 17:11

In reply to by Shreekar

ಶ್ರೀಕರ್, 'ತುಳು ಮಾತನಾಡದ ತುಳುವ' ಎನ್ನುವ ಗುಂಪಿಗೆ ಸೇರಿದವನು ನಾನು. ಖ್ಯಾತ ಸಂಶೋಧಕ ಡಾ. ಪಿ. ಗುರುರಾಜ ಭಟ್ ಅವರು ಹವ್ಯಕರ ಮನೆಭಾಷೆ ತುಳು ಅಲ್ಲದಿದ್ದರೂ ಹವ್ಯಕರನ್ನು ತುಳುವರ ಗುಂಪಿಗೆ ಸೇರಿಸುತ್ತಾರೆ. ನನ್ನ ಮನೆಭಾಷೆ ತುಳು ಅಲ್ಲವಾದ್ದರಿಂದಲೇ ಭಾಷಾ ಪ್ರಯೋಗದ ಬಗೆಗಣ ಈ ಅನುಮಾನ. :)
ಆದರೂ ನಾನು ಕಂಡಂತೆ ದೇವರನ್ನು 'ಈರ್' ಎಂದೇ ಸಂಬೋಧಿಸುತ್ತಾರೆ.
ಇದು ಕೆಳಗಣ ಕೊಂಡಿಯಲ್ಲಿರುವ ಕನ್ನಡ ಕವಿತೆಯ ಯಥಾವತ್ ಅನುವಾದವಾದರೂ ಕೊನೆಯ ಎರಡು ಸಾಲು ತುಳುವಿಗೆ ಸ್ವಂತವಾದುದು.
http://sampada.net/blog/%E0%B2%A8%E0%B3%80%E0%B2%A8%E0%B3%81/%5Bdd%5D/%5Bmm%5D/%5Byyyy%5D/38660

Submitted by Shreekar Sun, 03/24/2013 - 19:59

In reply to by kpbolumbu

"....'ತುಳು ಮಾತನಾಡದ ತುಳುವ' ಎನ್ನುವ ಗುಂಪಿಗೆ ಸೇರಿದವನು ನಾನು...."

ವಿಜಯನಗರದ ಕ್ರಷ್ಣದೇವರಾಯ ಕೂಡಾ ನಿಮ್ಮ ಹಾಗೆಯೇ ತುಳು ಮಾತನಾಡದೇ ಇದ್ದರೂ, ತೆಲುಗಿನಲ್ಲಿ ಬರೆಯುತ್ತಿದ್ದರೂ, ತುಳುವ ವಂಶದವನೆಂದು ಕರೆಸಿಕೊಳ್ಳುತ್ತಿದ್ದನು.

Submitted by kpbolumbu Mon, 03/25/2013 - 16:59

In reply to by Shreekar

ವಿಪರ್ಯಾಸವೆಂದರೆ ತುಳುವ ನರಸ ನಾಯಕನ ಮಗನಾದ ಕೃಷ್ಣದೇವರಾಯ ಅಪ್ಪಟ ತುಳುವನೇ ಆಗಿದ್ದನು. ಸಾಳುವ ನರಸಿಂಹ ದೇವರಾಯನ ಸೇನಾಧಿಪತಿಯಾಗಿದ್ದವನು ನರಸ ನಾಯಕ. ಹಾಗಾಗಿ ಕೃಷ್ಣದೇವರಾಯ ತುಳುವ ವಂಶಜನೇ.

Submitted by kpbolumbu Sat, 03/23/2013 - 17:18

In reply to by ಗಣೇಶ

ಗಣೇಶ್, ಪಿಚಾಚಿನಕ್ಲು ಬೋಡಾಯಿ ಲೆಕ್ಕ ಪಾತೆರಡ್, ನಂಕ್ ದಾನೆ? :)
ಸ್ಫೂರ್ತಿಲುನು - ಸ್ಫೂರ್ತಿಗಳನ್ನು ಎಂಬುದರ ಅನುವಾದವಾಗಿದೆ. ಅದು ಸ್ಪೂರ್ತಿಲೆನು ಆಗಬಹುದಾಗಿತ್ತು.

