ಕಾರ್ಗಿಲ್ ನಲ್ಲಿ ಕಾದಾಡಿದ ಭಾರತಾಂಬೆಯ ಆ ವೀರಕೇಸರಿಗಳನ್ನು ನೆನೆಯುತ್ತಾ………(Remember of Lions of Kargil)
ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ ನಮಸ್ಕಾರ. ಇಂದು ಕಾರ್ಗಿಲ್ ವಿಜಯದ ದಿನ(ಜುಲೈ26). ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ ಇದೇ ದಿನ ಭಾರತ ತನ್ನದೇ ನೆಲವನ್ನಾಕ್ರಮಿಸಿದ್ದಪಾಕಿಸ್ತಾನದ ವಿರುದ್ದ ಕಾರ್ಗಿಲ್ ಯುದ್ದದಲ್ಲಿ ವಿಜಯಿಯಾಯಿತು. ವೈರಿಗಳ ಸದ್ದಡಿಸುತ್ತಾ ವೀರ ಮರಣವನಪ್ಪಿದ 533 ಸೈನಿಕರಿಗೆ, ನಮ್ಮ-ನಿಮ್ಮರಕ್ಷಣೆಯ ಸಲುವಾಗಿ ತಮ್ಮ ಕೈ, ಕಾಲುಗಳನ್ನು ಕಳೆದುಕೊಂಡ 1363 ಮಂದಿಯನ್ನು ನೆನೆಯುವ ದಿನವಿದು. ಈ ಸಂದರ್ಭದಲ್ಲಿ ನಾನು ನಿಮಗೊಬ್ಬರಿಯಲ್ ಹೀರೋನ ಕಥೆ ಹೇಳಬೇಕನಿಸುತ್ತಿದೆ. ಇದು ನಾವು ನೀವೆಲ್ಲ ಸಿನಿಮಾ, ಟಿವಿಗಳಲ್ಲಿ ಪ್ರತಿನಿತ್ಯ ನೋಡುವಹೀರೋಗಳ (ಜ಼ೀರೋಗಳ) ಕಥೆಯಲ್ಲ, ಬದಲಾಗಿ ನಮಗಾಗಿ ಪ್ರಾಣಕೊಟ್ಟಒಬ್ಬ ವೀರ ಸೈನಿಕನ ಬದುಕಿನ ಕಥೆ. ಮೇಜರ್ ಸುಧೀರ್ ವಾಲಿಯಾ ಸ್ನೇಹಿತರೇ, ಈ ಮೇಜರ್ ಸುಧೀರ್ ವಾಲಿಯಾ ಹುಟ್ಟಿದ್ದು ಹಿಮಾಚಲಪ್ರದೇಶದಲ್ಲಿನ ಕುಗ್ರಾಮದಲ್ಲಿ. ಅವರ ತಂದೆ ಮೇಜರ್ ರುಲಿಯಾ ರಾಮ್ ಹಾಗೂ ತಾಯಿ ರಾಜೇಶ್ವರಿ ದೇವಿ.ರುಲಿಯಾ ರಾಮ್ ಕುಟುಂಬ ಹಿಮಾಚಲ ಪ್ರದೇಶದ ಕಾಂಗ್ರಾ ಕಣಿವೆಸೀಮೆಯಲ್ಲಿ ವಾಸವಿದ್ದಿತು. ಈ ರುಲಿಯಾ ರಾಮ್ ಕೂಡ ಸತತ 28ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿದ್ದವರು. 1976 ರಲ್ಲಿನಿವೃತ್ತನಾಗಿದ್ದ ಮೇಜರ್ ರುಲಿಯಾ ರಾಮ್ ರ ಮೊದಲ ಮಗನೇ ಮೇಜರ್ಸುಧೀರ್ ವಾಲಿಯಾ. ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನ ಸ್ವಗ್ರಾಮದಲ್ಲಿಮುಗಿಸಿದ ಇವರು ಐದನೇ ತರಗತಿಯ ಬಳಿಕ ಊರಿನಿಂದ ನಲವತ್ತುಕಿ.ಮೀ. ದೂರದಲ್ಲಿದ್ದ ಸುಜಾನ್ಪುರ್ ತಿರಾದ ಮಿಲಿಟರಿ ಶಾಲೆಗೆಸೇರಿಕೊಂಡರು. ಅದೇ ಸಂದರ್ಭದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡಮಿಪರೀಕ್ಷೆಯಲ್ಲಿ ಪಾಸಾದ ಸುಧೀರ್ ಖಡಕ್ ವಾಸ್ಲಾದಲ್ಲಿರುವ ನ್ಯಾಷನಲ್ಡಿಫೆನ್ಸ್ ಅಕಾಡಮಿಯನ್ನು ಸೇರಿಕೊಂಡರು. ರಜೆಗೆಂದು ಮನೆಗೆಬಂದಾಗೆಲ್ಲಾ ಇಂಗ್ಲೀಷ್ ಭಾಷಾ ತರಬೇತಿಯನ್ನು ಸೇರಿಕೊಂಡ ಸುಧೀರ್ಮುಂದೆ ನಿರರ್ಗಳವಾಗಿ ಇಂಗ್ಲೀಶ್ ನಲ್ಲಿ ಮಾತಾಡುವುದರಲ್ಲಿಪರಿಣಿತರಾದರು. ಮುಂದೆ ನ್ಯಾಷನಲ್ ಡಿಫೆನ್ಸ್ ಅಕಾಡಮಿಯಲ್ಲಿ ಅವರುತೋರಿದ ಪ್ರತಿಭೆ ಅವರನ್ನು ಡೆಹರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡಮಿಯ ಮೆಟ್ಟಿಲೇರುವಂತೆ ಮಾಡಿತು. ಅಲ್ಲಿ ಪದವಿ ಶಿಕ್ಷಣಪೂರೈಸಿದ ಸುಧೀರ್ 1988 ರಲ್ಲಿ ಮೂರನೇ ಜಾಟ್ ರೆಜಿಮೆಂಡ್ ಗೆ ಸೇನಾಧಿಕಾರಿಯಾಗಿ ಸೇರ್ಪಡೆಗೊಂಡರು. ಅಂದಿನ ಪ್ರಧಾನಿ ರಾಜೀವ್ಗಾಂಧಿಯವರು ಎಪ್ಪತ್ತು ಸಾವಿರ ಸೈನಿಕರ ಶಾಂತಿ ಪಾಲನಾ ಪಡೆಯನ್ನು ಶ್ರೀಲಂಕಾಗೆ ಕಳಿಸಿಕೊಟ್ಟ ಸಂದರ್ಭದಲ್ಲಿ ಸುಧೀರ್ ಕೂಡ ಅಲ್ಲಿಗೆಹೋಗಿದ್ದರು. 