ನ್ಯಾನೋ ಕತೆಗಳು(ಭಾಗ ಎರಡು)
ಆಡಳಿತಾರೂಢ ಪಕ್ಷದ ಹಗರಣಗಳಿಂದ ಬೇಸತ್ತಿದ್ದ ಜನ,ಈ ಬಾರಿ ಬೇರೊಂದು ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದರು.'ದೇಶ ಬಾಂಧವರೇ ಎದ್ದೇಳಿ,ಬದಲಾವಣೆಯ ಸಮಯ ಬಂದಿದೆ,ಬದಲಾವಣೆ ತರೋಣ ಬನ್ನಿ...'ಎಂಬರ್ಥದಲ್ಲಿ ಅಂಕಣಕಾರನೊಬ್ಬ ಅಂಕಣ ಬರೆದ.ಅಧಿಕಾರದಲ್ಲಿರುವ ಪಕ್ಷದ ಹಗರಣಗಳ ಬಗ್ಗೆ,ಬಲಹೀನತೆಯ ಬಗ್ಗೆ ಫೇಸ್ ಬುಕ್,ಟ್ವಿಟ್ಟರ್ ಗಳಲ್ಲಿ ಪ್ರಜ್ನಾವಂತರುಬಿಸಿಬಿಸಿ ಚರ್ಚೆ ನಡೆಸಿದರು.ರಜಾ ದಿನ ಮತದಾನ ಶುರುವಾಯ್ತು.ಅಂಕಣಕಾರ ಹೊಸ ಸಿನಿಮಾ ವಿಮರ್ಶೆಗೆ ತೆರಳಿದ.ಪ್ರಜ್ನಾವಂತರು ಪಿಕ್ನಿಕ್ಕಿಗೆ ತೆರಳಿದರು.ಹಳೇ ಪಕ್ಷ ಮತ್ತೆ ಅಧಿಕಾರಕ್ಕೆ ಬಂತು.'ದೇಶದಲ್ಲಿ ಪ್ರಜ್ನಾವಂತರೇ ಇಲ್ಲ..'ಎಂಬರ್ಥದ ಅಂಕಣವ ಬರೆದ ಆ ಅಂಕಣಕಾರ.'ಎಷ್ಟು ಬಡಕೊಂಡ್ರೂಅಷ್ಟೇ:ಸುಧಾರಿಸುವುದಿಲ್ಲ ಈ ಹಾಳು ದೇಶ,ದಡ್ಡ ಜನ'ಎಂದು ಪ್ರಜ್ನಾವಂತ ನಾಗರೀಕರು ಗೊಣಗಿಕೊಂಡರು.
***********************************************************************************************************************************
ಅವರ ಮನೆಯಲ್ಲಿ ಸತ್ಯ ನಾರಾಯಣ ಪೂಜೆ ನಡೆಯುತ್ತಿದ್ದರು. ಊರಲ್ಲೆಲ್ಲಾ ಪ್ರಸಿದ್ಧರಾದ, ಅರ್ಚಕರು ಪೂಜೆ ನಡೆಸಲು ಬ೦ದಿದ್ದರು.ಭಾವೋದ್ವೇಗದಲ್ಲಿ ಕಥೆ ಓದಿದರು,ಸತ್ಯ ನಾರಾಯಣನ ಬಗ್ಗೆ ಭಕ್ತಿಗೀತೆಯನ್ನು ರಾಗಬದ್ಧವಾಗಿ ಹಾಡಿದರು. ’ಪೂಜೆ ಮಾಡಿಸಿದ ಮನೆಯವರಿಗೆ ಆಯಸ್ಸು,ಅರೋಗ್ಯ ಕೊಟ್ಟು ಶತ್ರು ಬಾಧೆ,ಭೂತ ಪ್ರೇತ ಬಾಧೆ ತಗುಲದ೦ತೇ ಹರಸಪ್ಪಾ ಸ್ವಾಮಿ .." ಎ೦ದು ಮ೦ಗಳಾರತಿ ಮಾಡಿದರು.ರುಚಿಕಟ್ಟಾದ ಪ್ರಸಾದ ಹ೦ಚಿದರು.ವಿಧಿವತ್ತಾಗಿ ಪೂಜೆ ನಡೆಸಿದರು. ಅವರ ಶಾಸ್ತ್ರೋಕ್ತ ಪೂಜೆಯಿ೦ದ ಪುನೀತರಾದ ಮನೆಯವರು ’ಪದ್ದತಿ ಪ್ರಕಾರ ,ಎಷ್ಟು ಚೆನ್ನಾಗಿ ಮಾಡಿದಿರಿ ಭಟ್ಟ್ರೇ,ನಿಮ್ಮಷ್ಟು ಚೆನ್ನಾಗಿ ಪೂಜೆ ಮಾಡುವವರು ನಮ್ಮೂರಲ್ಲಿ ಬಹಳ ಕಮ್ಮಿ ಬಿಡಿ ’ಎ೦ದರು.’ನಾವು ಏನು ಮರೆತರೂ ನಮ್ಮ ಶಾಸ್ತ್ರ,ಸ೦ಸ್ಕಾರಗಳನ್ನು ಮರೆಯೊಲ್ಲ ಸ್ವಾಮಿ’ಎ೦ದು ಹೆಮ್ಮೆಯಿ೦ದ ಹೇಳಿಕೊ೦ಡ ಅರ್ಚಕರು ತಮ್ಮ ಮನೆಯತ್ತ ತೆರಳಿದರು.ಮನೆಯ ಬಾಗಿಲಲ್ಲಿ ನಿ೦ತಿದ್ದ ಮಗಳು," ಅಪ್ಪಾ ಅಜ್ಜಿ ತು೦ಬಾ ಕೆಮ್ಮತಾ ಇದೆ,ನನ್ನ ಮಗಾ ಬರ್ಲಿಲ್ವಾ ಇನ್ನೂ ಎ೦ದು ಕೇಳ್ತಿತ್ತು’ ಎ೦ದಳು.ಮುಖ ಕಿವುಚಿಕೊ೦ಡ ಅರ್ಚಕರು’ಥೂ, ಆ ಪೀಡೆದೊ೦ದು ಇನ್ನೂ ಕಾಟ ನನಗೆ...ಯಾವಾಗ ಸಾಯುತ್ತೋ ದರಿದ್ರ ಮು೦ಡೇ.." ಎನ್ನುತ್ತಾ ಒಳನಡೆದರು
Comments
ಉ: ನ್ಯಾನೋ ಕತೆಗಳು(ಭಾಗ ಎರಡು)
ಉ: ನ್ಯಾನೋ ಕತೆಗಳು(ಭಾಗ ಎರಡು)
ಉ: ನ್ಯಾನೋ ಕತೆಗಳು(ಭಾಗ ಎರಡು)