Submitted by kpbolumbu Sat, 03/23/2013 - 17:07

In reply to by venkatb83

ವೆಂಕಟ್,
http://sampada.net/blog/%E0%B2%A8%E0%B3%80%E0%B2%A8%E0%B3%81/%5Bdd%5D/%5Bmm%5D/%5Byyyy%5D/38660
ಇಲ್ಲಿರುವ ಕವಿತೆಯಲ್ಲಿ ಆವರ್ತನೆಗೊಂಡ ಭಾಗಗಳನ್ನು ಬಿಟ್ಟು ಓಡಿದರೆ ಅರ್ಥ ತಿಳಿಯುವುದು. ಅದರ ಭಾವಾನುವಾದವೇ ಇದು.

Submitted by sasi.hebbar Mon, 03/25/2013 - 17:23

ವಿಜಯನಗರದ ತುಳುವ ಅರಸರು, ಕರಾವಳಿಯ ತುಳುನಾಡಿನವರೆ ಅಥವಾ ಅಲ್ಲವೆ ಎಂಬುದರ ಕುರಿತು ಕೆಲವು ಇತಿಹಾಸಕಾರರು ಅನುಮಾನ ವ್ಯಕ್ತ ಪಡಿಸಿದ್ದಾರೆ ಮತ್ತು ಜಿಜ್ಞಾಸೆ ನಡೆಸಿದ್ದಾರೆ ಅಂತಎಲ್ಲೋ ಓದಿದ ನೆನಪು. ಈ ಕುರಿತು ಹೆಚ್ಚಿನ ವಿವರ ನೀಡಬಲ್ಲಿರಾ??

Submitted by kpbolumbu Tue, 03/26/2013 - 11:37

In reply to by sasi.hebbar

ವಿಜಯನಗರದ ಅರಸರೆಲ್ಲರೂ ತುಳುವರಲ್ಲ. ವಿಜಯನಗರವನ್ನು ಸ್ಥಾಪಿಸಿದವರು ಸಂಗಮ ವಂಶದ ಅರಸರು. ಇಮ್ಮಡಿ ಹರಿಹರರಾಯ (ಹರಿಯಪ್ಪ) 'ತುಳು ಕರ್ಣಪರ್ವೊ' ಕಾವ್ಯ ರಚಿಸಿದನೆಂಬ ಊಹೆಯಿಂದಲಾಗಿ ಅವರು ತುಳುವರೆಂಬ ಅನುಮಾನ ಬರುವುದು. ಆದರೆ 'ತುಳು ಕರ್ಣಪರ್ವೊ' ಕಾವ್ಯವನ್ನು ರಚಿಸಿದವನು ಇಮ್ಮಡಿ ಹರಿಹರರಾಯನ ಅಧೀನದಲ್ಲಿದ್ದ ಅರುಣಾಬ್ಜನೆಂಬ ಕವಿಯೆಂದು ಈಗ ದೃಢಪಟ್ಟಿದೆ. ಅರುಣಾಬ್ಜನು ತನ್ನ ಕಾವ್ಯದಲ್ಲಿ ತಾನು 'ಹರಿಯಪ್ಪೆ' ಎಂದೇ ಹೇಳಿಕೊಳ್ಳುತ್ತಾನೆ.
ಸಂಗಮ ವಂಶದ ನಂತರ ಸಾಳುವ ವಂಶಜರು ವಿಜಯನಗರವನ್ನು ಆಳಿದರು. ಸಾಳುವ ನರಸಿಂಹ ದೇವರಾಯನ ಸೇನಾಧಿಪತಿಯಾಗಿದ್ದವನು ತುಳುವ ನರಸ ನಾಯಕ (ಬಂಟ/ಶೆಟ್ಟಿ/ರೈ/ನಾಯಕ). ಸಾಳುವ ನರಸಿಂಹ ದೇವರಾಯನ ನಂತರ ನರಸ ನಾಯಕ ರಾಜನಾದನು.ನರಸ ನಾಯಕನ ಮಕ್ಕಳು ವೀರ ನರಸಿಂಹ ರಾಯ (ನಾಯಕ) ಮತ್ತು ಕೃಷ್ಣದೇವ ರಾಯ (ನಾಯಕ). ನರಸ ನಾಯಕನ ನಂತರದ ಎಲ್ಲರೂ ರಾಯ ಉಪನಾಮವನ್ನೇ ಇಟ್ಟುಕೊಂಡರು.