1990 ರಲ್ಲಿ ಅಲ್ಲಿಂದ ವಾಪಾಸಾದ ನಂತರ ಅಲ್ಲಿನ ಜಂಗಲ್ ವಾರ್ ಗಳಲ್ಲಿ ಸುಧೀರ್ ತೋರಿದ ನೈಪುಣ್ಯದಿಂದಾಗಿ 9ಪ್ಯಾರಾಚೂಟ್ ಕಮಾಂಡೋ ಪಡೆಗೆ ಅವರನ್ನು ವರ್ಗಾಯಿಸಲಾಯಿತು. ಸಮುದ್ರ ಮಟ್ಟದಿಂದ 6300 ಮೀಟರ್ ಎತ್ತರದಲ್ಲಿದ್ದ ಜಗತ್ತಿನ ಅತ್ಯಂತ ಎತ್ತರದ ರಣಭೂಮಿ ಸಿಯಾಚಿನ್ ನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದಸುಧೀರ್ ರನ್ನು ವಿಶೇಷ ತರಬೇತಿಗಾಗಿ ಅಮೇರಿಕಾಗೆ ಕಳುಹಿಸಲಾಯಿತು. ಅಲ್ಲಿಂದ ಹಿಂತಿರುಗಿದ ಬಳಿಕ ಸುಧೀರ್ ರವರನ್ನು ಸೇನಾದಂಡನಾಯಕರ ಸಹಾಯಕರನ್ನಾಗಿ ತಾತ್ಕಾಲಿಕ ನೇಮಕ ಮಾಡಲಾಯಿತು. ಆದರೆ ಆ ಸಂದರ್ಭದಲ್ಲಿಯೇ ಕಾರ್ಗಿಲ್ ಯುಧ್ಧ ಆರಂಭವಾಗಿತ್ತು.ಸುಧೀರ್ ಗೆ ತಾವು ದೆಹಲಿಯ ಸೇನಾ ಕೇಂದ್ರ ಕಛೇರಿಯಲ್ಲಿದ್ದೆ ಯುಧ್ಧವನ್ನು ವೀಕ್ಷಿಸುವುದು ಸರಿಕಾಣಲಿಲ್ಲ. ತಕ್ಷಣ ತನ್ನ ಮೇಲಾಧಿಕಾರಿಗಳಮನವೊಲಿಸಿ ಯುಧ್ಧರಂಗಕ್ಕೆ ಧುಮುಕಿಯೇ ಬಿಟ್ಟರು. ಜುಲೈ 25 1999 ರಂದು ಸುಧೀರ್ ನೇತೃತ್ವ ವಹಿಸಿದ್ದ ಕಮಾಂಡೋ ಪಡೆ 5200 ಮೀಟರ್ಎತ್ತರದಲ್ಲಿರುವ ಜುಲು ಪರ್ವತ ಶ್ರೇಣಿ ಪ್ರದೇಶದಲ್ಲಿ ದಿಟ್ಟತನದಿಂದ ಕಾದಾಡಿ 13 ಭಯೋತ್ಪಾದಕರನ್ನು ಸದೆಬಡಿಯಿತು, ಅದರೊಂದಿಗೆ ಆ ಇಡೀಭೂಪ್ರದೇಶ ಭಾರತದ ವಶವಾಯಿತು. ಕಾರ್ಗಿಲ್ ಯುಧ್ಧವೂ ಕೊನೆಗೊಂಡಿತು. ಸುಧೀರ್ ರವರ ಈ ದಿಟ್ಟ ಹೋರಾಟಕ್ಕೆ ದೇಶದ ಸೈನಿಕರಿಗೆ ಸಲ್ಲುವ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ವೀರಚಕ್ರವು ಒಲಿಯಿತು. ಕಾರ್ಗಿಲ್ ನಲ್ಲೇನೋ ಭಾರತ ವಿಜಯ ದುಂದುಭಿ ಮೊಳಗಿಸಿತ್ತು, ಆದರೆ ಭಯೋತ್ಪಾದಕರ ಉಪಟಳ ಮಾತ್ರ ಇನ್ನೂ ಮುಂದುವರಿದಿತ್ತು! 