ಪುಟ್ಟ ಮತ್ತು ನಾಯಿ ಮರಿ ..
ಚಿತ್ರ
ಪುಟ್ಟ ಮತ್ತು ನಾಯಿ ಮರಿ ..................................... ನಮ್ಮ ಬೀದಿಯಲ್ಲಿ ನಾಯಿ -ಮರಿಯನೊಂದ ಹಾಕಿತು ಮರಿಯ ದೇಹ ನೆಕ್ಕಿ ನೆಕ್ಕಿ ಶುಭ್ರಗೊಳಿಸಿತು ಹಸಿವಿನಿಂದ ಮರಿಯು ಕುಯ್ ಕುಯ್ ಎಂದಿತು ಶ್ವಾನದ್ವಯಕೆ ಹೊಟ್ಟೆ ಈಗ ಚುರ್ ಎಂದಿತು ದೂರದಲ್ಲಿ ಯಾರೋ ಎಸೆದ ರೊಟ್ಟಿ ಬಂದು ಬಿದ್ದಿತು ರೊಟ್ಟಿ ತಿನ್ನಲೆಂದು ನಾಯಿ ಜಿಗಿಯಿತು ಆಗ ಅಡ್ಡ ಬಂದ ಬಸ್ಸು ಅದರ ಮೇಲೆ ನುಗ್ಗಿತು ಆಗ ತಾನೇ ಜನ್ಮವಿತ್ತ ನಾಯಿ ಮರಣ ಹೊಂದಿತು ಅದೇ ತಾನೇ ಭುವಿಗಿಳಿದ ಮರಿ ಅನಾಥವಾಯಿತು ನಮ್ಮ ಪುಟ್ಟ ಆ ದೃಶ್ಯ ನೋಡಿದ ಮರಿಯ ತಂದು -ಹಾಲು ಹಾಕಿ ಅದನ ಸಾಕಿ ಸಲಹಿದ ರಾಮ ಎಂದು ಹೆಸರನಿಕ್ಕಿ ಅದರ ಜೊತೆ ಆಡಿದ ಬೀದಿ ನಾಯಿ ಎಂದು ದೂರಲೇಕೆ ? ಹಾರಿ ಮಾರು ದೂರ ಓಡಲೇಕೆ? ಸುಮ್ ಸುಮ್ನೇ ಅದ್ಯಾರನ್ನೂ ಕಚ್ಚದೆ ಬೀದಿ ನಾಯೇ ಆದರೂ ಅದಕೆ ಬದುಕೋ ಹಕ್ಕಿದೆ ..................................................... ಚಿತ್ರಮೂಲ: http://bit.ly/16hD0Oz
Rating
Comments
ಉ: ಪುಟ್ಟ ಮತ್ತು ನಾಯಿ ಮರಿ ..
ನಾನು ಬರೆದೆ ಪದ್ಯ
ಆಯ್ತು ಅದು ಗದ್ಯ...!
ಬಹು ದಿನಗಳ ನಂತರ ಬ
;(0000
ರಹ ಬರೆದು ಸೇರಿಸುವಾಗ ಸಂಪದದಲ್ಲಿ ಏನೋ ಬದಲಾವಣೆ ಆಗಿದೆ ಅನಿಸುತಿದೆ...
ನಿರ್ವಾಹಕರೆ - ನನ್ನ ಗದ್ಯವನ್ನು ಪದ್ಯ ಮಾಡುವಿರ?
ಶುಭವಾಗಲಿ
\।
ಉ: ಪುಟ್ಟ ಮತ್ತು ನಾಯಿ ಮರಿ ..
