Corporate ಕವಿತೆ

Corporate ಕವಿತೆ

ಕವನ

ನೀ ಮುಟ್ಟಿಸಿದ
ಏಕತಾನತೆಯ ಬಿಸಿಗೆ
ಬಳಲಿ ಬೆ೦ಡಾದ
ಬಡಜೀವಿಗಳು ನಾವು....
ನಮ್ಮ ಕತ್ತಲೆಯಲ್ಲಿ ತಳ್ಳಿ,
ನೀನೆಲ್ಲಿ ಅವಿತೆ?
ಓ ನನ್ನ Corporate ಕವಿತೆ?

ಅ೦ದದ ಅ೦ಗಿಯ ಹಿ೦ದಿನ
ತೀರದ ಕಾಮನೆಗಳು...........
ನೀರಸ ಆಸೆಗಳು,
ನಮ್ಮ ಭಾವಲೋಕದ
ಇ೦ಗಿತಗಳನ್ನೆಲ್ಲ ಕೊ೦ದು
ನಿನ್ನ ಇಷ್ಟಾರ್ಥಗಳನ್ನೆಲ್ಲ
Weekend guu ವಿಸ್ತರಿಸಿ
ನೀ ಹಾಯಾಗಿ ಕುಳಿತೆ
ಕ್ರೌರ್ಯದ ಹಣತೆ.......
ನನ್ನೀ Corporate ಕವಿತೆ

ನೀ ಸ್ರಶ್ಟಿಸಿದ
ಆವರಣದಲ್ಲೇ ವಿಹರಿಸಿ
ಭಾವಿಯೊಳಗಿನ ಕಪ್ಪೆಯಾದ
ವಿಶ್ವಮಾನವರು ನಾವು
ನಮ್ಮ ಈ ಕ್ಲೀಷೆಯೊಳು
ಸಿಕ್ಕಿಸಿದ "HRಮಾತೆ"
ನೀನೇ ಕಣೇ ನನ್ನೀ ಕವಿತೆ...!

-ಸಾತ್ವಿಕ್ ಹ೦ದೆ     

 

Comments

Submitted by nageshamysore Sat, 07/27/2013 - 10:10

HRಮಾತೆಗೂ ಭಾವನಾತ್ಮಕತೆಗೂ ಎಲ್ಲಿಯ ಸಂಬಂಧ ಹಂದೆಯವರೆ. ಅಲ್ಲೆಲ್ಲ 'ಪೂಜ್ಯ ಮಾತೆ' ಬರಿ 'ಒಣ ಮಾತೆ' + ಎಲ್ಲಾ ಹುಸಿ'ಹಣ'ತೆ :-)

Submitted by ಸಾತ್ವಿಕ್ ಹ೦ದೆ ಪಿ ಎಸ್ Mon, 07/29/2013 - 22:50

In reply to by nageshamysore

comment ಮಾಡಿ credit ಕೊಡೋರು ಇತ್ತೀಚೆಗೆ ಕಡಿಮೆ ... ನಾಗೇಶ್ ಅವರಿಗೆ ಧನ್ಯವಾದಗಳು