Submitted by Shreekar Tue, 03/26/2013 - 17:18

In reply to by kpbolumbu

ನಾಯಕನೆಂಬ ಅಡ್ಡ ಹೆಸರು ಈಗಂತೂ ಬಂಟರಲ್ಲಿ ಮಾತ್ರವಲ್ಲ, ಯಾವ ತುಳುಭಾಷಿಕರಲ್ಲೂ ಇದ್ದಹಾಗೆ ನಾಕಾಣೆ!

ಪುರಂದರದಾಸರ ಹಿಂದಿನ ಹೆಸರು ಶ್ರೀನಿವಾಸ್ ನಾಯಕನಾಗಿದ್ದು ಅವರು ಕೊಂಕಣಿಯಾಗಿದ್ದಿರಬಹುದು.

http://en.wikipedia.org/wiki/Origin_of_Vijayanagara_Empire

Submitted by kpbolumbu Tue, 03/26/2013 - 17:59

In reply to by Shreekar

ನಾಯಕ ಬದಲಾಗಿ ಈಗ ನಾಯ್ಕ್ ಆಗಿದೆ. ಮಂಗಳೂರಿನಲ್ಲಿ ವಿಚಾರಿಸಿದರೆ ಹೆಚ್ಚಿನ ವಿವರ ತಿಳಿಯಬಹುದು. ಅಲ್ಲವಾದರೆ ಕೆಳಗಣ ಕೊಂಡಿಯನ್ನು ನೋಡಿ. ನಾಯ್ಕ್ ಮತ್ತು ನಾಯಗ ಎಂಬ ಉಪನಾಮಗಳು ರೂಢಿಯಲ್ಲಿರುವಂತೆ ಕಾಣುತ್ತದೆ.
http://www.buntsmathrsangha.net/bunts-surnames.html
[ಅಡ್ಡ ಹೆಸರು ಎಂದರೆ ಉಪನಾಮವಲ್ಲ. ನೀವು ಹೇಳಿದ್ದು ಉಪನಾಮದ ಬಗ್ಗೆ ಎಂದು ತಿಳಿಯಿತು. ಅಡ್ಡ ಹೆಸರು ಎಂದರೆ ವ್ಯಂಗ್ಯದಲ್ಲಿ ಕರೆಯುವ ಹೆಸರು ಎಂಬ ಅರ್ಥ.]

Submitted by Shreekar Mon, 04/08/2013 - 14:17

In reply to by kpbolumbu

ವಿಜಯನಗರದ ಕ್ರಷ್ಣದೇವರಾಯ ತುಳುವ ವಂಶಕ್ಕೆ ಸೇರಿದವನಾಗಿರಬಹುದಾದರೂ, ಕೊಂಡಿ ಹೇಳುತ್ತದೆ - ಅವನು ಆಂಧ್ರದಿಂದ ಬಂದಿರಬಹುದೆಂದು!

ಈ ತುಳುವ ಶಬ್ದ ಈಗಿನ ತುಳುನಾಡಿಗೆ ಸಂಬಂದಿಸಿರಲಿಕ್ಕಿಲ್ಲ.