ಸಪ್ತಗಿರಿಗಳೆ ಪದ್ಯ ಬರೆದರೊ ಗದ್ಯ ಬರೆದರೊ ಕಲಸಿಕೊಂಡಂತಿದ್ದರಿಂದ ತುಸು ಗೊಂದಲವಾಯ್ತು. ನಾನು ಓದಿಕೊಂಡ ಬಗೆ ಹೀಗೆ -(,) ಕಾಮ ಹಾಕಿದ ಕಡೆ ಸಾಲು ನೆಗೆಯುತ್ತ :-) (ಬಹುಶಃ ಎಡಿಟರಿನಲ್ಲಿ ಹಾಕಿ ಕಾಪಿ ಮಾಡಿದರೆ ಸರಿ ಬರುವುದೆಂದು ಕಾಣುತ್ತದೆ)
"ಪುಟ್ಟ ಮತ್ತು ನಾಯಿ ಮರಿ"
ನಮ್ಮ ಬೀದಿಯಲ್ಲಿ ನಾಯಿ -ಮರಿಯನೊಂದ ಹಾಕಿತು,
ಮರಿಯ ದೇಹ ನೆಕ್ಕಿ ನೆಕ್ಕಿ ಶುಭ್ರಗೊಳಿಸಿತು,
ಹಸಿವಿನಿಂದ ಮರಿಯು ಕುಯ್ ಕುಯ್ ಎಂದಿತು,
ಶ್ವಾನದ್ವಯಕೆ ಹೊಟ್ಟೆ ಈಗ ಚುರ್ ಎಂದಿತು,
ದೂರದಲ್ಲಿ ಯಾರೋ ಎಸೆದ ರೊಟ್ಟಿ ಬಂದು ಬಿದ್ದಿತು,
ರೊಟ್ಟಿ ತಿನ್ನಲೆಂದು ನಾಯಿ ಜಿಗಿಯಿತು,
ಆಗ ಅಡ್ಡ ಬಂದ ಬಸ್ಸು ಅದರ ಮೇಲೆ ನುಗ್ಗಿತು,
ಆಗ ತಾನೇ ಜನ್ಮವಿತ್ತ ನಾಯಿ ಮರಣ ಹೊಂದಿತು,
ಅದೇ ತಾನೇ ಭುವಿಗಿಳಿದ ಮರಿ ಅನಾಥವಾಯಿತು,
ನಮ್ಮ ಪುಟ್ಟ ಆ ದೃಶ್ಯ ನೋಡಿದ,
ಮರಿಯ ತಂದು -ಹಾಲು ಹಾಕಿ ಅದನ ಸಾಕಿ ಸಲಹಿದ,
ರಾಮ ಎಂದು ಹೆಸರನಿಕ್ಕಿ ಅದರ ಜೊತೆ ಆಡಿದ,
ಬೀದಿ ನಾಯಿ ಎಂದು ದೂರಲೇಕೆ ?
ಹಾರಿ ಮಾರು ದೂರ ಓಡಲೇಕೆ?
ಸುಮ್ ಸುಮ್ನೇ ಅದ್ಯಾರನ್ನೂ ಕಚ್ಚದೆ,
ಬೀದಿ ನಾಯೇ ಆದರೂ ಅದಕೆ ಬದುಕೋ ಹಕ್ಕಿದೆ .
ಉ: ಪುಟ್ಟ ಮತ್ತು ನಾಯಿ ಮರಿ ..
ವಾಹ್ ಪದ್ಯ ಚೆನ್ನಾಗಿದೆ ಆದರು ಒಂದು ಡೌಟು ! ನಾಗೇಶರು ಪರಿಹರಿಸಬಹುದು
ಮಕ್ಕಳ ಪದ್ಯ ಎಂದು ಬರೆಯುವರೆಲ್ಲ (ನನ್ನನ್ನು ಸೇರಿ) ನಾಯಿ ಮರಿ ಪದ್ಯವನ್ನೆ ಬರೆಯುವದೇತಕ್ಕೆ !!!!
In reply to ಉ: ಪುಟ್ಟ ಮತ್ತು ನಾಯಿ ಮರಿ .. by partha1059
ಉ: ಪುಟ್ಟ ಮತ್ತು ನಾಯಿ ಮರಿ ..
ಪಾರ್ಥ ಸಾರ್, ಮೊದಲು ಸ್ವಲ್ಪ ತಮಾಷೆಗೊಂದು 'ಚಿಕ್ಕ ನಾಯಿ ಪದ್ಯ'
ನಾಯಿ ಒಂದೆ ಈಗ ಮಿಕ್ಕಿರೋದು ಸದ್ಯ
ಉಳಿದಿದ್ದೆಲ್ಲ ನಾನೆ ಬರ್ದಿದ್ದೀನಲ್ಲಾ ಪದ್ಯ
ಕೊರಿಯ ಹಂಗೆ ನಾಯಿನಲ್ಲಿ ತಿನ್ನೋರಿಲ್ಲ
ಬ್ಯಾಡಾಂದ್ರು ಬೀದಿಲೆ ಕಣ್ಣಿಗೆ ಬೀಳ್ತಾವಲ್ಲ!