1999 ರ ಆಗಸ್ಟ್ 29 ರಂದು ಜಮ್ಮು ಕಾಶ್ಮೀರದ ಹಫುದಾ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಸಿಕ್ಕಿತು. ಮೇಜರ್ಸುಧೀರ್ ವಾಲಿಯಾರವರಿದ್ದ ತಂಡಕ್ಕೆ ಉಗ್ರರನ್ನು ಸದೆಬಡಿಯುವಂತೆ ಆದೇಶವೂ ರವಾನೆಯಾಯಿತು. ಮತ್ತೆ ತಡಮಾಡದೆ ಕಾರ್ಯಪ್ರವೃಅತ್ತರಾದ ಸುಧೀರ್ ಮತ್ತವರ ತಂಡ ರಾತ್ರಿಯಿಡಿ ದಟ್ಟಾರಣ್ಯವನ್ನು ಜಾಲಾಡಿತು. ಆದರೂ ಉಗ್ರರ ಸುಳಿವು ದೊರೆಯಲಿಲ್ಲ! ಅದೇ ಮಾರನೆಬೆಳೆಗ್ಗೆ ಹತ್ತಿರದ ನದಿಯೊಂದರ ದಡದಲ್ಲಿ ಟೂತ್ ಪೇಷ್ಟ್ ನ ನೊರೆಯು ಕಾಣಿಸಿತು. ಉಗ್ರರು ಇಲ್ಲೆ ಎಲ್ಲೋ ಇರುವರೆಂಬ ಅಂಶ ನಿಖರವಾಯಿತು.ಅಷ್ಟರಲ್ಲಿ ಗುಂಡಿನ ಹಾರಾಟವೂ ಆರಂಭವಾಯಿತು. ಒಟ್ಟು ಇಪ್ಪತ್ತು ಜನರಿದ್ದ ಉಗ್ರರ ತಂಡದಲ್ಲಿನ ಒಂಭತ್ತು ಜನರನ್ನು ಮೇಜರ್ ಸುಧೀರ್ವಾಲಿಯಾ ಏಕಾಂಗಿಯಾಗಿ ಕೊಂದುಹಾಗಿದರು. ಮೂವತ್ತೈದು ನಿಮಿಷದ ಬಳಿಕ ಉಗ್ರರನ್ನು ಸಂಪೂರ್ಣಾವಾಗಿ ನಿರ್ಮೂಲನ ಮಾಡಲಾಯಿತು. ಈಮಧ್ಯ ಉಗ್ರರು ಹಾರಿಸಿದ ಗುಂಡೊಂದು ಸುಧೀರ್ ವಾಲಿಯಾರವರ ಹೊಟ್ಟೆಯನ್ನು ಸೀಳಿತ್ತು. ತಕ್ಷಣವೇ ಹೆಲಿಕಾಪ್ಟರದ ಮೂಲಕ ಸುಧೀರ್ ರನ್ನುಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯದಲ್ಲೆ ಸುಧೀರ್ ರವರ ಪ್ರಾಣಪಕ್ಷಿ ಹಾರಿಹೋಗಿತ್ತು! 2000 ರ ಗಣಾರಾಜ್ಯೋತ್ಸವ ದಿನದಂದು ಶಾಂತಿಕಾಲದಲ್ಲಿ ವೀರ ಸೈನಿಕರಿಗಾಗಿ ಕೊಡಮಾಡುವ ಅತ್ಯುನ್ನತಗೌರವ ಪ್ರಶಸ್ತಿಯಾದ ಅಶೋಕ ಚಕ್ರವನ್ನುಮರಣೋತ್ತರವಾಗಿ ಮೇಜರ್ ಸುಧೀರ್ ವಾಲಿಯಾರಿಗೆಪ್ರಧಾನಮಾಡಲಾಯಿತು. ಹೀಗೆ ಅಸಾಧಾರಣ ಶೌರ್ಯ ಮೆರೆದ ಧೀರ ಮೇಜರ್ಸುಧೀರ್ ವಾಲಿಯಾರಂತಹಾ ಸುಪುತ್ರನನ್ನು ಪಡೆದಭಾರತಾಂಬೆಯೇ ಧನ್ಯ! ಸ್ನೇಹಿತರೇ ಕಾರ್ಗಿಲ್ ಕದನದ ಕಥೆ ಇಲ್ಲಿಗೇಕೊನೆಯಾಗದು. ಮೇಜರ್ ಸುಧೀರ್ ವಾಲಿಯಾಮಾತ್ರವಲ್ಲ ಅವರಂತೆ ತಮ್ಮ ಪ್ರಾಣವನ್ನೇ ಕೊಟ್ಟುನಮ್ಮ-ನಿಮ್ಮನ್ನು ಕಾಪಾಡಿದ ಲೆ. ಸೌರಭ್ ಕಾಲಿಯಾ,ಕ್ಯಾ. ವಿಕ್ರಮ್ ಭಾತ್ರಾ, ಯೋಗೀಂದ್ರ ಸಿಂಗ್, ಸಂಜಯ್ಕುಮಾರ್, ಮೇಜರ್ ಪದ್ಮಪಾಣಿ ಆಚಾರ್ಯ, ಲೆ. ಬಲ್ವಾನ್ ಸಿಂಗ್, ಮೇಜರ್ ಸರವಣಾನ್, ಲೆ. ಕಣಾದ್ ಭಟ್ಟಾಚಾರ್ಯ, ಕ್ಯಾ. ಸಜು ಚೇರಿಯನ್,ಲೆ. ಕೈಸಿಂಗ್ ಕ್ಲಿಫರ್ಡ್ ಸಂಗ್ರಾಮ್, ಕ್ಯಾ. ಜೆರ್ರಿ ಪ್ರೇಮರಾಜ್, ಮೇಜರ್ ಸೋನಮ್ ವಾಂಗ್ ಚುಕ್, ಕ್ಯಾ. ವಿಜಯ್ ಥಾಪರ್, ರಾಜಶ್ರೀಗುಪ್ತಾ....... ಪಟ್ಟಿ ಹೀಗೇ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರದೂ ಒಂದೊಂದು ರೋಚಕ ಕಥೆ! ಹಿಮಾಲಯದ ತಪ್ಪಲಿನಲ್ಲಿ ಸುಮಾರು 15ಡಿಗ್ರಿಯಷ್ಟು ತಾಪಮಾನದಲ್ಲಿ ಮೇ 4 1999 ರಿಂದ ಜುಲೈ 26 1999 ರವರೆಗೆ ನಡೆದ ಕಾರ್ಗಿಲ್ ಕದನದಲ್ಲಿ ”ಆಪರೇಷನ್ ವಿಜಯ್” ಹೆಸರಿನಭಾರತೀಯ ಸೈನಿಕರ ದಿಟ್ಟ ಕಾರ್ಯಾಚರಣೆ ಯಶಸ್ವಿಯಾಗಿತ್ತು. ನಮ್ಮ-ನಿಮ್ಮೆಲ್ಲರ ಒಳಿತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಆ ಪುಣ್ಯಜೀವಿಗಳನ್ನು ಕಾರ್ಗಿಲ್ ವಿಜಯ ದಿನವಾದ ಇಂದು ನಾವೆಲ್ಲಾಹೃಅದಯತುಂಬಿ ಸ್ಮರಿಸಿಕೊಳ್ಳೋಣ್ವಲ್ಲವೆ? ಓ ಭಾರತದ ನವ ಜವಾನರೇ ನಿಮಗಿದೋ ನಮ್ಮ ಸೆಲ್ಯೂಟ್! ಜೈ ಹಿಂದ್! ಜೈ ಭಾರತಾಂಬೆ!
Comments
ಉ: ಕಾರ್ಗಿಲ್ ನಲ್ಲಿ ಕಾದಾಡಿದ ಭಾರತಾಂಬೆಯ ಆ ವೀರಕೇಸರಿಗಳನ್ನು...
ಜೈ ಭಾರತಾಂಬೆ..ಜೈ ಮೇಜರ್ ಸುಧೀರ್ ವಾಲಿಯಾ, ಕಾರ್ಗಿಲ್‌ನಲ್ಲಿ ಕಾದಾಡಿ ಗೆದ್ದವರಿಗೂ ಜೈ, ವೀರ ಮರಣ ಅಪ್ಪಿದ ಇತರ ಯೋಧರಿಗೂ ಜೈ.