Submitted by kpbolumbu Wed, 04/10/2013 - 16:45

In reply to by Shreekar

ಶ್ರೀಕರ್, ಆಂಧ್ರದಿಂದ ಬಂದಿದ್ದರೂ ತುಳುವನಾಗಿರುವ ಸಾಧ್ಯತೆಯಿದೆ. ಆಂಧ್ರ ಮತ್ತು ತಮಿಳ್ನಾಡಿನಲ್ಲಿ ನೆಲೆಸಿರುವ 'ತುಳುವ ಬಲ್ಲಾಳ' ಎಂಬ ಸಮುದಾಯವಿದೆ.
http://en.wikipedia.org/wiki/Thuluva_Vellalar
ಅವರು ಪೂರ್ವಕಾಲದಲ್ಲಿ ದಕ್ಷಿಣ ತುಳುನಾಡಿನಿಂದ ವಲಸೆ ಹೋದವರು. ತುಳುವ ನರಸ ನಾಯಕ ಬಲ್ಲಾಳ ಸಮುದಾಯಕ್ಕೆ ಸೇರಿರದಿದ್ದರೂ ಪೂರ್ವಕಾಲದಲ್ಲಿ ತುಳುನಾಡಿನಿಂದ ವಲಸೆ ಹೋದ ಒಂದು ಗುಂಪಿಗೆ ಸೇರಿದವನಾಗಿರಬಹುದು.

ಇನ್ನು ತೆಲುಗಿನಲ್ಲಿ 'ತುಲುವ' ಶಬ್ದಕ್ಕೆ 'ತುಂಟ' ಎಂಬ ಅರ್ಥ ಸಾಮಾನ್ಯವಾದುದು. ಅದಲ್ಲದೆ tuluva. [Tel.] n. A wretch, a villain, a scoundrel. ಎಂಬ ಅರ್ಥಗಳೂ ಇವೆ. ಇಂಥದೊಂದು ಹೆಸರಿನಿಂದ ಯಾರೂ ತಮ್ಮನ್ನು ತಾವು ಕರೆದುಕೊಳ್ಳುವ ಸಾಧ್ಯತೆಯಿಲ್ಲ.

Submitted by Shreekar Thu, 04/11/2013 - 12:26

In reply to by kpbolumbu

ಕ್ರಷ್ಣಪ್ರಕಾಶರೇ,

ನಿಮ್ಮ ಪಾಂಡಿತ್ಯಕ್ಕೆ, ಸಂಶೋಧನಾಸಕ್ತಿಗೆ ಸಲಾಮ್.

ವೆಲ್ಲಾಳ ತಮಿಳಿನ ಪದ ತುಳು ಬಲ್ಲಾಳ ಎಂದು ತಿಳಿದು ಆಶ್ಚರ್ಯವಾಯಿತು.

ಮಹಾರಾಷ್ಟ್ರ, ತುಳುನಾಡಿನ ಚಿತ್ಪಾವನ ಬ್ರಾಹ್ಮಣರು ಜರ್ಮನ್ ಮೂಲದವರಂತೆ.

ಹಾಗೆಯೇ, ಕೊಡವರ ಮೂಲ ಕೂಡ ಕುತೂಹಲಕಾರಿಯಂತೆ.

ತುಳುನಾಡ ಕೊಂಕಣಿಗರು ಹಲಸಿನಹಣ್ಣಿನ ಒಂದು ಜಾತಿಗೆ "ತುಳುವೊ ಪೊಣಸ್" ಎನ್ನುತ್ತಾರೆ. ಈ ತುಳುವ ಪದದ ಬಗ್ಗೆ ಏನಾದರೂ ಗೊತ್ತೇ?