ಬಹುಶಃ ಮನೆಲಿ ಸಾಕಿರಲಿ ಬಿಡಲಿ ಅನಧಿಕೃತವಾಗಿ 'ಪೆಟ್' ಅನಿಸಿಕೊಳ್ಳೊ ಯೋಗ ಈ 'ನಂಬಿಗಸ್ತ' ನಾಯಿಗಳಿಗೆ ಮಾತ್ರವಿದೆ ಅಂತ ಕಾಣುತ್ತೆ. ಹಾಗೆಯೆ ಮನುಷ್ಯರಿಗಿಂತ ಚೆನ್ನಾಗಿ ಕೃತಜ್ಞತೆಯನ್ನೊ ಪದಾನ ಅರ್ಥ ಮಾಡ್ಕೊಂಡು 'ರೆಸ್ಪಾಂಡ್' ಮಾಡೋದ್ರಲ್ಲಿ ನಾಯಿನೆ ಬೆಟರ್ ಅನ್ನೊ ಕಾರಣಕ್ಕೂ ಇರಬಹುದು!
ಅಥವಾ ನಾಯಿ ಬಗ್ಗೆ ಬರೆಯೋದು ಒಂದು ತರ 'ನಾಯಿ ಪಾಡಿರಬಹುದೆ?' (ಬರೆಯುವಾಗ ಅದೆ ರೀತಿ ಒದ್ದಾಡಿಸುತ್ತೆ ಅನ್ನೊ ಅರ್ಥದಲ್ಲಿ)?
- ನಾಗೇಶ ಮೈಸೂರು
In reply to ಉ: ಪುಟ್ಟ ಮತ್ತು ನಾಯಿ ಮರಿ .. by nageshamysore
ಉ: ಪುಟ್ಟ ಮತ್ತು ನಾಯಿ ಮರಿ ..
ಬಹುಶಃ ಮನೆಲಿ ಸಾಕಿರಲಿ ಬಿಡಲಿ ಅನಧಿಕೃತವಾಗಿ 'ಪೆಟ್' ಅನಿಸಿಕೊಳ್ಳೊ ಯೋಗ ಈ 'ನಂಬಿಗಸ್ತ' ನಾಯಿಗಳಿಗೆ ಮಾತ್ರವಿದೆ ಅಂತ ಕಾಣುತ್ತೆ.
+ 1
ಇದನಂತು ಒಪ್ಪಲೆ ಬೇಕು !
In reply to ಉ: ಪುಟ್ಟ ಮತ್ತು ನಾಯಿ ಮರಿ .. by nageshamysore
ಉ: ಪುಟ್ಟ ಮತ್ತು ನಾಯಿ ಮರಿ ..
ಮೊದಲಿಗೆ ಗದ್ಯವಾಗಿದ್ದ ಪದ್ಯವನ್ನು ಮರಳಿ ಪದ್ಯ ಮಾಡಿದ -ಆತ್ಮೀಯವಾಗಿ ಪ್ರತಿಕ್ರಿಯಿಸಿದ ಶ್ರೀಯುತ ನಾಗೇಶ್ ಮೈಸೂರು ಅವರಿಗೆ ಅನಂತ ನನ್ನಿ ..
@ ನಾಗೇಶ್ ಮೈಸೂರು ಅವರೇ -ಈ ಪದ್ಯ ಹುಟ್ಟಿದ್ದು ಹೇಗೆ ಗೊತ್ತ?
