ಪುಟ್ಟನ ಅಳಲು ..
ಮತ್ತೊಂದು 'ಬಾಲ ಮಂಗಳ'ದಲಿ ಪ್ರಕಟಿತವಾಗಿದ್ದ ಶಿಶುಗೀತೆ - 'ಪುಟ್ಟನ ಅಳಲು'. ಆಧುನಿಕ ಜೀವನ ಸ್ಪರ್ಶದ ದೆಸೆಯಿಂದಾಗಿ, ಈಗಲೂ ಪರಿಸ್ಥಿತಿಯಲ್ಲಿ ತೀರ ಬದಲಾವಣೆಯಾಗಿರಲಾರದೆಂಬ ಅನಿಸಿಕೆಯೊಡನೆ ಇದನ್ನೂ ಸಂಪದದಲ್ಲಿ ಪ್ರಕಟಿಸುತ್ತಿದ್ದೇನೆ - ನಾಗೇಶ ಮೈಸೂರು
ಪುಟ್ಟನ ಅಳಲು ..
------------------------
ಅಮ್ಮಾ...ಅಮ್ಮಾ...
ನನ್ನಮ್ಮಾ
ನನ್ನಯ ಅಳಲು ಕೇಳಮ್ಮ || ಅಮ್ಮಾ ||
ಹತ್ತೇ ತಿಂಗಳ
ಹಸುಗೂಸಮ್ಮ
' ಏ ಬಿ ಸಿ ಡಿ ' ಏಕಮ್ಮ?
ತೊದಲುವ ಬಾಯಲೇ
ಡ್ಯಾಡಿ,ಮಮ್ಮೀ
ಎಂದೆನಿಸುವ ಹಠ ಬೇಡಮ್ಮ || ಅಮ್ಮಾ ||
ಹಲ್ಲುಗಳೆರೆಡೇ
ಮೊಳೆತಿದೆಯಷ್ಟೇ,
ಬೇವಿನ ಕಹಿಯುಣಿಸೆಕಮ್ಮ?
ಹಾಲನು ಕುಡಿದು
ಡುಮ್ಮನಾಗುವೆ
ಬಾಟಲ್ ಹಾಲು ಬೇಡಮ್ಮ || ಅಮ್ಮಾ ||
ಬೆಳಗಿನ ನಿದ್ದೇಲಿ
ಮೈಮರೆತಾಗ
ಎಲ್ಲಿಗೆ ಹೊರಟೇ? ಹೇಳಮ್ಮ
ಬೆಚ್ಚಿದ ಒಡಲಿಗೆ
ಬೆಚ್ಚನೆ ಮಡಿಲಿಗೆ
ದಾದಿಯಿದ್ದರೆ ಸಾಕೆನಮ್ಮ? || ಅಮ್ಮಾ ||
ಬೆಳಗಿನಿಂದಲಿ
ಬೈಗಿನವರೆಗೂ
ನಿನ್ನಯ ಸುಳಿವೇ ಇಲ್ಲಮ್ಮ
ಸ್ಕೂಟರಿನಲ್ಲಿ ಅಪ್ಪನ ತಬ್ಬಿ
ಹೊರಟಿದ್ದಾದರೂ ಎಲ್ಲಮ್ಮ || ಅಮ್ಮಾ ||
ಹಸಿವೆಂದಾಗ
ಅಳುವೆಂದಾಗ
ಕೇಳಲು ಯಾರು ಇಲ್ಲಮ್ಮ
ಕನಸಿನಲೆಲ್ಲ
ಗುಮ್ಮನ ಕಾಟ
ಹೆದರಿ ಅಳುತಿರುವೆ ಬಾರಮ್ಮಾ || ಅಮ್ಮಾ ||
ಆಫೀಸಂತೆ
ಗೀಫೀಸಂತೆ
ಅಂತೆ ಕಂತೆಗಳು ಬೇಡಮ್ಮ
ಚೇಷ್ಟೆಯ ಮಾಡಲು
ದೂರು ಬಂದರೆ
ಹೊಡೆದು, ರಮಿಸುವುದು ಯಾರಮ್ಮ? || ಅಮ್ಮಾ ||
ಹೊಟ್ಟೆ ತುಂಬಿ
ಆಡುವ ಹೊತ್ತಲಿ
'ಅಪ್ಪ,ಅಮ್ಮ' ಕಲಿಸಮ್ಮ
ಮುದ್ದಿಸಿ ನನ್ನನು
'ಕಂದಾ' ಎಂದು
ತಟ್ಟಿ ನಿದಿರೆಯ ಬರಿಸಮ್ಮ || ಅಮ್ಮಾ ||
ನನಗೂ ಬೇಕು
ಅಪ್ಪಾ, ಅಮ್ಮಾ..
'ಬೇಬಿ ಸಿಟ್ಟಿಂಗ್' ಅಲ್ಲಮ್ಮ
ಸೆರಗನು ಹಿಡಿದು
ತೊಡರುತ ನಡೆಯಲು
ಮನೆಯಲಿ ನೀನಿರಬೇಕಮ್ಮ ! || ಅಮ್ಮಾ ||
'ಮಾಮಿಯ ಆಣೆ'
ನನ್ನಮ್ಮ..
ಬಿಟ್ಟು ಹೋಗುವುದು
ಬೇಡಮ್ಮ..
ಪ್ರೀತಿಯಾಟದಲಿ ನಲಿಸಮ್ಮ
ನೀತಿ ಪಾಠಗಳ ಕಲಿಸಮ್ಮ! || ಅಮ್ಮಾ ||
===================================
ನಾಗೇಶ ಮೈಸೂರು (ದಿನಾಂಕ : ೩೦.ಡಿಸೆಂಬರ.೧೯೯೧)
(೧೫.ಆಗಸ್ಟ್.೧೯೯೨ ರ 'ಬಾಲ ಮಂಗಳ' ದಲ್ಲಿ ಪ್ರಕಟಿತ
===================================
Comments
ಉ: ಪುಟ್ಟನ ಅಳಲು ..
In reply to ಉ: ಪುಟ್ಟನ ಅಳಲು .. by Tejaswi_ac
ಉ: ಪುಟ್ಟನ ಅಳಲು ..
In reply to ಉ: ಪುಟ್ಟನ ಅಳಲು .. by venkatb83
ಉ: ಪುಟ್ಟನ ಅಳಲು ..
In reply to ಉ: ಪುಟ್ಟನ ಅಳಲು .. by Tejaswi_ac
ಉ: ಪುಟ್ಟನ ಅಳಲು ..
ಉ: ಪುಟ್ಟನ ಅಳಲು ..
In reply to ಉ: ಪುಟ್ಟನ ಅಳಲು .. by gopinatha
ಉ: ಪುಟ್ಟನ ಅಳಲು ..
ಉ: ಪುಟ್ಟನ ಅಳಲು ..
In reply to ಉ: ಪುಟ್ಟನ ಅಳಲು .. by kavinagaraj
ಉ: ಪುಟ್ಟನ ಅಳಲು ..