ನ್ಯಾನೋ ಕತೆಗಳು...
'ಜಗತ್ತಿನ ಏಕೈಕ ಶಾಂತಿ ಧರ್ಮವೇಂದರೇ ನಮ್ಮದೇ,ನಮ್ಮಲ್ಲಿರುವಷ್ಟು ಸಹನೆ,ಸಹಬಾಳ್ವೆ ಬೇರಾವ ಧರ್ಮದಲ್ಲಿಯೂ ಇಲ್ಲ.ನಮ್ಮ ಶಾಲೆಯ ವಿದ್ಯಾರ್ಥಿಗಳಾದ ನಿಮ್ಮಲ್ಲೂ ಈ ಗುಣಗಳು ಬರಲೆಂದು ಹಾರೈಸುತ್ತೇನೆ'ಎಂದು ಹೇಳಿ ಮಾತು ಮುಗಿಸಿದ ಮುಖ್ಯೋಪಾದ್ಯಾಯರಿಗೆ ಗುಲಾಬಿ ನೀಡಿ ಅಭಿನಂದಿಸಿದಳು ಆ ಪುಟ್ಟ ಹುಡುಗಿ.ನೆರೆದಿದ್ದ ಮಕ್ಕಳು ಜೋರಾಗಿ ಚಪ್ಪಾಳೆ ತಟ್ಟಿದರು.ಪಕ್ಕದಲ್ಲಿ ನಿಂತಿದ್ದ ಸಹ ಶಿಕ್ಷಕರತ್ತ ತಿರುಗಿದ ಮುಖ್ಯೋಪಾಧ್ಯಾಯರು,'ಯಾವ ಕ್ಲಾಸ್ ರೀ,ಆ ಗುಲಾಬಿ ಕೊಟ್ಟ ಹುಡುಗಿ, ಕೈ ತುಂಬಾ ಬಳೆ,ತಲೆ ತುಂಬಾ ಹೂವು ಮುಡಿದಿದ್ದಾಳೆ..!! ನಮ್ಮ ಶಾಲೆಯಲ್ಲಿ ಇವೆಲ್ಲಾ ಬ್ಯಾನ್ ಮಾಡಿದ್ದೇವೆಂದು ಗೊತ್ತಿಲ್ವೇನ್ರೀ ..ಆ ಕ್ಲಾಸ್ ಟೀಚರ್ ನ ಕಳಿಸ್ರೀ ಹೆಡ್ ಮಾಸ್ಟರ್ ರೂಮಿಗೆ...'ಎಂದು ಸಿಟ್ಟಿನಿಂದ ಭುಸುಗುಡುತ್ತ ತಮ್ಮ ಕೊಠಡಿಯತ್ತ ನಡೆದರು...
**************************************************************************************************************************************
’ಥೂ ಏನ್ ಭ್ರಷ್ಟಾಚಾರ ಕಣ್ರೀ ನಮ್ಮ ದೇಶದಲ್ಲಿ ,ಯಾವಾಗ ಸುಧಾರಿಸುತ್ತೋ ಈ ದರಿದ್ರ ದೇಶ...’ಎ೦ದು ಬಯುತ್ತ ಸಿಟಿ ಬಸ್ಸನ್ನೇರಿದ ಆ ಪ್ರಯಾಣಿಕ.’ಹೌದು ಸರ್,ಈಗ ನೋಡಿ,..ದಿನಾ ಬಸ್ಸಲ್ಲಿ ಇಷ್ಟು ಜನ ಓಡಾಡ್ತಾರೇ...ಆದ್ರೂ ನಮ್ಮ ಸ೦ಸ್ಥೆ ಲಾಸ೦ತೇ ...ಇದು ಭ್ರಷ್ಟಾಚಾರವಲ್ದೇ ಇನ್ನೇನು..’? ಎ೦ದು ಕೇಳಿದ ನಿರ್ವಾಹಕ ’ಎಲ್ಲಿಗೆ ಸರ್..?’ ಎ೦ದ . ಪರ್ಸಿನಿ೦ದ ಕೆಲವು ನಾಣ್ಯಗಳನ್ನು ತೆಗೆದು ಅವನ ಕೈಗಿಟ್ಟ ಪ್ರಯಾಣಿಕ ’ನೆಕ್ಸ್ಟ ಸ್ಟಾಪ್’ ಎ೦ದ.ಒ೦ದು ರೂಪಾಯಿಯನ್ನು ಅವನಿಗೆ ಮರಳಿಸಿ, ಉಳಿದ ಚಿಲ್ಲರೆಯನ್ನು ತನ್ನ ಜೇಬಿಗಿಳಿಸಿದ ನಿರ್ವಾಹಕ ಟಿಕೇಟ್ಟನ್ನು ಕೊಡಲೇ ಇಲ್ಲ.ಪ್ರಯಾಣಿಕನೂ ಕೇಳಲಿಲ್ಲ.ಬಸ್ಸು ಮು೦ದೆ ಸಾಗಿತು.ಭ್ರಷ್ಟಾಚಾರದ ಬಗ್ಗೆ ಮಾತು ಮು೦ದುವರೆಯಿತು.
***********************************************************************************************************************************
ಮೆಜೆಸ್ಟಿಕ್ಕಿನ ಕತ್ತಲೊಳಗೆ ಗಡಿಬಿಡಿಯಿಂದ ಓಡಾಡುತ್ತಿದ್ದ ಜನಸ್ತೋಮದ ನಡುವೆ ಇಷ್ಟಗಲ ಬೆನ್ನು ಕಾಣುವಂತೆ ಉಡುಪು ಧರಿಸಿ ಸಾಗುತ್ತಿದ್ದ ಮಾಡರ್ನ್ ಮಹಿಳೆಯ ಹಿಂದೆಯೇ ತನ್ನ ಪಾಡಿಗೆ ತಾನೆಂಬಂತೇ ಅವನು ಹೋಗುತ್ತಿದ್ದ.ತಿರುಗಿ ನಿಂತವಳೇ 'ಹಿಂದೆಹಿಂದೆ ಬರೋದಲ್ದೇ ,ಬೆನ್ನ ಮೇಲೆ ಕೈ ಬೇರೆ ಹಾಕ್ತಯಾ,ರಾಸ್ಕಲ್'ಎಂದು ಛಟೀರನೇ ಅವನ ಕೆನ್ನೆಗೊಂದು ಬಾರಿಸಿ ಅವಸರವಸರವಾಗಿ ಹೋರಟೇ ಬಿಟ್ಟಳು ಮಾಡರ್ನ್ ಲೇಡಿ.ತಮ್ಮ ಅವಸರ ಮರೆತ ಜನರೆಲ್ಲರೂ ಒಂದು ಕ್ಷಣ ಅವನತ್ತ ನೋಡಿದರು.ಅವನು ನಗುತ್ತ ನಿಂತಿದ್ದ.ಅವನಿಗೆ ಕೈಗಳೇ ಇರಲಿಲ್ಲ...
Comments
ಉ: ನ್ಯಾನೋ ಕತೆಗಳು...
In reply to ಉ: ನ್ಯಾನೋ ಕತೆಗಳು... by venkatb83
ಉ: ನ್ಯಾನೋ ಕತೆಗಳು...
ಉ: ನ್ಯಾನೋ ಕತೆಗಳು...