ಈ ಪದ್ಯ ಬರೆವ ಕೆಲ ಕ್ಷಣಗಳ ಮುಂಚೆ ಆಫೀಸಲ್ಲಿ ಏನೂ ಕೆಲಸ ಇಲ್ಲದೆ ಸುಮ್ಮನೆ ಕೂತು ಕಿಟಕಿಯಲ್ಲಿ ಹೊರ ಜಗತ್ತು ಧಿಟ್ಟಿಸುತ್ತಿದ್ದೆ - ಥಟ್ಟನೆ ನನಗೆ ಯಾಕೋ ನಮ್ ಪ್ರೀತಿಯ ಶ್ವಾನ (ನಮ್ಮ ಹಳ್ಳಿಯಲ್ಲಿ -ನಮ್ಮ ಓಣಿಯಲ್ಲಿ ನಮ್ಮನ್ನು ಬಿಟ್ಟು ಬೇರಾರನ್ನು ಒಳಗೆ ಬರಲು ಬಿಡದೆ ಗುರಾಯಿಸಿ ರಕ್ಷಣೆ ಕೊಡುತ್ತಿದ್ದ)ರಾಮ ಹೆಸರಿನ ಶ್ವಾನದ ಬಗ್ಗೆ ಬರೆಯುವ ಎಂದುಕೊಂಡು ಆ ಬಗ್ಗೆ ಬರೆದರೆ ದೀರ್ಘ ಗದ್ಯ ಆಗುತ್ತೆ ಅಂತ ಪುಟ್ಟದಾಗಿ ಒಂದು ಪ್ರಾಸ ಬರಹ ಬರೆದೆ. ಅದನ್ನು ಗೂಗಲ್ ಟ್ರಾನ್ಸಿಲ್ಟ್ ರೇಟರ್ -ಕನ್ನಡದಲ್ಲಿ ಬರೆದು ನೋಟ್ಪ್ಯಾಡ್ಗೆ ಪೇಸ್ಟ್ ಮಾಡಿ ಅಲ್ಲಿಂದ ಇಲ್ಲಿಗೆ ಹಾಕಿದೆ -ಆಗ ಅದು ಗದ್ಯ ಆಯ್ತು ... !
ಅದನ್ನು ನೀವು ಸರಿ ಮಾಡಿದಿರಿ ...
>>>ಸಂಪದದಲ್ಲಿ ಈ ಮುಂಚೆ 'ಬದಲಿಸಿ' ಅಪ್ಚನ್ ಇತ್ತು -ಈಗ ಅದಿಲ್ಲ -ಈ ತರಹ ಆದರೆ ಆ ಬರಹ ಸರಿ ಮಾಡೋದು ಹೇಗೆ ?
ನಿರ್ವಾಹಕರಿಗೆ ಆ ಬಗ್ಗೆ ಮೆಸೇಜ್ ಮಾಡುವೆ ..
ನಮ್ಮ ಆ ಶ್ವಾನದ ಬಗ್ಗೆ ಕೆಲಸ ಸಾರಿ ಇಲ್ಲಿಯೇ ಪ್ರತಿಕ್ರಿಯಿಸಿರುವೆ- ಹಾಗೆಯೇ ಅದೊಮ್ಮೆ ಹಿರಿಯರಾದ ಶ್ರೀಯುತ ಕವಿ ನಾಗರಾಜ ಅವರ ಶ್ವಾನದ ಬಗೆಗಿನ ಬರಹದಲ್ಲಿ http://bit.ly/GAFyMr ಈ ಬಗ್ಗೆ ಹೇಳಿರುವೆ.
>>>ಕೆಲ ತಿಂಗಳುಗಳ ಹಿಂದೆ ಶುರು ಆದ ಹೊಸ ಕನ್ನಡ ಜಾಲ ತಾಣ ಪಂಜು ಗೆ(http://www.panjumaga...) ಈ ಮುಂಚೆ ಒಂದು ಬರಹ ಕಳಿಸಿದ್ದೆ ಆದರೆ ಅದು ಚಿತ್ರ ವಿಚಿತ್ರ ಅಕ್ಷರಗಳಲಿ ಹೋಗಿ ಪ್ರಕಟ ಆಗಲಿಲ್ಲ - ಮತ್ತೊಮ್ಮೆ ಬಹಳ ದಿನಗಳ ನಂತರ ಈ ಪದ್ಯವನ್ನು ಪಂಜು ಸಂಪಾದಕ ಮಿತ್ರ ನಟರಾಜು ಅವರಿಗೆ ಫೆಸ್ಬುಕ್ನಲ್ಲಿ ಮೆಸೇಜ್ ಮಾಡಿದೆ -ಅದನ್ನು ಅವರು ಕೊಂಚ ಟ್ರಿಮ್ ಮಾಡಿ ಪ್ರಕಟಿಸಿಯೇ ಬಿಟ್ಟರು ..!!
