ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ಸಾವಿಲ್ಲದ ಮನೆಯ ಸಾಸುವೆ ತಾ
ಎನ್ನುತ್ತದೆ ವೇದಾಂತ ಸಾವು ಅನಿವಾರ್ಯ
ಪ್ರತಿ ಯುಗಾದಿಗು ಹೊಸ ಚಿಗುರು ತೋರಿ
ತಾ ಚಿರಕನ್ಯೆ ಎನ್ನುತ್ತದೆ ಪ್ರಕೃತಿ ಸಾವು ಚಿರ ದೂರ
ನೆಲದಲ್ಲಿ ನಡೆದು ನೀರಲ್ಲಿ ಈಜಿ
ನಭದಲ್ಲಿ ಹಾರಾಡಿ ಮನುಜ ನುಡಿಯುವ ನಾ ಅಸಮಾನ್ಯ
ಜೀವಿತ ಕಾಲವೆಲ್ಲ ಚಲಿಸಿ ಸವೆಸಿದರು
ಸವೆಯದ ದೂರ ದೂರ ದಿಗಂತದಲ್ಲಿ ತೋರಿ
ಪ್ರಕೃತಿ ನುಡಿಯುವುದು ನೀ ಸಾಮಾನ್ಯ
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ
ಕಾಲ ದೂರಗಳ ಅಳತೆಗಳೆಲ್ಲ
ಮನುಜನ ಗ್ರಾಹ್ಯಕ್ಕೆ ಸಿಗದ ಮಾಪನ
ಅದರ ನಿಯಮಗಳೆಲ್ಲ
ಮನುಜನಿಗೆ ಓದಲಾರದ ಶಾಸನ
Rating
Comments
ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
"
ನೆಲದಲ್ಲಿ ನಡೆದು ನೀರಲ್ಲಿ ಈಜಿ
ನಭದಲ್ಲಿ ಹಾರಾಡಿ ಮನುಜ ನುಡಿಯುವ ನಾ ಅಸಮಾನ್ಯ
ಜೀವಿತ ಕಾಲವೆಲ್ಲ ಚಲಿಸಿ ಸವೆಸಿದರು
ಸವೆಯದ ದೂರ ದೂರ ದಿಗಂತದಲ್ಲಿ ತೋರಿ
ಪ್ರಕೃತಿ ನುಡಿಯುವುದು ನೀ ಸಾಮಾನ್ಯ"
ಸೂಪರ್ ಸಾಲುಗಳು
"ಮನುಜನಿಗೆ ಓದಲಾರದ ಶಾಸನ"
ಮನುಜನಿಗೆ ಓದಲಾರದ(ಓದಲಾಗದ ) ಶಾಸನ- ಆಗಬೇಕಿತ್ತೇ? ಅನಿಸುತಿದೆ ..!!
ನಿಗೂಡ ... ನಿಗೂಢ ... !
ಶುಭವಾಗಲಿ
\|
ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ಪಾರ್ಥ ಸರ್. ನಿಮ್ಮ ಕವನ ನನಗೆ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಮಾತುಗಳನ್ನು ನೆನಪಿಗೆ ತಂದಿತು.
"ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಾಡೋದನ್ನು ಕಲಿತ, ನೆಲದ ಮೇಲೆ ಜಿಂಕೆಯಂತೆ ಓಡೋದನ್ನು ಕಲಿತ, ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ ಆದರೆ ಮಾನವ ಮಾನವನಾಗಿ ಬಾಳುವುದನ್ನು ಕಲಿಯಲಿಲ್ಲ". ನೀವು ಈ ಮಾತುಗಳಲ್ಲೇ ಮಾನವನ ಇತಿಮಿತಿಗಳನ್ನು ತಿಳಿಸಿಕೊಟ್ಟಿದ್ದೀರ. ಸುಂದರ ಭಾವಾಭಿವ್ಯಕ್ತಿಗೆ ಅಭಿನಂದನೆಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ಕೋಗಿಲೆಯ ಕೂಗು ಮಾವಿನ ಮರದಲ್ಲಾದರು
ಕೂಗುವ ಮಾದುರ್ಯವದು ವಸಂತದಲ್ಲೇಕೊ!
ಚೆನ್ನಾಗಿದೆ.
ನಮ್ಮ ಮನೆ ಸುತ್ತಾಮುತ್ತ ಮಾವಿನ ಮರವಿಲ್ಲ, ವಸಂತ ಕಾಲವೂ ಅಲ್ಲ, ಕೋಗಿಲೆಯ ಕುಹೂ ಕುಹೂ ಗಾನ ಕೇಳಿಸುವುದು.
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ
ಕ್ರಿಯೆ ಎಲ್ಲೊ " ಪ್ರತಿಕ್ರಿಯೆ " ಇನ್ನೆಲ್ಲೊ!!
In reply to ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6) by ಗಣೇಶ
ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ಕ್ರಿಯೆ ಎಲ್ಲೊ " ಪ್ರತಿಕ್ರಿಯೆ " ಇನ್ನೆಲ್ಲೊ!!
ಹೌದು ಬಿಡಿ ಅರ್ಥವಾಯಿತು !! :)
ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ಪಾರ್ಥಾ ಸಾರ್, ಈ ಸರಣಿಯಲ್ಲಿ ಪ್ರಕೃತಿಯ ವಿಜ್ಞಾನ ತತ್ವನಿಗೂಢಗಳನ್ನೆಲ್ಲ ಹಿಡಿದು ಬಯಲಿಗೆ ತರುತ್ತಿದ್ದಿರಾ, ಚೆನ್ನಾಗಿ ಬರುತ್ತಿದೆ; ಎಲ್ಲಿಂದ ಹುಡುಕುತ್ತಿದ್ದಿರೊ ಗೊತ್ತಿಲ್ಲ - ಸರಣಿ ಬೆಳೆಯುತ್ತಲೆ ಇದೆ :-) - ನಾಗೇಶ ಮೈಸೂರು
In reply to ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6) by nageshamysore
ಉ: ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ನಾಗೇಶರವರೆ ಎಲ್ಲಿಂದಲು ಹುಡುಕುತ್ತಿಲ್ಲ. ತಾನಾಗೆ ಹೊಳೆದಾಗ ಬರೆಯುತ್ತೇನೆ ಇಲ್ಲವೆ ಸುಮ್ಮನಿರುವುದು ! ಸರಣಿ ಜಾಸ್ತಿ ಬೆಳೆಸೋಣ ಎಂದರೆ ಏಕೊ ಬುದ್ದಿಗೆ ಮುಂದಿನ ವಿಷಯ ಹೊಳೆಯುತ್ತಿಲ್ಲ ನೋಡೋಣ :)