Submitted by ಗಣೇಶ Thu, 04/11/2013 - 23:22

In reply to by Shreekar

ನಿಮ್ಮಿಬ್ಬರ ಪಾಂಡಿತ್ಯಕ್ಕೆ, ಸಂಶೋಧನಾಸಕ್ತಿಗೆ ಸಲಾಮ್. >>> ತುಳುನಾಡ ಕೊಂಕಣಿಗರು ಹಲಸಿನಹಣ್ಣಿನ ಒಂದು ಜಾತಿಗೆ "ತುಳುವೊ ಪೊಣಸ್" ಎನ್ನುತ್ತಾರೆ.---ಶ್ರೀಕರ್‌ಜಿ, ತುಳುವ ಶಬ್ದದ ಬಗ್ಗೆ ಜಾಸ್ತಿ ಗೊತ್ತಿಲ್ಲ. ಆದರೆ ಈ "ತುಳುವೊ ಪೊಣಸ್" ಪದ ಓದಿದಾಗ..... ಸಂಸ್ಕೃತದಲ್ಲಿ ಹಲಸಿನ ಹಣ್ಣಿಗೆ "ಪನಸ" ಅನ್ನುತ್ತಾರೆ. ತುಳುವೊ ಪೊಣಸು ಅಂದರೆ ತುಳುವೆ ಹಲಸಿನ ಹಣ್ಣು ಇರಬಹುದೇ ಅಂತ. ಹಲಸಿನ ಹಣ್ಣಲ್ಲಿ ಮುಖ್ಯವಾಗಿ ಎರಡು ವಿಧ- "ಬಲಿಕೆ" ಮತ್ತು ತುಳುವೆ(ಹಣ್ಣು ಬಿಡಿಸಲು ಕತ್ತಿಯ ಅಗತ್ಯವಿಲ್ಲ, ಜಗಿಯುವ ಕಷ್ಟ ಇಲ್ಲ-ಗುಳುಂ ಗುಳುಂ ಅಂತ ನುಂಗುವುದು :) ) ಹಲಸಲ್ಲಿ ಇನ್ನೂ ಅನೇಕ ವೆರೈಟಿ ಇದೆ. - http://www.udayavani.com/news/154777L15-%E0%B2%A7%E0%B2%B0-%E0%B2%AE%E0%B2%B8-%E0%B2%A5%E0%B2%B3%E0%B2%A6%E0%B2%B2-%E0%B2%B2--%E0%B2%B9-%E0%B2%B2-%E0%B2%B8-%E0%B2%A6-%E0%B2%B9%E0%B2%B2%E0%B2%B8--%E0%B2%B9%E0%B2%AC-%E0%B2%AC.html ಬೇರಲ್ಲೂ ಹಲಸು ಆಗುವುದು- http://www.fruitsinfo.com/Jackfruit.php ಈ ತುಳುವೆ ಹಲಸಿನಂತೆ ತುಳುವರೋ, ಅಥವಾ ತುಳುವರಂತೆ ತುಳುವೆ ಹಲಸೋ..ಗೊತ್ತಿಲ್ಲ. :)

Submitted by Shreekar Fri, 04/12/2013 - 17:47

In reply to by ಗಣೇಶ

ಹಲಸಿನ ಹಣ್ಣಿನ ವೆರೈಟಿಗಳ ಬಗ್ಗೆ ಕೊಟ್ಟ ಉದಯವಾಣಿಯ ಕೊಂಡಿ ಬಹಳ ಚೆನ್ನಾಗಿದೆ.
ಪಂಚ್ ಲೈನಂತೂ ಸೂಪರ್!
ಹಳೆಯ ಹೇಳಿಕೆಯೊಂದು ನೆನಪಾಯಿತು - ಉಂಡು ಮಾವು ಹಸಿದು ಹಲಸು

Submitted by kpbolumbu Sat, 04/13/2013 - 11:59

In reply to by Shreekar

ಆರ್ಯಾಕ್ರಮಣ ವಾದವನ್ನು ಒಪ್ಪುವವರು ಮತ್ತು ಪ್ರಚಾರ ಮಾಡುವವರು ಚಿತ್ಪಾವನರು ಮಾತ್ರವಲ್ಲ, ಬ್ರಾಹ್ಮಣರೆಲ್ಲರೂ ಯುರೋಪ್ ಮೂಲದವರೆಂದು ಹೇಳಬಹುದು. :) ಕೊಡವರ ಮೂಲದ ಬಗ್ಗೆ ಐನಂಡ ಪ್ರಭುಕುಮಾರರನ್ನು ವಿಚಾರಿಸಿದರೆ (http://sampada.net/user/iynanda-prabhukumar) ವಿವರವಾಗಿ ತಿಳಿಯಬಹುದು. ನೀವು ಹೇಳಿದಂತೆ ಕೊಡವರ ಮೂಲವೂ ಕುತೂಹಲಕಾರಿಯೇ.
http://www.languageinindia.com/oct2001/kodavarajyashree.html