ಅವರಿಗೂ ನನ್ನ ನನ್ನಿ ...
ಇಲ್ಲಿದೆ ನೋಡಿ ಲಿಂಕ್ :
http://www.panjumaga...
>>ಗುರುಗಳೇ -ನಾಯಿ ನಿಯತ್ತಿನ -ನಂಬಿಗಸ್ತ ಪ್ರಾಣಿ -ಮಕ್ಕಳಿಗೂ ಹಿರಿಯರಿಗೂ ಪುಟ್ಟ ನಾಯಿ ಮರಿ ಮುದ್ದು , ಈಗೀಗ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿ ಈ ಬರಹ ಬರೆದು ಸೇರಿಸಿದ ೨ ದಿನಗಳಲ್ಲಿ ಯಾವುದೋ ನಾಯಿ ಕಚ್ಚಿ ಒಬ್ಬ ಹುಡುಗ ಮೃತ ಪಟ್ಟ ಸುದ್ಧಿ ಇಂದಿನ ದಿನ ಪತ್ರಿಕೆಯಲ್ಲಿ http://www.vijaykarn... ಓದಿ ವ್ಯಥೆ ಆಯ್ತು ...:(೯
ನಾ ದಿನ ನಿತ್ಯ ರಾತ್ರಿ ಮನೆಗೆ ಹೋಗುವಾಗ ಬೀದಿಗುಂಟ ಹತ್ತಿಪ್ಪತ್ತು ನಾಯಿಗಳು ಇರುವವು - ಗುರಾಯಿಸುವವು -ಗುರ್ರೆನ್ನುವವು -ಆದರೆ ಅಪ್ಪಿ ತಪ್ಪಿ ಕಚ್ಚಿಲ್ಲ -ಈಗಲ್ಲೂ ಜೀವ ಕೈನಲ್ಲಿ ಹಿಡಿದು ನಾ ಮನೆ ಸೇರುವೆ ...!!
ಆದರೂ ನಾಯಿಗಳ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿ ಇದೆ .. ಇರಬೇಕು ಅಲ್ಲವೇ?
ಬಹಳ ದಿನಗಳ ನಂತರ ಒಂದು ಬರಹ ಬರೆದ ತೃಪ್ತಿ ...!
ಮುಂದಿನ ಬರಹ ಮತ್ಯಾವಾಗ ಬರುತ್ತ್ತೋ ....!!
ಪ್ರತಿಕ್ರಿಯಿಸಿದ ಸರ್ವರಿಗೂ ನನ್ನಿ ...
\।
ಉ: ಪುಟ್ಟ ಮತ್ತು ನಾಯಿ ಮರಿ ..
ಸುಂದರ!!!
ಉ: ಪುಟ್ಟ ಮತ್ತು ನಾಯಿ ಮರಿ ..
ಸಪ್ತಗಿರಿವಾಸಿಯವರೆ, ಹಿಂದೊಮ್ಮೆ ಕತೆಯಲ್ಲಿ ಕೋಳಿಯನ್ನು ಬಸ್ಸೋ, ಲಾರಿಯೋ ಅಡಿಗೆ ಸಿಕ್ಕಿಸಿ ಸಾಯಿಸಿದಿರಿ. ಈಗ ನಾಯಿಯನ್ನು ಬಸ್ಸಿನ ಅಡಿಗೆ ಹಾಕಿ ಸಾಯಿಸಿದಿರಿ. ನಮ್ಮಂತಹ ಮಕ್ಕಳ ಮನಸ್ಸಿಗೆ ತುಂಬಾ ಬೇಸರವಾಗುವುದು. :(
In reply to ಉ: ಪುಟ್ಟ ಮತ್ತು ನಾಯಿ ಮರಿ .. by ಗಣೇಶ
ಉ: ಪುಟ್ಟ ಮತ್ತು ನಾಯಿ ಮರಿ ..
ಗಣೇಶಣ್ಣ ಇದು ಧುತ್ತನೆ ಹೊಳೆದ ಬರಹ ... ದುರ್ದೈವಶಾತ ಶ್ವಾನದ ಹತ್ಯೆ ಮಾಡಿದೆ ..!
ಲಾಲ್ಬಾಗ್ ಫ್ಲವರ್ ಷೋ ನಲ್ಲಿ ....... .... ವ ..!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ
\।